ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್‌ಐಒ) ಸಂಘಟನೆಯ 2027–28ನೇ ಸಾಲಿನ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಕರ್ನಾಟಕದ ಬೆಂಗಳೂರು ಮೂಲದ ಅದಿ ಅಲ್ ಹಸನ್ ಅವರು ಆಯ್ಕೆಯಾಗಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗುವ ಮುನ್ನ ಅವರು 2023ರಿಂದ 2026ರವರೆಗೆ ಸತತ ಎರಡು ಅವಧಿಗೆ ಸಂಘಟನೆಯ ಕೇಂದ್ರ ಸಲಹಾ ಸಮಿತಿಯ (ಸಿಎಸಿ) ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಶಿಕ್ಷಕರ ನೇಮಕಾತಿ: ಉರ್ದು, ಮರಾಠಿ, ಹಿಂದಿ ಮಾಧ್ಯಮ ಹುದ್ದೆಗಳ ಸೇರ್ಪಡೆಗೆ ಎಸ್‌ಐಒ ಆಗ್ರಹ
ಸಂಘಟನೆಯಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿರುವ ಇವರು, ಬೆಂಗಳೂರು ನಗರಾಧ್ಯಕ್ಷರಾಗಿ, ಎಸ್‌ಐಒ ದೆಹಲಿ ವಲಯ ಸಲಹಾ ಸಮಿತಿ ಸದಸ್ಯರಾಗಿ (2021–2022), ಕರ್ನಾಟಕ ವಲಯ ಸಲಹಾ ಸಮಿತಿ ಸದಸ್ಯರಾಗಿ (2023–2024) ಹಾಗೂ 2025–2026ನೇ ಸಾಲಿನಲ್ಲಿ ಎಸ್‌ಐಒ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇದರೊಂದಿಗೆ ಸಂಘಟನೆಯ ನಿಯತಕಾಲಿಕ ‘ದಿ ಕಂಪ್ಯಾನಿಯನ್’ ಪತ್ರಿಕೆಯ ಪ್ರಧಾನ ಸಂಪಾದಕರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ.
ಶೈಕ್ಷಣಿಕವಾಗಿ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಿಂದ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿರುವ ಅದಿ ಅಲ್ ಹಸನ್, 2017ರಲ್ಲಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಿಂದ (NLSIU) ಕಾನೂನು ಸಾಕ್ಷರತಾ ಪ್ರಮಾಣಪತ್ರವನ್ನು ಗಳಿಸಿದ್ದಾರೆ. ತದನಂತರ ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಿಂದ ಅಂತರರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ) ಪಡೆದಿದ್ದಾರೆ.


