ಆತಂಕದಲ್ಲಿದ್ದ ಗುಲಬರ್ಗಾ ವಿವಿ ವಿದ್ಯಾರ್ಥಿಗಳಿಗೆ ಕೊನೆಗೂ ಸಿಕ್ಕಿತು ‘ಫಲಿತಾಂಶ ಭಾಗ್ಯ’

Date:

ಗುಲಬರ್ಗಾ ವಿವಿಯಲ್ಲಿ ರಚನೆಯಾದ ‘ಪರೀಕ್ಷಾ ಸುಧಾರಣಾ ಉಪಸಮಿತಿ’ಯ ಕಾರ್ಯವೈಖರಿಯು ವಿದ್ಯಾರ್ಥಿಗಳಿಗೆ ಭರವಸೆಯನ್ನು ಹುಟ್ಟಿಸಿದೆ

ನೂತನ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯಾದ ಬಳಿಕ ಗುಲಬರ್ಗಾ ವಿಶ್ವವಿದ್ಯಾನಿಲಯದ ಪರೀಕ್ಷಾ ಕಾರ್ಯವಿಧಾನದಲ್ಲಿ ಆಗಿದ್ದ ಅಧ್ವಾನಗಳು ಕೊನೆಗೂ ಬಗೆಹರಿಯುತ್ತಿರುವ ಆಶಾದಾಯಕ ಬೆಳವಣಿಗೆಯಾಗಿದೆ. ಎಂಟು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಫಲಿತಾಂಶ ಹಾಗೂ ಉತ್ತರ ಪತ್ರಿಕೆಯ ವಿಚಾರದಲ್ಲಿ ಉಂಟಾಗಿದ್ದ ಸಮಸ್ಯೆಗಳು ಶೇ. 90ರಷ್ಟು ಬಗೆಹರಿದಿರುವುದಾಗಿ ವಿವಿಯ ಮೂಲಗಳು ಖಚಿತಪಡಿಸಿವೆ.

- Advertisement -

ಪರೀಕ್ಷಾ ಫಲಿತಾಂಶ ಗೊಂದಲಕ್ಕೆ ಶೇ. 60ರಷ್ಟು ವಿದ್ಯಾವಿದ್ಯಾನಿಲಯ, ಶೇ. 20ರಷ್ಟು ಕಾಲೇಜುಗಳ ಅವ್ಯವಸ್ಥೆ, ಶೇ. 20ರಷ್ಟು ಯುಯುಸಿಎಂಎಸ್‌ ಸಾಫ್ಟ್‌ವೇರ್‌ನಲ್ಲಾದ ದೋಷಗಳು ಕಾರಣವಾಗಿದ್ದವು. ಇದನ್ನು ಸರಿದಾರಿಗೆ ತರುವುದು ಸವಾಲಿನ ಸಂಗತಿಯಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ವಿಶ್ವವಿದ್ಯಾನಿಲಯಗಳ ಸಿಂಡಿಕೇಟ್‌ನಲ್ಲಿ ರಾಜಕೀಯ ಮುಖಂಡರು, ಅವರ ಬೆಂಬಲಿಗರೇ ತುಂಬಿರುತ್ತಿದ್ದರು. ಇದರಲ್ಲಿ ಕೊಂಚ ಬದಲಾವಣೆ ತಂದ ಸರ್ಕಾರ, ಸಿಂಡಿಕೇಟ್‌ನಲ್ಲಿ ಪ್ರಗತಿಪರ ಚಿಂತಕರು, ಹೋರಾಟಗಾರರನ್ನು ಸೇರಿಸಿತು. ಈ ವೇಳೆಗೆ ಗುಲಬರ್ಗಾ ವಿವಿಯ ಸಾವಿರಾರು ವಿದ್ಯಾರ್ಥಿಗಳು ವರ್ಷವೇ ಕಳೆದರೂ ಪರೀಕ್ಷಾ ಫಲಿತಾಂಶ ಪಡೆಯದೆ ಪರಿತಪಿಸುತ್ತಿದ್ದರು. ಸಿಂಡಿಕೇಟ್ ಸಭೆಯ ಒತ್ತಾಯದ ಮೇರೆಗೆ ಗುಲಬರ್ಗಾ ವಿವಿಯ ಸಿಂಡಿಕೇಟ್‌ನಲ್ಲಿ ‘ಪರೀಕ್ಷಾ ಸುಧಾರಣಾ ಉಪಸಮಿತಿ’ಯನ್ನು ರೂಪಿಸಲಾಯಿತು. ವಿದ್ಯಾರ್ಥಿಗಳ ಗೊಂದಲವನ್ನು ಪರಿಹರಿಸುವ ಗುರುತರ ಜವಾಬ್ದಾರಿ ಉಪಸಮಿತಿಯ ಮುಂದಿತ್ತು. ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟ ಕಾರಣ, ವಿವಿಯ ವಿದ್ಯಾರ್ಥಿಗಳ ಫಲಿತಾಂಶ ಗೊಂದಲವು ನಿಧಾನಕ್ಕೆ ಬಗೆಹರಿಯುತ್ತಿದೆ.

ಪತ್ರಕರ್ತ ಸಿದ್ದಪ್ಪ ಮೂಲಗೆ ಅವರನ್ನು ಸಬ್ ಕಮಿಟಿಯ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ರಾಘವೇಂದ್ರ ಎಂ.ಭೈರಪ್ಪ, ಶ್ರೀದೇವಿ ಎಸ್.ಕಟ್ಟಿಮನಿ, ಸಿದ್ದಪ್ಪ ಸುಳ್ಳದ ಮತ್ತು ಉದಯಕಾಂತ ಪಾಟೀಲ ಸದಸ್ಯರಾಗಿದ್ದರು. ಎರಡು ತಿಂಗಳ ಅವಧಿಯಲ್ಲಿ 12 ಸಿಂಡಿಕೇಟ್ ಸಭೆಗಳು, ಉಪಸಮಿತಿಯ 5 ಸಭೆಗಳು ಜರುಗಿರುವುದು ಅದರ ಕಾರ್ಯವೈಖರಿಗೆ ಕನ್ನಡಿ ಹಿಡಿದಿದೆ.

ಸುಮಾರು 1,000 ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ಕಳೆದ ಎರಡು ವರ್ಷಗಳಿಂದ ನಾಪತ್ತೆಯಾಗಿದ್ದವು. ಒಟ್ಟು 45 ಪಾಕೆಟ್‌ ಇಲ್ಲವಾಗಿದ್ದವು. ಅವನ್ನೆಲ್ಲವನ್ನೂ ಹುಡುಕಿಕೊಡದಿದ್ದರೆ ಪ್ರಕರಣ ದಾಖಲಿಸುವುದಾಗಿ ವಿವಿಯ ಸಿಬ್ಬಂದಿಗೆ ಸಿಂಡಿಕೇಟ್ ಉಪಸಮಿತಿ ಎಚ್ಚರಿಸಿತ್ತು.

ಸುಮಾರು 8,000-9,000 ವಿದ್ಯಾರ್ಥಿಗಳ ಫಲಿತಾಂಶ ಬಾಕಿ ಉಳಿದಿತ್ತು. ಈಗ 4,000 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ.

ಎನ್‌ಇಪಿ ಬಂದ ಮೇಲೆ ವಿದ್ಯಾರ್ಥಿಗಳ ಮರುಪರೀಕ್ಷೆಯೇ ಆಗಿರಲಿಲ್ಲ. ಮೂರು ವರ್ಷಗಳಿಂದ  ವಿದ್ಯಾರ್ಥಿಗಳು ಕಾಯುತ್ತಿದ್ದರು. ಈಗ ಮರುಪರೀಕ್ಷೆಗಳೂ ಜರುಗುತ್ತಿವೆ.

‘ಈದಿನ.ಕಾಂ’ ಜೊತೆ ಮಾತನಾಡಿದ ಉಪಸಮಿತಿಯ ಅಧ್ಯಕ್ಷ ಸಿದ್ದಪ್ಪ ಮೂಲಗೆ ಅವರು, “ಬಾಕಿ ಉಳಿದಿರುವ ನಾಲ್ಕರಿಂದ ಐದು ಸಾವಿರ ವಿದ್ಯಾರ್ಥಿಗಳ ಫಲಿತಾಂಶವನ್ನು ಇನ್ನೊಂದು ತಿಂಗಳೊಳಗೆ ಪ್ರಕಟಿಸುತ್ತೇವೆ. ವಿವಿ ಸಿಬ್ಬಂದಿ, ಕುಲಪತಿ, ಕುಲಸಚಿವರು, ಸಿಂಡಿಕೇಟ್ ಸದಸ್ಯರೆಲ್ಲರ ಸಹಕಾರದಿಂದ ಸಮಸ್ಯೆ ಬಗೆಹರಿಯುತ್ತಿದೆ” ಎಂದು ತಿಳಿಸಿದರು.

ಸಿಂಡಿಕೇಟ್ ಸಭೆಗಳ ಕುರಿತು ವಿವರಿಸಿದ ಅವರು, “ಸಾಮಾನ್ಯವಾಗಿ ಒಂದು ವರ್ಷದಲ್ಲಿ  8 ಸಿಂಡಿಕೇಟ್ ಸಭೆಗಳು ನಡೆಯುತ್ತವೆ. ಆದರೆ ಈ ಬಾರಿ ಗುಲಬರ್ಗಾ ವಿವಿಯಲ್ಲಿ ಎರಡರಿಂದ ಮೂರು ತಿಂಗಳ ಒಳಗೆ ಮುಖ್ಯ ಸಿಂಡಿಕೇಟ್‌ನ 12 ಸಭೆಗಳು, ಪರೀಕ್ಷಾ ಉಪಸಮಿತಿಯ 5 ಸಭೆಗಳು ನಡೆದಿವೆ” ಎಂದು ವಿವರಿಸಿದರು.

siddappa mulage
ಸಿದ್ದಪ್ಪ ಮೂಲಗೆ

ಇದನ್ನೂ ಓದಿರಿ: ಕರ್ನಾಟಕದ ಉತ್ತರ ಒಳನಾಡಿನಲ್ಲಿ ಐದು ದಿನ ಭಾರಿ ಚಳಿ: ಹವಾಮಾನ ಇಲಾಖೆ ಮುನ್ಸೂಚನೆ

ಕುಲಸಚಿವರಾದ ಪ್ರೊ.ಮೇಧಾವಿನಿ ಎಸ್. ಕಟ್ಟಿ ಮಾತನಾಡಿ, “ಕಳೆದ 2 ವರ್ಷಗಳಿಂದ ಫಲಿತಾಂಶ ಪ್ರಕಟವಾಗಿರಲಿಲ್ಲ. ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಾದ ತೊಡಕುಗಳೆಲ್ಲ ಬಗೆಹರಿದಿವೆ. ನಮ್ಮಲ್ಲಿ 183 ಕಾಲೇಜುಗಳಿದ್ದು, ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಅಲ್ಲಿನ ಗೊಂದಲಗಳನ್ನು ನಿವಾರಿಸುವ ಕೆಲಸ ಸಾಗುತ್ತಿದೆ. ಶೇ. 60 ಫಲಿತಾಂಶ ಬಂದಿರಲಿಲ್ಲ. ಹೀಗಾಗಿ ಪುನರ್ ಪರೀಕ್ಷೆ, ಪುನರ್ ಮೌಲ್ಯಮಾಪನ ನಡೆದಿರಲಿಲ್ಲ. ಉಪಸಮಿತಿ ಆದ ಮೇಲೆ ನಾವು ನಿರಂತರ ಸಭೆಗಳನ್ನು ನಡೆಸಿ ಶೇ.90ರಷ್ಟು ಫಲಿತಾಂಶ ಹೊರಬಿಟ್ಟಿದ್ದೇವೆ. ಶೇ.10ರಷ್ಟು ಫಲಿತಾಂಶ ಮಾತ್ರ ಬಾಕಿ ಇದೆ” ಎಂದು ಮಾಹಿತಿ ನೀಡಿದರು.

“ಕಾಲೇಜಿನ ಆಡಳಿತ ಮಂಡಳಿಗಳು ಬಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಿವೆ. ಕಳೆದುಹೋಗಿದ್ದ ಎಲ್ಲ ಉತ್ತರ ಪತ್ರಿಕೆಗಳು ಸಿಕ್ಕಿವೆ. ಇನ್ನೊಂದಿಷ್ಟು ಕೆಲಸಗಳು ಬಾಕಿ ಉಳಿದಿವೆ. ಅವುಗಳನ್ನು ಬಗೆಹರಿಸುವ ಕೆಲಸದಲ್ಲಿ ವಿವಿಯು ಸಕ್ರಿಯವಾಗಿದೆ” ಎಂದರು.

“ಎನ್‌ಇಪಿ ಬಂದು ಮೂರು ವರ್ಷ ಆಯಿತು. ಮರುಪರೀಕ್ಷೆ ಒಂದೂ ಆಗಿರಲಿಲ್ಲ. ಸಬ್‌ ಕಮಿಟಿ ಆದ ಮೇಲೆ ಮೊದಲ ಬ್ಯಾಚಿನ ಫಸ್ಟ್ ಮತ್ತು ಸೆಕೆಂಡರ್ ಸೆಮಿಸ್ಟರ್ ಮರುಪರೀಕ್ಷೆಗಳು ನಡೆದಿವೆ. ಮೊದಲ ಬ್ಯಾಚಿನ ನಾಲ್ಕನೇ ಸೆಮಿಸ್ಟರ್ ಮತ್ತು ಎರಡನೇ ಬ್ಯಾಚಿನ ಒಂದು ಹಾಗೂ ಎರಡನೇ ಸೆಮಿಸ್ಟರ್ ಪರೀಕ್ಷೆ, ಮೂರನೇ ಬ್ಯಾಚಿನ ಫಸ್ಟ್ ಸೆಮಿಸ್ಟರ್ ಮರುಪರೀಕ್ಷೆಗೆ ನೋಟಿಫಿಕೇಷನ್ ಹೊರಡಿಸಲಾಗಿದೆ. ಉನ್ನುಳಿದ ಸೆಮಿಸ್ಟರ್‌ನ ಪರೀಕ್ಷೆಗಳನ್ನು ಶೀಘ್ರವೇ ನಡೆಸಲಾಗುವುದು” ಎಂದು ಭರವಸೆ ನೀಡಿದರು.

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ...

‘ಸ್ಟಿಂಗ್ ಆಪರೇಷನ್’ ವಿವಾದ- ನನ್ನಿಂದಲೇ ತನಿಖೆ ಆರಂಭಿಸಿ: ಎಚ್.ಡಿ. ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ವೀಡಿಯೊ ಬಿಡುಗಡೆ ಮಾಡಲು ಯತ್ನಿಸಲಾಗಿದೆ...

ಬಳ್ಳಾರಿ | ವರದಕ್ಷಿಣೆ ಕಿರುಕುಳಕ್ಕೆ ಮೂವರು ಬಲಿ

ಬಳ್ಳಾರಿಯಲ್ಲಿ ವರದಕ್ಷಿಣೆ ಕಿರುಕುಳ ತಾಳಲಾರದೆ ತಾಯಿಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ತುಂಗಭದ್ರಾ...

ಶೃಂಗೇರಿ ಮತ ಎಣಿಕೆ ವಿಡಿಯೋ ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ

2023ರ ಚುನಾವಣೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯ ವೀಡಿಯೋ...