ಅಪ್ಪು ನೆನಪು | ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡ ರಾಘವೇಂದ್ರ ರಾಜ್‌ಕುಮಾರ್‌

Date:

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ದೈಹಿಕವಾಗಿ ನಮ್ಮನಗಲಿ ಒಂದೂವರೆ ವರ್ಷ ಕಳೆದಿದೆ. ಆದರೆ, ಜನಮಾನಸದಲ್ಲಿ ಅವರು ಇಂದಿಗೂ ಜೀವಂತವಾಗಿದ್ದಾರೆ. ಪುನೀತ್‌ ಮೇಲಿನ ಪ್ರೀತಿ, ಅಭಿಮಾನಕ್ಕಾಗಿ ಹಲವು ಅಭಿಮಾನಿಗಳು ತಮ್ಮ ಎದೆಯ ಮೇಲೆ ಅಚ್ಚೆ ಹಾಕಿಸಿಕೊಂಡ ಉದಾಹರಣೆಗಳಿವೆ. ಇದೀಗ ಅಭಿಮಾನಿಗಳ ಹಾದಿ ತುಳಿದಿರುವ ಪುನೀತ್‌ ಅವರ ಸಹೋದರ, ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್‌ ತಮ್ಮನ ನೆನಪಿಗಾಗಿ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಅಪ್ಪು, ಟೊಟೊ ಮತ್ತು ನುಕ್ಕಿ ಎಂಬ ಮೂರು ಹೆಸರುಗಳನ್ನು ರಾಘವೇಂದ್ರ ರಾಜ್‌ಕುಮಾರ್‌ ತಮ್ಮ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಸಹೋದರನ ನೆನಪಿಗಾಗಿ ರಾಘಣ್ಣ ಟ್ಯಾಟೂ ಹಾಕಿಸಿಕೊಂಡಿರುವ ಸಂದರ್ಭದ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಅನಾರೋಗ್ಯದ ನಡುವೆಯೂ ರಾಘಣ್ಣ ತಮ್ಮ ಎದೆಯ ಮೇಲೆ ಸಹೋದರನ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿರುವುದನ್ನು ಕಂಡು ರಾಜ್‌ ಕುಟುಂಬದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ರಾಘಣ್ಣ, ಅಪ್ಪು ಹೆಸರಿನ ಜೊತೆಗೆ ಟ್ಯಾಟೂ ಹಾಕಿಸಿಕೊಂಡಿರುವ ಮತ್ತೆರೆಡು ಹೆಸರುಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ʼಟೊಟೊʼ ಮತ್ತು ʼನುಕ್ಕಿʼ ಈ ಎರಡೂ ಹೆಸರುಗಳು ಪುನೀತ್‌ ಅವರ ಇಬ್ಬರು ಹೆಣ್ಣು ಮಕ್ಕಳದ್ದು. ಪುನೀತ್‌ ಅವರ ಮಕ್ಕಳ ಬಗ್ಗೆಯೂ ಅಪಾರ ಕಾಳಜಿ ಮತ್ತು ಅಕ್ಕರೆ ಹೊಂದಿರುವ ರಾಘಣ್ಣ ಇಬ್ಬರೂ ಹೆಣ್ಣು ಮಕ್ಕಳಿಗೆ ಮನೆಮಂದಿ ಪ್ರೀತಿಯಿಂದ ಕರೆಯುವ ಹೆಸರನ್ನು ಎದೆಯ ಮೇಲೆ ಬರೆಸಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ʼದಿ ಕೇರಳ ಸ್ಟೋರಿʼ ಕುರಿತ ಹೇಳಿಕೆ ತಿರುಚಿದ ಮಾಧ್ಯಮಗಳು : ಚಳಿ ಬಿಡಿಸಿದ ನವಾಜುದ್ದೀನ್‌ ಸಿದ್ದಿಕಿ

2021ರ ಅಕ್ಟೋಬರ್‌ 29ರಂದು ಪುನೀತ್‌ ತಮ್ಮ ಮನೆಯಲ್ಲಿರುವ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಎದೆ ನೋವಿನಿಂದ ಕುಸಿದು ಬಿದ್ದಿದ್ದರು. ಕುಟುಂಬಸ್ಥರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ತಪಾಸಣೆ ನಡೆಸಿದ್ದ ವೈದ್ಯರು ಮಾರ್ಗಮಧ್ಯೆದಲ್ಲೇ ಪುನೀತ್‌ ತೀವ್ರ ಹೃದಯಾಘಾತದಿಂದ ನಿಧನರಾಗಿರುವುದಾಗಿ ಖಚಿತ ಪಡಿಸಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಂಡಿಯಾ-ಭಾರತ್‌ ವಿವಾದ : ಅಕ್ಷಯ್‌ ಕುಮಾರ್‌ ಸಮಯ ಸಾಧಕ ಬುದ್ಧಿಗೆ ಛೀಮಾರಿ ಹಾಕಿದ ನೆಟ್ಟಿಗರು

ಕೇಂದ್ರ ಸರ್ಕಾರ ದೇಶದ ಹೆಸರನ್ನು ಬದಲಿಸಲು ಮುಂದಾಗಿದೆ ಎಂಬ ಚರ್ಚೆ ಜೋರಾಗಿರುವ...

ಇದಾವುದು ಹೊಸ ಧರ್ಮ, ಸನಾತನ ಎಂದು ಪ್ರಶ್ನಿಸಿದ ಬಹುಭಾಷಾ ನಟ ಕಿಶೋರ್ ಕುಮಾರ್

ಒಳ್ಳೆಯ ಕೆಲಸ ಮಾಡುವುದಷ್ಟೇ ಧರ್ಮವೇ ಹೊರತು ಹಲವು ನಂಬಿಕೆಯ ಮೂಟೆಗಳಲ್ಲ ಮನುಷ್ಯರನ್ನು ಮನುಷ್ಯರಾಗಿ...

‘ನಟಿ ರಮ್ಯಾ ಹೃದಯಾಘಾತದಿಂದ ನಿಧನ’ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು!

ಸುದ್ದಿ ನಿಜವೆಂದು ತಿಳಿದು ಸಂತಾಪ ಸೂಚಿಸಿ ಟ್ವೀಟ್‌ ಮಾಡಿದ್ದ ಹಲವಾರು ನೆಟ್ಟಿಗರು 'ಅವರು...

ಚಿಕ್ಕಮಗಳೂರು | ಬೈಕ್‌ಗೆ ಕಾರು ಢಿಕ್ಕಿ; ಕಾರು ನಟ ಚಂದ್ರಪ್ರಭಗೆ ಸೇರಿದ್ದೆಂದು ಆರೋಪ

ಚಿಕ್ಕಮಗಳೂರಿನಲ್ಲಿ ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು, ಅಪಘಾತವಾಗಿರುವ ಘಟನೆ ನಡೆದಿದೆ....