ಜನನುಡಿ 2026 | ಇತಿಹಾಸ ಸುಮ್ಮನಿರುವವರನ್ನು ಕ್ಷಮಿಸುವುದಿಲ್ಲ: ಪ್ರಕಾಶ್ ರಾಜ್

Date:

ಇತಿಹಾಸ ತಪ್ಪು ಮಾಡಿದವರನ್ನು ಕ್ಷಮಿಸುತ್ತದೆ. ಆದರೆ ಸುಮ್ಮನಿರುವವರನ್ನು ಯಾವತ್ತೂ ಕ್ಷಮಿಸುವುದಿಲ್ಲ ಎಂದು ಬಹುಭಾಷ ನಟ ಪ್ರಕಾಶ್ ರಾಜ್ ಹೇಳಿದರು.

- Advertisement -

ಜನನುಡಿ 2026 ಪ್ರಯುಕ್ತ ಮಂಗಳೂರಿನ ಬಿಷಪ್ ಜತ್ತನ್ನ ಸಭಾಂಗಣದಲ್ಲಿ “ಯುವಜನ ರಾಜಕಾರಣ : ದಿಕ್ಕು – ಭವಿಷ್ಯ – ಸವಾಲು” ಆಶಯದೊಂದಿಗೆ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುಪ್ತ ಆಯಾಸದ ಹಿಂದೆ ಅಡಗಿರುವ ರಕ್ತಹೀನತೆ: ಕರ್ನಾಟಕದ ಅರ್ಧದಷ್ಟು...

ದೈನಂದಿನ ಒತ್ತಡ, ನಿದ್ರೆಯ ಕೊರತೆ ಅಥವಾ ಬಿಡುವಿಲ್ಲದ ಜೀವನಶೈಲಿಯೆಂದು ನಿರ್ಲಕ್ಷಿಸುವ ಆಯಾಸದ ಹಿಂದೆ ರಕ್ತಹೀನತೆ ಅಡಗಿರಬಹುದು. ಕರ್ನಾಟಕದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಶೇ. 50ಕ್ಕಿಂತ ಹೆಚ್ಚು ಮಂದಿ ರಕ್ತಹೀನತೆಯಿಂದ ಬಳಲುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ದೈನಂದಿನ...

20 ಬಂಡುಕೋರ ಟಿಎಂಸಿ ಸಂಸದರು ಮತ ಚಲಾಯಿಸಬಹುದೇ; ಮುಂದೆ...

ಡಿಲಿಮಿಟೇಷನ್ ಹಾಗೂ ಮಹಿಳಾ ಮೀಸಲಾತಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿರುವ ಹೊತ್ತಿನಲ್ಲಿ, ಲೋಕಸಭಾ ಸ್ಪೀಕರ್ ಮುಂದೆ ಅನರ್ಹತೆ ವಿಚಾರಣೆ ಎದುರಿಸುತ್ತಿರುವ 20 ಬಂಡುಕೋರ ಟಿಎಂಸಿ...

ಸಿನಿಮಾ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಏಳು ಸುತ್ತಿನ...

ಪ್ರಶಸ್ತಿಗೆ ಮತ್ತು ಸಬ್ಸಿಡಿಗೆ ಅರ್ಜಿ ಸಲ್ಲಿಸಲು ನಿರ್ಮಾಪಕರು, ನಿರ್ದೇಶಕರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ, ನಮ್ಮ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಿರ್ಮಾಣ ಸಂಸ್ಥೆಗಳಿರುವುದು ಕೇವಲ ಬೆರಳೆಣಿಕೆಯಷ್ಟು, ಉಳಿದಂತೆ ಬಹುತೇಕ ನಿರ್ಮಾಣ...

ಇವತ್ತು ಬಿಜೆಪಿ ಜೊತೆಗೆ ಇರುವವರೆಲ್ಲರೂ ಸೈದ್ದಾಂತಿಕ ಕಾರಣಕ್ಕೆ ಜೊತೆಗಿರುವವರಲ್ಲ, ಅದು ಕೇವಲ ಅವಕಾಶವಾದಿಗಳು ಹಾಗೂ ಮಾರಿಕೊಂಡ ಮಾಧ್ಯಮಗಳು. ಇಂದು ಪತ್ರಿಕೆಗಳನ್ನು ನೋಡಿ ಅವು ಯಾವ ಪಕ್ಷಕ್ಕೆ ಸೇರಿದೆ ಅನ್ನೋದನ್ನು ಹೇಳಬಹುದು ಎಂದು ಪ್ರಕಾಶ್ ರಾಜ್ ಹೇಳಿದರು.

ಪೊಲೀಸ್ ಇಲಾಖೆ, ಉದ್ಯಮಿಗಳು, ಸಂಸ್ಥೆಗಳು, ನ್ಯಾಯಸ್ಥಾನಗಳೇ ‘ತಾರೀಕ್ ಪೆ ತಾರೀಕ್’ ಹೇಳ್ತಿರೋದು “ಇಟ್ ಈಸ್ ಜಸ್ಟ್ ಎ ಪವರ್ ಆ್ಯಂಡ್ ದ ಫಿಯರ್” ಎಂದ ಅವರು, ದೇಶ ಇವತ್ತು ಸೈದ್ಧಾಂತಿಕವಾಗಿ ಮಾರಿಕೊಂಡಕ್ಕಿಂತ ಅವಕಾಶ ಬಾಧೆಯಿಂದ ನೋವು ಅನುಭವಿಸುತ್ತಿದೆ ಎಂದರು.

ಫುಟ್ಬಾಲ್ ಮ್ಯಾಚ್ ಗೆ ಹೋದರೆ ನಾವು ಆಟಗಾರರಾಗಬೇಕು, ಅಂಪೈರ್ ಆಗಬೇಕು ಇಲ್ಲವೇ ವೀಕ್ಷಕನಾಗಿರಬೇಕು. ಆದರೆ, ನಾವೇ ಫುಟ್ಬಾಲ್ ಆಗುತ್ತಿದ್ದೇವೆ. ದೇಶ ನಡೆಯುತ್ತಿರುವುದು ನಮ್ಮ ತೆರಿಗೆ, ದುಡಿಮೆಯಿಂದ. ರಾಜಕೀಯ ಪಕ್ಷಗಳು ನಮ್ಮನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಅನ್ನೋದಕ್ಕಿಂತ ನಾವೇ ಮೂರ್ಖರಾಗುತ್ತಿದ್ದೇವೆ. ಹಾಗಾಗಿ ತಪ್ಪು ನಮ್ಮಲ್ಲೂ ಇದೆ ಎಂದರು.

ಬದುಕಿಗೆ ಒಂದು ಅರ್ಥ ಬೇಕು. ಸಾಯೋದಕ್ಕಿಂತ ಮುಂಚೆ ನಾನು ಸಾಯಲ್ಲ. ನೇರವಾಗಿ ಮಾತನಾಡಿದರೆ ಅವರು ಹೆದರುತ್ತಾರೆ. ಅವರು ಪುಕ್ಕಲರು. ಧೈರ್ಯವಾಗಿ ಎದ್ದರೆ ಹಿಂದೆ ಸರಿಯುತ್ತಾರೆ. ಪ್ರಜೆಗಳು ಒಂದೆಡೆ ಸೇರಿದರೆ ಹೆದರುತ್ತಾರೆ ಎಂದರು.

ಗೌರಿ ಲಂಕೇಶ್ ಅಂತ್ಯಕ್ರಿಯೆಯ ವೇಳೆ ‘ನಾನು ಗೌರಿಯನ್ನು ಹೂಳುತ್ತಿಲ್ಲ, ಬಿತ್ತುತ್ತಿದ್ದೇನೆ’ ಎಂದು ಹೇಳಿದ ಮಾತು ಸತ್ಯವಾದುದು. ಏಕೆಂದರೆ, ಒಂದು ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆದಾಗ, ಅದಕ್ಕಿಂತ ದೊಡ್ಡದಾದ ಪ್ರತಿರೋಧದ ಧ್ವನಿ ಎದ್ದುಬರಲೇಬೇಕು ಎಂದ ಅವರು, ನನ್ನಲ್ಲಿ ಇಂತಹ ಪ್ರತಿರೋಧದ ಧ್ವನಿ ಮೊಳಗಲು ಗೌರಿ ಒಂದು ಮಾಧ್ಯಮವಾದರೆ, ಅದಕ್ಕೆ ಭದ್ರ ಬುನಾದಿ ಹಾಕಿದ್ದು ನಮ್ಮನ್ನು ಬೆಳೆಸಿದ ಕನ್ನಡ ಸಾಹಿತ್ಯ ಮತ್ತು ಲಂಕೇಶ್ ಅವರಂತಹ ಕನ್ನಡದ ಪ್ರತಿರೋಧದ ಪರಂಪರೆ‌ ಎಂದರು.

ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ. ಇದು ಮಾಡಬೇಕಾದ ಕೆಲಸ. ಮುಂದಿನ ಎರಡು ವರ್ಷ ಕಾರ್ಯಕ್ರಮಗಳ ಪರ್ವ ಅಲ್ಲ. ಪ್ರತಿಭಟನೆಗಳ ಪರ್ವ ಎಂದರು.

ಡಾ. ನಾಗೇಗೌಡ ಕೆ.ಎಸ್. ಅವರು ಮಾತುಕತೆಯನ್ನು ನಡೆಸಿಕೊಟ್ಟರು. ಚರಣ್ ಶೆಟ್ಟಿ ಪಂಜಿಮೊಗರು ನಿರೂಪಿಸಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

BREAKING NEWS | ಗೌರವ ಧನ ₹2,000 ಹೆಚ್ಚಳಕ್ಕೆ ಸರ್ಕಾರ ಭರವಸೆ: ಪ್ರತಿಭಟನೆ ಹಿಂಪಡೆದ ಆಶಾ ಕಾರ್ಯಕರ್ತೆಯರು

ಮಾಸಿಕ ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ...

ಚಾಮರಾಜನಗರ | ಮೂರು ದಿನಗಳ ಪೊಲೀಸ್‌ ವಾರ್ಷಿಕ ಕ್ರಿಡಾಕೂಟಕ್ಕೆ ಅದ್ಧೂರಿ ತೆರೆ

ಶಿಸ್ತು, ಸಹನೆ, ಸಾಹಸ ಮತ್ತು ಸೌಹಾರ್ದತೆಗೆ ಸಾಕ್ಷಿಯಾದ ಚಾಮರಾಜನಗರ ಜಿಲ್ಲಾ ಪೊಲೀಸ್...

ಎಸ್‌ಐಒ ರಾಷ್ಟ್ರೀಯ ಅಧ್ಯಕ್ಷರಾಗಿ ಕರ್ನಾಟಕದ ಅದಿ ಅಲ್ ಹಸನ್ ಆಯ್ಕೆ

ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್‌ಐಒ) ಸಂಘಟನೆಯ 2027–28ನೇ ಸಾಲಿನ...

ನಾರಾಯಣ ಗುರುಗಳ ಹೆಸರಿನಲ್ಲಿ ಒಂದಾಗಿರುವುದು ಸಮಾಜದ ಶಕ್ತಿ: ಸಚಿವ ಮಧು ಬಂಗಾರಪ್ಪ

ಸಮಾಜದ ಒಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ನಾವೆಲ್ಲರೂ...