ಮುಂಗಾರು ಬಿತ್ತನೆ ಅವಧಿ ಅಂತ್ಯ: ರಾಜ್ಯದಲ್ಲಿ ಶೇ.80ರಷ್ಟು ಬಿತ್ತನೆ, ಇಳುವರಿ ಕುಂಠಿತವಾಗುವ ಸಾಧ್ಯತೆ

Date:

ದೇಶಾದ್ಯಂತ ಆಗಸ್ಟ್‌ನಲ್ಲಿ ಸಾಮಾನ್ಯಕ್ಕಿಂತ 16 ಪ್ರತಿಶತ ಮಳೆ ಕಡಿಮೆಯಾಗಿದ್ದು, ಜೂನ್-ಆಗಸ್ಟ್‌ನಲ್ಲಿ 14 ಪ್ರತಿಶತ ಸಾಮಾನ್ಯಕ್ಕಿಂತ ಕಡಿಮೆ ಮುಂಗಾರು ಮಳೆಯಾಗಿದೆ. 741 ಜಿಲ್ಲೆಗಳ ಪೈಕಿ 357 ಜಿಲ್ಲೆಗಳಲ್ಲಿ 20 ಪ್ರತಿಶತಕ್ಕಿಂತಲೂ ಅಧಿಕ ಮಳೆ ಕೊರತೆಯಾಗಿರುವುದಾಗಿ ಭಾರತೀಯ ಹವಾಮಾನ ಇಲಾಖೆ(IMD) ಡೇಟಾದಿಂದ ತಿಳಿದುಬಂದಿದೆ. 

ಪ್ರಸ್ತುತ ಮುಂಗಾರಿನಲ್ಲಿ ಆಗಸ್ಟ್ ಅಂತ್ಯದವರೆಗೆ 1,071.10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ 1,090.01 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಮುಂಗಾರು ಬೆಳೆಗಳ ಬಿತ್ತನೆಯಲ್ಲಿ ಹಿಂದಿನ ವರ್ಷಕ್ಕಿಂತ 0.4 ಪ್ರತಿಶತ ಹಿಂದುಳಿದಿದ್ದು, ಇದೀಗ ಮುಖ್ಯ ಬಿತ್ತನೆ ಕಾಲಾವಧಿ ಮುಗಿದಿದೆ.

- Advertisement -

ಹೆಚ್ಚಿನ ಮುಂಗಾರು ಬೆಳೆಗಳ ಬಿತ್ತನೆ ಅವಧಿ ಮುಗಿಯುತ್ತಿದ್ದಂತೆ, ರಾಜ್ಯದಲ್ಲಿ ಆಗಸ್ಟ್ ಅಂತ್ಯಕ್ಕೆ 84 ಲಕ್ಷ ಹೆಕ್ಟೇರ್ ಮುಂಗಾರು ಗುರಿಯಲ್ಲಿ 20 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆಯಾಗದೆ ಉಳಿದಿದೆ ಎಂಬುದು ಕೃಷಿ ಇಲಾಖೆಯ ದತ್ತಾಂಶದಿಂದ ಸ್ಪಷ್ಟವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಈ ಕೃಷಿ ಮಾಡದ ಪ್ರದೇಶದಲ್ಲಿ ಧಾನ್ಯಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, 15 ಲಕ್ಷ ಹೆಕ್ಟೇರ್‌ಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಮಳೆಯ ಕೊರತೆ, ಅಂತರ್ಜಲ ಮಟ್ಟದಲ್ಲಿನ ಕುಸಿತ ಹಾಗೂ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಈ ಕುಸಿತಕ್ಕೆ ಕಾರಣವಾಗಿದ್ದು, ಇದು ಮುಖ್ಯವಾಗಿ ಭತ್ತ, ರಾಗಿ, ಜೋಳದ ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು.

ಸೋಯಾಬೀನ್, ಸೂರ್ಯಕಾಂತಿ ಮತ್ತು ಕಬ್ಬು ಮಾತ್ರ ನಿರೀಕ್ಷಿತ ಬಿತ್ತನೆ ಗುರಿಯನ್ನು ದಾಟಿದ ಏಕೈಕ ಬೆಳೆಗಳಾಗಿದ್ದು, ಬಾಗಲಕೋಟೆ ಶೇ.100ರಷ್ಟು ಬಿತ್ತನೆ ಗುರಿ ಸಾಧಿಸಿರುವ ರಾಜ್ಯದ ಏಕೈಕ ಜಿಲ್ಲೆಯಾಗಿದೆ. ಉತ್ತರ ಕರ್ನಾಟಕದ ಐದು ಜಿಲ್ಲೆಗಳು ಶೇ.90ರಷ್ಟು ಬಿತ್ತನೆಯನ್ನು ದಾಖಲಿಸಿವೆ.

“ಉತ್ತಮ ಬಿತ್ತನೆ ಎಂದರೆ ರೈತರು ಉತ್ತಮ ಬೆಳೆ ಪಡೆಯುತ್ತಾರೆ ಎಂದರ್ಥವಲ್ಲ. ಬರ ಪರಿಸ್ಥಿತಿ ಮುಂದುವರಿದಿರುವುದರಿಂದ, ಬಿತ್ತನೆ ಪೂರ್ಣಗೊಂಡ ಪ್ರದೇಶಗಳಲ್ಲಿಯೂ ರೈತರು ಸಮಂಜಸವಾದ ಇಳುವರಿಯನ್ನು ಪಡೆಯುತ್ತಾರೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಬೆಳೆ ಬೆಳವಣಿಗೆಯನ್ನು ನಿರ್ಣಯಿಸಲು ಎಲ್ಲಾ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದು, ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತೇನೆ” ಎಂದು ನೂತನ ಕೃಷಿ ಸಚಿವ ಪಿ ಎಂ ನರೇಂದ್ರಸ್ವಾಮಿ ಹೇಳಿದ್ದಾರೆ.

ಕಲಬುರಗಿ ಜಿಲ್ಲೆಯ ರೈತ ಮುಖಂಡ ಶರಣಬಸಪ್ಪ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾನು 9 ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದೇನೆ. ಬೋರ್‌ವೆಲ್‌ ನೀರು ಹಾಯಿಸಿಕೊಂಡು ಬಿತ್ತನೆ ಮಾಡಲಾಗಿತ್ತು. ಇದೀಗ ಮಳೆ ಕೈಕೊಟ್ಟ ಬೆಳೆ ಪರಿಣಾಮ ಸಂಪೂರ್ಣವಾಗಿ ನಾಶವಾಗಿದೆ. ಒಟ್ಟಾರೆ 35-40 ಸಾವಿರ ರೂಪಾಯಿ ವೆಚ್ಚವಾಗಿತ್ತು. ಆದ್ರೆ ಈಗ ಸಂಪೂರ್ಣ ಬೆಳೆಹಾನಿಯಿಂದ ಮುಂದಿನ ಬೆಳೆ ಬಿತ್ತನೆಗೂ ಬಂಡವಾಳ ಇಲ್ಲದಂತಾಗಿದೆ” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಬಿತ್ತನೆ ಕಲಬುರಗಿ

ಜೋಗೂರು ಗ್ರಾಮದ ಹನುಮಂತಪ್ಪ ಬೆಳಗುಂಪಿ “ಮಳೆಯಾಶ್ರಿತ ಕೃಷಿ ಭೂಮಿಯಲ್ಲಿ ಏಳು ಎಕರೆಯಲ್ಲಿ ತೊಗರಿ ಮತ್ತು ಎಂಟು ಎಕರೆಯಲ್ಲಿ ಹತ್ತಿಯನ್ನು ಬಿತ್ತನೆ ಮಾಡಿದ್ದು, ಈ ಬೆಳೆ ಈಗ ಚೆನ್ನಾಗಿದೆ. ಮುಂದಿನ ಎರಡು ವಾರಗಳಲ್ಲಿ ಮಳೆಯಾಗದಿದ್ದರೆ ಇಳುವರಿ ಬರುವುದಿಲ್ಲ” ಎಂದು ಕಲಬುರಗಿ ಜಿಲ್ಲೆಯ ರೈತ ಹನುಮಂತಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಕಲಬುರಗಿಯಲ್ಲಿ ಬಿತ್ತನೆ

“ಕೆಲವು ವಾರಗಳ ಹಿಂದೆ ಸುರಿದ ಮಳೆಯ ನಂತರ ಶೇ.80ಕ್ಕೂ ಅಧಿಕ ತೊಗರಿ ಬೆಳೆ ಬಿತ್ತನೆಯಾಗಿದೆ. ಆದರೆ ಪ್ರಸ್ತುತ ಪರಿಸ್ಥಿತಿ ಮುಂದುವರೆದರೆ ಇಳುವರಿ ಕುಂಠಿತವಾಗಿವ ಸಾಧ್ಯತೆ ಇದೆ” ಎಂದು ಕಲಬುರಗಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ರಾಜು ತೆಗ್ಗೆಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

“ಎಲ್ಲ ಮಳೆಯಾಶ್ರಿತ ಬೆಳೆಗಳಿಗೆ ಕೀಟಗಳು ಮತ್ತು ರೋಗಗಳ ಹೊರತಾಗಿ ಒಣಗುವುದು, ಬೆಳೆ ಉತ್ಪಾದನೆ ಕುಂಠಿತಗೊಳ್ಳುವುದರಿಂದ ಪರಿಸ್ಥಿತಿ ತುಂಬಾ ಅನಿಶ್ಚಿತವಾಗಿದೆ. ಬೆಳೆಗಳು ಉತ್ತಮ ಸಸ್ಯಕ ಬೆಳವಣಿಗೆಯನ್ನು ಹೊಂದಿರುವ ಪ್ರದೇಶಗಳಲ್ಲಿಯೂ ಸಹ, ಅನಿಯಮಿತ ಹವಾಮಾನದಿಂದಾಗಿ ಹೂಬಿಡುವಿಕೆ, ಕಾಯಿ ರಚನೆ ಕಳಪೆಯಾಗಬಹುದು. ಇದನ್ನು ಹಸಿರು ಬರ ಎಂದು ಕರೆಯಲಾಗುತ್ತದೆ” ಎಂದು ಕೃಷಿ ಇಲಾಖೆಯ ಅಧಿಕಾರಿ ಹೇಳುತ್ತಾರೆ.

ಕರ್ನಾಟಕದಲ್ಲಿ ಬಿತ್ತನೆ

“ವಿಜಯನಗರ ಜಿಲ್ಲೆಯಲ್ಲಿ 1.61 ಲಕ್ಷ ಹೆಕ್ಟೇರ್‌ಗಳಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಆದಾಗ್ಯೂ, ನೀರಾವರಿ ಅಡಿಯಲ್ಲಿ 10,000 ಹೆಕ್ಟೇರ್‌ಗಳನ್ನು ಹೊರತುಪಡಿಸಿ, ಇಡೀ ಬೆಳೆಯ ಬೆಳವಣಿಗೆ ಕುಂಠಿತವಾಗಿದೆ. ನಿರೀಕ್ಷಿತ ಉತ್ಪಾದನೆಯ ಶೇ.10ರಷ್ಟು ಇಳುವರಿಯನ್ನು ನೀಡದಿರಬಹುದು” ಎಂದು ವಿಜಯನಗರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಡಿ. ಮಂಜುನಾಥ್ ಹೇಳುತ್ತಾರೆ.

“ಮುಂಗಾರಿನಲ್ಲಿ ಮಾತ್ರ ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುವ ದಕ್ಷಿಣ ಕರ್ನಾಟಕದಾದ್ಯಂತ, ರೈತರು ಬಿತ್ತನೆ ವಿಳಂಬವಾದರೂ ರಾಗಿ ಬಿತ್ತನೆ ಮಾಡಲು ಮಳೆಗಾಗಿ ಕಾಯುತ್ತಿದ್ದಾರೆ. ಮುಂದಿನ ಎರಡು ವಾರಗಳಲ್ಲಿ ಮಳೆಯಾಗದಿದ್ದರೆ, ಮುಂದಿನ ಮುಂಗಾರಿನವರೆಗೂ ಅವರು ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ” ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

“ಉತ್ತರ ಕರ್ನಾಟಕದಲ್ಲಿ, ಎರಡು ತಿಂಗಳೊಳಗೆ ಹಿಂಗಾರು ಪ್ರಾರಂಭವಾಗುವುದರಿಂದ ತಡವಾಗಿ ಬಿತ್ತನೆ ಮಾಡಲು ಸಾಧ್ಯವಿಲ್ಲ. ಕೃಷಿ ಇಲಾಖೆಗೆ 37 ಲಕ್ಷಕ್ಕೂ ಹೆಚ್ಚು ಬೆಳೆ ವಿಮಾ ಅರ್ಜಿಗಳು ಬಂದಿವೆ. ಇದು ಸಾರ್ವಕಾಲಿಕ ಅಧಿಕ ಅರ್ಜಿಗಳು ಬಂದಿರುವುದಾಗಿದೆ. ಇದು ನೆಲದ ಮೇಲಿನ ಹತಾಶೆಯನ್ನು ಸೂಚಿಸುತ್ತದೆ. ʼಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆʼಯು ರೈತರಿಗೆ ಸುರಕ್ಷತಾ ಜಾಲವನ್ನು ಒದಗಿಸುವುದರಿಂದ ಇಲಾಖೆಯು ರೈತರಲ್ಲಿ ಹುರುಪಿನಿಂದ ಜಾಗೃತಿ ಮೂಡಿಸುತ್ತಿದೆ” ಎಂದು ಅಧಿಕಾರಿ ಹೇಳುತ್ತಾರೆ.

ದೇಶಾದ್ಯಂತ ಮುಂಗಾರಿನ ಒಟ್ಟು ವಿಸ್ತೀರ್ಣದ ಪೈಕಿ ಸಾಮಾನ್ಯ ವಿಸ್ತೀರ್ಣವಾದ 1,104.46 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದರೂ ಇಳುವರಿ ಕುಂಠಿತವಾಗಬಹುದು.

ದೇಶಕ್ಕೆ ಜೂನ್-ಆಗಸ್ಟ್‌ನಲ್ಲಿ 86 ಪ್ರತಿಶತ ಮಳೆ ಬಂದಿದ್ದು, ಸೆಪ್ಟೆಂಬರ್‌ನಲ್ಲಿ 91 ಪ್ರತಿಶತಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ಮುಂಗಾರು 2026ಕ್ಕೆ 176.16 ಮಿಲಿಯನ್ ಟನ್ ಆಹಾರಧಾನ್ಯಗಳ ಗುರಿ ನಿಗದಿಯಾಗಿತ್ತು. ಸರ್ಕಾರವು ಈ ಮುಂಗಾರಿನಲ್ಲಿ ಅಕ್ಕಿ 123.15 ಮಿಲಿಯನ್‌ ಟನ್‌, ದ್ವಿದಳ ಧಾನ್ಯಗಳು 8.41 ಮಿಲಿಯನ್‌ ಟನ್‌, ಮೆಕ್ಕೆಜೋಳ 31.04 ಮಿಲಿಯನ್‌ ಟನ್‌, ಪೌಷ್ಠಿಕ ಧಾನ್ಯಗಳು 13.56 ಮಿಲಿಯನ್‌ ಟನ್‌, ಎಣ್ಣೆಕಾಳುಗಳು 28.93 ಮಿಲಿಯನ್‌ ಟನ್‌, ಕಬ್ಬು 500 ಮಿಲಿಯನ್‌ ಟನ್‌ ಹಾಗೂ 33.6 ಮಿಲಿಯನ್ ಬೇಲ್‌ ಹತ್ತಿ(ಪ್ರತಿ ಬೇಲ್ 170 ಕೆಜಿ) ಬೆಳೆಯ ಉತ್ಪಾದನಾ ಗುರಿ ನಿಗದಿಪಡಿಸಿದೆ.

ದಕ್ಷಿಣದಲ್ಲಿ ಭತ್ತದ ನಾಟಿಯೂ ಕುಂಠಿತ

ಕೃಷಿ ಸಚಿವಾಲಯದ ಸೋಮವಾರದ ವಾರದ ಮಾಹಿತಿ ಪ್ರಕಾರ, “ನಡೆಯುತ್ತಿರುವ ಮುಂಗಾರಿನಲ್ಲಿ ಆಗಸ್ಟ್‌ ಅಂತ್ಯದವರೆಗೆ 1,071.10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 1,090.01 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಹಲವು ರಾಜ್ಯಗಳಲ್ಲಿ ಕಳೆದ ವಾರ ಮಳೆ ಕೊರತೆ ಹೆಚ್ಚಾದ ಕಾರಣ ಬಿತ್ತನೆ ಚಟುವಟಿಕೆ ನಿಧಾನವಾಗಿದೆ. ಆಗಸ್ಟ್ 22-28ರ ನಡುವೆ ರೈತರು 14.4 ಲಕ್ಷ ಕೆಕ್ಟೇರ್‌ಗಿಂತ ಅಧಿಕ ಬಿತ್ತನೆ ಮಾಡಿದ್ದಾರೆ. ಆದರೆ ಹಿಂದಿನ ವರ್ಷ ಇದೇ ವೇಳೆಗೆ ಸುಮಾರು 17.24 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು.

ಭತ್ತದ ಬಿತ್ತನೆ

ಮುಂಗಾರಿನ ಮುಖ್ಯ ಧಾನ್ಯವಾದ ಭತ್ತದ ವಿಸ್ತೀರ್ಣ 3.4 ಪ್ರತಿಶತ ಕಡಿಮೆಯಾಗಿದ್ದು, 414.10 ಲಕ್ಷ ಹೆಕ್ಟೇರ್‌ ತಲುಪಿದೆ(ಹಿಂದಿನ ವರ್ಷ 428.46 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ಭತ್ತದ ವಿಸ್ತೀರ್ಣ ಕುಸಿತ ಹೀಗಿದೆ.

ರಾಜ್ಯಕುಸಿತ (lh)
ಕರ್ನಾಟಕ3.61
ತೆಲಂಗಾಣ3.29
ಝಾರ್ಖಂಡ್1.82
ಮಧ್ಯಪ್ರದೇಶ1.75
ಮಹಾರಾಷ್ಟ್ರ1.02
ತಮಿಳುನಾಡು1.22
ಉತ್ತರ ಪ್ರದೇಶ0.70

ಒಟ್ಟು ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳು

ಬೆಳೆಪ್ರಸ್ತುತ (lh)ಹಿಂದಿನ ವರ್ಷ (lh)
ಎಲ್ಲಾ ದ್ವಿದಳ ಧಾನ್ಯಗಳು115.05113.66
ಎಣ್ಣೆಕಾಳುಗಳು190.45191.45

ಸೋಯಾಬೀನ್ ಮತ್ತು ಇತರೆ ಎಣ್ಣೆಕಾಳು / ದ್ವಿದಳ ಧಾನ್ಯಗಳು

ಬೆಳೆಪ್ರಸ್ತುತ (lh)ಹಿಂದಿನ ವರ್ಷ (lh)
ಸೋಯಾಬೀನ್121.72122.95
ಕಡಲೆಕಾಯಿ49.0949.71
ತೊಗರಿ44.5944.31
ಉದ್ದು24.6922.11
ಹೆಸರುಕಾಳು32.9634.01

ಪೌಷ್ಟಿಕ / ಮಿಶ್ರ ಧಾನ್ಯಗಳು

ಬೆಳೆಪ್ರಸ್ತುತ (ಲಕ್ಷ ಹೆಕ್ಟೇರ್-lh)ಹಿಂದಿನ ವರ್ಷ (lh)
ಒಟ್ಟು177.90182.11
ಜೋಳ13.4712.61
ಬಜ್ರ64.7963.62
ರಾಗಿ5.487.86
ಮೆಕ್ಕೆಜೋಳ89.9993.87

ಹತ್ತಿ, ಸೆಣಬು ಮತ್ತು ಕಬ್ಬು

ಬೆಳೆಪ್ರಸ್ತುತ (lh)ಹಿಂದಿನ ವರ್ಷ (lh)
ಹತ್ತಿ108.80109.23
ಸೆಣಬು + ಮೆಸ್ತಾ6.346.23
ಕಬ್ಬು58.4658.87

ಕಬ್ಬಿನ ವಿಸ್ತೀರ್ಣ – ರಾಜ್ಯವಾರು ಬದಲಾವಣೆ

ರಾಜ್ಯಬದಲಾವಣೆ (lh)ಸ್ಥಿತಿ
ಬಿಹಾರ–0.30ಕುಸಿತ
ಉತ್ತರಾಖಂಡ್–0.20ಕುಸಿತ
ಮಹಾರಾಷ್ಟ್ರ–0.14ಕುಸಿತ
ಪಂಜಾಬ್ಕಡಿಮೆಕುಸಿತ
ಮಧ್ಯಪ್ರದೇಶಕಡಿಮೆಕುಸಿತ
ಉತ್ತರ ಪ್ರದೇಶ+0.36ಹೆಚ್ಚಳ
ಹರಿಯಾಣ+0.21ಹೆಚ್ಚಳ

ದ್ವಿದಳ ಧಾನ್ಯಗಳ ವಿಸ್ತೀರ್ಣ 115.05 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ತಲುಪಿದೆ, ಹಿಂದಿನ ವರ್ಷ ಸೋಯಾಬೀನ್, ಕಡಲೆಕಾಯಿ ಮತ್ತು ಎಳ್ಳು ಹಿಂದಿನ ವರ್ಷಕ್ಕಿಂತ ಹೆಚ್ಚಿತ್ತು. ಆದರೆ ಸೋಯಾಬೀನ್ ವಿಸ್ತೀರ್ಣ ಕುಸಿತದಿಂದ ಆಗಸ್ಟ್ 14ರ ನಂತರ ಕಡಿಮೆಯಾಗಿದೆ.

ಇದನ್ನೂ ಓದಿದ್ದೀರಾ? ವಿಜಯಪುರ | ಬೆಲೆ ಏರಿಕೆ: ಲಾಭದ ನಿರೀಕ್ಷೆಯಲ್ಲಿ ರೈತ, ನೀರಾವರಿ ಪ್ರದೇಶದಲ್ಲಿ ಈರುಳ್ಳಿ ನಾಟಿ

ದೇಶಾದ್ಯಂತ ಆಗಸ್ಟ್‌ನಲ್ಲಿ ಸಾಮಾನ್ಯಕ್ಕಿಂತ 16 ಪ್ರತಿಶತ ಮಳೆ ಕಡಿಮೆಯಾಗಿದ್ದು, ಜೂನ್-ಆಗಸ್ಟ್‌ನಲ್ಲಿ 14 ಪ್ರತಿಶತ ಸಾಮಾನ್ಯಕ್ಕಿಂತ ಕಡಿಮೆ ಮುಂಗಾರು ಮಳೆಯಾಗಿದೆ. 741 ಜಿಲ್ಲೆಗಳ ಪೈಕಿ 357 ಜಿಲ್ಲೆಗಳಲ್ಲಿ 20 ಪ್ರತಿಶತಕ್ಕಿಂತಲೂ ಅಧಿಕ ಮಳೆ ಕೊರತೆಯಾಗಿರುವುದಾಗಿ ಭಾರತೀಯ ಹವಾಮಾನ ಇಲಾಖೆ(IMD) ಡೇಟಾದಿಂದ ತಿಳಿದುಬಂದಿದೆ.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ಮನವಿ ಸಲ್ಲಿಸುವ ಮುನ್ನವೇ ಕಬ್ಬು ಬೆಳೆಗಾರರು ಪೋಲಿಸರ ವಶ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆ ಕುರಿತಂತೆ ಕೇಂದ್ರ ಸಚಿವ ಪ್ರಹ್ಲಾದ...

ಬೀದರ್ ದಕ್ಷಿಣ | ಜಿಪಂ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಗೆ ಅನ್ಯಾಯ: ಜನಪ್ರತಿನಿಧಿಗಳಿಗೆ ಎಚ್ಚರಿಕೆ

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ...

ಉಡುಪಿ | ಹಿರಿಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಅವರಿಗೆ ಸೂಕ್ತ ರಕ್ಷಣೆ ನೀಡಲು ಜಿಲ್ಲಾಧಿಕಾರಿಗೆ ಮನವಿ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷರು, ಹಿರಿಯ ವಕೀಲರು...

ದೆಹಲಿಯಲ್ಲಿ ‘ತಿರಂಗಾ’ ಪ್ರತಿಭಟನೆಗೆ ತಡೆ: ದೀಪ್ಕೆ, ನೇಹಾ ಬೋರಾ ಸೇರಿ ಸುಮಾರು 150 ಮಂದಿ ವಶಕ್ಕೆ

‘ಲೆಹರಾ ದೋ ತಿರಂಗಾ’ ಪ್ರತಿಭಟನೆ ಮತ್ತು ಸಂಬಂಧಿತ ಪ್ರದರ್ಶನಗಳ ಸಂದರ್ಭದಲ್ಲಿ ಅಭಿಜೀತ್...