ದ್ವೇಷದ ಮಾತುಗಳಿಗೆ ಕಡಿವಾಣ ಹಾಕದ ಆರ್‌ಎಸ್‌ಎಸ್‌; ಮೋಹನ್‌ ಭಾಗವತ್‌ಗೆ ಮುಸ್ಲಿಂ ಮುಖಂಡರಿಂದ ಪತ್ರ

Date:

  • ಮಾರ್ಚ್ 23ರಂದು ಮಾಜಿ ಚುನಾವಣಾ ಆಯುಕ್ತ ಎಸ್ ವೈ ಖುರೈಶಿ ಸೇರಿದಂತೆ ಹಲವರಿಂದ ಪತ್ರ
  • ಎಲ್ಲಾ ಸಮುದಾಯಗಳನ್ನು ಒಳಗೊಳ್ಳದಿದ್ದರೆ ರಾಷ್ಟ್ರ ನಿರ್ಮಾಣ ಸಾಧ್ಯವಿಲ್ಲ ಎಂದ ನಾಯಕರು

ಕಳೆದ ಒಂದು ವರ್ಷದಿಂದ ಆರ್‌ಎಸ್‌ಎಸ್‌ನೊಂದಿಗೆ ತೊಡಗಿಸಿಕೊಂಡಿರುವ ಮುಸ್ಲಿಂ ಬುದ್ಧಿಜೀವಿಗಳು ಸಂಘಪರಿವಾರದ ಮುಖ್ಯಸ್ಥ ಮೋಹನ್ ಭಾಗವತ್‌ಗೆ ಪತ್ರ ಬರೆದು ದೇಶಾದ್ಯಂತ ದ್ವೇಷದ ಭಾಷಣಗಳು ಮತ್ತು ಮುಸ್ಲಿಂ ವಿರೋಧಿ ಸಭೆಗಳು ಅವ್ಯಾಹತವಾಗಿ ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ‘ಲವ್ ಜಿಹಾದ್’ ರ್‍ಯಾಲಿಗಳನ್ನು ಉಲ್ಲೇಖಿಸಿರುವ ಮುಸ್ಲಿಂ ಮುಖಂಡರು, ಇವುಗಳನ್ನು ತಡೆಯಲು ಆರ್‌ಎಸ್‌ಎಸ್‌ ಕಡೆಯಿಂದ ಕಿಂಚಿತ್ತೂ ಹಸ್ತಕ್ಷೇಪವಿರಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಮಾರ್ಚ್ 23ರಂದು ಭಾಗವತ್ ಅವರಿಗೆ ಕಳುಹಿಸಲಾದ ಪತ್ರದಲ್ಲಿ ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಮಾಜಿ ಚುನಾವಣಾ ಆಯುಕ್ತ ಎಸ್ ವೈ ಖುರೈಶಿ, ರಾಜ್ಯಸಭೆಯ ಮಾಜಿ ಸದಸ್ಯ ಶಾಹಿದ್ ಸಿದ್ದಿಕಿ, ನಿವೃತ್ತ ಲೆಫ್ಟಿನೆಂಟ್ ಜನರಲ್ ಝಡ್ ಯು ಶಾ ಮತ್ತು ಸಯೀದ್ ಶೆರ್ವಾನಿ ಮೊದಲಾದವರು ಸಹಿ ಹಾಕಿದ್ದಾರೆ.

ಮೇಲಿನ ಎಲ್ಲರೂ ಹಿಂದುಳಿದವರ ಆರ್ಥಿಕ ಮತ್ತು ಶೈಕ್ಷಣಿಕ ಸಬಲೀಕರಣ ಒಕ್ಕೂಟದ (ಎಇಇಡಿಯು) ಸ್ಥಾಪಕ ಸದಸ್ಯರು. ಈ ಸಂಸ್ಥೆಯು ಹಿಂದು ಮತ್ತು ಮುಸ್ಲಿಂ ಸಮುದಾಯಗಳ ಪರಸ್ಪರ ಕಾಳಜಿಯ ಜೊತೆಗೆ ಎರಡು ಸಮುದಾಯಗಳ ನಡುವಿನ ವಿಭಜನೆಯನ್ನು ನಿವಾರಿಸಲು ಆರ್‌ಎಸ್‌ಎಸ್‌ನೊಂದಿಗೆ ಮಾತುಕತೆ ನಡೆಸುತ್ತದೆ.

ಹೆಚ್ಚುತ್ತಿರುವ ಮುಸ್ಲಿಂ ವಿರೋಧಿ ಮೆರವಣಿಗೆಗಳು

“ಮುಸ್ಲಿಂ ವಿರೋಧಿ ಭಾಷಣಗಳು ನಿರಂತರವಾಗಿ ನಡೆಯುತ್ತಿವೆ. ಭಾಷಣಗಳಲ್ಲಿ ಈ ಸಮುದಾಯದ ವಿರುದ್ಧ ಹಿಂಸಾಚಾರ, ನರಮೇಧ ನಡೆಸುವಂತೆ ಕರೆ ನೀಡಲಾಗುತ್ತಿದೆ. ಇತ್ತೀಚಿಗೆ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದಲ್ಲಿ ನಡೆದ ಮುಸ್ಲಿಂ ವಿರೋಧಿ ಮೆರವಣಿಗೆಗಳು ದ್ವೇಷದಿಂದ ಒಳಗೊಂಡಿರುವುದರ ಜೊತೆ ಮುಸ್ಲಿಂ ಸಮುದಾಯ ನಡೆಸುವ ವ್ಯವಹಾರಗಳನ್ನು ಬಹಿಷ್ಕರಿಸುವಂತೆ ಕರೆ ನೀಡಲಾಗಿತ್ತು. ವಾಸ್ತವವಾಗಿ, ಮಾಧ್ಯಮಗಳಲ್ಲಿ ಪ್ರಕಟವಾದಂತೆ ಮಹಾರಾಷ್ಟ್ರದಲ್ಲಿ ನಡೆದ ದ್ವೇಷದ ಮೆರವಣಿಗೆಗಳು ತಿಂಗಳುಗಳವರೆಗೆ ವಿಸ್ತರಿಸಲ್ಪಟ್ಟಿದ್ದವು. ಈ ರೀತಿಯ ಬಹುತೇಕ ಮೆರವಣಿಗೆಗಳು ಪೊಲೀಸರ ಉಪಸ್ಥಿತಿಯಲ್ಲಿ ನಡೆದಿವೆ. ಆಯೋಜಕರ ವಿರುದ್ಧ ಕ್ರಮವನ್ನು ಜರುಗಿಸುವಂತೆ ದೂರು ದಾಖಲಾದರೂ ಹೆಚ್ಚಿನವು ಕಾರ್ಯರೂಪಕ್ಕೆ ಬಂದಿಲ್ಲ. ಈ ರೀತಿಯ ಘಟನೆಗಳು ಮುಸ್ಲಿಮರಲ್ಲಿ ತಲ್ಲಣ ಮತ್ತು ಭಯದ ವಾತಾವರಣವನ್ನು ಉಂಟು ಮಾಡುತ್ತಿದೆ,” ಎಂದು ಪತ್ರದಲ್ಲಿ ತಿಳಿಸಲಾಗಿದೆ.

“ಕಳೆದ ಆಗಸ್ಟ್‌ನಲ್ಲಿ ನಾವು ನಿಮ್ಮನ್ನು ಭೇಟಿಯಾದ ನಂತರ, ನಾವು ಹೆಚ್ಚಿನ ಸಂಖ್ಯೆಯ ಧಾರ್ಮಿಕ ಮತ್ತು ಇತರ ಪ್ರಭಾವಿ ಮುಸ್ಲಿಂ ನಾಯಕರನ್ನು ಭೇಟಿ ಮಾಡಿದ್ದೇವೆ. ಅವರೆಲ್ಲರು ಮುಸ್ಲಿಂ ಸಮುದಾಯದ ವಿರುದ್ಧ ನಡೆಯುತ್ತಿರುವ ದ್ವೇಷದ ಮನೋಭಾವನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಇಲ್ಲಿಯವರೆಗೆ ಮುಸ್ಲಿಂ ವಿರೋಧಿ ಕಾರ್ಯಕ್ರಮಗಳನ್ನು ನಿವಾರಿಸಲು ಆರ್‌ಎಸ್‌ಎಸ್‌ ಪ್ರಗತಿ ನಿರಾಶಾದಾಯಕ. ಈ ಬಗ್ಗೆ ಎಇಇಡಿಯು ಸಂಸ್ಥೆ ಆರ್‌ಎಸ್‌ಎಸ್ ಅಧಿಕಾರಿ ಕೃಷ್ಣ ಗೋಪಾಲ್ ಅವರೊಂದಿಗೆ ಸಂವಾದವನ್ನು ಮುಂದುವರಿಸಲು ಎದುರು ನೋಡುತ್ತಿದೆ. ನಮ್ಮ ಎಇಇಡಿಯು ಸಂಸ್ಥೆ ಎರಡೂ ಸಮುದಾಯಗಳ ಸೌಹಾರ್ದಯುತ ಸಂಬಂಧಕ್ಕಾಗಿ ಭಾಗವತ್ ಅವರೊಂದಿಗೆ ಮತ್ತೊಂದು ಸಭೆ ನಡೆಸುವಂತೆ ಕೋರಿತ್ತು. ಆದರೆ ಹಲವು ತಿಂಗಳವರೆಗೂ ಮುಖ್ಯಸ್ಥರು ಕಾರ್ಯನಿರತರಾಗಿರುತ್ತಾರೆಂದು ಆರ್‌ಎಸ್‌ಎಸ್‌ ಪ್ರಧಾನ ಕಚೇರಿಯಿಂದ ಪ್ರತಿಕ್ರಿಯೆ ಬಂದಿದೆ” ಎಂದು ಪತ್ರದಲ್ಲಿ ಹೇಳಲಾಗಿದೆ.

ಈ ಸುದ್ದಿ ಓದಿದ್ದೀರಾ? ಸತತ ಕುಸಿದ ಭಾರತದ ಪತ್ರಿಕಾ ಸ್ವಾತಂತ್ರ್ಯ; ಸರ್ಕಾರದಿಂದ ಬಾಯಿ ಮಾತಿನ ಸಮರ್ಥನೆ

“ರಾಷ್ಟ್ರ ನಿರ್ಮಾಣದ ಬಗ್ಗೆ ಸಂಘ ತೋರಿಸುತ್ತಿರುವ ವಿಶ್ವಾಸಾರ್ಹತೆ ಮತ್ತು ಕಾಳಜಿ ಪ್ರಶ್ನಾರ್ಹ. ಆದರೆ ನೀವೇ ಹೇಳಿದಂತೆ, ಭಾರತದ ಶೇ. 20ರಷ್ಟಿರುವ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಸಮುದಾಯಗಳನ್ನು ಒಳಗೊಳ್ಳದಿದ್ದರೆ ಉತ್ತಮ ರಾಷ್ಟ್ರ ನಿರ್ಮಾಣ ಸಾಧ್ಯವಿಲ್ಲ. ಆದ ಕಾರಣದಿಂದ ಇಂತಹ ಕೃತ್ಯಗಳನ್ನು ಖಂಡಿಸಲು ಮತ್ತು ನಮ್ಮ ದೇಶವನ್ನು ಕೋಮು ವೈಷಮ್ಯದಿಂದ ಮುಕ್ತಗೊಳಿಸಲು ಮತ್ತು ಪ್ರೀತಿ ಮತ್ತು ಸೌಹಾರ್ದತೆಯ ಬಗ್ಗೆ ಮಾತನಾಡಲು ಸಂಘದ ಪ್ರಮುಖ ನಾಯಕರು ಗಟ್ಟಿ ಧನಿಯಲ್ಲಿ ಮಾತನಾಡುವುದು ಅನಿವಾರ್ಯವಾಗಿದೆ. ನೀವು ಅನೇಕ ಸಂದರ್ಭಗಳಲ್ಲಿ ಈ ಬಗ್ಗೆ ಮಾತನಾಡಿದ್ದೀರಿ. ಆದರೂ ದಯವಿಟ್ಟು ಇನ್ನೂ ಹೆಚ್ಚು ಮಾತನಾಡಲು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ” ಎಂದು ಎಇಇಡಿಯ ಪತ್ರದಲ್ಲಿ ಉಲ್ಲೇಖಿಸಲಾಗಿದೆ.  

ಸಂಘದ ನಾಯಕರಿಂದ ನಮ್ಮ ಮನವಿ ನಿರ್ಲಕ್ಷ್ಯ

ಪತ್ರ ಬರೆದಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭೆಯ ಮಾಜಿ ಸದಸ್ಯ ಶಾಹಿದ್ ಸಿದ್ದಿಕಿ, ಜಿಹಾದ್ ಅಥವಾ ಗೋಹತ್ಯೆಯ ಪರಿಕಲ್ಪನೆಯ ಬಗ್ಗೆ ಆರ್‌ಎಸ್‌ಎಸ್ ಮುಖಂಡರು ವ್ಯಕ್ತಪಡಿಸಿದ ಕಳವಳಗಳ ಬಗ್ಗೆ ನಾವೆಲ್ಲರೂ ಸಹಮತ ವ್ಯಕ್ತಪಡಿಸಿದ್ದೇವೆ. ಆದಾಗ್ಯೂ, ಅಲ್ಪಸಂಖ್ಯಾತರ ಮೇಲಿನ ದ್ವೇಷದ ಭಾಷಣಗಳು ಮತ್ತು ಸಂಘಟಿತ ದಾಳಿಗಳ ಬಗ್ಗೆ ನಾವು ವ್ಯಕ್ತಪಡಿಸಿದ ಕಳವಳಗಳನ್ನು ಸಂಘದ ನಾಯಕತ್ವವು ಹೆಚ್ಚಾಗಿ ನಿರ್ಲಕ್ಷಿಸಿದೆ. ಶಾಂತಿ ಸೌಹಾರ್ದತೆಯಿಂದ ಮಾತ್ರ ಎರಡೂ ಸಮುದಾಯಗಳ ನಡುವೆ ಸಂಬಂಧ ಸುಧಾರಿಸುತ್ತದೆ” ಎಂದು ಹೇಳಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಕರೂಪ ನಾಗರಿಕ ಸಂಹಿತೆ ಅನುಷ್ಠಾನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್ ಶಾ

ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ಏಕರೂಪ ನಾಗರಿಕ ಸಂಹಿತೆ ಕಾಯ್ದೆಯನ್ನು ತಡೆಯಲು ಯಾರಿಂದಲೂ...

ಬೆಂಗಳೂರು ಟೆಕ್ ಸಮ್ಮಿಟ್ 2023 | ಜೈವಿಕ ತಂತ್ರಜ್ಞಾನ ಕಾರ್ಯನೀತಿಯ ಪರಿಷ್ಕೃತ ಕರಡು ಬಿಡುಗಡೆ

ಬೆಂಗಳೂರು ಅರಮನೆಯಲ್ಲಿ 'ಬ್ರೇಕಿಂಗ್ ದಿ ಬೌಂಡರೀಸ್' ಘೋಷವಾಕ್ಯದ 26ನೇ ‘ಬೆಂಗಳೂರು ತಂತ್ರಜ್ಞಾನ...

ಮಸೂದೆ ವಿಳಂಬ: ಸಿಎಂ, ಸಚಿವರನ್ನು ಭೇಟಿಯಾಗುವಂತೆ ಕೇರಳ ರಾಜ್ಯಪಾಲರಿಗೆ ಸುಪ್ರೀಂ ಸೂಚನೆ

ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಎಂಟು ಮಸೂದೆಗಳ ಬಗ್ಗೆ...

ಕಾಗಿನೆಲೆ ಪೀಠ ಒಂದು ಜಾತಿಯ ನೆಲೆ ಅಲ್ಲ, ಎಲ್ಲ ಶೋಷಿತ ಜಾತಿ-ಸಮುದಾಯಗಳ ನೆಲೆ: ಸಿದ್ದರಾಮಯ್ಯ

ಕನಕದಾಸರು ಜಾತಿ‌, ಅನಕ್ಷರತೆಯ ಅಸಮಾನತೆ ಹೋಗಲಾಡಿಸಲು ಹೋರಾಡಿದರು ಯಾವ ಧರ್ಮವೂ...