ದಾವಣಗೆರೆ | ಹರಿಹರ ಹರಪೀಠದ ವಚನಾನಂದ ಶ್ರೀ ಉಚ್ಛಾಟನೆ; ಪಂಚಮಸಾಲಿ ಟ್ರಸ್ಟ್ ನಿರ್ಣಯ

Date:

“ಬೆಳಿಗ್ಗೆ ಪಂಚಮಸಾಲಿ ಪೀಠದ ಟ್ರಸ್ಟ್ ಸಭೆ ಸೇರಿ ನಿರ್ಣಯ ಕೈಗೊಂಡಿದ್ದು ಪ್ರಸ್ತುತ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳನ್ನು ಪೀಠದಿಂದ ವಿಮುಕ್ತಿಗೊಳಿಸಿದ್ದೇವೆ. ಇಂದಿನಿಂದ ಮಠಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ. ಅವರು ಕೂಡಲೇ ಪಂಚಮಸಾಲಿ ಪೀಠ ತ್ಯಜಿಸಬೇಕು. ಪೀಠದಿಂದ ವಿಮುಕ್ತಿಗೊಳಿಸಿದ್ದರಿಂದ ಹತಾಷೆಗೊಂಡು ವಚನಾನಂದ ಶ್ರೀ ಗುಂಪುಗಾರಿಕೆ ಮಾಡುತ್ತಿದ್ದು, ಅವರ ಪರವಾಗಿರುವ ಗುಂಪಿನಿಂದ ಕಪೋಲಕಲ್ಪಿತ ಆಪಾದನೆಗಳನ್ನು ಮಾಡಿಸಿ ಲೆಕ್ಕ ಕೊಡಿ ಎಂದು ಪ್ರಚಾರ ಮಾಡುತ್ತಿದ್ದಾರೆ” ಎಂದು ಪಂಚಮಶಾಲಿ ಸಮಾಜದ ಟ್ರಸ್ಟ್ ಅಧ್ಯಕ್ಷ ಬಾವಿ ಬೆಟ್ಟಪ್ಪ ದಾವಣಗೆರೆಯ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉಚ್ಛಾಟನೆ ಬಗ್ಗೆ ಸ್ಪಷ್ಟಪಡಿಸಿದರು.‌

- Advertisement -

“ನಾವು ಸಮಾಜಕ್ಕೆ ಲೆಕ್ಕ ಕೊಡುತ್ತೇವೆ ಮಠದ ನೋಟಿಸ್ ಬೋರ್ಡಿನಲ್ಲಿ ಆಡಿಟ್ ವರದಿಯಿದೆ. ಅಲ್ಲಿ ಎಲ್ಲ ಲೆಕ್ಕ ಸಿಗಲಿದೆ. ಯಾರು ಬೇಕಾದರೂ ಪರಿಶೀಲಿಸಬಹುದು” ಎಂದು ಸ್ಪಷ್ಟನೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

“ಪ್ರಸ್ತುತ ವಚನಾನಂದ ಶ್ರೀಗಳು ಈ ಮುಂಚೆ ಶ್ವಾಸಪೀಠ ನಡೆಸುತ್ತಿದ್ದು ಬೆಂಗಳೂರಿನಲ್ಲಿ ಶ್ವಾಸಪೀಠದ ಉಸ್ತುವಾರಿ ವಹಿಸಿದ್ದರು. ಸಮಾಜದ, ಟ್ರಸ್ಟ್ ನಿರ್ಣಯದಂತೆ ಅವರನ್ನು ಮಠಕ್ಕೆ ಪೀಠಾಧಿಪತಿಯಾಗಿ ನೇಮಿಸಲಾಗಿತ್ತು. ಅಂದೇ ನಾವು ಅವರಿಗೆ ಎರಡು ಪೀಠಗಳಲ್ಲಿ ಒಂದು ಪೀಠವನ್ನು ಆಯ್ಕೆ ಮಾಡಿಕೊಳ್ಳಲು
ತಿಳಿಸಿದ್ದು, ಸಮಾಜ ದೊಡ್ಡದಿರುವ ಕಾರಣ ಪಂಚಮಸಾಲಿ ಪೀಠವನ್ನು ಮುಖ್ಯವಾಗಿ ತೆಗೆದುಕೊಂಡು ಹೋಗುವಂತೆ ಹಲವು ಬಾರಿ ತಿಳಿಸಲಾಗಿತ್ತು. ಅಂತಿಮವಾಗಿ ಅವರು ಮಾರ್ಚ್ 24 ರವರೆಗೆ ಸಮಯ ಕೊಡುವಂತೆ ಕೇಳಿದ್ದು, ಆದರೆ ಅದರ ಮಧ್ಯೆ ಸಮಾಜದ ಮಧ್ಯೆ ಒಡಕು ಸೃಷ್ಟಿಸಿ ಗುಂಪುಗಾರಿಕೆ ಬೆಳೆಸಿ, ಸಮಾಜ ಹೊಡೆಯುವ ಕೆಲಸ ಮಾಡಿದ್ದಾರೆ. ಇವರು ಶ್ವಾಸಪೀಠ ಅಲ್ಲದೆ ಬೆಳಗಾವಿ ಜಿಲ್ಲೆಯ ನಿಡಸೋಸಿ ಮಠಕ್ಕೆ ಕೂಡ ಮಠಾಧಿಪತಿಯಾಗುವ ಅರ್ಜಿ ಸಲ್ಲಿಸಿದ್ದಾರೆ” ಎಂದು ಆರೋಪಿಸಿದರು.

1004108475

ಸಮಾಜದ ಮುಖಂಡ ಬಸವರಾಜ ದಿಂಡೂರು ಮಾತನಾಡಿ “ಹಲವು ಹಿರಿಯರು ಸಮಾಜ ಕಟ್ಟುವ ಆಶಯದಿಂದ ಟ್ರಸ್ಟ್ ಮತ್ತು ಪೀಠವನ್ನು 2008 ರಲ್ಲಿ ಸ್ಥಾಪಿಸಿದ್ದೇವೆ, ಆದರೆ ಇವರನ್ನು ಪೀಠಾಧಿಪತಿಯಾಗಿಸಿ 8ವರ್ಷ ಕಳೆದರೂ ಸಮಾಜ ಕಟ್ಟುವ ಆಶಯ ಈಡೇರಿಲ್ಲ. ಸಮಾಜ ಕಟ್ಟಿದ ಹಿರಿಯರಿಗೆ ಗೌರವ ಕೊಡದೆ ‘ಚಪ್ಪಲಿಯಿಂದ ಹೊಡೆಯುತ್ತೇನೆ, ಚಪ್ಪಲಿ ಬಿಡುವ ಜಾಗದಲ್ಲಿ ಬಿಡುತ್ತೇನೆ’ ಎನ್ನುವ ರೀತಿಯ ಅಹಂಕಾರದ ಮಾತುಗಳನ್ನು ಆಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಹಲವಾರು ಬಾರಿ ತಿಳಿ ಹೇಳಿದ್ದು, ಸಮಾಜ ಕಟ್ಟುವ ಬಗ್ಗೆ ವಿನಂತಿ ಮಾಡಿದ್ದೆವು. ಅವರು ತಮ್ಮ ನಡೆ ನುಡಿ ತಿದ್ದಿಕೊಳ್ಳದೇ ಐಷಾರಾಮಿ ಜೀವನ, ವಿದೇಶ ಪ್ರಯಾಣ ಹಾಗೂ ಹರ ಜಾತ್ರೆಯ ಲೆಕ್ಕಪತ್ರಗಳನ್ನು ಕೂಡ ನೀಡದೆ ಶ್ರೀಮಂತ ಜೀವನ ನಡೆಸುವತ್ತ ಹೊರಳಿದ್ದು, ಸಮಾಜಕ್ಕೆ ಆತಂಕ ತರಿಸಿದೆ. ಅಲ್ಲದೆ ಸಮಾಜಕ್ಕೆ ಪೀಠಕ್ಕೆ ಏಕವ್ಯಕ್ತಿ ಟ್ರಸ್ಟ್ ರಚಿಸಿ ತಮ್ಮನ್ನು ಮುಖ್ಯಸ್ಥರನ್ನಾಗಿ ಮಾಡುವಂತೆ ಕೋರಿದರು. ಏಕವ್ಯಕ್ತಿ ಟ್ರಸ್ಟ್ ರಚನೆಯಿಂದ ಚಿತ್ರದುರ್ಗದ ಮುರುಘಾ ಮಠ ಹಾಗೂ ಹುಬ್ಬಳ್ಳಿ ಮೂರು ಸಾವಿರ ಮಠದ ಅತಂತ್ರಗಳನ್ನು ನೋಡಿದ್ದು, ನಾವು ಇದನ್ನು ನಿರಾಕರಿಸಿ ಸಮಾಜದ ಟ್ರಸ್ಟ್ ನಲ್ಲಿ ಒಬ್ಬರಾಗಿರುವಂತೆ ತಿಳಿಸಿದ್ದರಿಂದ ಸಮಾಜವನ್ನು ಒಡೆಯುವ ಹುನ್ನಾರ ನಡೆಸಿದ್ದು ರಾಜಕೀಯ ಪ್ರೇರಿತ ಆರೋಪ ಮಾಡುತ್ತಿದ್ದಾರೆ. ಅವರ ಈ ವರ್ತನೆಗಳಿಂದ ಪೀಠದಿಂದ ವಿಮುಕ್ತಿಗೊಳಿಸಿದ್ದೇವೆ” ಎಂದು ದೂರಿದರು.

1004108472

ಸಮಾಜದ ಹಿರಿಯ ಮುಖಂಡ ಟ್ರಸ್ಟ್ ಸದಸ್ಯ ಜಿಟಿ ಪಾಟೀಲ್ ಮಾತನಾಡಿ “ಪ್ರಸ್ತುತ ವಚನಾನಂದ ಶ್ರೀಗಳ ನಡೆ-ನುಡಿಗಳು ಸರಿ ಇಲ್ಲ. ಅವರಿಗೆ ಸಮಾಜದ ಬಗ್ಗೆ ಪರಿಜ್ಞಾನ ಇಲ್ಲ. ಸಮಾಜ ಕಟ್ಟಿದ ಹಿರಿಯರಿಗೆ ಸೂ** ಮಗ, ಬೋ*** ಮಗ ಎಂದೆಲ್ಲಾ ಅವಾಚ್ಯವಾಗಿ ಮಾತನಾಡುತ್ತಾರೆ. ಮಠಕ್ಕೆ ಬರುವ ಶ್ರೀಮಂತರಿಗೆ ಒಂದು ರೀತಿ, ಬಡ ಭಕ್ತರಿಗೆ ಒಂದು ರೀತಿ ತಾರತಮ್ಯ ಮಾಡುತ್ತಿದ್ದಾರೆ. ಈ ಮುಂಚೆ ಕಲಿಕೆಯ ವೇಳೆ ಇಳಕಲ್ ಮಹಾಂತ ಮಠದಲ್ಲಿದ್ದ ಇವರ ವರ್ತನೆಗಳು ಸರಿ ಇಲ್ಲದ್ದರಿಂದ ಮಠದಿಂದ ಹೊರಹಾಕಲ್ಪಟ್ಟಿದ್ದರು. ಐಷಾರಾಮಿ ಜೀವನ ಬದುಕುತ್ತಿರುವ ಇಂಥ ಸ್ವಾಮಿ ಸಮಾಜಕ್ಕೆ ಬೇಕಾ? ಎನ್ನುವ ಪ್ರಶ್ನೆ ಎದುರಾಗಿದ್ದರಿಂದ ಟ್ರಸ್ಟಿನ 13 ಜನ ಒಟ್ಟಿಗೆ ಕುಳಿತು ಸಮಾಜದ ಪೀಠದಿಂದ ವಿಮುಕ್ತಿಗೊಳಿಸಿದ್ದೇವೆ. ಅವರಿಗೆ ಪೀಠದ ಮೇಲೆ, ಸಮಾಜದ ಮೇಲೆ ಅಭಿಮಾನ ಇದ್ದರೆ, ಮರ್ಯಾದೆ ಇದ್ದರೆ ಮಠ ಖಾಲಿ ಮಾಡಲಿ” ಎಂದು ಆರೋಪಿಸಿದರು.

ಸಮಾಜದ ಮುಖಂಡ ಎಚ್ ಎಸ್ ನಾಗರಾಜ್ ಮಾತನಾಡಿ “ಎಂದೂ ಪಂಚಮಸಾಲಿ ಪೀಠಕ್ಕೆ ಬರದವರು, ಲೆಕ್ಕ ಕೇಳದವರು ಇಂದು ಬಂದು ಲೆಕ್ಕಪತ್ರ ಕೇಳುತ್ತಿದ್ದಾರೆ. ಇದೇ ಸ್ವಾಮೀಜಿ ಟ್ರಸ್ಟ್ ನಲ್ಲಿದ್ದು, ಎಂಟು ವರ್ಷದಿಂದ ಎಲ್ಲಿಗೆ ಹೋಗಿದ್ದರು. ಅಲ್ಲದೆ ಪೀಠಕ್ಕೆ ಸಂಬಂಧ ಇರದ ಈಗಾಗಲೇ ಕೂಡಲಸಂಗಮ ಪೀಠವನ್ನು ಹಾಳು ಮಾಡಿರುವವರು, ಇಲ್ಲಿ ಬಂದು ಲೆಕ್ಕ ಕೇಳುತ್ತಿದ್ದಾರೆ. ಇದೆಲ್ಲ ರಾಜಕೀಯ ಪ್ರೇರಿತ. ಇದರ ಹಿನ್ನೆಲೆಯಲ್ಲಿ ಶ್ರೀಗಳ ಪಾತ್ರವಿದ್ದು, ಇವರ ಬಗ್ಗೆ ಅಂದೇ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಬೈದಿದ್ದು ಸರಿಯಾಗಿತ್ತು. ಇದೇ ವಚನಾನಂದಶ್ರೀ ತಮ್ಮ ಗುಂಪುಗಾರಿಕೆಗಾಗಿ ಜೆಎಚ್ ಪಟೇಲರ, ಹರಿಹರ ಎಚ್ ಶಿವಪ್ಪನವರ ಕುಟುಂಬ ಒಡೆದಿದ್ದಾರೆ” ಎಂದು ಆರೋಪಿಸಿದರು.

1004108473

ಟ್ರಸ್ಟ್ ಹಿರಿಯ ಸದಸ್ಯ ಶಿರೂರು ಮಾತನಾಡಿ “ವಚನಾನಂದ ಶ್ರೀಗಳು ತಾವು ಸನ್ಯಾಸಿ ಅಲ್ಲ ಎನ್ನುತ್ತಾರೆ. ಇಂಥಹವರಿಗೆ ಪೀಠ ಏಕೆ. ತಮ್ಮ ಕೋಣೆಗೆ ಡಿಜಿಟಲ್ ಲಾಕರ್ ಗಳನ್ನು ಇಟ್ಟುಕೊಂಡಿದ್ದಾರೆ. ಐಷಾರಾಮಿ ಜೀವನಕ್ಕೆ ಕೋಟ್ಯಂತರ ಬೆಲೆಬಾಳುವ ಕಾರು, ವಿದೇಶಿ ಪ್ರವಾಸ ಮಾಡುತ್ತಿದ್ದು ಇದಕ್ಕೆಲ್ಲ ಸಮಾಜದ ಟ್ರಸ್ಟಿನಿಂದ ಹಣ ನೀಡುತ್ತಿಲ್ಲ. ಇವರಿಗೆ ಎಲ್ಲಿಂದ ಹಣ ಬರುತ್ತದೆ, ನಿಮ್ಮ ಆದಾಯದ ಮೂಲ ಏನು? ಎನ್ನುವ ಬಗ್ಗೆ ವಚನಾನಂದಶ್ರೀ ಲೆಕ್ಕ ನೀಡಲಿ” ಎಂದು ಮರುಪ್ರಶ್ನಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದಕ್ಷಿಣ ಉಪಚುನಾವಣೆ ಅಸಮಾಧಾನ; ಕಾಂಗ್ರೆಸ್ ಮುಸ್ಲಿಂ ಮುಖಂಡರ ರಾಜೀನಾಮೆ ಸೂಚನೆ?

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಪಂಚಮಸಾಲಿ ಯುವ ಘಟಕದ ಅಧ್ಯಕ್ಷ ಕೊಟ್ರೇಶ್, ಶಿವನಗೌಡ, ಚಂದ್ರಶೇಖರ ಪೂಜಾರ್, ಜ್ಯೋತಿ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.‌

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪೊಲೀಸರು ಇಷ್ಟೊಂದು ಭೀಕರ ಮತ್ತು ಕ್ರೂರವಾಗಿ ವರ್ತಿಸುವುದೇಕೆ?

ಸ್ವತಂತ್ರ ದೇಶದಲ್ಲಿ ತಮ್ಮ ಹಕ್ಕುಗಳಿಗಾಗಿ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಶಾಂತಿಯುತವಾಗಿ ಬೀದಿಗಿಳಿದ ಯುವಕ-ಯುವತಿಯರು,...

ರ‍್ಯಾಂಕ್ ಸಾಮರ್ಥ್ಯದ ಮಾನದಂಡವಲ್ಲ: ಮಕ್ಕಳ ವಿಕಾಸಕ್ಕೆ ಒತ್ತಡ ರಹಿತ ಕಲಿಕೆಯ ವಾತಾವರಣ ಅಗತ್ಯ

ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವುದು, ರ‍್ಯಾಂಕ್ ಪಡೆಯುವುದು ಅಥವಾ ಪರೀಕ್ಷೆಯಲ್ಲಿ ಶೇ.90ಕ್ಕಿಂತ...

ದಿನಸಿ ಬೆಲೆ ಏರಿಕೆ ಬರೆ; ಗ್ರಾಮೀಣ ಕುಟುಂಬಗಳ ಬಜೆಟ್‌ಗೆ ಕತ್ತರಿ

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲದ ಬೆಲೆ ಏರಿಕೆಯ...