ಚಿಕ್ಕಮಗಳೂರು | ಎಸ್ಟೇಟ್ ಮಾಲೀಕರ ಕಿರುಕುಳ – ಕಾರ್ಮಿಕರ ಬದುಕಿಗೆ ಮುಕ್ತಿಯೆಲ್ಲಿ?

Date:

ಎಸ್ಟೇಟ್‌ಗಳಲ್ಲಿ ದುಡಿಯುವ ಕೂಲಿ ಕಾರ್ಮಿಕರ ಬದುಕು ಇಂದಿಗೂ ಅನೇಕ ಸವಾಲುಗಳಿಂದ ಕೂಡಿದೆ. ಬೆಳಗ್ಗಿನಿಂದ ಸಂಜೆಯವರೆಗೆ ಬಿಸಿಲು, ಮಳೆ ಎನ್ನದೆ ದುಡಿಯುವ ಕಾರ್ಮಿಕರಿಗೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆಯೇ ಎಂಬ ಗಂಭೀರವಾದ ಪ್ರಶ್ನೆ ಎದುರಾಗಿದೆ. ಮಲೆನಾಡಿನ ಭಾಗದ ತೋಟದಲ್ಲಿ ಟೀ, ಕಾಫಿ, ಕಾಳುಮೆಣಸು, ಏಲಕ್ಕಿ, ಅಡಿಕೆ ಸೇರಿದಂತೆ ವಿವಿಧ ಫಸಲುಗಳನ್ನು ಕೊಯ್ಲು ಮಾಡುತ್ತಾ ಸಾವಿರಾರು ಕಾರ್ಮಿಕರು ತಮ್ಮ ಬದುಕಿಗಾಗಿ ದುಡಿಯುತ್ತಿದ್ದಾರೆ. 

- Advertisement -
Screenshot 2026 11 28 12 27 48 89 7352322957d4404136654ef4adb64504 1

ದುಡಿಮೆಗೆಗಾಗಿ ಹೊರ ರಾಜ್ಯಗಳಿಂದ ಮನೆ, ಮಕ್ಕಳನ್ನು ಬಿಟ್ಟು ವಲಸೆ ಬಂದು ಕಡಿಮೆ ವೇತನಕ್ಕೆ ಜೀವನ ನಡೆಸುತ್ತಿದ್ದಾರೆ. ದುಡಿಮೆಗೆ ತಕ್ಕ ಸಂಬಳ ಸಿಗದಿರುವುದು, ಕೆಲಸದ ಸ್ಥಳದಲ್ಲಿ ಕಿರುಕುಳ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಕಾರ್ಮಿಕರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಅದೇ ಪರಿಸ್ಥಿತಿಯಲ್ಲಿ ಪ್ರವಾಸಿ ತಾಣವಾಗಿರುವ ಚಿಕ್ಕಮಗಳೂರು ಜಿಲ್ಲೆಯ ಬಸಗೂಡು ಗ್ರಾಮದ ಬ್ರಹ್ಮಗಿರಿ ಕಾಫಿ ಎಸ್ಟೇಟ್ ನಲ್ಲಿ ಶುಕ್ರವಾರ ನಡೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷೇತ್ರ ಮರುವಿಂಗಡಣೆಯ ಹಿಂದಿರುವ ಬಲಪಂಥೀಯ ರಾಜಕಾರಣದ ಗುಪ್ತ ಕಾರ್ಯಸೂಚಿ

ಕ್ಷೇತ್ರ ಮರುವಿಂಗಡಣೆ ಕೇವಲ ಲೋಕಸಭಾ ಸ್ಥಾನಗಳ ಹೆಚ್ಚಳವಲ್ಲ; ಅದು ದೇಶದ ರಾಜಕೀಯ ಅಧಿಕಾರದ ಹಂಚಿಕೆ, ಒಕ್ಕೂಟ ವ್ಯವಸ್ಥೆ ಮತ್ತು ಸಾಮಾಜಿಕ ನ್ಯಾಯದ ಭವಿಷ್ಯವನ್ನು ನಿರ್ಧರಿಸುವ ಪ್ರಕ್ರಿಯೆ. ಕ್ಷೇತ್ರಗಳ ಗಡಿ ಬದಲಾವಣೆಯಿಂದ ದಲಿತ, ಆದಿವಾಸಿ,...

ಗುಳೇದಗುಡ್ಡ | ತಾಲೂಕಾಗಿ ಹತ್ತು ವರ್ಷ ಕಳೆದರೂ ಭೂ...

ಗುಳೇದಗುಡ್ಡ ತಾಲೂಕು ರಚೆನೆಯಾಗಿ ಹತ್ತು ವರ್ಷ ಕಳೆದಿದೆ. ತಾಲೂಕು ವ್ಯಾಪ್ತಿಯ ಪಟ್ಟಣ ಹಾಗೂ ಗ್ರಾಮಗಳಿಗೆ ಸಂಬಂಧಿಸಿದ ಭೂದಾಖಲೆಗಳು ಬಾದಾಮಿ ತಹಸೀಲ್ದಾರ್ ಕಚೇರಿ ಮತ್ತು ಗದಗ ರಸ್ತೆಯ ಎಪಿಎಂಸಿ ಸಮೀಪದ ಕಚೇರಿಯಲ್ಲಿ ಸಂಗ್ರಹವಾಗಿವೆ....

ಸುಪ್ತ ಆಯಾಸದ ಹಿಂದೆ ಅಡಗಿರುವ ರಕ್ತಹೀನತೆ: ಕರ್ನಾಟಕದ ಅರ್ಧದಷ್ಟು...

ದೈನಂದಿನ ಒತ್ತಡ, ನಿದ್ರೆಯ ಕೊರತೆ ಅಥವಾ ಬಿಡುವಿಲ್ಲದ ಜೀವನಶೈಲಿಯೆಂದು ನಿರ್ಲಕ್ಷಿಸುವ ಆಯಾಸದ ಹಿಂದೆ ರಕ್ತಹೀನತೆ ಅಡಗಿರಬಹುದು. ಕರ್ನಾಟಕದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಶೇ. 50ಕ್ಕಿಂತ ಹೆಚ್ಚು ಮಂದಿ ರಕ್ತಹೀನತೆಯಿಂದ ಬಳಲುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ದೈನಂದಿನ...
IMG 20261128 WA0310

ಘಟನೆ ವಿವರ: ತಮಿಳುನಾಡಿನಿಂದ ಕೂಲಿ ಕೆಲಸಕ್ಕಾಗಿ ವಲಸೆ ಬಂದಿರುವ 34 ಕಾರ್ಮಿಕರು ಬಸಗೋಡು ವ್ಯಾಪ್ತಿಯ ಬ್ರಹ್ಮಗಿರಿ ಎಸ್ಟೇಟ್‌ನಲ್ಲಿ ಕೆಲಸ ನಿರ್ವಹಿತ್ತಿದ್ದಾರೆ. ಮುಂಜಾನೆ ಎದ್ದು ತೋಟಗಳಲ್ಲಿ ಕೆಲಸ ನಿರ್ವಹಿಸಿ ಮತ್ತೆ ತಮ್ಮ ಲೈನ್ ಮನೆಗಳಲ್ಲಿ ನೆಲೆಸುತ್ತಿದ್ದರು. ಅಲ್ಲಿ ಅವರಿಗೆಲ್ಲ ಸಿಗುತ್ತಿದ್ದದ್ದು ದಿನಕ್ಕೆ 200 ರಿಂದ 300 ರೂಪಾಯಿ ವೇತನ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸಿಗುತ್ತಿರುವ ವೇತನ ತಮ್ಮ ಹೊಟ್ಟೆ ಬಟ್ಟೆಗೆ ಸಾಲುತ್ತಿಲ್ಲ, ವೇತನವನ್ನು ಹೆಚ್ಚಿಸುವಂತೆ ಎಸ್ಟೇಟ್ ಮಾಲೀಕರನ್ನು ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಾಲೀಕ ಅಲ್ಲಿರುವ ಕಾರ್ಮಿಕರ ಮೇಲೆ ಮನಸ್ಸೋಯಿಚ್ಚೆ ಹಲ್ಲೆ ನಡೆಸಿದ್ದಾನೆ”.

ಈ ವಿಚಾರವಾಗಿ ಕಾರ್ಮಿಕರ ಯಜಮಾನ “ನಾವು ತಮಿಳುನಾಡಿನಿಂದ 34 ಜನ ಬಂದಿದ್ದೇವೆ ಅಷ್ಟು ದೂರದಿಂದ ರಾಜ್ಯ ಬಿಟ್ಟು ಮತ್ತೊಂದು ರಾಜ್ಯಕ್ಕೆ ಬಂದಿದ್ದೇವೆ ಇವತ್ತಿನ ದಿನಮಾನಗಳಲ್ಲಿ ಎಲ್ಲಾ ವಸ್ತುಗಳು ಹಾಗೂ ಅಡುಗೆ ಸಾಮಾಗ್ರಿಗಳ ಬೆಲೆ ಹೆಚ್ಚಾಗಿದೆ ಹಾಗಾಗಿ ವೇತನ ಜಾಸ್ತಿ ಮಾಡಿ ಇಲ್ಲವಾದರೆ ನಾವೆಲ್ಲರೂ ಬೇರೆ ಕಡೆ ಕೆಲಸ ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ವೇತನ ಹೆಚ್ಚಿಸಲು ಸಾಧ್ಯವಿಲ್ಲ ಬೇರೆ ಕಡೆ ಹೋಗುವುದಾದರೆ ಇಲ್ಲಿ ಹಣ ಕಟ್ಟಿ ಹೋಗಬೇಕು ಎಂದು ಎಸ್ಟೇಟ್ ಮಾಲೀಕ ಭರತ್ ಎಂಬಾತ ಧಮಕಿ ಹಾಕಿದ್ದಾನೆ.

Screenshot 2026 11 29 15 44 56 86 99c04817c0de5652397fc8b56c3b3817

ಆ ಹಣವನ್ನು ಕೂಡ ನಾವು ಕಟ್ಟಿದ್ದೇವೆ ನಮಗೆ ಹೋಗಲು ಬಿಡಿ ಎಂದಾಗ ಎಸ್ಟೇಟ್ ಮಾಲೀಕ ಭರತ್ ಮತ್ತು ಸತ್ಯಕೀರ್ತಿ ಎಂಬುವರು “ಇಲ್ಲಿಂದ ಹೋದರೆ ಸಾಯಿಸುತ್ತೇನೆಂದು ಬೆದರಿಸಿ, ಅಷ್ಟು ಜನ ಕಾರ್ಮಿಕರ ಮೇಲೆ ಹಲ್ಲೆ ಮಾಡಿ, ಅಲ್ಲಿದ್ದ ಮಹಿಳಾ ಕಾರ್ಮಿಕರ ಜೊತೆ ಅಸಭ್ಯದಿಂದ ವರ್ತಿಸಿ, ಅವರ ಬಟ್ಟೆಯನ್ನು ಹರಿದು, ಕೂದಲು ಹಿಡಿದು ಎಳೆದಾಡಿ ರಕ್ತ ಬರುವ ಹಾಗೆ ಸೌದೆಯಲ್ಲಿ ಹೊಡೆದು, ಬಂದೂಕನ್ನು ಕೈಯಲ್ಲಿ ಹಿಡಿದು ಗುಂಡು ಹಾರಿಸಿ ಕೊಲ್ಲುವುದಾಗಿ ನಮಗೆಲ್ಲರಿಗೂ ಬೆದರಿಸಿದ್ದಾರೆಂದು ಹಲ್ಲೆಗೊಳಗಾದ ಕಾರ್ಮಿಕರೊಬ್ಬರು ಈ ದಿನ.ಕಾಮ್ ಜೊತೆ ಹೇಳಿಕೊಂಡರು”.

IMG 20261128 WA0314 1

ಈ ಘಟನೆಯ ಕುರಿತು ಕಾರ್ಮಿಕರಲ್ಲೊಬ್ಬ ತನ್ನ ಮೊಬೈಲಿನಿಂದ ಎಸ್ಟೇಟ್ ಮಾಲೀಕನಿಗೆ ಗೊತ್ತಿಲ್ಲದೆ ವಿಡಿಯೋ ಮಾಡಿದ್ದರು. ತೀವ್ರ ಗಂಭೀರ ಹಲ್ಲೆಗೊಳಗಾದ ಕಾರ್ಮಿಕರು ಹಾಗೂ ಮಹಿಳೆಯನ್ನು ಕೂಲಿ ಕಾರ್ಮಿಕರು ಶನಿವಾರ ಬೆಳಗ್ಗೆ ಚಿಕ್ಕಮಗಳೂರು ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಕುರಿತು ಈ ದಿನ. ಕಾಮ್ ಸುದ್ದಿ ಪ್ರಸಾರ ಮಾಡುವ ಮೂಲಕ ಎಲ್ಲೆಡೆ ವಿಚಾರ ಹರಡಿತು. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಗಮನಕ್ಕೆ ತರಲಾಯಿತು. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಸಂಘಟಕರು ಭೇಟಿ ನೀಡಿ ಕಾರ್ಮಿಕರನ್ನು ವಿಚಾರಿಸಲಾಗಿದೆ.

Screenshot 2026 11 28 18 49 52 34 96b26121e545231a3c569311a54cda96 1

ಸಂಘಟಕರ ಅಭಿಪ್ರಾಯ : “ಸೌಹಾರ್ದ ಪರಂಪರೆವಿರುವ ನಮ್ಮ ಮಲೆನಾಡಿನ ಭಾಗದಲ್ಲಿ ಇಂತಹ ಘಟನೆ ಆಗಿರುವುದು ಅಮಾನವೀಯ, ಎಸ್ಟೇಟ್ ಮಾಲೀಕರು ಕಾರ್ಮಿಕರನ್ನು ನಡೆಸಿಕೊಂಡಿರುವ ರೀತಿ ಕ್ರೂರವಾಗಿದೆ. ಇಂತ ನೀಚರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ಹಾಗೂ ಆರೋಪಿಗಳನ್ನು ಗಡಿಪಾರು ಮಾಡಬೇಕು” ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ. ಎಲ್ ಅಶೋಕ್ ಈ ದಿನ.ಕಾಮ್ ಗೆ ತಿಳಿಸಿದ್ದಾರೆ.

ಹಾಗೆಯೇ, “ತಮ್ಮ ಹೊಟ್ಟೆ ಬಟ್ಟೆಗಾಗಿ ಬದುಕು ಕಟ್ಟಿಕೊಳ್ಳಲು ಊರಿಂದ ಊರಿಗೆ ಬಂದು ಎಸ್ಟೇಟ್ಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ನ್ಯಾಯಯುತವಾಗಿ ಮಾತನಾಡಿ ವೇತನ ಕೊಡಲಾಗದಿದ್ದರೆ ಕೆಲಸಕ್ಕೆ ಬೇಡವೆಂದು ಹೇಳಿ ಕಳಿಸಬಹುದಿತ್ತು. ಕಾನೂನನ್ನು ಮೀರಿರುವುದು ಅದೆಷ್ಟು ಸರಿ? ಕಾರ್ಮಿಕರಿಗೆ ಹೊಡೆಯುವ ಹಕ್ಕು ಯಾರು ಕೊಟ್ಟಿದ್ದು”? ಎಂದು ಎದ್ದೇಳು ಕರ್ನಾಟಕ ಸಂಘಟನೆ ಮುಖಂಡ ಗೌಸ್ ಮೋಹಿಯುದ್ದೀನ್ ಈ ದಿನ.ಕಾಮ್ ಜೊತೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

Screenshot 2026 11 29 15 57 45 65 99c04817c0de5652397fc8b56c3b3817

“ತಮ್ಮ ರಕ್ತ ಬೆವರಿನ ದುಡಿಮೆಯಿಂದ ಎಸ್ಟೇಟ್ ಕಟ್ಟಿದ ಕಾರ್ಮಿಕರು ನ್ಯಾಯಯುತ ಕೂಲಿ ಕೇಳುವುದು ಅಪರಾಧವೇ? ಕೂಲಿ ಕೇಳಿದರೆ ಹೊಡೆದು, ಬೆದರಿಸಿ, ಮಹಿಳೆಯರ ಮೇಲೂ ದೌರ್ಜನ್ಯ ನಡೆಸುತ್ತಾರೆ ಎಂದರೆ ಇಲ್ಲಿ ಇನ್ನೂ ಜಮೀನ್ದಾರಿ ಗುಲಾಮಗಿರಿ ಪದ್ಧತಿ ಮುಂದುವರಿದಿದೆ ಎಂಬುದಕ್ಕೆ ಸಾಕ್ಷಿ. ಮಾಲೀಕರ ಈ ದರ್ಪವನ್ನು ಸಹಿಸಲು ಸಾಧ್ಯವಿಲ್ಲ. ಜಿಲ್ಲೆಯ ಬಹುತೇಕ ಎಸ್ಟೇಟ್‌ಗಳಲ್ಲಿ ಕಾರ್ಮಿಕರಿಗೆ ಕನಿಷ್ಠ ಕೂಲಿ, ಸೌಲಭ್ಯಗಳು ಸಿಗುತ್ತಿಲ್ಲ. ಕಾರ್ಮಿಕ ಕಾನೂನುಗಳನ್ನು ಬಹಿರಂಗವಾಗಿ ಉಲ್ಲಂಘಿಸಲಾಗುತ್ತಿದೆ. ಕಾರ್ಮಿಕ ಇಲಾಖೆ ಮತ್ತು ಜಿಲ್ಲಾಡಳಿತ ಮೌನವಾಗಿರುವುದೇ ಮಾಲೀಕರ ದೌರ್ಜನ್ಯಕ್ಕೆ ಪ್ರೋತ್ಸಾಹ ನೀಡುತ್ತಿದೆ” ಎಂದು ಸಿಪಿಐ (ಎಂಎಲ್) ರೆಡ್ ಸ್ಟಾರ್ ಸಮಿತಿಯ ಸಂದೀಪ್ ತಿಳಿಸಿದರು.

Screenshot 2026 11 29 16 00 05 59 99c04817c0de5652397fc8b56c3b3817

ಸಂಘಟಕರ ಹಕ್ಕೋತ್ತಾಯ:

1. ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಬ್ರಹ್ಮಗಿರಿ ಎಸ್ಟೇಟ್ ಮಾಲೀಕ ಮತ್ತು ಸಹಚರರನ್ನು ಕೂಡಲೇ ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

2. ಗಾಯಗೊಂಡ ಎಲ್ಲಾ ಕಾರ್ಮಿಕರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಮತ್ತು ಸೂಕ್ತ ಪರಿಹಾರ ನೀಡಬೇಕು.

3. ಕಾರ್ಮಿಕರ ಕೂಲಿ ಹೆಚ್ಚಳದ ಬೇಡಿಕೆಯನ್ನು ತಕ್ಷಣ ಈಡೇರಿಸಬೇಕು. ಕೂಲಿ ಕೇಳಿದ ಕಾರಣಕ್ಕೆ ಯಾವುದೇ ಕಾರ್ಮಿಕನನ್ನು ಕೆಲಸದಿಂದ ತೆಗೆಯುವ, ಬೆದರಿಸುವ ಕೆಲಸ ಮಾಡಬಾರದು.

4. ಜಿಲ್ಲೆಯ ಎಲ್ಲಾ ಎಸ್ಟೇಟ್‌ಗಳಲ್ಲಿ ಕಾರ್ಮಿಕ ಕಾನೂನು ಉಲ್ಲಂಘನೆಯ ಬಗ್ಗೆ ಕಾರ್ಮಿಕ ಇಲಾಖೆಯು ತಕ್ಷಣ ತನಿಖೆ ನಡೆಸಬೇಕು.

ಈ ಘಟನೆ ಕುರಿತು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು, ಗಾಯಗೊಂಡ ಕಾರ್ಮಿಕರೊಂದಿಗೆ, ಜಿಲ್ಲೆಯ ಕಾರ್ಮಿಕರೊಂದಿಗೆ ಸೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಸಂಘಟಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. 

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಎಸ್ಟೇಟ್ ಮಾಲೀಕರಿಂದ ಬಂದೂಕು ತೋರಿಸಿ ಮಹಿಳೆ,ಕಾರ್ಮಿಕರಿಗೆ ಮಾರಣಾಂತಿಕ ಹಲ್ಲೆ 

ಕಾರ್ಮಿಕರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ. ಮಾಲೀಕನನ್ನು ತಕ್ಷಣ ಬಂಧಿಸಿ, ಕಾರ್ಮಿಕರಿಗೆ ನ್ಯಾಯ ಕೊಡಿ ಎಂದು ಅಗ್ರಹಿಸಿದೆ.

WhatsApp Image 2024 10 24 at 12.02.30
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಎಐ ತಂತ್ರಜ್ಞಾನ ಬಳಕೆಯಲ್ಲಿ ಎಚ್ಚರಿಕೆ ಇರಲಿ, ಸತ್ಯಶೋಧನೆ ಪತ್ರಕರ್ತರ ಆದ್ಯತೆಯಾಗಲಿ: ಶಿವಾನಂದ ತಗಡೂರು

ಕೃತಕ ಬುದ್ಧಿಮತ್ತೆ (ಎಐ) ಮತ್ತು ಡಿಜಿಟಲ್ ತಂತ್ರಜ್ಞಾನಗಳು ಪತ್ರಿಕೋದ್ಯಮದಲ್ಲಿ ಹೊಸ ಸಾಧ್ಯತೆಗಳನ್ನು...

ಕ್ರಿಕೆಟ್ ಅಂಗಳದಲ್ಲಿ ಪತ್ರಕರ್ತರ ಮೇಲುಗೈ: ಪೊಲೀಸರ ವಿರುದ್ಧ ಎರಡೂ ಪಂದ್ಯಗಳಲ್ಲೂ ಭರ್ಜರಿ ಜಯ

ದಿನನಿತ್ಯದ ಕೆಲಸದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಮೈಸೂರು ಪತ್ರಕರ್ತರು ಹಾಗೂ...

ಜನನುಡಿ 2026 | ಬಂಡವಾಳಶಾಹಿ ಮತ್ತು ರಾಜಕೀಯದ ಅಪವಿತ್ರ ಮೈತ್ರಿಯ ಕರಾಳ ಮುಖವೇ ಕೋಮುವಾದ: ಎ ನಾರಾಯಣ್‌

ಬಂಡವಾಳಶಾಹಿಗಳು ಮತ್ತು ರಾಜಕೀಯ ಅಧಿಕಾರದ ಮೈತ್ರಿಗಳು ಕೋಮುವಾದಿ ಶಕ್ತಿಗಳ ಜೊತೆ ಮಾಡಿಕೊಂಡಿರುವ...

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ವಿರೋಧ: ವಿಜಯೇಂದ್ರ ವಿರುದ್ಧ ಭುಗಿಲೆದ್ದ ಆಕ್ರೋಶ

ಬಸವಕಲ್ಯಾಣದಲ್ಲಿ ಶನಿವಾರ ನಡೆದ 47ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ...