ಜಿ ರಾಮ್‌ ಜಿ ಜಾರಿಗೊಳಿಸಲು ಕೇಂದ್ರ ಸರ್ಕಾರ ವಿಫಲ: ಮನರೇಗಾ ಕಾರ್ಮಿಕರನ್ನು ಬೀದಿಗೆ ತಳ್ಳಿದರೇ ಮೋದಿ?

Date:

ತ್ವರಿತವಾಗಿ ವೇತನ ಪರಿಷ್ಕರಣೆ ಮಾಡಿ, ಹೊಸ ಕಾನೂನಿನ ಜಾರಿ ದಿನಾಂಕವನ್ನು ಘೋಷಿಸಿ, ಕಾರ್ಮಿಕರ ಹಕ್ಕುಗಳನ್ನು ಭದ್ರಪಡಿಸುವ ಮೂಲಕ ಮೋದಿ ಸರ್ಕಾರವು ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು. ಕಾರ್ಮಿಕರ ಭವಿಷ್ಯವನ್ನು ರಕ್ಷಿಸುವುದು ರಾಷ್ಟ್ರೀಯ ಆದ್ಯತೆಯಾಗಬೇಕು. 

ಯುಪಿಎ ಯುಗದ ಮನರೇಗಾ ಉದ್ಯೋಗ ಕಾಯ್ದೆಯಡಿ ದಾಖಲಾಗಿರುವ ಲಕ್ಷಾಂತರ ಕಾರ್ಮಿಕರ ಭವಿಷ್ಯ ಅನಿಶ್ಚಿತವಾಗಿದೆ. ಮನರೇಗಾ ಅಡಿ 2026-27ನೇ ಸಾಲಿನ ವೇತನ ದರವನ್ನೂ ಪರಿಷ್ಕರಿಸದೆ, ಇತ್ತ ಬದಲಿ ವಿಬಿ ಜಿ ರಾಮ್‌ ಜಿ ಕಾನೂನನ್ನು ಯಾವಾಗ ಜಾರಿಗೊಳಿಸಲಾಗುವುದು ಎಂಬುದರ ಕುರಿತು ಸ್ಪಷ್ಟತೆಯನ್ನೂ ನೀಡದ ಕೇಂದ್ರ ಸರ್ಕಾರವು ಹೊಸ ಕಾಯ್ದೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ.

- Advertisement -

ಕೇಂದ್ರ ಸರ್ಕಾರ ವಿಬಿ-ಜಿ ರಾಮ್ ಜಿ ಕಾಯ್ದೆ-2025ಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವವರೆಗೆ ಏಳು ಕೋಟಿಗೂ ಅಧಿಕ ಮಂದಿ ಮನರೇಗಾ ಕಾರ್ಮಿಕರು ವೇತನ ಹೆಚ್ಚಳಕ್ಕಾಗಿ ಕಾಯಬೇಕಾದ ದುಃಸ್ಥಿತಿ ಎದುರಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಂಗಳೂರು ಶಿಕ್ಷಕರ ಕ್ಷೇತ್ರ: ಪುಟ್ಟಣ್ಣ ಕಟ್ಟಿಕೊಂಡಿರುವ ‘ಶಿಕ್ಷಕರ ಕೋಟೆ’...

ವಿಧಾನ ಪರಿಷತ್‌ನ 4 ಸ್ಥಾನಗಳಲ್ಲಿಅಕ್ಟೋಬರ್ 23ರ ಶುಕ್ರವಾರ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವುದು- ‘ಬೆಂಗಳೂರು ಶಿಕ್ಷಕರ ಕ್ಷೇತ್ರ'. ಇಲ್ಲಿ ಕಾಂಗ್ರೆಸ್‌ನಿಂದ ಸ್ಫರ್ಧಿಸಿರುವ ಪುಟ್ಟಣ್ಣ ಮತ್ತು ಎನ್‌ಡಿಎ ಅಭ್ಯರ್ಥಿಯಾಗಿರುವ...

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ...

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿತದ ವಿರುದ್ಧ ಯೂರೋಪಿನ ಹಲವು ದೇಶಗಳಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಫ್ರಾನ್ಸ್‌ನಿಂದ ಇಟಲಿ, ಬೆಲ್ಜಿಯಂ, ಸ್ಪೇನ್...

ಬೆಳಗಾವಿ | ಅಲೆಮಾರಿಗಳಿಗೆ ಆಧಾರ್ ಕಾರ್ಡ್ ಸಮಸ್ಯೆ; ʼಈದಿನʼದ...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಸುಮಾರು 25ರಿಂದ 30 ವರ್ಷಗಳಿಂದ ವಾಸಿಸುತ್ತಿರುವ ಅಲೆಮಾರಿ ಸಮುದಾಯದವರ ಬದುಕಿನ ಕಥೆ ಕೇಳಿದರೆ ಎಂಥವರಿಗೂ ಕನಿಕರ ಬರುತ್ತದೆ. ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ...

ಸಾಮಾನ್ಯವಾಗಿ, ಕೇಂದ್ರವು ಪ್ರತಿ ಹಣಕಾಸು ವರ್ಷದ ಫೆಬ್ರವರಿ-ಮಾರ್ಚ್‌ನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮನರೇಗಾ)-2005ರ ಸೆಕ್ಷನ್ 6ರ ಉಪವಿಭಾಗ(1)ರ ಅಡಿಯಲ್ಲಿ ಮನರೇಗಾ ವೇತನದ ಪರಿಷ್ಕೃತ ದರಗಳ ಅಧಿಸೂಚನೆಯನ್ನು ಬಿಡುಗಡೆ ಮಾಡುತ್ತಿತ್ತು. ಬಳಿಕ ಹೊಸ ದರಗಳು ಹಣಕಾಸು ವರ್ಷದ ಮೊದಲ ದಿನದಿಂದ(ಏಪ್ರಿಲ್ 1) ಜಾರಿಗೆ ಬರುತ್ತಿದ್ದವು. ಆದರೆ ಈ ಹಣಕಾಸು ವರ್ಷ ಆರಂಭವಾಗಿ ಹದಿನೈದು ದಿನಗಳಾದರೂ ವೇತನದ ಕುರಿತು ಕೇಂದ್ರ ಸರ್ಕಾರ ಚಕಾರವೆತ್ತಿಲ್ಲ.

Advertisements

ಆದರೆ, ಮನರೇಗಾ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುವ ಮತ್ತು ಹೊಸ ವಿಬಿ ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸುವ ನೋಡಲ್ ಸಚಿವಾಲಯವಾದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ(MoRD) ಇತ್ತೀಚೆಗೆ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿ, “2026-27ರ ಆರ್ಥಿಕ ವರ್ಷದ ಮನರೇಗಾ ವೇತನದ ಕುರಿತು ವಿಬಿ ಜಿ ರಾಮ್‌ ಜಿ ಅನುಷ್ಠಾನಗೊಂಡಾಗ ತಿಳಿಸಲಾಗುವುದು. ಅಲ್ಲಿಯವರೆಗೆ 2025-26ರ ಆರ್ಥಿಕ ವರ್ಷಕ್ಕೆ ಸೂಚಿಸಲಾದ ಮನರೇಗಾ ವೇತನಗಳು ಮುಂದುವರಿಯುತ್ತವೆ” ಎಂದು ಸಂಬಂಧಪಟ್ಟ ರಾಜ್ಯ ಸರ್ಕಾರಿ ಅಧಿಕಾರಿಗಳಿಗೆ ತಿಳಿಸಿದೆ.

“ಸಾಮಾನ್ಯವಾಗಿ, ಹೊಸ ಹಣಕಾಸು ವರ್ಷದ ಆರಂಭದ ಮೊದಲು ಪ್ರತಿ ವರ್ಷ ವೇತನ ದರಗಳನ್ನು ಪರಿಷ್ಕರಿಸಲಾಗುತ್ತದೆ. ಪ್ರಸ್ತುತ ಮನರೇಗಾದಿಂದ ವಿಬಿ ಜಿ ರಾಮ್‌ ಜಿಗೆ ಬದಲಾಗಿರುವುದನ್ನು ಪರಿಗಣಿಸಿ, ವಿಬಿ ಜಿ ರಾಮ್‌ ಜಿ ಪ್ರಾರಂಭವಾಗುವವರೆಗೆ ಈಗಿರುವ ವೇತನ ದರಗಳೇ ಅಲ್ಪಾವಧಿಗೆ ಮುಂದುವರಿಯುತ್ತವೆ… ಮನರೇಗಾ ಅಡಿಯಲ್ಲಿ ತೊಡಗಿರುವ ಎಲ್ಲ ಕಾರ್ಮಿಕರಿಗೆ ಪ್ರಸ್ತುತ ಸೂಚಿಸಲಾದ ವೇತನ ದರಗಳಲ್ಲಿಯೇ ಪಾವತಿಸಲಾಗುತ್ತಿದೆ” ಎಂದು ತಿಳಿದುಬಂದಿದೆ.

“ಹೊಸ ಕಾಯ್ದೆ ಬದಲಾವಣೆ ಸಮಯದಲ್ಲಿ ಕಾರ್ಮಿಕರ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ. ಉದ್ಯೋಗವನ್ನು ಒದಗಿಸುವುದನ್ನು ಮುಂದುವರಿಸಲಾಗಿದೆ. ಅಲ್ಲದೆ ಅಸ್ತಿತ್ವದಲ್ಲಿರುವ ಅಧಿಸೂಚನೆಗಳಿಗೆ ಅನುಗುಣವಾಗಿ ವೇತನವನ್ನು ಪಾವತಿಸಲಾಗುತ್ತಿದೆ. ಹೊಸ ಚೌಕಟ್ಟು ಕಾರ್ಯರೂಪಕ್ಕೆ ಬಂದ ನಂತರ, ಪರಿಷ್ಕೃತ ವೇತನ ದರಗಳನ್ನು ಕಾರ್ಯಗತಗೊಳಿಸಲಾಗುತ್ತದೆ. ಈ ಬಗ್ಗೆ ತಿಳಿಸಲಾಗುವುದು” ಎಂದು ಹೇಳಿದೆ.

ಹೊಸಪೇಟೆಯ ಮನರೇಗಾ ಕಾರ್ಮಿಕ ಮಹಿಳೆ ಶಹನಾಜ್‌ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, ಒಟ್ಟರೆಯಾಗಿ ಕೇಂದ್ರ ಸರ್ಕಾರ ಗ್ರಾಮೀಣ ಕೂಲಿಕಾರ್ಮಿಕರ ಬದುಕಿನ ಹಕ್ಕನ್ನು ಕಸಿದುಕೊಂಡಿದೆ. ಮಾರ್ಚ್‌, ಏಪ್ರಿಲ್‌, ಮೇ ತಿಂಗಳುಗಳಲ್ಲಿ ಉದ್ಯೋಗ ಖಾತ್ರಿಯಡಿ ಕೆಲಸಕ್ಕೆ ತುಂಬಾ ಬೇಡಿಕೆ ಇರುತ್ತದೆ. ಬೇಸಿಗೆಯಲ್ಲಿ ಚನ್ನಾಗಿ ದುಡಿದು ಅದರಿಂದ ಬರುವ ಹಣದಿಂದ ಮಕ್ಕಳನ್ನು ಶಾಲೆಗೆ ಸೇರಿಸುವುದು, ಬೇಸಾಯಕ್ಕೆ ಬಿತ್ತನೆಬೀಜ, ಗೊಬ್ಬರ ಸೇರಿದಂತೆ ಹಲವಾರು ಮುಖ್ಯ ಅಗತ್ಯತೆಗಳಿಗೆ ಬಳಸಿಕೊಳ್ಳುತ್ತಿದ್ದೆವು. ಈಗ ಸರಿಯಾಗಿ ಕೆಲಸವೂ ಸಿಗುತ್ತಿಲ್ಲ, ವೇತನವೂ ಸಿಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ಫೋಟೋ ಗುರುತು ಸರಿಯಾಗಿ ಬರುತ್ತಿಲ್ಲ, ಬಯೋಮೆಟ್ರಿಕ್‌ ತೆಗೆದುಕೊಳ್ಳುತ್ತಿಲ್ಲ ಎನ್ನುತ್ತಾರೆ. ಮೊದಲೆಲ್ಲ ಹತ್ತು ಜನರ ಗುಂಪು ಇರುವ ಫೋಟೋ ತೆಗೆಯುತ್ತಿದ್ದರು. ಈ ಒಬ್ಬೊಬ್ಬರನ್ನೇ ಫೋಟೊ ತೆಗೆದು ಬಯೋಮೆಟ್ರಿಕ್‌ ಮಾಡಿಸಿ ಕೆಲಸಕ್ಕೆ ಕಳುಹಿಸುತ್ತಾರೆ. ಎಲ್ಲರಿಗೂ ಸರಿಯಾಗಿ ಕೆಲಸ ಸಿಗುತ್ತಿಲ್ಲ. 100 ಮಂದಿ ಕೆಲಸಕ್ಕಾಗಿ ಬಂದರೆ, ತಾಂತ್ರಿಕ ದೋಷಗಳಿಂದಾಗಿ 60-70 ಮಂದಿ ಮನೆಗೆ ವಾಪಸ್‌ ಹೋಗುತ್ತಿದ್ದಾರೆ. ಅದರಲ್ಲೂ ಬಯೋಮೆಟ್ರಿಕ್‌ ಆಗುವವರೆಗೆ ಅಂದರೆ ಮಧ್ಯಾಹ್ನ 1ರ ವರೆಗೆ ಕಾದು ಕುಳಿತರೂ ಕೆಲಸವಿಲ್ಲದೆ ಬರಿಗೈಯಲ್ಲಿ ಹಿಂದಿರುಗುವಂತಾಗಿದೆ. ಇತ್ತ ಈ ಕೆಲಸವೂ ಇಲ್ಲ, ಬೇರೆ ಕೆಲಸ ಹುಡುಕಿಕೊಂಡು ಹೋಗುವಂತೆಯೂ ಇಲ್ಲ ಎನ್ನುವಂತಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.

ಅದರಲ್ಲಿಯೂ ಮೇಸ್ತ್ರಿ ಫೋಟೊ ತೆಗೆಯುವಂತಿಲ್ಲ, ಪಂಚಾಯಿತಿಯವರೇ ಬಂದು ಫೋಟೊ ತೆಗೆಯುತ್ತೇವೆ ಎನ್ನುತ್ತಾರೆ. ಹೊಸದಾಗಿ ಫಾರಂಗಳನ್ನು ತೆಗೆದುಕೊಳ್ಳುತ್ತಿಲ್ಲ. ಪ್ರತಿ ವರ್ಷ ಈ ಸಮಯದಲ್ಲಿ ಎಲ್ಲ ಪಂಚಾಯಿತಿ ವ್ಯಾಪ್ತಿಗಳಲ್ಲೂ ಕೆಲಸಗಾರರು ಎಂಗೇಜ್‌ ಆಗಿರುತ್ತಿದ್ದರು. ಈಗ ಕೆಲಸವೇ ಇಲ್ಲದಂತಾಗಿದೆ. ಬಹುತೇಕ ಕಾರ್ಮಿಕರಿಗೆ ಬೇಸರ ಉಂಟಾಗಿ ಇದನ್ನು ನಂಬಿ ಕೂತರೆ ಆಗುವುದಿಲ್ಲವೆಂದು ಗುಳೆ ಹೋಗುತ್ತಿದ್ದಾರೆ. ಕೇಂದ್ರ ಸರ್ಕಾರ ಮನರೇಗಾ ಅಂದರೆ ಅಷ್ಟರಮಟ್ಟಿಗೆ ಜಿಗುಪ್ಸೆ ತರಿಸಿದೆ. ಒಟ್ಟಾರೆಯಾಗಿ ಜನರು ಬದುಕುವ ಹಕ್ಕನ್ನೇ ಕಸಿಯುತ್ತಿದೆ” ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ಈ ನಡೆ ಮನರೇಗಾ ಅಡಿಯ ಬಡ ಕಾರ್ಮಿಕರ ಮೇಲಿನ ದಾಳಿಯಾಗಿದೆ. ಪ್ರತಿ ವರ್ಷ ವೇತನ ದರಗಳನ್ನು ಪರಿಷ್ಕರಿಸಬೇಕೆಂದು ಸರ್ಕಾರ ಹೇಳಿದೆ. ಈ ವರ್ಷ ಅದು ತನ್ನದೇ ಆದ ನಿಯಮಗಳನ್ನು ಉಲ್ಲಂಘಿಸಿದೆ. ಮನರೇಗಾ ವೇತನ ದರಗಳನ್ನು CPI-AL(ಗ್ರಾಹಕ ಬೆಲೆ ಸೂಚ್ಯಂಕ-ಕೃಷಿ ಕಾರ್ಮಿಕ)ನಲ್ಲಿನ ಬದಲಾವಣೆಗಳ ಪ್ರಕಾರ ನಿಗದಿಪಡಿಸಲಾಗುತ್ತದೆ. ಇದು ಗ್ರಾಮೀಣ ಪ್ರದೇಶಗಳಲ್ಲಿನ ಹಣದುಬ್ಬರದ ಹೆಚ್ಚಳವನ್ನು ತೋರಿಸುತ್ತದೆ.

ಯಾವುದೇ ಸಮಯದಲ್ಲಿ ಗ್ರಾಮ ಪಂಚಾಯಿತಿ 20 ಯೋಜನೆಗಳ ಮಿತಿಯೊಳಗೇ ಕಾರ್ಯ ನಿರ್ವಹಿಸಬೇಕೆಂದು MORD ನಿರ್ಬಂಧಗಳನ್ನು ವಿಧಿಸಿದೆ. ಅಲ್ಲದೆ ಈ ಬಾರಿ ಮನರೇಗಾಕ್ಕೆ ಹಂಚಿಕೆಯಾಗಿರುವ ಸುಮಾರು ₹30,000 ಕೋಟಿ ಬಜೆಟ್‌ ಅಸಮರ್ಪಕವಾಗಿದ್ದು, ಕೆಲಸದ ಲಭ್ಯತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. 2025-26ನೇ ಸಾಲಿನ ಮನರೇಗಾ ಅಡಿಯಲ್ಲಿ ಸುಮಾರು ₹10,000 ಕೋಟಿಗಳಷ್ಟು ಬಾಕಿ ಮೊತ್ತವಿದೆ. ಬಾಕಿ ಮೊತ್ತ ಪಾವತಿಯ ನಂತರ ಉಳಿದ ಮೊತ್ತವು ಬೇಸಿಗೆಯ ತಿಂಗಳುಗಳಿಗೆ ಕೆಲಸ ಒದಗಿಸಲು ಸಾಕಾಗುವುದೇ? ಸಾಮಾನ್ಯವಾಗಿ ಪ್ರತಿ ವರ್ಷ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಕೆಲಸಕ್ಕೆ ಭಾರೀ ಬೇಡಿಕೆ ಇರುತ್ತದೆ. ಆದರೆ ಹೊಸ ಕಾಯ್ದೆ ಅನುಷ್ಠಾನಗೊಳ್ಳದೆ ಮನರೇಗಾ ಅಡಿಯಲ್ಲೂ ಕೆಲಸ ದೊರೆಯದೆ ಕಾರ್ಮಿಕರು ಪರದಾಡುವಂತಾಗಿದೆ. ಇದರಿಂದ ಬೇಸತ್ತ ಕಾರ್ಮಿಕರು ಗುಳೆ ಹೋಗುತ್ತಿರುವುದೂ ಗಮನಾರ್ಹವಾಗಿದ. ಮನರೇಗಾ ಕಾಯ್ದೆ ಜಾರಿಯಲ್ಲಿರುವವರೆಗೆ ಇದರ ಅಡಿಯಲ್ಲಿರುವ ಶಾಸನಬದ್ಧ ನಿಬಂಧನೆಗಳನ್ನು ಎತ್ತಿಹಿಡಿಯಬೇಕಾಗಿರುವುದು ಅನಿವಾರ್ಯವಾಗಿದೆ.

ಕೇಂದ್ರ ಸರ್ಕಾರದ ಈ ನಿರಂತರ ನಿರ್ಲಕ್ಷ್ಯವು ಯುಪಿಎ ಕಾಲದ ಮನರೇಗಾ ಕಾಯ್ದೆಯನ್ನು ಅವಲಂಬಿಸಿರುವ ಲಕ್ಷಾಂತರ ಗ್ರಾಮೀಣ ಕಾರ್ಮಿಕರ ಭವಿಷ್ಯವನ್ನು ಮಾತ್ರವಲ್ಲ, ಸಮಗ್ರ ಗ್ರಾಮೀಣ ಭಾರತದ ಆರ್ಥಿಕ ಸ್ಥಿರತೆಯನ್ನೇ ಅಪಾಯಕ್ಕೆ ತಳ್ಳುತ್ತಿದೆ. ವೇತನ ದರ ಪರಿಷ್ಕರಣೆಯಾಗದಿರುವುದು, ಬದಲಿ ವಿಬಿ ಜಿ ರಾಮ್‌ ಜಿ ಕಾನೂನಿನ ಜಾರಿ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಹಾಗೂ ಹೊಸ ಕಾಯ್ದೆಯ ಸಂಪೂರ್ಣ ಅನುಷ್ಠಾನದಲ್ಲಿ ವಿಫಲವಾಗಿರುವುದು ಗ್ರಾಮೀಣ ಅಭಿವೃದ್ಧಿ ನೀತಿ ನಿರ್ಮಾಣದಲ್ಲಿ ಸರ್ಕಾರಕ್ಕೆ ಯಾವುದೇ ಬದ್ಧತೆ ಇಲ್ಲವೆಂಬುದನ್ನು ಬಯಲು ಮಾಡುತ್ತಿದೆ.

ಇದನ್ನೂ ಓದಿದ್ದೀರಾ? ಬೀದರ್‌ | ʼಮನರೇಗಾʼ ಬಲ : ವಿಧಾನಸೌಧದಂತೆ ಕಂಗೊಳಿಸುತ್ತಿರುವ ʼಗ್ರಾಮ ಸೌಧʼ!

ತ್ವರಿತವಾಗಿ ವೇತನ ಪರಿಷ್ಕರಣೆ ಮಾಡಿ, ಹೊಸ ಕಾನೂನಿನ ಜಾರಿ ದಿನಾಂಕವನ್ನು ಘೋಷಿಸಿ, ಕಾರ್ಮಿಕರ ಹಕ್ಕುಗಳನ್ನು ಭದ್ರಪಡಿಸುವ ಮೂಲಕ ಮೋದಿ ಸರ್ಕಾರವು ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು. ಕಾರ್ಮಿಕರ ಭವಿಷ್ಯವನ್ನು ರಕ್ಷಿಸುವುದು ರಾಷ್ಟ್ರೀಯ ಆದ್ಯತೆಯಾಗಬೇಕು. ಇಲ್ಲದಿದ್ದರೆ ಗ್ರಾಮೀಣ ಭಾರತದಲ್ಲಿ ಉಂಟಾಗುವ ಅಸಮಾಧಾನ ಮತ್ತು ಅಸ್ಥಿರತೆಯು ದೇಶದ ಒಟ್ಟಾರೆ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ಮೇಲೆ ದೀರ್ಘಕಾಲಿಕ ಪರಿಣಾಮ ಬೀರುವ ಸಾಧ್ಯತೆಯಿದೆ.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR ವಿರುದ್ಧ ಜನತೆ| ಅ.23ರಂದು ಬೀದರ್‌ನಲ್ಲಿ ಪ್ರತಿಭಟನೆ, ತಿರಂಗಾ ಮೆರವಣಿಗೆ

ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (SIR) ವಿರೋಧಿಸಿ, ಪ್ರಜಾಪ್ರಭುತ್ವದ ಮರುಸ್ಥಾಪನೆ...

ಏಷ್ಯನ್ ಪ್ಯಾರಾ ಗೇಮ್ಸ್: 5ನೇ ಸ್ಥಾನಕ್ಕೇರಿದ ಭಾರತ, 62 ಪದಕಗಳ ಸಾಧನೆಯೊಂದಿಗೆ ಅಥ್ಲೆಟಿಕ್ಸ್ ಕ್ರೀಡಾಪಟುಗಳ ಪರಾಕ್ರಮ

ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ 2026 ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು...

​ಜೆಫ್ರಿ ಎಪ್‌ಸ್ಟೀನ್-ಹರ್ದೀಪ್ ಪುರಿ ಭೇಟಿ: ಸಚಿವರ ಮೇಲಿನ ಆರೋಪಕ್ಕೆ ಪ್ರಧಾನಿ ಮೌನವೇಕೆ ಎಂದು ಪ್ರಶ್ನಿಸಿದ ಕಾಂಗ್ರೆಸ್

ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿದ್ದ ಅಮೆರಿಕದ ಕುಖ್ಯಾತ ಅಪರಾಧಿ ಜೆಫ್ರಿ ಎಪ್‌ಸ್ಟೀನ್...

ಕಲಬುರಗಿ | ಕ್ಷೇತ್ರಗಳ ಮರುವಿಂಗಡಣೆ ಇಲ್ಲದೆ ಮಹಿಳಾ ಮೀಸಲಾತಿ ಜಾರಿಗೊಳಿಸಿ: ಮಲ್ಲಿಕಾರ್ಜುನ ಖರ್ಗೆ

ಕ್ಷೇತ್ರಗಳ ಮರುವಿಂಗಡಣೆ ಮಾಡದೆಯೇ ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಬೇಕು. ಈ ವಿಚಾರದಲ್ಲಿ...