(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
ಮಳೆ ಅಂದ್ರೇನೇ ನೂರಾರು ನೆನಪುಗಳ ಸರಮಾಲೆ. ಬಾಲ್ಯದಿಂದ ಇಲ್ಲಿಯತನಕ ಎಲ್ಲರ ಬದುಕಿನ ಅವಿಭಾಜ್ಯ ಸಂಗತಿ ಆಗಿರುವ ಮಳೆ ಬಗ್ಗೆ ನಮಗೆಲ್ಲ ಅಪಾರ ಪ್ರೀತಿ ಇದೆ, ಅಷ್ಟೇ ಪ್ರಮಾಣದಲ್ಲಿ ಕೋಪ-ಅಸಹನೆ ಕೂಡ ಇದೆ.
ಬಾಲ್ಯ, ಪ್ರೀತಿ-ಪ್ರೇಮ, ತರಲೆ-ತುಂಟತನ, ಶಾಲಾ-ಕಾಲೇಜು ದಿನಗಳು, ಹೊಲ-ತೋಟದಲ್ಲಿನ ಸಮಯ, ಊಟ-ತಿಂಡಿ, ದಾಂಪತ್ಯ, ಪ್ರಣಯ, ವಿರಸ, ಬೇಸರ, ದುಃಖ, ದುರಂತ… ಹೀಗೆ ನಮ್ಮೆಲ್ಲ ಭಾವಕ್ಕೂ, ಅಮೂಲ್ಯ ಕ್ಷಣಗಳಿಗೂ ಮಳೆ ಜೀವಂತ ಸಾಕ್ಷಿ.
ಇಂತಹ ಮಳೆಗಾಲದ ಅನುಭವ ಕಥನಗಳನ್ನು ಆಡಿಯೊ ರೂಪದಲ್ಲಿ ಪ್ರಸ್ತುತಪಡಿಸುವ ಸರಣಿ ಇದು. ನಿಮ್ಮ ಬದುಕಿನ ಇಂತಹ ಯಾವುದಾದರೊಂದು ಮಳೆಗಾಲದ ಘಟನೆಯನ್ನು ಆಡಿಯೊ ಮಾಡಿ, 9035362958 ವಾಟ್ಸಾಪ್ ಸಂಖ್ಯೆಗೆ ಕಳಿಸಬಹುದು.