ಮಾರ್ಕೊ ಸಿನಿಮಾಗೆ ಒಟಿಟಿಯಿಂದಲೂ ಬ್ಯಾನ್‌ ಭೀತಿ

Date:

ಮಲೆಯಾಳಂ ಭಾಷೆಯ, ಉನ್ನಿ ಮುಕುಂದನ್‌ ಅಭಿನಯದ ಮಾರ್ಕೊ ಸಿನಿಮಾವನ್ನು ಈಗಾಗಲೇ ಟಿವಿ ಬ್ರಾಡ್‌ಕಾಸ್ಟಿಂಗ್‌ನಿಂದ ಬ್ಯಾನ್‌ ಮಾಡಲಾಗಿದೆ. ಇದೀಗ, ಒಟಿಟಿ ಇಂದಲೂ ಬ್ಯಾನ್‌ ಆಗುವ ಭೀತಿ ಎದುರಾಗಿದೆ.

- Advertisement -

ಮಾರ್ಕೊ ಸಿನಿಮಾವನ್ನು ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿಯೇ ಅತ್ಯಂತ ಹಿಂಸಾತ್ಮಕ ಸಿನಿಮಾ ಎಂದು ಪರಿಗಣಿಸಲಾಗಿದೆ. ಈ ಕಾರಣದಿಂದಲೇ ಸಿನಿಮಾಗೆ ಸ್ಯಾಟಲೈಟ್‌ ಪ್ರಸಾರದ ಹಕ್ಕು ನೀಡಲು ಕೇರಳ ಸೆನ್ಸಾರ್ ಮಂಡಳಿ ನಿರಾಕರಿಸಿತ್ತು. ಟಿವಿ ಚಾನೆಲ್‌ಗಳಲ್ಲಿ ಪ್ರಸಾರ ಮಾಡದಂತೆ ತಡೆಯೊಡ್ಡಿತ್ತು. ಆ ನಂತರ, ಸಿನಿಮಾ ಒಟಿಟಿ ಪ್ಲಾಟ್‌ಫಾಮ್‌ ‘ಸೋನಿ ಲೈವ್‌’ನಲ್ಲಿ ಬಿಡುಗಡೆಯಾಗಿದೆ. ಈಗ, ಒಟಿಟಿಯಿಂದಲೂ ತೆಗೆಯಲು ಆದೇಶಿಸುವಂತೆ ಕೇಂದ್ರ ಸೆನ್ಸಾರ್‌ ಮಂಡಳಿಗೆ (ಸಿಬಿಎಫ್‌ಸಿ) ಕೇರಳ ಸೆನ್ಸಾರ್‌ ಮಂಡಳಿ ಪತ್ರ ಬರೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

2024ರಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಸಿನಿಮಾದಲ್ಲಿ ಅತ್ಯಂತ ಹಿಂಸಾತ್ಮಕ ದೃಶ್ಯಗಳೇ ತುಂಬಿವೆ ಎಂದು ಆಕ್ಷೇಪ ವ್ಯಕ್ತವಾಗಿತ್ತು. ಸಿನಿಮಾದಲ್ಲಿನ ಹಿಂಸಾತ್ಮಕತೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಟೀಕಿಸಿದ್ದರು. ಸಿನಿಮಾಗೆ ಸ್ಯಾಟ್‌ಲೈಟ್‌ ಹಕ್ಕುಗಳನ್ನು ನೀಡಲು ಸಾಧ್ಯವಿಲ್ಲ ಎಂದು ಸಿಬಿಎಫ್‌ಸಿ ಕೂಡ ಹೇಳಿತ್ತು.

“ಮಾರ್ಕೊ ಸಿನಿಮಾಗೆ ಸಿಬಿಎಫ್‌ಸಿಗೆ ‘ಎ‌’ ಸರ್ಟಿಫಿಕೇಟ್‌ ನೀಡಿದೆ. ಇಂತಹ ಸಿನಿಮಾಗಳನ್ನು ಮಕ್ಕಳು ವೀಕ್ಷಿಸದಂತೆ ಪೋಷಕರು ಗಮನವಹಿಸಬೇಕು. ಇದು ಕುಟುಂಬದೊಂದಿಗೆ ನೋಡಲು ಸಾಧ್ಯವಿಲ್ಲದ ಸಿನಿಮಾ. ಈ ಸಿನಿಮಾಗೆ ಸ್ಯಾಟಲೈಟ್ ಹಕ್ಕು ನೀಡಲಾಗಿಲ್ಲ” ಎಂದು ಸಿಬಿಎಓಫ್‌ಸಿ ಪ್ರಾದೇಶಿಕ ಅಧಿಕಾರಿ ನದೀಮ್ ತುಫಾಲಿ ತಿಳಿಸಿದ್ದಾರೆ.

ಸಿನಿಮಾದಲ್ಲಿ ಹಿಂಸಾತ್ಮಕ ದೃಶ್ಯಗಳನ್ನು ಸಮರ್ಥಿಸಿಕೊಂಡಿರುವ ನಾಯಕ ನಟ ಉನ್ನಿ ಮುಕುಂದನ್‌, “ಹಿಂಸೆಯು ಮಾನವ ವಿಕಾಸದ ಒಂದು ಭಾಗ. ನಾವು ಯುದ್ಧಗಳನ್ನು ಮಾಡಿದ್ದೇವೆ. ಯುದ್ಧಗಳ ಮೂಲಕವೇ ಶಾಂತಿ ಸಾಧಿಸಿದ್ದೇವೆ. ನಮ್ಮ ಸಮಾಜದಲ್ಲಿ ಹಿಂಸೆ ಅಸ್ತಿತ್ವದಲ್ಲಿದೆ ಎಂಬುದು ಸತ್ಯ. ಸಮಾಜದಲ್ಲಿರುವ ಹಿಂಸೆಗೆ ಹೋಲಿಸಿದರೆ, ಅದರ 10% ಹಿಂಸೆ ಕೂಡ ಮಾರ್ಕೊ ಸಿನಿಮಾದಲ್ಲಿ ಇಲ್ಲ” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ಮಾಂತ್ರಿಕ ಸಿಂಗೀತಂ ಶ್ರೀನಿವಾಸರಾವ್

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ...

ಸುಂಟರಗಾಳಿ ಚಿತ್ರದ ಲೇಡಿ ವಿಲನ್, ‘ಸಾರಾಯಿ ಶಾರದೆ’ ಖ್ಯಾತಿಯ ಹಿರಿಯ ನಟಿ ಲಲಿತಮ್ಮ ನಿಧನ

ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯ ಹಿರಿಯ ಪೋಷಕ ನಟಿ, 'ಸುಂಟರಗಾಳಿ' ಸಿನಿಮಾದ...