ವಿಜ್ಞಾನಿ ಕೊಳ್ಳೇಗಾಲ ಶರ್ಮ ಸಂದರ್ಶನ | ‘ನಾನು ಹುಡುಗಿ ಅಂದ್ಕೊಂಡು ಲವ್ ಲೆಟರ್ಸ್ ಬರೆದವರೂ ಉಂಟು!’

Date:

Advertisements


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್) 

ಕೊಳ್ಳೇಗಾಲ ಶರ್ಮ… ಇವರು ಯಾರೂಂತ ಗೊತ್ತಿರದವರು ಕೂಡ ಇವರ ಲೇಖನಗಳನ್ನು ಓದಿರಬಹುದು, ದನಿ ಕೇಳಿರಬಹುದು. ವಿಜ್ಞಾನ ವಿಷಯಗಳನ್ನು ಕನ್ನಡದಲ್ಲಿ ಹೆಚ್ಚು ಪ್ರಚಾರವಾಗುವಂತೆ ಮಾಡುವುದು ಇವರ ಆಸಕ್ತಿ. ಈ ಆಸಕ್ತಿಯನ್ನು ಇವರು ನಾಲ್ಕು ದಶಕಗಳಿಂದಲೂ ಕಾಪಾಡಿಕೊಂಡು ಬರ್ತಿದ್ದಾರೆ. ನಿವೃತ್ತಿಯ ನಂತರ ಇವರ ವಿಜ್ಞಾನ ಪ್ರಸಾರ ಚಟುವಟಿಕೆಗಳು ಸಾಕಷ್ಟು ಹೆಚ್ಚಾಗಿರುವುದು ವಿಶೇಷ.

ಶರ್ಮ ಅವರು ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ – ಅಂದ್ರೆ ಸಿಎಫ್‌ಟಿಆರ್‌ಐನಲ್ಲಿ ವಿಜ್ಞಾನಿಯಾಗಿದ್ದವರು. ಆ ಸಂಸ್ಥೆಯ ಮಾಹಿತಿ ಪ್ರಚಾರ ಮತ್ತು ಪ್ರಸಾರ ವಿಭಾಗದ ಉಸ್ತುವಾರಿಯಾಗಿ ಗಮನಾರ್ಹ ಕೆಲಸ ಮಾಡಿದವರು.

Advertisements

ಕನ್ನಡದಲ್ಲಿ 3,600ಕ್ಕೂ ಹೆಚ್ಚು ಲೇಖನಗಳನ್ನು ಬರ್ದಿದ್ದಾರೆ. ‘ಜಾಣಸುದ್ದಿ’ ಎಂಬ ಹೆಸರಿನ ಅಪರೂಪದ ವಿಜ್ಞಾನ ಪಾಡ್‌ಕಾಸ್ಟ್‌ಗಾಗಿ 800ಕ್ಕೂ ಹೆಚ್ಚು ಆಡಿಯೊ ಸಂಚಿಕೆಗಳನ್ನು ರೂಪಿಸಿದ್ದಾರೆ. 200ಕ್ಕೂ ಹೆಚ್ಚು ರೇಡಿಯೊ ನಾಟಕಗಳನ್ನು ರಚಿಸಿದ್ದಾರೆ. ಈಗ ನಿವೃತ್ತಿಯ ನಂತರ, ‘ಕುತೂಹಲಿ’ ಎಂಬ ಹೆಸರಿನಲ್ಲಿ ಶಾಲೆಗಳಲ್ಲಿ ವಿಜ್ಞಾನ ಕಾರ್ಯಕ್ರಮಗಳು, ಕಾರ್ಯಾಗಾರಗಳನ್ನು ನಡೆಸ್ತಾ ಇದ್ದಾರೆ. ಹಾಗೆಯೇ, ವಿಜ್ಞಾನದ ವಸ್ತುವಿಷಯಗಳನ್ನು ಒಳಗೊಂಡ ಅತ್ಯಂತ ಕುತೂಹಲಕರ ನಾಟಕಗಳು ರಾಜ್ಯದ ನಾನಾ ಭಾಗಗಳಲ್ಲಿ ಪ್ರದರ್ಶನ ಕಾಣುವಲ್ಲಿ ಕೂಡ ಇವರ ಶ್ರಮ ಬಹಳ ದೊಡ್ಡದು.

ಹೀಗೆ… ವಿಜ್ಞಾನ ಸಂವಹನದಲ್ಲಿ ಕಳೆದುಹೋಗಿರುವ ಕೊಳ್ಳೇಗಾಲ ಶರ್ಮ ಅವರು ಬಿಡುವು ಮಾಡಿಕೊಂಡು, ಅವರ ಬದುಕಿನ ಸ್ವಾರಸ್ಯಕರ ಕತೆಗಳನ್ನು ನಮ್ಜೊತೆ ಹಂಚಿಕೊಂಡಿದ್ದಾರೆ. ಆ ಕತೆಗಳು ಇಲ್ಲಿವೆ ಕೇಳಿ…

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸಹ್ಯಾದ್ರಿ ನಾಗರಾಜ್
ಸಹ್ಯಾದ್ರಿ ನಾಗರಾಜ್
ಪತ್ರಕರ್ತ. ಕೈದೋಟ ವಿನ್ಯಾಸಕ. ಪಯಣಿಗ. 'ಮನ ಜನ ಪದ್ಯ' ಕಾರ್ಯಕ್ರಮದ ಆಯೋಜಕರಲ್ಲೊಬ್ಬ. ವಿಭಿನ್ನ 'ಪಯಣ'ಗಳ ಕ್ಯಾಪ್ಟನ್.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯ ಟ್ರಾವೆಲ್ ಏಜೆಂಟ್‌ಗಳಿಗೆ ಟ್ರಂಪ್‌ ಸರ್ಕಾರದ ವಿಸಾ ನಿರ್ಬಂಧ; ಇನ್ನು ಮುಂದೆ ಅಮೆರಿಕ ಪ್ರವಾಸ ಕಷ್ಟವೆ?

ಡಿಎಸ್-160 ಅರ್ಜಿ ತುಂಬುವುದು, ಪಾಸ್‌ಪೋರ್ಟ್ ವಿವರಗಳ ನಿರ್ವಹಣೆ, ದಾಖಲೆಗಳ ಸಕಾಲಿಕ ಅಪ್ಲೋಡ್‌...

ವಿದೇಶಿ ಮಾಧ್ಯಮಗಳು ಕಂಡಂತೆ ಭಾರತ – ಪಾಕ್‌ ಸಂಘರ್ಷ

ಭಾರತ - ಪಾಕ್‌ ಸಂಘರ್ಷದ ಸಮಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಲವು ಮಾಧ್ಯಮಗಳು...

ನಾವು ಪಾಕಿಸ್ತಾನಿಯರಲ್ಲ ಎಂದ ಬಲೂಚಿಗಳು; ಏನಿದು ನೆರೆಯ ದೇಶದ ಬಲೂಚಿಸ್ತಾನ ಹೋರಾಟ?

ಬಲೂಚಿಸ್ತಾನವು ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾಗಿದ್ದರೂ, ಆರ್ಥಿಕ ಮತ್ತು ಸಾಮಾಜಿಕವಾಗಿ ದೇಶದ ಇತರ...

Download Eedina App Android / iOS

X