ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

Date:

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ.

ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್. ಬಸವಂತಪ್ಪ. ದಾವಣಗೆರೆ ಜಿಲ್ಲೆಯ ‘ಮಾಯಕೊಂಡ’ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿ, ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳಾಡಳಿತ ಸಚಿವರೂ ಆದ ಬಸವಂತಪ್ಪನವರು, “ಈ ಹೇಳಿಕೆ ನೀಡಿದ್ದು ಸರಿಯೇ?”- ಇದು ಕ್ಷೇತ್ರದ ಜನರ ಪ್ರಶ್ನೆ.

- Advertisement -

“ನಾನು ಹುಟ್ಟಿ ಬೆಳೆದ ಗಾಂಧಿನಗರದಲ್ಲಿ ನೆರೆಹೊರೆಯವರು ಮುಂದಿಡುವ ಬೇಡಿಕೆಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ದಾವಣಗೆರೆ ನಗರದಲ್ಲಿ ನನ್ನದೇನೂ ನಡೆಯುವುದಿಲ್ಲ. ಕೈಮುಗಿದು ಕಾಲಿಗೆ ಬೀಳುವೆ, ನನ್ನನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ” ಎಂದು ಅಂಗಲಾಚುವ ರೀತಿಯಲ್ಲಿ ಬಸವಂತಪ್ಪನವರು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಬೇಡಿಕೊಂಡಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿದುಕೊಂಡಿರುವುದೇ ಚುನಾವಣಾ ವ್ಯವಸ್ಥೆಯ ಮೇಲಿರುವ ಸಾರ್ವಜನಿಕರ ಅಪಾರ ನಂಬಿಕೆಯಿಂದ. ಆದರೆ, ಚುನಾವಣಾ ಆಯೋಗವು (ECI) ದೇಶಾದ್ಯಂತ ಜಾರಿಗೆ...

ಭಾರತದಲ್ಲಿ 23 ವರ್ಷ, ಭಾರತೀಯರ ಹೃದಯದಲ್ಲಿ ಸಾವಿರ ವರ್ಷ...

ʼನನ್ನನ್ನು ಕೊಲ್ಲಬಹುದು, ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲʼ ಎಂದು ಕೊನೆಯ ಪತ್ರದಲ್ಲಿ ಬರೆದಿದ್ದ ಭಗತ್‌ ಸಿಂಗ್ ವಿಚಾರಗಳು 2026ರಲ್ಲೂ ಬದುಕಿವೆ. ಅದಕ್ಕಾಗಿ ಇನ್ನೂ ಸಾವಿರಾರು ವರ್ಷ ಭಾರತೀಯರ ಹೃದಯಗಳಲ್ಲಿ ಬದುಕಿರುತ್ತಾರೆ. ಇಂದು...

ದಾವಣಗೆರೆಯ ಗಾಂಧಿನಗರದಲ್ಲಿ ಮಾದಿಗ ಸಮಾಜದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಾ, “ಪ್ರತಿ ಚುನಾವಣೆಯಲ್ಲೂ ಗಾಂಧಿ ನಗರದ ಮತಗಳು ಇಡಿಯಾಗಿ ಕಾಂಗ್ರೆಸ್‌ಗೆ ಬೀಳುತ್ತಿದ್ದವು. ಆಂತರಿಕ ಭಿನ್ನಾಭಿಪ್ರಾಯದಿಂದ ಉಪಚುನಾವಣೆಯಲ್ಲಿ ಕೆಲ ವ್ಯತ್ಯಾಸಗಳಾಗಿರುವುದು ನಿಜ. ಆದರೆ, ಮೋಸ ಮಾಡಿಲ್ಲ. ಇಲ್ಲಿನ ಸಮಸ್ಯೆ ಪರಿಹರಿಸುವ ಪ್ರಯತ್ನವನ್ನು ಮಲ್ಲಣ್ಣ (ಮಲ್ಲಿಕಾರ್ಜುನ್) ಮಾಡಿದರೆ ಸಾಯುವವರೆಗೂ ಜೊತೆಗೆ ನಿಲ್ಲುತ್ತೇವೆ. ಶಾಮನೂರು ಕುಟುಂಬ ನಮ್ಮನ್ನು ಬೆಳೆಸಿದೆ. ಅವರಿಗೆ ಚ್ಯುತಿ ಬರದಂತೆ ನಡೆದುಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಕಾಫಿ ಕಟ್ಟೆಯಲ್ಲಿ ಕುಳಿತು ಆಡುವ ಮಾತುಗಳಿಗೆ ಕಿವಿಗೊಡುವುದರ ಜೊತೆಗೆ ನಮ್ಮ ನೋವುಗಳನ್ನು ಆಲಿಸಿ. ಮುಂದಿನ ಚುನಾವಣೆಯಲ್ಲಿ ಗಾಂಧಿನಗರದಲ್ಲಿ ಕಾಂಗ್ರೆಸ್‌ಗೆ ಕಡಿಮೆ ಮತಗಳು ಬಿದ್ದರೆ ರಾಜಕೀಯ ನಿವೃತ್ತಿ ಘೋಷಣೆ ಮಾಡುವೆ” ಎಂದು ಭಾವುಕರಾಗಿ ಮಾತನಾಡಿದ್ದಾರೆ.

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಲ್ಲಿ ಗೆದ್ದು ಬರುವ ಅಸ್ಪೃಶ್ಯ ಸಮುದಾಯಗಳು, ಯಾವಾಗಲೂ ಬಲಾಢ್ಯ ಸಮುದಾಯಗಳ ಮರ್ಜಿಯಲ್ಲಿ ಇರುವ ರಾಜಕೀಯ ವ್ಯವಸ್ಥೆ ರೂಪುಗೊಂಡಿದ್ದರ ಹಿಂದೆ ಕರಾಳ ಚರಿತ್ರೆ ಇದೆ. ದಲಿತರು ಸ್ವಾಭಿಮಾನಿಗಳಾಗಬೇಕು, ಸಮುದಾಯದ ಪ್ರತಿನಿಧಿಗಳನ್ನು ಸಮುದಾಯದ ಜನರಷ್ಟೇ ಆಯ್ಕೆ ಮಾಡಬೇಕು ಎಂದು ಹೋರಾಟ ಮಾಡಿದ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ಒಂದು ಮಟ್ಟಿಗಿನ ಗೆಲುವನ್ನೂ ಸಾಧಿಸಿದ್ದರು. ಆದರೆ ಇದರಿಂದ ಹಿಂದೂ ಸಮಾಜ ಒಡೆದು ಹೋಗುತ್ತದೆ ಎಂದು ಭಾವಿಸಿದ ಗಾಂಧೀಜಿ, ಪ್ರತ್ಯೇಕ ಮೀಸಲು ಕ್ಷೇತ್ರಗಳ ವಿರುದ್ಧ ಉಪವಾಸ ಕೂತರು. ಆ ನಂತರ ಅಂಬೇಡ್ಕರ್ ಅವರು ತಮ್ಮ ನಿಲುವು ಸಡಿಲಿಸಬೇಕಾಯಿತು. ಸ್ವಾತಂತ್ರ್ಯ ಭಾರತದಲ್ಲಿ ಸ್ಪೃಶ್ಯರನ್ನು ಅವಲಂಬಿಸಿಯೇ ಮೀಸಲು ಕ್ಷೇತ್ರಗಳಲ್ಲಿ ಗೆದ್ದು ಬರುವ ರಾಜಕೀಯ ವ್ಯವಸ್ಥೆ ಉಳಿಯಿತು. ಅಂದಿನಿಂದ ಇಂದಿನವರೆಗೂ ಅಸ್ಪೃಶ್ಯ ಸಮುದಾಯಗಳ ರಾಜಕಾರಣಿಗಳು ಸ್ಪೃಶ್ಯ ಸಮುದಾಯಗಳ ಮರ್ಜಿಯಲ್ಲಿ ಇರಬೇಕಾದ ದುರಂತವನ್ನು ಕಾಣುತ್ತಿದ್ದೇವೆ.

ಇದನ್ನೂ ಓದಿರಿ: ಅಂಬೇಡ್ಕರ್ ನಿಂದನೆಯೇ ಹಿಂದುತ್ವ ಗುಂಪಿನ ಅಜೆಂಡಾ; ನವ ಮಾದರಿ ಅಸ್ಪೃಶ್ಯತೆ ಹೆಚ್ಚಳ

ಮಾಯಕೊಂಡ ಕ್ಷೇತ್ರದಿಂದ ಆಯ್ಕೆಯಾಗಿ ಬಂದಿರುವ ಬಸವಂತಪ್ಪನವರದ್ದು ಇದೇ ಕಥೆಯೇ? ನಿಜಕ್ಕೂ ಅವರು ಸ್ಪೃಶ್ಯರ ಮರ್ಜಿಯಲ್ಲಿ ಇರಬೇಕಾದ ಸ್ಥಿತಿ ಇದೆಯೇ? ಅದಕ್ಕಾಗಿಯೇ ಇಂತಹ ದೈನೇಸಿ ಹೇಳಿಕೆ ನೀಡಿದ್ದಾರೆಯೇ? ಪ್ರಬಲ ವೀರಶೈವ-ಲಿಂಗಾಯತ ಸಮುದಾಯದ ನಾಯಕರಾಗಿದ್ದ ಶಾಮನೂರು ಶಿವಶಂಕರಪ್ಪನವರ ಫ್ಯಾಮಿಲಿಯ ಆಣತಿ ಮೀರಿ ಹೋಗಲು ದಾವಣಗೆರೆಯಲ್ಲಿ ಯಾರಿಗೂ ಸಾಧ್ಯವಿಲ್ಲವೇ?

-ಹೀಗೆ ಪ್ರಶ್ನೆಗಳನ್ನು ಹಾಕಿಕೊಂಡರೆ, “ಬಸವಂತಪ್ಪನವರು ಇಷ್ಟು ಅಸಹಾಯಕರಾಗಿ ಬೇಡಿಕೊಳ್ಳುವ ಅಗತ್ಯವಿರಲಿಲ್ಲ” ಎಂಬ ಟೀಕೆಗಳು ಬರುತ್ತವೆ. “ಕ್ಷೇತ್ರದಲ್ಲಿ ಕಾಂಗ್ರೆಸ್ ಬಲವಾಗಿದೆ. ಮಾಯಕೊಂಡ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಕೋಟೆ ಗಟ್ಟಿಯಾಗಿದೆ” ಎನ್ನುತ್ತಾರೆ ಸ್ಥಳೀಯರು.

‘ಈದಿನ ಡಾಟ್ ಕಾಮ್‌’ಗೆ ಪ್ರತಿಕ್ರಿಯಿಸಿದ ದಾವಣಗೆರೆಯ ವಕೀಲ ಮತ್ತು ನಾಯಕ ಸಮುದಾಯದ ಮುಖಂಡರಾದ ಓಬಳೇಶ್ ಅವರು ಹೀಗೆ ಹೇಳುತ್ತಾರೆ: “ಬಸವಂತಪ್ಪನವರು ಚುನಾವಣೆಗೂ ಮುಂಚೆ ಜನಸಂಪರ್ಕ ಸಾಧಿಸಿದ್ದರು. ಯಾವುದಾದರೂ ಸಣ್ಣಪುಟ್ಟ ಗಲಾಟೆಗಳಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದವರಿಗೆ ಸಹಾಯ ಮಾಡುತ್ತಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. 2018ರಲ್ಲಿ ಟಿಕೆಟ್ ಸಿಕ್ಕರೂ ಕಡಿಮೆ ಅಂತರದಲ್ಲಿ ಸೋತರು. 2023ರಲ್ಲಿ ಎಂಎಲ್‌ಎ ಆಗುವ ಅವಕಾಶ ದೊರಕಿತು. ಬಿಜೆಪಿ ಸರ್ಕಾರದ ಕೋಮುರಾಜಕಾರಣ ಮತ್ತು ದುರಾಡಳಿತದಿಂದಾಗಿ ಎಲ್ಲ ಸಮುದಾಯಗಳು ಒಂದಾಗಿ ಬಸವಂತಪ್ಪನವರನ್ನು ಬೆಂಬಲಿಸಿದರು. ಎಸ್‌ಸಿ- ಎಸ್‌ಟಿ ಸಮುದಾಯಗಳು ಮಾಯಕೊಂಡ ಕ್ಷೇತ್ರದಲ್ಲಿ ಪ್ರಬಲವಾಗಿವೆ. ಅದರಲ್ಲೂ ಮಾದಿಗ ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿದೆ. ಕಾಂಗ್ರೆಸ್‌ ನಿಂದ ಯಾರನ್ನೇ ನಿಲ್ಲಿಸಿದರೂ ಗೆಲುವಿನ ಸಮೀಪಕ್ಕೆ ಬರುವಷ್ಟು ಪಕ್ಷದ ಖಾಯಂ ಮತಗಳಿವೆ. ಅಹಿಂದ ಮತಗಳ ಶಕ್ತಿಯನ್ನು ಮರೆಯಬಾರದು.”

ಮುಂದುವರಿದು, “ಬಸವಂತಪ್ಪನವರಿಗೆ ಸ್ವಂತಿಕೆ ಬೇಕು. ಸೈದ್ಧಾಂತಿಕವಾಗಿ ಬಲವಾಗಬೇಕು. ಅಧಿಕಾರ ಬೇಕೆಂದು ಅವರನ್ನು ಅಂಗಲಾಚಬಾರದು. ಲಿಂಗಾಯತರ ಓಲೈಕೆ ಮಾಡುವ ಅಗತ್ಯವೂ ಇಲ್ಲಿಲ್ಲ. ಲಿಂಗಾಯತ ಸಮುದಾಯದ ಮತಗಳನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ, ಬಸವಂತಪ್ಪ ಗೆಲ್ಲುವುದಿಲ್ಲ ಎಂದು ಭಾವಿಸಬೇಕಿಲ್ಲ. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಿಂದ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ಬಸವಂತಪ್ಪನರಿಗೆ ಸದಾ ಇರಬೇಕು. ಲಿಂಗಾಯತ ನಾಯಕರು ಹೇಳಿದವರಿಗೆ ಮತ ಹಾಕಬೇಕೆಂಬ ಸ್ಥಿತಿಯೇನೂ ಕ್ಷೇತ್ರದಲ್ಲಿ ಇಲ್ಲ. ಹೀಗಾಗಿ ಹಿಂದುಳಿದ ಸಮುದಾಯಗಳ ಜೊತೆ ಇವರು ನಿಲ್ಲಬೇಕು” ಎಂದರು.

“ಲಿಂಗಾಯತರನ್ನು ಓಲೈಕೆ ಮಾಡಿದರಷ್ಟೇ ಗೆಲ್ಲುತ್ತೇವೆ ಎಂದು ಭಾವಿಸುವುದು ತಪ್ಪಾಗುತ್ತದೆ. ಶಾಮನೂರು ಶಿವಶಂಕರಪ್ಪನವರಿಗೆ ಸಡ್ಡು ಹೊಡೆದು ಶಿವಮೂರ್ತಿ ನಾಯ್ಕ್ ಅವರು ಕಾಂಗ್ರೆಸ್‌ನಿಂದ ಗೆದ್ದುಬಂದಿದ್ದರು. ಈ ಉದಾಹರಣೆ ನಮ್ಮ ಮುಂದೆ ಇದೆ. ಶಿವಮೂರ್ತಿಯವರು ಲಂಬಾಣಿ. ಅವರು ಸ್ಪೃಶ್ಯ ಸಮುದಾಯ ಎಂಬ ಕಾರಣಕ್ಕೆ ಕ್ಷೇತ್ರದ ಜನ ಗೆಲ್ಲಿಸಿದರೆಂದು ಭಾವಿಸಬೇಕಿಲ್ಲ. ಕಾಂಗ್ರೆಸ್ ಪಕ್ಷವನ್ನು ನೋಡಿ ವೋಟ್ ಬೀಳುತ್ತವೆ. ಶಾಮನೂರು ಮಾಸ್ ಲೀಡರ್ ಆಗಿದ್ದ ಕಾರಣ, ಅವರು ಹೇಳಿದವರಿಗೆ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆ ಇತ್ತು. ಅವರ ಫ್ಯಾಮಿಲಿಯ ಸುತ್ತ ಗಿರಕಿ ಹೊಡೆಯುವುದು ಇದೇ ಕಾರಣಕ್ಕೆ. ಆದರೆ ಸಾಮಾನ್ಯ ಕಾರ್ಯಕರ್ತರು ಮತ್ತು ಮತದಾರರ ಮನಸ್ಥಿತಿ ಬೇರೆಯೇ ಇದೆ” ಎಂದು ವಿವರಿಸುತ್ತಾರೆ.

ಇದನ್ನೂ ಓದಿರಿ: ಗಾಡ್ಗೀಳ್‌, ಕಸ್ತೂರಿ ರಂಗನ್ ವರದಿಗಳು ಹೇಳುವುದೇನು? ವಿರೋಧವೇಕೆ?

“ಕ್ಷೇತ್ರದಲ್ಲಿ ಲಿಂಗಾಯತರು ಬಿಜೆಪಿಗೆ ಮತ ಹಾಕುತ್ತಾರೆ. ಲಿಂಗಾಯತ ನಾಯಕರು ಹೇಳಿದವರಿಗೆ ಕಾಂಗ್ರೆಸ್ ಟಿಕೆಟ್ ಕೊಡುತ್ತದೆ ಎಂಬುದು ನೆಪವಷ್ಟೇ. ಜಾಗೃತಿ ಮೂಡಿಸುವಂತಹ ನಾಯಕ ಬೇಕೆಂದು ಅಹಿಂದ ಸಮುದಾಯ ಇಲ್ಲಿ ಬಯಸುತ್ತಿದೆ. ಸಮುದಾಯದ ಪರ ನಿಲ್ಲುವವರು ಬೇಕಿದ್ದಾರೆ. ಬಸವಂತಪ್ಪ ಅವರು ಕಾಲಿಗೆ ಬೀಳುವುದು ತಪ್ಪು ಸಂದೇಶ ನೀಡಿದಂತಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

“ಶಾಮನೂರು ಅಂದರೆ ದಾವಣಗೆರೆ, ದಾವಣಗೆರೆ ಅಂದರೆ ಶಾಮನೂರು ಎಂಬುದು ಬಹುದೊಡ್ಡ ಮಿಥ್. ಜನರಿಗೆ ಹೀಗೆ ನಂಬಿಸಲಾಗಿದೆ. ಕಳೆದ ಉಪಚುನಾವಣೆಯಲ್ಲಿ ಮುಸ್ಲಿಂ ಮತದಾರರು ಬಹುತೇಕ ತಿರುಗಿಬಿದ್ದರು. ಲಿಂಗಾಯತ ಸಮುದಾಯ, ಒಂದು ಚುನಾವಣೆ ಮಟ್ಟಿಗೆ ಶಾಮನೂರು ಫ್ಯಾಮಿಲಿ ಪರ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ನಿಂತರು. ಇಲ್ಲವಾಗಿದ್ದರೆ ಸಮರ್ಥ್ ಶಾಮನೂರು ಖಚಿತವಾಗಿ ಸೋಲುತ್ತಿದ್ದರು. ಆದರೆ ಮುಂದಿನ ಚುನಾವಣೆಯಲ್ಲಿಯೂ ಸಮರ್ಥ ಪರವಾಗಿ ಬಿಜೆಪಿ ಮತದಾರರು ನಿಲ್ಲುತ್ತಾರೆಂಬ ಯಾವುದೇ ಖಚಿತತೆ ಇಲ್ಲ. ವಂಶ ರಾಜಕಾರಣದ ಮೇಲೆ ಜನಸಾಮಾನ್ಯರಲ್ಲಿ ದೊಡ್ಡ ಪ್ರತಿರೋಧವಿದೆ” ಎನ್ನುವ ಅವರು, “ಅಸಹಾಯಕ ಸಮುದಾಯಗಳ ಜೊತೆ ನಿಲ್ಲುವ ಸಾಮರ್ಥ್ಯ ಇಲ್ಲವಾದರೆ ಬಸವಂತಪ್ಪನವರನ್ನು ಏಕೆ ಗೆಲ್ಲಿಸಬೇಕು? ಮಿನಿಸ್ಟರ್ ಪೋಸ್ಟ್ ಶಾಶ್ವತವಲ್ಲ. ಏನಾದರೂ ಕೆಲಸ ಮಾಡಿದರಷ್ಟೇ ಜನ ನೆನಪಿಟ್ಟುಕೊಳ್ಳುತ್ತಾರೆ. ಪ್ರಯತ್ನ ಮಾಡಿ, ಏನೂ ಮಾಡಲು ಆಗದಿದ್ದರೆ ಬೇರೆಯ ಮಾತು. ಆದರೆ ಕೆಲಸ ಮಾಡಲು ಪ್ರಯತ್ನಗಳನ್ನೇ ಮಾಡದೆ, ಇನ್ನೊಬ್ಬರ ಕಾಲಿಗೆ ಬೀಳುತ್ತೇನೆ ಎನ್ನುವುದು ಸರಿಯಲ್ಲ. ಇರುವ ಅಧಿಕಾರ ಬಳಸಿಕೊಂಡು ಏನಾದರೂ ಕೆಲಸ ಮಾಡಬೇಕಲ್ಲವೇ?” ಎಂದು ಪ್ರಶ್ನಿಸುತ್ತಾರೆ.

ಕಾಂಗ್ರೆಸ್ ಮುಖಂಡ ಡಿ. ಟಿಪ್ಪಣ್ಣ ಪ್ರತಿಕ್ರಿಯಿಸಿ, “ಮಾಯಕೊಂಡ ಕ್ಷೇತ್ರ ಬೇರೆ. ದಾವಣಗೆರೆ ಬೇರೆ. 2023ರಿಂದಲೂ ಶಾಮನೂರು ಅವರ ಫ್ಯಾಮಿಲಿಯು ಬಸವಂತಪ್ಪನವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಈ ಕಾರಣಕ್ಕೆ ನೋವಿನಿಂದ ಮಾತನಾಡಿದ್ದಾರೆ. ಆದರೆ ಇದನ್ನು ಹೇಳಿಕೊಳ್ಳುವ ಅಗತ್ಯವಿಲ್ಲ. ಬಸವಂತಪ್ಪನವರು ಸಚಿವರಾಗಿದ್ದಕ್ಕೆ ಶಾಮನೂರು ಕುಟುಂಬವೇನೂ ಕಾರಣವಲ್ಲ. ಅವರು ಸಹಾಯ ಮಾಡಿದ್ದೂ ಇಲ್ಲ. ದಲಿತ ಕೋಟಾದಲ್ಲಿ ಸಚಿವ ಸ್ಥಾನ ದೊರೆತಿದೆ. ಎಂಎಲ್‌ಎ ಆಗುವ ಮುಂಚಿನಿಂದಲೂ ಶಾಮನೂರು ಫ್ಯಾಮಿಲಿ ಇವರೊಂದಿಗೆ ವಿಶ್ವಾಸದಿಂದ ಇಲ್ಲ. ಬಸವಂತಪ್ಪ ಅಹಿಂದ ಸಮುದಾಯಗಳನ್ನು ಬಲಪಡಿಸಿಕೊಳ್ಳಬೇಕು. ಈ ಹಿಂದೆ ಕಾರ್ಯಕರ್ತರಿಂದಾಗಿ, ಶಿವಮೂರ್ತಿಯವರು ಗೆದ್ದಿದ್ದರು ಎಂಬುದನ್ನು ಬಸವಂತಪ್ಪ ಮರೆಯಬಾರದು. ಸೈದ್ಧಾಂತಿಕ ಬಲ ಇದೆ. ಹೆದರುವ ಅಗತ್ಯವಿಲ್ಲ” ಎಂದು ತಿಳಿಸಿದರು.

ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಆಲೂರು ಲಿಂಗರಾಜು ಅವರು, “ಉನ್ನತ ಹುದ್ದೆಯಲ್ಲಿರುವ ಬಸವಂತಪ್ಪ ಅವರು ಎಸ್‌.ಎಸ್. ಮಲ್ಲಿಕಾರ್ಜುನ ಅವರ ಮುಂದೆ ಅಸಹಾಯಕತೆ ತೋರಿಸುವುದು ದಲಿತರ ಸ್ವಾಭಿಮಾನಕ್ಕೆ ದಕ್ಕೆ ತರುತ್ತದೆ” ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿರಿ: ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

“ಇವರದ್ದು ಏನೂ ನಡೆಯುವುದಿಲ್ಲ ಎಂದು ತೋರಿಸಿಕೊಂಡಿದ್ದಾರೆ. ಮಂತ್ರಿಗಳೇ ಹೀಗಾದರೆ ಜನಸಾಮಾನ್ಯರನ್ನು ಯಾರು ಕಾಪಾಡುತ್ತಾರೆ ಎಂಬುದು ಇಲ್ಲಿನ ಪ್ರಶ್ನೆ. ಇವರು ನಿಶಕ್ತರಾ ಎಂಬ ಸಂಶಯ ಮೂಡುತ್ತದೆ. ಧೈರ್ಯ ತೋರಬೇಕು. ಸ್ವಾಭಿಮಾನದ ವಿಚಾರವಿದು.  ಇಲ್ಲಿ ದಲಿತರ ಮತಗಳು ಹೆಚ್ಚಾಗಿವೆ. ನಮ್ಮ ದಲಿತರ ಮತಗಳು ಶಾಮನೂರು ಫ್ಯಾಮಿಲಿಗೂ ಬೇಕು. ಹಾಗೆ ನೋಡಿದರೆ ಎಸ್‌ಸಿ, ಎಸ್‌ಟಿ ಬಲವನ್ನು ನೋಡಿ ಶ್ಯಾಮನೂರು ಫ್ಯಾಮಿಲಿ ಹೆದರಬೇಕೇ ಹೊರತು, ಬಸವಂತಪ್ಪನಲ್ಲ” ಎನ್ನುವ ಅವರು, “ಮೇಲ್ಮರ್ಗದ ಜನ ಬಿಜೆಪಿಗೆ ವೋಟ್ ಹಾಕುತ್ತಿದ್ದಾರೆ. ಹಿಂದುಳಿದ ಸಮುದಾಯಗಳು ಕಾಂಗ್ರೆಸ್ ಜೊತೆ ಇವೆ ಎಂಬುದು ವಾಸ್ತವ. ಸಚಿವ ಹುದ್ದೆಗೆ ಇವರು ದಕ್ಕೆ ತರಬಾರದು” ಎಂದು ಮನವಿ ಮಾಡಿದರು.

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ದಸರಾ: ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗೆ ಅಧಿಕೃತ ಆಹ್ವಾನ

ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಆಯ್ಕೆಯಾಗಿರುವ ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗೆ...

ಬೀದರ್‌ | ಭಗತ್‌ ಸಿಂಗ್‌ ಜಯಂತಿ : ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್ ವಿತರಣೆ

ಭಗತ್‌ ಸಿಂಗ್‌ ಅವರು ಕೇವಲ 23ನೇ ವಯಸ್ಸಿನಲ್ಲೇ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ...

ಭಾರತದಲ್ಲಿ 23 ವರ್ಷ, ಭಾರತೀಯರ ಹೃದಯದಲ್ಲಿ ಸಾವಿರ ವರ್ಷ ಬದುಕುವ ಭಗತ್ ಸಿಂಗ್

ʼನನ್ನನ್ನು ಕೊಲ್ಲಬಹುದು, ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲʼ ಎಂದು ಕೊನೆಯ...

ಬೀದರ್‌ | ಬರ : ಪ್ರತಿ ಎಕರೆಗೆ ₹50 ಸಾವಿರ ಪರಿಹಾರ, ರೈತರ ಸಾಲ ಮನ್ನಾಗೆ ಆಗ್ರಹಿಸಿ ರೈತರಿಂದ ಬೈಕ್‌ ರ‍್ಯಾಲಿ

ರೈತರು ಬೆಳೆಯುವ ಎಲ್ಲ ಬೆಳೆಗಳಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕಾನೂನುಬದ್ಧ...