“ಕಾಂಗ್ರೆಸ್ – ಕಮ್ಯೂನಿಸ್ಟ್‌ರು ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಟ್ಟವರು. ನಾನು ಪೂರ್ಣ ಕಮ್ಯೂನಿಸ್ಟ್ ನಲ್ಲ, ನಾನೊಬ್ಬ ನಡು ಎಡಪಂಥೀಯ” ಎಂದು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರು ಹೇಳಿದರು. ಅವರು ಮಂಗಳೂರಿನಲ್ಲಿ ನಡೆಯುತ್ತಿರುವ ಜನನುಡಿ-2026 ರಲ್ಲಿ ನಡೆದ ಪ್ರಜಾಪ್ರಭುತ್ವದ ಅಳಿವು, ಉಳಿವು – ಸಿದ್ದಾಂತಗಳ ಪಾತ್ರ ಗೋಷ್ಠಿಯಲ್ಲಿ ಮಾತನಾಡಿದರು.
“ಕಮ್ಯೂನಿಸ್ಟರು ಇತಿಹಾಸವನ್ನು ಬಹಳಷ್ಟು ಓದಿದ್ದಾರೆ. ಅವರು ಅಂಧ ಭಕ್ತರಂತಲ್ಲ. ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಸಾತಂತ್ರ್ಯ ಜಾರಿಯಾಗದಿದ್ದರೆ ಏನೂ ಪ್ರಯೋಜನವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು ಇದು ಪ್ರಸ್ತುತ ಸಂದರ್ಭದಲ್ಲಿ ಹೆಚ್ಚು ವಾಸ್ತವವಾಗಿದೆ” ಎಂದರು.
ಒಂದು ಚುನಾವಣೆ, ಒಂದು ಶಿಕ್ಷಣ, ಒಂದು, ಒಂದು ಭಾಷೆ ಇದು ಫ್ಯಾಸಿಸ್ಟ್ ಪ್ರವೃತ್ತಿ. ಇದು ಅತ್ಯಂತ ಅಪಾಯಕಾರಿ. ಮೋದಿ ವಿರುದ್ಧ ಮಾತನಾಡಿದ್ದರೆ ದೇಶ ವಿರೋಧಿ. ಹೋರಾಟಗಾರ ಉಮರ್ ಖಾಲಿದ್ ಮೇಲೆ ಒಂದೇ ಒಂದು FIR ಇಲ್ಲದಿದ್ದರೂ ವರ್ಷನೂ ಗಟ್ಟಲೇ ಜೈಲಿನಲ್ಲಿದ್ದಾರೆ. ನೂರು ವರ್ಷಗಳಿಂದ ಇರುವ RSS ತ್ರಿವರ್ಣ ಧ್ವಜ, ರಾಷ್ಟ್ರಗೀತೆ, ಸಂವಿಧಾನವನ್ನು ವಿರೋಧಿಸಿದವರು. ಇವರಿಂದ ನಾವು ಏನು ಕೂಡ ನಿರೀಕ್ಷೆ ಮಾಡಲಾಗುವುದಿಲ್ಲ” ಎಂದರು.
“ಯಾವ ಧರ್ಮವು ಸಂವಿಧಾನವನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ. ಆದರೆ ಎಲ್ಲ ಧರ್ಮವನ್ನು ಸಂವಿಧಾನ ರಕ್ಷಿಸುತ್ತದೆ.”56 ಇಂಚಿನ ಮಹಾಮಾನವನನ್ನು ಕಾಕ್ರೋಚ್ ಪಾರ್ಟಿ ಹಾಗೂ ಜೆನ್ ಝೀಗಳು ಸೇರಿಕೊಂಡು ಮಂಡಿಯೂರಿಸುವ ಹಾಗೆ ಮಾಡಿದ್ರು ಎಂದರು.
“ನಮ್ಮನ್ನು ಮಹಿಳಾ ಮೀಸಲಾತಿ ವಿರೋಧಿ ಎಂದರು. ಆದರೆ, ಗಡಿಪಾರು ಅಮಿತ್ ಶಾಗೆ ಗೊತ್ತಿಲ್ಲ. 2010 ರಲ್ಲಿಯೇ ರಾಜ್ಯಸಭೆಯಲ್ಲಿ ಇದನ್ನು ಪಾಸ್ ಮಾಡಲಾಗಿತ್ತು. ಶೇಕಡಾ 33 ಮಹಿಳಾ ಮೀಸಲಾತಿಯಲ್ಲಿ ಒಳಮೀಸಲಾತಿಯೂ ಬೇಕು ಅನ್ನೋದು ನಮ್ಮ ಆಗ್ರಹ.
“ಕಮ್ಯೂನಿಸ್ಟರು ಇತಿಹಾಸವನ್ನು ಬಹಳಷ್ಟು ಓದಿದ್ದಾರೆ. ಅವರು ಅಂಧ ಭಕ್ತರಂತಲ್ಲ. ಛತ್ತೀಸ್‌ಘಡದಲ್ಲಿ ನಕ್ಸಲರನ್ನು ಮುಗಿಸಿದ್ದೀವಿ ಎನ್ನುತ್ತಿದ್ದಾರೆ. ಆದರೆ, ಯಾವ ನಕ್ಸಲೈಟ್ ಕೂಡಾ ಅವರ ಕೈಗೆ ಸಿಕ್ಕಿಲ್ಲ. ಆದಿವಾಸಿಗಳನ್ನು ನಕ್ಸಲ್ ಅಂತಾ ಹೊಡೆದು, 1 ಲಕ್ಷ ಎಕರೆಯನ್ನ ಅದಾನಿ ಕೈಗೆ ಕೊಟ್ಟಿದ್ದಾರೆ.
ಧರ್ಮ ಸಂವಿಧಾನವನ್ನು ರಕ್ಷಿಸಲು ಸಾಧ್ಯವಿಲ್ಲ. ಎಲ್ಲ ಧರ್ಮಗಳನ್ನು ಸಂವಿಧಾನ ರಕ್ಷಣೆ ಮಾಡುತ್ತೆ. ಆ ಸಂವಿಧಾನವನ್ನು ಕಾಪಾಡುವ ಕೆಲಸ ನಾವು ಮಾಡಬೇಕಾಗುತ್ತದೆ” ಎಂದು ಹೇಳಿದರು.



