ಜರ್ಮನಿಯಲ್ಲಿ ತೀವ್ರ ಬಲಪಂಥೀಯರ ಪ್ರಾಬಲ್ಯ; 2ನೇ ಮಹಾಯುದ್ಧದ ಬಳಿಕ ಮೊದಲ ಬಾರಿಗೆ AfDಗೆ ಗೆಲುವು

Date:

ಜರ್ಮನಿಯ ತೀವ್ರ ಬಲಪಂಥೀಯ ಆಲ್ಟರ್ನೇಟಿವ್ ಫಾರ್ ಜರ್ಮನಿ (AfD) ಪಕ್ಷವು ಸೆಪ್ಟೆಂಬರ್ 6ರಂದು ನಡೆದ Saxony-Anhalt ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಪಕ್ಷ 43.8% ಮತಗಳೊಂದಿಗೆ 83 ಸದಸ್ಯ ಬಲದ ವಿಧಾನಸಭೆಯಲ್ಲಿ 39 ಸ್ಥಾನಗಳನ್ನು ಗೆದ್ದಿದೆ. ಆದರೆ ಏಕಾಂಗಿಯಾಗಿ ಸರ್ಕಾರ ರಚಿಸಲು ಅಗತ್ಯವಿರುವ 42 ಸ್ಥಾನಗಳ ಬಹುಮತದಿಂದ ಮೂರು ಸ್ಥಾನ ಕಡಿಮೆಯಾಗಿದೆ.

- Advertisement -

ಎರಡನೇ ಮಹಾಯುದ್ಧದ ಬಳಿಕ ಜರ್ಮನಿಯಲ್ಲಿ ತೀವ್ರ ಬಲಪಂಥೀಯ ಪಕ್ಷವೊಂದು ರಾಜ್ಯ ಚುನಾವಣೆಯಲ್ಲಿ ಗೆದ್ದಿರುವುದು ಇದೇ ಮೊದಲು. ಆದರೆ AfDಗೆ ಸರ್ಕಾರ ರಚಿಸಲು ಇನ್ನೂ ಮೈತ್ರಿ ಅಥವಾ ಇತರ ಪಕ್ಷಗಳ ಬೆಂಬಲದ ಅಗತ್ಯವಿದೆ. ಜರ್ಮನಿಯ ಪ್ರಮುಖ ರಾಜಕೀಯ ಪಕ್ಷಗಳು AfD ಜೊತೆ ಮೈತ್ರಿ ಮಾಡಿಕೊಳ್ಳುವುದನ್ನು ನಿರಾಕರಿಸಿರುವುದರಿಂದ ಸದ್ಯ ಸರ್ಕಾರ ರಚನೆ ಕಗ್ಗಂಟಾಗಿದೆ ಎಂದು ವರದಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

AfDಯ ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿ ಉಲ್ರಿಕ್ ಸೀಗ್ಮಂಡ್ ಫಲಿತಾಂಶವನ್ನು ಐತಿಹಾಸಿಕ ಗೆಲುವು ಎಂದು ಬಣ್ಣಿಸಿದ್ದಾರೆ. ಮತದಾರರು ರಾಜಕೀಯ ಬದಲಾವಣೆಗೆ ಸ್ಪಷ್ಟ ಜನಾದೇಶ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

Saxony-Anhaltನಲ್ಲಿ AfDಗೆ 43.8% ಮತಗಳು ಬಂದಿದ್ದು, 2021ರ ಚುನಾವಣೆಯಲ್ಲಿ ಪಡೆದಿದ್ದ 20.8% ಮತಗಳಿಗೆ ಹೋಲಿಸಿದರೆ ಇದು ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ. ರಾಜ್ಯ ಚುನಾವಣೆಯೊಂದರಲ್ಲಿ AfD ದಾಖಲಿಸಿರುವ ಅತ್ಯಧಿಕ ಮತ ಪ್ರಮಾಣವೂ ಇದೇ. ಚುನಾವಣೆಯಲ್ಲಿ 77.8% ಮತದಾನ ದಾಖಲಾಗಿದ್ದು, ಜರ್ಮನಿ ಪುನರ್‌ಏಕೀಕರಣದ ಬಳಿಕ ರಾಜ್ಯದಲ್ಲಿ ದಾಖಲಾದ ಅತ್ಯಧಿಕ ಮತದಾನ ಪ್ರಮಾಣವಾಗಿದೆ.

ಇನ್ನು ಜರ್ಮನಿಯ ಚಾನ್ಸಲರ್ ಫ್ರೆಡ್ರಿಕ್ ಮರ್ಜ್ ನೇತೃತ್ವದ ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ (CDU) 17.2% ಮತಗಳೊಂದಿಗೆ 15 ಸ್ಥಾನಗಳಿಗೆ ಕುಸಿದಿದೆ. 2021ರಲ್ಲಿ 40 ಸ್ಥಾನ ಹೊಂದಿದ್ದ CDUಗೆ ಇದು ಭಾರಿ ಹಿನ್ನಡೆ.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ (SPD) 9.3%, ಗ್ರೀನ್ಸ್ 8.9% ಹಾಗೂ ದಿ ಲೆಫ್ಟ್ 8.6% ಮತ ಪಡೆದಿದ್ದು, ತಲಾ 8 ಸ್ಥಾನಗಳನ್ನು ಗೆದ್ದಿವೆ. BSW 5.3% ಮತಗಳೊಂದಿಗೆ 5 ಸ್ಥಾನ ಪಡೆದಿದೆ. FDP ಶೇ.5ರ ಮತ ಮಿತಿ ದಾಟಲು ವಿಫಲವಾಗಿದೆ. 83 ಸದಸ್ಯರ ವಿಧಾನಸಭೆಯಲ್ಲಿ ಬಹುಮತಕ್ಕೆ 42 ಸ್ಥಾನ ಬೇಕು. AfD 39 ಸ್ಥಾನ ಪಡೆದಿರುವುದರಿಂದ ಏಕಾಂಗಿಯಾಗಿ ಸರ್ಕಾರ ರಚಿಸಲು ಸಾಧ್ಯವಿಲ್ಲ.

AfD ಜೊತೆ ಸರ್ಕಾರ ರಚಿಸುವುದಿಲ್ಲ ಎಂದು CDU ಸೇರಿದಂತೆ ಪ್ರಮುಖ ಪಕ್ಷಗಳು ಈಗಾಗಲೇ ಸ್ಪಷ್ಟಪಡಿಸಿವೆ. ಹೀಗಾಗಿ AfDಯನ್ನು ಹೊರತುಪಡಿಸಿ ಉಳಿದ ಪಕ್ಷಗಳು ಒಗ್ಗೂಡಿ ಸರ್ಕಾರ ರಚಿಸುವ ಸಾಧ್ಯತೆಯೂ ಸುಲಭವಲ್ಲ. CDU, SPD ಮತ್ತು ಗ್ರೀನ್ಸ್‌ಗಳ ಒಟ್ಟು ಸ್ಥಾನಗಳು 31ಕ್ಕೆ ಸೀಮಿತವಾಗಿದ್ದು, ದಿ ಲೆಫ್ಟ್ ಪಕ್ಷದ ಬೆಂಬಲ ಸೇರಿಸಿದರೂ 39ಕ್ಕೆ ಮಾತ್ರ ತಲುಪುತ್ತವೆ.

ಇದರ ನಡುವೆ 5.3% ಮತ ಪಡೆದು ವಿಧಾನಸಭೆ ಪ್ರವೇಶಿಸಿರುವ BSW ಪಕ್ಷದ ನಿಲುವು ಸರ್ಕಾರ ರಚನೆಯಲ್ಲಿ ನಿರ್ಣಾಯಕವಾಗುವ ಸಾಧ್ಯತೆ ಇದೆ. AfDಗೆ BSW ಬೆಂಬಲ ನೀಡಿದರೆ ಮಾತ್ರ ಅದರ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಾಗಲಿದೆ.

AfD ವಲಸೆ ವಿರೋಧಿ ನಿಲುವಿಗೆ ಹೆಸರಾಗಿದೆ. ಪಕ್ಷದ Saxony-Anhalt ಘಟಕವು ವಲಸಿಗರನ್ನು ಗಡಿಪಾರು ಮಾಡುವ ನೀತಿಗೆ ಒತ್ತು ನೀಡಿದ್ದು, ಇದನ್ನು ‘ರಿಮೈಗ್ರೇಶನ್’ ಎಂದು ಕರೆಯುತ್ತದೆ. ಉಕ್ರೇನ್‌ಗೆ ತೆರಿಗೆದಾರರ ಹಣ ನೀಡುವುದನ್ನು ವಿರೋಧಿಸುವುದರ ಜೊತೆಗೆ ರಷ್ಯಾ ವಿರುದ್ಧದ ನಿರ್ಬಂಧಗಳನ್ನು ತೆಗೆದುಹಾಕಬೇಕು ಎಂಬ ನಿಲುವನ್ನೂ ಹೊಂದಿದೆ.

ಇದನ್ನೂ ಓದಿ: ಪ್ರೀಮಿಯಂ ಲೇಖನ | ದೇಶದಲ್ಲಿ ಎಡಪಂಥೀಯ ರಾಜಕಾರಣಕ್ಕೆ ಗ್ರಹಣ ಹಿಡಿದಿದೆಯೇ?

Saxony-Anhaltನ AfD ಘಟಕವನ್ನು ಜರ್ಮನಿಯ ದೇಶೀಯ ಗುಪ್ತಚರ ಸಂಸ್ಥೆ ‘ಸಾಬೀತಾದ ಬಲಪಂಥೀಯ ಉಗ್ರಗಾಮಿ ಸಂಘಟನೆ’ ಎಂದು ವರ್ಗೀಕರಿಸಿದೆ. AfD ಈ ಆರೋಪವನ್ನು ತಳ್ಳಿಹಾಕಿದ್ದು, ರಾಜಕೀಯ ಉದ್ದೇಶದಿಂದ ಮಾಡಿರುವ ಆರೋಪ ಎಂದು ಹೇಳಿದೆ.

ಜರ್ಮನಿಯ ಒಟ್ಟು 16 ರಾಜ್ಯಗಳ ಪೈಕಿ Saxony-Anhalt ಕೂಡ ಒಂದು. ಈ ರಾಜ್ಯಗಳಿಗೆ ಶಿಕ್ಷಣ, ಭದ್ರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವ್ಯಾಪಕ ಅಧಿಕಾರಗಳಿವೆ. ರಾಜ್ಯ ಸರ್ಕಾರಗಳು ಬುಂಡೆಸರಾಟ್‌ನಲ್ಲೂ ಪ್ರತಿನಿಧಿಸುತ್ತವೆ. ಆದರೆ ಸದ್ಯದ ಫಲಿತಾಂಶದ ಪ್ರಕಾರ AfD ಮೊದಲ ಬಾರಿಗೆ ರಾಜ್ಯ ಮಟ್ಟದಲ್ಲಿ ಅಧಿಕಾರದ ಅತ್ಯಂತ ಸಮೀಪಕ್ಕೆ ಬಂದಿದ್ದರೂ ಸರ್ಕಾರ ರಚಿಸುವಷ್ಟು ಬಹುಮತ ಇನ್ನೂ ಅದರ ಕೈಗೆ ಸಿಕ್ಕಿಲ್ಲ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನಕಲಿ ವೈದ್ಯರಿಗೆ ಔಷಧ ಪೂರೈಕೆ : 7 ಮೆಡಿಕಲ್‌ಗಳ ಪರವಾನಗಿ ಅಮಾನತು

ನಕಲಿ ವೈದ್ಯರಿಗೆ ಔಷಧಗಳನ್ನು ಸರಬರಾಜು ಮಾಡಿದ ಆರೋಪದ ಹಿನ್ನೆಲೆ ಜಿಲ್ಲೆಯ ಏಳು...

ʼತ್ರಿವರ್ಣ ಧ್ವಜ ಹಾರಿಸಲು ಅನುಮತಿ ಬೇಕಿಲ್ಲʼ; ಪೊಲೀಸ್ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ನೇಹಾ ಬೋರಾ

ರಾಷ್ಟ್ರಧ್ವಜ ಹಾರಿಸಲು ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ವಾದಿಸಿರುವ ಎಐಎಸ್‌ಎ (AISA)...

ಬೀದರ್‌ | ಕನಿಷ್ಠ ವೇತನ ಪಾವತಿಗೆ ಅರಣ್ಯ ಇಲಾಖೆ ದಿನಗೂಲಿ ನೌಕರರ ಮನವಿ

ಔರಾದ ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೀಕ್ಷಕರು ಹಾಗೂ ದಿನಗೂಲಿ...

ಬೀದರ್‌ | ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸೋಣ : ಡಿಸಿ ಶಿಲ್ಪಾ ಶರ್ಮಾ

ಬೀದರ್ ಜಿಲ್ಲೆಯಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಆಕರ್ಷಕವಾಗಿ...