ಕಾಂಗ್ರೆಸ್ಸಿಗೂ, ಮುಸ್ಲಿಮರಿಗೂ ಎಚ್ಚರಿಕೆ ಗಂಟೆ ಕಟ್ಟಿದ ದಾವಣಗೆರೆ ರಾಜಕಾರಣ: ಮುಸ್ಲಿಮರ ಮುಂದಿನ ನಡೆಯೇನು?

Date:

ದಾವಣಗೆರೆ ಉಪಚುನಾವಣೆಯ ರಾಜಕಾರಣದಲ್ಲಿ ಮುಸ್ಲಿಮರ ದಿಟ್ಟತನ ಹಾಗೂ ಮುಸ್ಲಿಂ ಸ್ವತಂತ್ರ ಅಭ್ಯರ್ಥಿಗಳ ಸ್ಪರ್ಧೆ ಹಾಗೂ ಕ್ಷೇತ್ರದಲ್ಲಿ ಪ್ರತಿಭಟಿಸಿದ ರೀತಿಗಳು ಕರ್ನಾಟಕ ರಾಜ್ಯ ಮಾತ್ರವಲ್ಲದೆ ಇಡೀ ರಾಷ್ಟ್ರದಲ್ಲಿ ಸುದ್ದಿಯಾಗಿದೆ. ಇದು ದಾವಣಗೆರೆಯ ಮಾದರಿ ರಾಜಕಾರಣ ಎಂದೇ ಹೆಸರಾಗುತ್ತಿದೆ. ಇದು ರಾಷ್ಟ್ರಮಟ್ಟದಲ್ಲಿ ಮುಸ್ಲಿಮರು ತಮ್ಮ ಸಾಂಪ್ರದಾಯಿಕ ನೆಚ್ಚಿನ ಪಕ್ಷ, ದಶಕಗಳಿಂದಲೂ ನಿಷ್ಠೆಯನ್ನು ತೋರುತ್ತ ಬಂದಿದ್ದ ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಬೆಂಬಲವನ್ನು ಮತ್ತೆ ಪುನರ್ವಿಮರ್ಶೆಗೆ ಒಳಪಡಿಸುವ ಕಾಲ ಬಂದಿದೆ ಹಾಗೂ ಒಗ್ಗೂಡುವ ಕಾಲ ಬಂದಿದೆ ಎಂದು ಚಿಂತಕರ ವಲಯದಲ್ಲಿ ಚರ್ಚೆಯಾಗುತ್ತಿದೆ.‌ ಇದು ಕೇವಲ ಕಾಂಗ್ರೆಸ್ ಗೆ ಮಾತ್ರವಲ್ಲದೇ ಮುಸ್ಲಿಮರಿಗೂ ಕೂಡ ತಮ್ಮ ಮುಂದಿನ ನಡೆಯ ಬಗ್ಗೆ ಸ್ಪಷ್ಟ ಎಚ್ಚರಿಕೆಯಾಗಿದೆ.

- Advertisement -

ಮುಸ್ಲಿಂ, ದಲಿತ ಹಾಗೂ ಹಿಂದುಳಿದ ವರ್ಗಗಳನ್ನು ಕಾಂಗ್ರೆಸ್ ಪಕ್ಷವು ಮತಪೆಟ್ಟಿಗೆಯ ಬುತ್ತಿಯ ಗಂಟುಗಳಂತೆ ಬಳಸಿಕೊಂಡಿದೆ ಎಂಬ ಆರೋಪ ರಾಜಕೀಯ ವಲಯದಲ್ಲಿ ಆಗಾಗ ಕೇಳಿಬರುತ್ತಿತ್ತು. ದಶಕಗಳ ಕಾಲ ಈ ಸಮುದಾಯಗಳ ಪರವಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡರೂ, ಅವರ ನಿಜವಾದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಬೇಕಾದ ಶಾಶ್ವತ ಕ್ರಮಗಳನ್ನು ಕೈಗೊಳ್ಳಲು ಕಾಂಗ್ರೆಸ್ ವಿಫಲವಾಗಿದೆ ಎಂಬ ಟೀಕೆಗಳೂ ಕೇಳಿಬರುತ್ತಿವೆ. ಚುನಾವಣಾ ಸಮಯದಲ್ಲಿ ಮಾತ್ರ ಭರವಸೆಗಳು, ಘೋಷಣೆಗಳನ್ನು ನೀಡಲಾಗುತ್ತದೆ; ಆದರೆ ನಿರ್ಧಾರಗಳನ್ನು ಕೈಗೊಳ್ಳುವ ಸಮಯದಲ್ಲಿ ಈ ಸಮುದಾಯಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಅಸಮಾಧಾನವೂ ವ್ಯಕ್ತವಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೀಸಲಾತಿ ಹೆಚ್ಚಳ ಮತ್ತು ನ್ಯಾಯಾಂಗದ ಮಿತಿ: ಸಾಮಾಜಿಕ ನ್ಯಾಯಕ್ಕೆ...

ಮೀಸಲಾತಿ ಬಯಸುವ ಜಾತಿಗಳೆಲ್ಲವೂ ಕೂಡ ವರ್ತಮಾನದ ಸಾಮಾಜಿಕ ಪರಿಸ್ಥಿತಿ ಮತ್ತು ಕಾನೂನು ನಿಯಮಗಳನ್ನು ಸಾಮಾಜಿಕ ನ್ಯಾಯದ ಬೆಳಕಿನಲ್ಲಿ ಅಂತಃಕರಣ ಪೂರ್ವಕವಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾದಾಗ ಮಾತ್ರ ಸಾಮಾಜಿಕ ನ್ಯಾಯವೆಂಬ...

ರಾಮಲೀಲೆಗಳಲ್ಲಿ ರಾಮ, ಹನುಮ, ಲಕ್ಷ್ಮಣ ಪಾತ್ರಗಳಲ್ಲಿ ದಾನಿಶ್ –...

ರಾಮನಾಗಿ ದಾನಿಶ್. ಹನುಮಂತನಾಗಿ ಯೂನುಸ್. ಲಕ್ಷ್ಮಣನಾಗಿ ಶೇರ್ ಖಾನ್. ರಾವಣನಾಗಿ ಇಕ್ಬಾಲ್ ಅಹ್ಮದ್. ಇವರೆಲ್ಲರೂ ಮುಸ್ಲಿಂ ಕಲಾವಿದರು. ಆದರೆ, ಇವರು ಅಭಿನಯಿಸಿರುವುದು ಹಿಂದುಗಳ ಮಹಾಕಾವ್ಯ ರಾಮಾಯಣದ ಪಾತ್ರಗಳಲ್ಲಿ. ಉತ್ತರ ಭಾರತದ ಹಲವು ರಾಮಲೀಲೆಗಳಲ್ಲಿ...

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಈ ಸಮುದಾಯಗಳ ಭಾವನೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಬದಲು, ಶಿಕ್ಷಣ, ಉದ್ಯೋಗ ಮತ್ತು ಸಮಾನ ಅವಕಾಶಗಳ ಮೂಲಕ ಶಾಶ್ವತ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ. ಇಲ್ಲದಿದ್ದರೆ, ಮುಸ್ಲಿಮರಲ್ಲಿ ಕಾಂಗ್ರೆಸ್ ಮೇಲಿನ ನಂಬಿಕೆ ಕುಗ್ಗುವ ಸಾಧ್ಯತೆ ಇದೆ ಎನ್ನುವ ಎಚ್ಚರಿಕೆ ಸಂದೇಶ ಹೊರಹೊಮ್ಮುತ್ತಿದೆ.

2014ರ ನಂತರ ರಾಷ್ಟ್ರಮಟ್ಟದಲ್ಲಿ ಹಲವು ಚುನಾವಣೆಗಳು, ರಾಜ್ಯಗಳಲ್ಲಿ ತೀವ್ರ ಕುಸಿತ ಅನುಭವಿಸಿದ್ದ ಅಖಿಲ ಭಾರತ ಕಾಂಗ್ರೆಸ್ ಪಕ್ಷ ಇತ್ತೀಚಿನ ಹಲವು ಪ್ರಬುದ್ಧ ನಿರ್ಧಾರಗಳಿಂದ, ತನ್ನ ಕೆಲ ನಡೆಗಳಿಂದ ರಾಷ್ಟ್ರಮಟ್ಟದಲ್ಲಿ ಮತ್ತು ವಿವಿಧ ಪಕ್ಷಗಳ ತಂಡಗಳನ್ನು ಒಳಗೊಂಡು ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಾ ಸಾಗುತ್ತಿತ್ತು. ಸುಮಾರು 3-4 ದಶಕಗಳಿಂದ ಕುಟುಂಬದ ಹಿಡಿತದಲ್ಲೇ ಇದ್ದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ದಲಿತರೊಬ್ಬರಿಗೆ ವರ್ಗಾಯಿಸಿದ್ದೂ ಅಲ್ಲದೆ ಕುಟುಂಬ ರಾಜಕಾರಣದಿಂದ ಹಿಂದೆ ಸರಿದು ಹಲವು ಹಿಂದುಳಿದ ದಲಿತ ವರ್ಗಗಳಿಗೆ ಮತ್ತು ಮುಸ್ಲಿಂ ನಾಯಕರಿಗೆ ರಾಷ್ಟ್ರ ಮಟ್ಟದಲ್ಲಿ ಪ್ರಾಧಾನ್ಯತೆ ನೀಡಿ ಪಕ್ಷವನ್ನು ಮುನ್ನಡೆಸಲು ಅವಕಾಶ ನೀಡಿದೆ. ಅಲ್ಲದೆ ಇಂಡಿ ಒಕ್ಕೂಟ ರಚಿಸಿಕೊಂಡು ಹಲವು ಪಕ್ಷಗಳ ವಿಶ್ವಾಸಗಳಿಸಿ ರಾಷ್ಟ್ರಮಟ್ಟದಲ್ಲಿ ತನ್ನ ಪ್ರಗತಿಯನ್ನು ದಾಖಲಿಸಿಕೊಳ್ಳುತ್ತಿತ್ತು.

image 2026 04 19T190842.786

ಇದಕ್ಕೆ ಪೂರಕವಾಗಿ ಇತ್ತೀಚಿನ ಸಂಸದೀಯ ಚರ್ಚೆಗಳಲ್ಲಿ ರಾಹುಲ್ ಗಾಂಧಿಯವರ ಪ್ರಬುದ್ಧ ಮಾತುಗಳು, ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ದಿಟ್ಟ ನಿರ್ಧಾರಗಳು ಹಾಗೂ ಆಡಳಿತ ಪಕ್ಷವನ್ನು ಎದುರು ಹಾಕಿಕೊಳ್ಳುವ ರೀತಿ ಮತ್ತು ನೈತಿಕವಾಗಿ ಅದನ್ನು ಕಟ್ಟಿಹಾಕುವ ರೀತಿ ರಾಷ್ಟ್ರಮಟ್ಟದಲ್ಲಿ ಹಲವು ಪಕ್ಷಗಳು ಅವರೊಂದಿಗೆ ಸೇರುವ ರೀತಿ ಉತ್ತಮ ನಡೆಯ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.‌

ಆದರೆ ಕರ್ನಾಟಕದಲ್ಲಿ ಇದಕ್ಕೆ ತದ್ವಿರುದ್ಧ ನಡೆಗಳು ಕಂಡುಬರುತ್ತಿದ್ದು, ಪ್ರಸ್ತುತ ಸಿಎಂ ಸಿದ್ದರಾಮಯ್ಯನವರ ಆಡಳಿತದಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ 2013ರಿಂದ 2018ರವರೆಗೆ ಇದ್ದ ಪ್ರಾತಿನಿಧ್ಯ ಹಾಗೂ ಮನ್ನಣೆಗಳು ಸಿಗುತ್ತಿಲ್ಲ ಎಂಬ ಜನಾಭಿಪ್ರಾಯ ಮೂಡುತ್ತಿದೆ. ಇದಕ್ಕೆ ಒಳಮೀಸಲಾತಿಯ ನಿರ್ಧಾರಗಳ ಗೊಂದಲ, ಕಾಂತರಾಜ್ ಹಿಂದುಳಿದ ವರ್ಗಗಳ ಆಯೋಗದ ವರದಿ ಮುಂದಕ್ಕೆ, ಜಾತಿಗಣತಿಯ ಗೊಂದಲಗಳು ಸೇರಿದಂತೆ ದಾವಣಗೆರೆಯ ದಕ್ಷಿಣದಲ್ಲಿ ಟಿಕೆಟ್ ಹಂಚಿಕೆ ವೇಳೆ ಕೈಗೊಂಡ ನಿರ್ಧಾರ ಹಾಗೂ ಚುನಾವಣಾ ನಂತರದ ಶಿಸ್ತು ಕ್ರಮಗಳು ಕಾಂಗ್ರೆಸ್ಸಿನ ಬಗ್ಗೆ ಒಂದು ತಿರಸ್ಕಾರದ ಭಾವನೆಯನ್ನು ಅಲ್ಪಸಂಖ್ಯಾತ ಮತ್ತು ದಲಿತ ವರ್ಗಗಳಲ್ಲಿ ಮೂಡುವಂತೆ ಮಾಡುತ್ತಿದೆ.

ದಾವಣಗೆರೆಯಲ್ಲಿ ನಡೆದ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ವೇಳೆ ಮುಸ್ಲಿಂ ಸೇರಿದಂತೆ ಅಹಿಂದ ವರ್ಗದ ಹಿತಾಸಕ್ತಿಯನ್ನು ಕಾಂಗ್ರೆಸ್ ಕಡೆಗಣಿಸಿದೆ‌ ಎನ್ನುವ ಆರೋಪಗಳು ಕೇಳಿ ಬರುತ್ತಿದ್ದು, ಬಹುಸಂಖ್ಯಾತ ವರ್ಗವನ್ನು ಕಡೆಗಣಿಸಿ ಬಲಾಢ್ಯ ಲಿಂಗಾಯುತ ಸಮುದಾಯ, ಹಾಗೂ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ದಾವಣಗೆರೆ ದಕ್ಷಿಣದಲ್ಲಿ ಟಿಕೆಟ್ ನೀಡಿರುವುದಕ್ಕೆ ಪಕ್ಷದ ಸಾಂಪ್ರದಾಯಿಕ ನಡೆ ಕಾರಣ ಎಂದು ತೇಪೆ ಸಾರಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದ್ದು ಇದೇ ನಿರ್ಧಾರವನ್ನು ತನ್ನ ಹಲವು ಹಿಂದಿನ ಚುನಾವಣೆಗಳಲ್ಲಿ ಮುರಿದಿದ್ದನ್ನು ಕಾಂಗ್ರೆಸ್ ಮರೆತಂತಿದೆ ಅನಿಸುತ್ತಿದೆ.

ಉಸ್ತುವಾರಿ ಸುರ್ಜೇವಾಲ ದಾವಣಗೆರೆ ದಕ್ಷಿಣ ಉಪಚುನಾವಣೆ ಹಿನ್ನೆಲೆಯಲ್ಲಿ ನೀಡಿದ ಸಣ್ಣ ಹೇಳಿಕೆ ಅಸಂಬದ್ಧ ಎನಿಸಿದರೂ ಹರಿಯಾಣದಲ್ಲಿ ಪ್ರತಿಕ್ರಿಯೆಯಾಗಿ ಮಾರ್ಪಟ್ಟಿತು. ಇದು ರಾಷ್ಟ್ರ ರಾಜಕಾರಣದಲ್ಲಿ ದಾವಣಗೆರೆಯ ಉಪಚುನಾವಣೆ ರಾಜಕಾರಣದಲ್ಲಿ ಮುಸ್ಲಿಮರ ನಡೆ, ಭಾವನೆ ಎಷ್ಟು ಮಹತ್ವ ಪಡೆದಿದೆ ಎಂಬುದನ್ನು ತೋರಿಸುತ್ತದೆ. ಅಲ್ಲದೆ ಇಡೀ ಮುಸ್ಲಿಂ ಸಮುದಾಯದೊಳಗೆ ತಾವು ಮುಂದಿನ ಹೆಜ್ಜೆಯನ್ನು ರಾಜಕಾರಣದ ದೃಷ್ಟಿಯಿಂದ ಪುನರ್ ವಿಮರ್ಶೆಗೆ ಒಳಪಡಿಸಿ ಯಾವ ಕಡೆ ಹೆಜ್ಜೆ ಹಾಕಬೇಕು ಎನ್ನುವ ಬಗ್ಗೆ ವಿಶೇಷವಾಗಿ ಯುವ ಸಮುದಾಯ ಚರ್ಚೆ ನಡೆಸುತ್ತಿರುವುದು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ಇದು ಕಾಂಗ್ರೆಸ್ಸಿಗೆ ಎಚ್ಚರಿಕೆ ಗಂಟೆಯಾಗಿದ್ದು, ಇದನ್ನು ಸರಿಪಡಿಸಿಕೊಂಡು ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹೋದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿನ ಭವಿಷ್ಯ ಪಾತಾಳಕ್ಕೆ ಇಳೆಯುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ ಹಿರಿಯ ಮುಸ್ಲಿಂ ನಾಯಕರು.

ದಾವಣಗೆರೆ ಉಪಚುನಾವಣೆ ನಂತರದ ಮುಸ್ಲಿಮರ ಅಸಮಾಧಾನವನ್ನು ತಣ್ಣಗಾಗಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಬಗ್ಗೆ ಕಾಂಗ್ರೆಸ್ ಗಂಭೀರ ಚಿಂತನೆ ಮಾಡಬೇಕಿತ್ತು, ಆದರೆ ಇದಕ್ಕೆ ತದ್ವಿರುದ್ಧವಾಗಿ ತನ್ನ ರಾಜಕೀಯ ನಡೆಯ ಬಗ್ಗೆ ಆತ್ಮಾವಲೋಕನಕ್ಕೆ ಸಿದ್ಧವಿಲ್ಲದ ಪಕ್ಷ ಚುನಾವಣೆ ನಂತರ ಹಲವು ಅಲ್ಪಸಂಖ್ಯಾತ ನಾಯಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುತ್ತಿದೆ. ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸೇರಿದಂತೆ ಹಲವರನ್ನು ಕಾಂಗ್ರೆಸ್ ವಿಭಾಗದ ಅಲ್ಪಸಂಖ್ಯಾತರ ಘಟಕದಿಂದ ವಜಾ ಗೊಳಿಸಿ ಅಲ್ಪಸಂಖ್ಯಾತರ ಘಟಕವನ್ನು ವಿಸರ್ಜಿಸಿದ್ದು ಅಲ್ಲದೆ, ಹಿರಿಯ ನಾಯಕ ನಜೀರ್ ಅಹ್ಮದ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಿದ್ದು, ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್ ನಿಂದ ಉಚ್ಚಾಟನೆ ಮಾಡಲಾಗಿದೆ. ಈ ಎಲ್ಲ ನಿರ್ಧಾರಗಳು ಸಮುದಾಯದಲ್ಲಿ ಮುಸ್ಲಿಮರನ್ನು ಪಕ್ಷದಲ್ಲಿ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಅಲ್ಲದೆ ಮುಸ್ಲಿಂ ನಾಯಕರನ್ನೇ ಮುಸ್ಲಿಂ ನಾಯಕರ ಮೇಲೆ ಎತ್ತಿ ಕಟ್ಟುವ ಕ್ರಮ ನಡೆಯುತ್ತಿದೆ ಎನ್ನುವ ಭಾವನೆ ಬೆಳೆಯುತ್ತಿದ್ದು ಕಾಂಗ್ರೆಸ್ ಪಕ್ಷವನ್ನು ಪುನರ್ ವಿಮರ್ಶೆಗೆ ಒಳಪಡಿಸುವ ರೀತಿ ಚರ್ಚೆಯಾಗುತ್ತಿದ್ದು, ಪರ್ಯಾಯ ಪಕ್ಷ ಮತ್ತು ರಾಜಕಾರಣದ ಬಗ್ಗೆ ಸಮಾಜದ ಹಿರಿಯರು ಹಾಗೂ ಯುವಕರಲ್ಲಿ ಮಾತುಕತೆಗಳು ಜೋರಾಗಿದೆ.

ದಾವಣಗೆರೆ ಜಿಲ್ಲೆಯ ಮಸೀದಿಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ತಂಜೀಂ ಮಾಜಿ ಅಧ್ಯಕ್ಷ ವೈಎಂ ಫಕ್ರುದ್ದೀನ್ ಹಾಗೂ ಅಲ್ಪಸಂಖ್ಯಾತರ ಜಾಗೃತಿ ವೇದಿಕೆಯ ಅಧ್ಯಕ್ಷ ಅಬ್ದುಲ್ ಘನಿ ತಾಹಿರ್ ಮಾತನಾಡಿ, “ಅಲ್ಪಸಂಖ್ಯಾತ ನಾಯಕರ ನಡುವೆ ಭಿನ್ನತೆ ಉಂಟುಮಾಡಿ ಅವಕಾಶವಾದಿ ರಾಜಕಾರಣಕ್ಕೆ ಕಾಂಗ್ರೆಸ್ ಮುಂದಾಗಿದೆ. ಇದು ಸಮುದಾಯದ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಈ ಎಲ್ಲದರ ಪರಿಣಾಮವಾಗಿ ಕೆಲವರು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದರೂ, ಕೆಲವರು ವಿರೋಧವಾಗಿ ಮತಹಾಕಿದ್ದು ಅಥವಾ ಮತದಾನದಿಂದ ದೂರ ಉಳಿದಿದ್ದು, ಸಮುದಾಯದೊಳಗೆ ಗೊಂದಲ ಸ್ಪಷ್ಟಿಯಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.

“ದಾವಣಗೆರೆಯ ರಾಜಕೀಯ ಗೊಂದಲಗಳ ಪರಿಹರಿಸುವ ಹೊಣೆಗಾರಿಕೆ ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.‌ ಈ ಬೆಳವಣಿಗೆಗಳು 2028ರ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆಯಾಗಿವೆ. ಅಲ್ಪಸಂಖ್ಯಾತರು, ದಲಿತರು ಮತ್ತು ಜಾತ್ಯಾತೀತ ಶಕ್ತಿಗಳನ್ನು ನಿರ್ಲಕ್ಷ್ಯ ಮಾಡಿದರೆ, ಅವರು ಪಕ್ಷದಿಂದ ದೂರ ಸರಿಯುವ ಸಾಧ್ಯತೆ ಇದೆ. ಈಗಾಲಾದರೂ ನಾಯಕತ್ವ ತಪ್ಪು ತಿದ್ದಿಕೊಂಡು ನಂಬಿಕೆ ಗಳಿಸಿಕೊಳ್ಳುವುದು ಅಗತ್ಯವಾಗಿದೆ” ಎಂದು ಎಚ್ಚರಿಸಿದರು.

ಮುಸ್ಲಿಮರು ಹಾಗೂ ಸಾಚಾರ್ ಸಮಿತಿ ವರದಿ:

ದಾವಣಗೆರೆ ರಾಜಕಾರಣದ ಹಿನ್ನೆಲೆಯಲ್ಲಿ ಮತ್ತೆ ಸಾಚಾರ್ ವರದಿಯ ಅಂಶಗಳು ಮುನ್ನಲೆಗೆ ಬಂದಿವೆ. ಭಾರತದಲ್ಲಿ ಮುಸ್ಲಿಂ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಅತ್ಯಂತ ತಳಮಟ್ಟದಲ್ಲಿದೆ ಎಂದು ವರದಿಯಾಗಿದೆ.‌ 2006ರಲ್ಲಿ ಬಿಡುಗಡೆಗೊಂಡ ಈ ವರದಿ, ಮುಸ್ಲಿಮರು ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಅವಕಾಶಗಳಲ್ಲಿ ಹಿಂದುಳಿದಿರುವುದನ್ನು ವಿವರವಾಗಿ ದಾಖಲಿಸಿದೆ.

ಸಾಚಾರ್ ಸಮಿತಿ ವರದಿ ಪ್ರಕಾರ, ಭಾರತದಲ್ಲಿ ಮುಸ್ಲಿಂ ಸಮುದಾಯದ ಶಿಕ್ಷಣ ಮತ್ತು ಗಮನಾರ್ಹ ಹಿನ್ನಡೆ ಕಂಡುಬರುತ್ತಿದೆ. ಮುಸ್ಲಿಮರ ಶಿಕ್ಷಣ ಮಟ್ಟ ಸುಮಾರು 59% ಮಾತ್ರವಾಗಿದ್ದು, ದೇಶದ ಸರಾಸರಿ ಶೇ.74.01 (2011ರ ವರದಿಯಂತೆ) ಹಾಗೂ ದಲಿತರ ಶಿಕ್ಷಣ ದರ ಶೇ. 66.07ಕ್ಕಿಂತ ಕಡಿಮೆಯಾಗಿದೆ. ಶಾಲೆ ಬಿಟ್ಟುಹೋಗುವ ಪ್ರಮಾಣ ಹೆಚ್ಚು ಇರುವುದರಿಂದ ಕೇವಲ 17% ವಿದ್ಯಾರ್ಥಿಗಳು ಮಾತ್ರ ಹೈಸ್ಕೂಲ್ ಮಟ್ಟವನ್ನು ತಲುಪುತ್ತಾರೆ, ಉನ್ನತ ಶಿಕ್ಷಣದಲ್ಲಿ ಅವರ ಪಾಲು 4–5% ರಷ್ಟೇ ಇದೆ. ಉದ್ಯೋಗ ಕ್ಷೇತ್ರದಲ್ಲಿಯೂ, ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಮುಸ್ಲಿಮರ ಪ್ರತಿನಿಧಿತ್ವವು ಸುಮಾರು 4.9% ಮಾತ್ರವಾಗಿದ್ದು, ಐಎಎಸ್, ಐಪಿಎಸ್ ಮುಂತಾದ ಉನ್ನತ ಸೇವೆಗಳಲ್ಲಿ ಇದು 3% ಕ್ಕಿಂತ ಕಡಿಮೆ, ಪೊಲೀಸ್ ಇಲಾಖೆಯಲ್ಲಿ ಸುಮಾರು 6% ರಷ್ಟಿದೆ ಎನ್ನುತ್ತದೆ ಸ್ವತಂತ್ರ ವರದಿಯೊಂದು.

ಆರ್ಥಿಕವಾಗಿ ಉದ್ಯೋಗ ಕ್ಷೇತ್ರಗಳಲ್ಲಿ ಕೂಡ ಮುಸ್ಲಿಮರು ಹಿಂದುಳಿದಿದ್ದು, ನಗರ ಪ್ರದೇಶಗಳಲ್ಲಿ ಬಹುಪಾಲು ಮುಸ್ಲಿಂ ಕುಟುಂಬಗಳು ಅಸಂಘಟಿತ ಕ್ಷೇತ್ರ ಅಥವಾ ಸಣ್ಣಪುಟ್ಟ ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡಿದ್ದು, ಸ್ಥಿರ ಆದಾಯದ ಕೊರತೆಯನ್ನು ಅನುಭವಿಸುತ್ತಿವೆ. ಹಲವಾರು ಕುಟುಂಬಗಳ ಮಾಸಿಕ ಆದಾಯ ರಾಷ್ಟ್ರದ ಸರಾಸರಿಗಿಂತ ಕಡಿಮೆಯಿದೆ. ಮೂಲಭೂತ ಸೌಕರ್ಯಗಳಿಲ್ಲದೇ ಬಹುತೇಕ ಕುಟುಂಬಗಳು ವಾಸಿಸುತ್ತಿರುವ ಬಗ್ಗೆ ಅಂಶಗಳಿವೆ.

ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈವರೆಗೆ ತನ್ನ ಸುಭದ್ರ ಮತ ಬ್ಯಾಂಕ್ ಆಗಿ ಪರಿವರ್ತಿಸಿಕೊಂಡಿರುವ ಮುಸ್ಲಿಂ ಸಮುದಾಯಕ್ಕೆ ನೀಡಿರುವ ಕೊಡುಗೆ ಏನು ಎಂಬುದನ್ನು ಸ್ಪಷ್ಟಪಡಿಸಬೇಕಿದೆ. ಸಾಚಾರ್ ವರದಿಯ ಬಂದ ನಂತರವೂ ಮುಸ್ಲಿಂ ಸಮುದಾಯದ ಏಳಿಗೆಗೆ ಕಾಂಗ್ರೆಸ್ ಯಾವುದೇ ಪ್ರಮುಖ ಯೋಜನೆಗಳನ್ನು ರೂಪಿಸಿಲ್ಲ ಎನ್ನುವ ಅಸಮಾಧಾನ ಇದೆ. ಅಲ್ಲದೆ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಕೂಡ ಮುಸ್ಲಿಂ ಸಮುದಾಯದ ಅಭಿವೃದ್ಧಿಯ ಸೂಚ್ಯಂಕ ಅಷ್ಟೇನೂ ಏರಿಕೆ ಕಾಣದೇ, ಕೆಳಮಟ್ಟದಲ್ಲೇ ಇದ್ದು, ಮುಸ್ಲಿಮರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಮಾತ್ರ ನೋಡುತ್ತದೆಯೇ ಎನ್ನುವ ಆತಂಕ ಸಮುದಾಯದಲ್ಲಿ ಕಾಡುತ್ತಿದೆ.

image 2026 04 19T191016.770

ಈ ಎಲ್ಲಾ ವಿಚಾರಗಳ ಹಿನ್ನೆಲೆಯಲ್ಲಿ ದಾವಣಗೆರೆಯ ದಕ್ಷಿಣ ಉಪಚುನಾವಣೆಯಲ್ಲಿ ನಡೆದ ಚುನಾವಣೆ ಕಾಂಗ್ರೆಸ್ ಹಾಗೂ ಮುಸ್ಲಿಮರಿಗೆ ಎಚ್ಚರಿಕೆಯ ಗಂಟೆಯಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ತನ್ನ ಸುಭದ್ರ ಮತ ಬ್ಯಾಂಕ್ ಎಂದೇ ಪರಿಗಣಿಸಿದ್ದ ಕಾಂಗ್ರೆಸ್ ತಾನು ಅಲ್ಪಸಂಖ್ಯಾತ ವರ್ಗದ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಹಾಗೂ ಅವರ ಅಭಿವೃದ್ಧಿಯ ಕೊಡುಗೆಗೆ ಏನು ಮಾಡುತ್ತಿದ್ದೇನೆ ಎನ್ನುವ ಪರಾಮರ್ಶೆಗಳನ್ನು ಕೂಡ ಮಾಡಬೇಕಾಗಿದೆ. ಅಲ್ಲದೆ ಸಮುದಾಯದ ಹಿತಾಸಕ್ತಿಗೆ ಅನುಗುಣವಾಗಿ ರಾಜಕೀಯ ಹಾಗೂ ಸಾಮಾಜಿಕ ನ್ಯಾಯದ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಬೇಕು ಎನ್ನುವುದನ್ನೂ ಕೂಡ ಪರಾಮರ್ಶೆಗೆ ಒಳಪಡಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಈ ನೆಲೆಯಲ್ಲಿ ಇದು ಕಾಂಗ್ರೆಸ್ಸಿಗೆ ಎಚ್ಚರಿಕೆಯ ಗಂಟೆಯಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿನ ನಿರ್ಧಾರಗಳು ಇಡೀ ಸಮುದಾಯ ತನ್ನ ವಿರುದ್ಧ ಸಿಡಿದೇಳಲು ಕಾರಣವಾಗುವ ಆತಂಕವನ್ನೂ ಈಗಲೇ ಅರಿತುಕೊಳ್ಳಬೇಕಾಗಿದೆ.

ಇದನ್ನೂ ಓದಿ: ದಾವಣಗೆರೆ | ಹರಿಹರ ಹರಪೀಠದ ವಚನಾನಂದ ಶ್ರೀ ಉಚ್ಛಾಟನೆ; ಪಂಚಮಸಾಲಿ ಟ್ರಸ್ಟ್ ನಿರ್ಣಯ

ಇತ್ತ ಮುಸ್ಲಿಂ ಸಮುದಾಯವು ಕೂಡ ತಾನು ತನ್ನ ಸಾಮಾಜಿಕ ಮತ್ತು ರಾಜಕೀಯ ಹಿತಾಸಕ್ತಿಗೆ ಅನುಗುಣವಾಗಿ ನಾನು ಯಾರೊಂದಿಗೆ ಹೆಜ್ಜೆ ಹಾಕಬೇಕು. ಅಲ್ಲದೆ ಸಮುದಾಯದ ಜೆನ್-ಜೀ ಎನಿಸಿಕೊಳ್ಳುವ ಯುವ ವರ್ಗದ ಆತಂಕವನ್ನು ತಾನು ಹೀಗೆ ನಿವಾರಿಸಬೇಕು. ಅಲ್ಲದೆ ಮುಂದಿನ ದಿನಗಳಲ್ಲಿ ರಾಜಕೀಯ ಅವಕಾಶಗಳನ್ನು ಹೇಗೆ ರೂಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮುದಾಯದ ನಿರ್ಧಾರಗಳೇನು? ಎನ್ನುವುದನ್ನು ಪರಿಶೀಲಿಸಬೇಕಾಗಿದೆ.

ಈ ರಾಜಕೀಯ ಪಲ್ಲಟದ ಅವಕಾಶವನ್ನು ಪಡೆದುಕೊಳ್ಳಲು ಹಲವು ಮತೀಯವಾದಿ ಹಾಗೂ ಇತರೆ ಪಕ್ಷಗಳು ಹವಣಿಸುತ್ತಿದ್ದು ಹಲವು ಗೊಂದಲಗಳನ್ನು ಸೃಷ್ಟಿಸಲು ಮುಂದಾಗುತ್ತಿವೆ.‌ ಈ ಮಧ್ಯೆ ಸಮುದಾಯದ ಹಿತ ದೃಷ್ಟಿಯಿಂದ ಸಮಾಜದ ಹಿತ ಕಾಯ್ದುಕೊಳ್ಳುವ ಪಕ್ಷ ಯಾವುದು, ಪಕ್ಷದಲ್ಲಿ ತಮ್ಮ ಸ್ಥಾನಮಾನಗಳ ಜೊತೆಗೆ ನಮಗೆ ಅಲ್ಲಿ ಯಾವ ರೀತಿಯ ಸಾಮಾಜಿಕ ಹಾಗೂ ರಾಜಕೀಯ ನ್ಯಾಯ ಸಿಗಲಿದೆ ಹಾಗೂ ಸಮುದಾಯದ ಹಿತಾಸಕ್ತಿಗೆ ಯಾವ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ? ಸಂವಿಧಾನಬದ್ಧವಾದ ಎಲ್ಲಾ ಹಕ್ಕುಗಳು ಆ ಪಕ್ಷದಲ್ಲಿ ನಮಗೆ ಸಿಗಲಿವೆಯೇ? ಎನ್ನುವುದನ್ನು ಖಾತ್ರಿಪಡಿಸಿಕೊಂಡು ನಿರ್ಧಾರ ತೆಗೆದುಕೊಳ್ಳುವ ಎಚ್ಚರಿಕೆಯ ಕಾಲಘಟ್ಟದಲ್ಲಿ ಮುಸ್ಲಿಂ ಸಮುದಾಯವಿದೆ.‌

WhatsApp Image 2025 11 17 at 5.21.38 PM
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯೂಸುಫ್ ಪಠಾಣ್‌ಗೆ ಭರ್ಜರಿ ಕೊಡುಗೆ: ‘ಬಿಜೆಪಿ ವಾಷಿಂಗ್ ಮಷೀನ್’ ಕುತಂತ್ರಕ್ಕೆ ಇನ್ನೊಂದು ಕನ್ನಡಿ!

ಬಿಜೆಪಿಯನ್ನು ‘ವಾಷಿಂಗ್ ಮಷೀನ್’ ಎಂದು ಟೀಕಿಸುವುದಕ್ಕೆ ಯೂಸುಫ್ ಪಠಾಣ್ ಅವರ ಭೂಮಿ...

ಬಸವಕಲ್ಯಾಣ | ಶರಣರ ಇತಿಹಾಸ ಉಳಿಸುವಲ್ಲಿ ಮಹಾರಾಷ್ಟ್ರದ ಕೊಡುಗೆ ಅಪಾರ: ಬಸವದೇವರು

ಶರಣ ಧರ್ಮ ಕರ್ನಾಟಕದಲ್ಲಿ ಹುಟ್ಟಿದರೂ, ಶರಣರ ಪರಂಪರೆ ಹಾಗೂ ವಚನ ಸಾಹಿತ್ಯವನ್ನು...

ಭಾಲ್ಕಿ | ಖಟಕ್ ಚಿಂಚೋಳಿಯಲ್ಲಿ ಧಮ್ಮಚಕ್ರ ಪ್ರವರ್ತನ ದಿನಾಚರಣೆ

ಭಾಲ್ಕಿ ತಾಲ್ಲೂಕಿನ ಖಟಕ್ ಚಿಂಚೋಳಿ ಗ್ರಾಮದಲ್ಲಿ 70ನೇ ಧಮ್ಮಚಕ್ರ ಪ್ರವರ್ತನ ದಿನ...