ಬಾಲಿವುಡ್‌ ತೊರೆದ ಅಸಲಿ ಕಾರಣ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ

Date:

  • 2015ರಲ್ಲಿ ಹಾಲಿವುಡ್‌ಗೆ ಹಾರಿದ್ದ ಪ್ರಿಯಾಂಕಾ ಚೋಪ್ರಾ
  • ಕರಣ್‌ ಜೋಹರ್‌ ನೇರ ಹೊಣೆ ಎಂದ ಕಂಗನಾ ರಣಾವತ್‌

ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್‌ನಲ್ಲಿ ಸ್ಟಾರ್‌ ನಟಿಯಾಗಿ ಮಿಂಚುತ್ತಿದ್ದಾರೆ. ಭಾರತದಲ್ಲೂ ಬಹು ಬೇಡಿಕೆಯ ನಟಿಯಾಗಿ ಜನಪ್ರಿಯತೆ ಗಳಿಸಿದ್ದ ಅವರು ಇದ್ದಕ್ಕಿದ್ದಂತೆ ಬಾಲಿವುಡ್‌ ತೊರೆದಿದ್ದು ಯಾಕೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ನೀಡಿದ್ದಾರೆ.

ಇತ್ತೀಚೆಗೆ ಅಮೆರಿಕದ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಪ್ರಿಯಾಂಕಾ, ತಾವು ಬಾಲಿವುಡ್‌ ತೊರೆದಿದ್ದರ ಬಗ್ಗೆ ಮಾತನಾಡಿದ್ದು, “ಬಾಲಿವುಡ್‌ನಲ್ಲಿ ನನ್ನನ್ನು ತುಳಿಯುವ ಪ್ರಯತ್ನಗಳು ನಡೆದವು. ಆಂತರಿಕ ರಾಜಕಾರಣದಿಂದಾಗಿ ಹಲವು ಸಿನಿಮಾ ಅವಕಾಶಗಳು ಕೈತಪ್ಪಿದವು. ಕೆಲವರ ಜೊತೆಗೆ ಮನಸ್ತಾಪಗಳೂ ಆದವು. ಈ ರೀತಿಯ ಕೀಳುಮಟ್ಟದ ರಾಜಕಾರಣದಿಂದ ದೂರ ಉಳಿಯಲು ನಿರ್ಧರಿಸಿ ಬಾಲಿವುಡ್‌ನಿಂದ ಹೊರಬಂದೆ” ಎಂದಿದ್ದಾರೆ.

ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಲ್ಲಿ ತಾವು ಅನುಭವಿಸಿದ ಅಪಮಾನದ ಕಹಿ ಅನುಭವಗಳನ್ನು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಬಹಿರಂಗಪಡಿಸುತ್ತಲೇ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಬಾಲಿವುಡ್‌ನ ಮತ್ತೋರ್ವ ನಟಿ ಕಂಗನಾ ರಣಾವತ್‌, “ಪ್ರಿಯಾಂಕಾ ಅವರಂತಹ ದಿಟ್ಟ ಮಹಿಳೆ ಬಾಲಿವುಡ್‌ ತೊರೆಯಲು ಕರಣ್‌ ಜೋಹರ್‌ ಕಾರಣ. ಆಕೆಗೆ ಸಿನಿಮಾ ಅವಕಾಶ ಸಿಗದಂತೆ ಮಾಡಿ, ಬಾಲಿವುಡ್‌ನಿಂದ ಆಚೆಗಟ್ಟಿದರು. ಈ ವಿಚಾರ ಚಿತ್ರೋದ್ಯಮದಲ್ಲಿರುವ ಎಲ್ಲರಿಗೂ ಗೊತ್ತಿದೆ. ಸಿನಿಮಾರಂಗದ ಯಾವುದೇ ಹಿನ್ನೆಲೆ ಇರದ ಪ್ರಿಯಾಂಕಾ ಚೋಪ್ರಾ ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವುದನ್ನು ಸಹಿಸದ ಕರಣ್‌ ಜೋಹರ್‌ ಮತ್ತು ಆತನ ಸಹಚರರು ಆಕೆಗೆ ಕಿರುಕುಳ ನೀಡಿದ್ದಲ್ಲದೆ, ಚಾರಿತ್ರ್ಯಹರಣಕ್ಕೂ ಯತ್ನಿಸಿದರು. ಸಿನಿಮಾ ಹಿನ್ನೆಲೆಯೇ ಇಲ್ಲದೆ ಚಿತ್ರರಂಗದಲ್ಲಿ ಹೆಸರು ಮಾಡಿದ ಅಮಿತಾಬ್‌ ಬಚ್ಚನ್‌, ಶಾರುಖ್‌ ಖಾನ್‌ ಸೇರಿದಂತೆ ಹೊರಗಿನಿಂದ ಬರುವ ಎಲ್ಲ ಪ್ರತಿಭೆಗಳಿಗೆ ಈ ರೀತಿಯ ಕಿರುಕುಳಗಳು ಸಾಮಾನ್ಯವಾಗಿ ಬಿಟ್ಟಿದೆ. ಚಿತ್ರರಂಗದ ವಾತಾವರಣವನ್ನು ಹದಗೆಡಿಸುತ್ತಿರುವ ಕರಣ್‌ ಜೋಹರ್‌ ಮತ್ತು ಆತನ ಗುಂಪಿನವರ ಮೇಲೆ ಕ್ರಮ ಜರುಗಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ? ಘೋಸ್ಟ್‌ ಚಿತ್ರತಂಡ ಸೇರಿಕೊಂಡ ಅನುಪಮ್‌ ಖೇರ್‌

ಬಾಲಿವುಡ್‌ನಲ್ಲಿ ಸ್ಟಾರ್‌ ನಟಿಯಾಗಿ ಗುರುತಿಸಿಕೊಂಡಿದ್ದ ಪ್ರಿಯಾಂಕಾ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಬಾಲಿವುಡ್‌ ತೊರೆದಿದ್ದರು. ʼಇನ್‌ ಮೈ ಸಿಟಿʼ, ʼಎಕ್ಸಾಟಿಕ್‌ʼ, ʼಐ ಕಾಂಟ್‌ ಮೇಕ್‌ ಯು ಲವ್‌ ಮಿʼ ಅಮೆರಿಕನ್‌ ಮ್ಯೂಸಿಕ್‌ ವಿಡಿಯೋಗಳಲ್ಲಿ ಮಿಂಚಿದ ಪ್ರಿಯಾಂಕಾ, ನಂತರದ ದಿನಗಳಲ್ಲಿ ಜನಪ್ರಿಯ ʼಕ್ವಾಂಟಿಕೋʼ ವೆಬ್‌ ಸರಣಿಯಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುವ ಮೂಲಕ ಹಾಲಿವುಡ್‌ ಪ್ರವೇಶಿಸಿದರು. ಸದ್ಯ ಹಾಲಿವುಡ್‌ನಲ್ಲೇ ಸಕ್ರಿಯರಾಗಿರುವ ಪ್ರಿಯಾಂಕಾ, ಅಮೆರಿಕ ಮೂಲದ ಖ್ಯಾತ ಗಾಯಕ ನಿಕ್‌ ಜೋನಾಸ್‌ ಅವರನ್ನು ಮದುವೆಯಾಗಿ ಅಮೆರಿಕದಲ್ಲಿಯೇ ವಾಸವಾಗಿದ್ದಾರೆ.

ಇದೀಗ ಅವರು ನಟಿಸಿರುವ ಮತ್ತೊಂದು ಹಾಲಿವುಡ್ ಧಾರವಾಹಿ ‘ಸಿಟಾಡೆಲ್’ ಬಿಡುಗಡೆಗೆ ಸಿದ್ಧವಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾರಿನೊಳಗೆ ಶವವಾಗಿ ಪತ್ತೆಯಾದ ಮಲಯಾಳಂ ನಟ ವಿನೋದ್ ಥಾಮಸ್

ಮಲಯಾಳಂ ನಟ ವಿನೋದ್ ಥಾಮಸ್ ಕೇರಳದ ಕೊಟ್ಟಾಯಂನ ಪಂಪಾಡಿ ಬಳಿಯ ಹೋಟೆಲ್‌ನಲ್ಲಿ...

ತೆಲಂಗಾಣ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ವಿಜಯಶಾಂತಿ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

ಬಹುಭಾಷಾ ನಟಿ ಹಾಗೂ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ವಿಜಯಶಾಂತಿ ಅವರು...

ಮೊದಲು ಹೊಡೆದು ನಂತರ ಕ್ಷಮೆ ಕೇಳಿದ ನಟ ನಾನಾ ಪಾಟೇಕರ್: ವಿಡಿಯೋ ವೈರಲ್

ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಾಲಿವುಡ್ ಹಿರಿಯ ನಟ-ನಿರ್ದೇಶಕ ನಾನಾ ಪಾಟೇಕರ್ ಇದೀಗ...

ಬಿಗ್‌ಬಾಸ್ ಶೋನಲ್ಲಿ ಭೋವಿ ಜನಾಂಗಕ್ಕೆ ಅವಹೇಳನ ಆರೋಪ: ಸ್ಪರ್ಧಿ ತನಿಷಾ ವಿರುದ್ಧ ಎಫ್‌ಐಆರ್

ಇತ್ತೀಚೆಗಷ್ಟೇ ಕನ್ನಡದ 'ಬಿಗ್‌ಬಾಸ್ ರಿಯಾಲಿಟಿ ಶೋ'ನಲ್ಲಿ ಸ್ಪರ್ಧಾಳುವಾಗಿದ್ದ ವರ್ತೂರು ಸಂತೋಷ್ ಹುಲಿ...