ಪ್ರಶಸ್ತಿಗೆ ಮತ್ತು ಸಬ್ಸಿಡಿಗೆ ಅರ್ಜಿ ಸಲ್ಲಿಸಲು ನಿರ್ಮಾಪಕರು, ನಿರ್ದೇಶಕರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ, ನಮ್ಮ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಿರ್ಮಾಣ ಸಂಸ್ಥೆಗಳಿರುವುದು ಕೇವಲ ಬೆರಳೆಣಿಕೆಯಷ್ಟು, ಉಳಿದಂತೆ ಬಹುತೇಕ ನಿರ್ಮಾಣ ಸಂಸ್ಥೆಗಳು ಸ್ವತಂತ್ರ ಹಾಗೂ ಅರೆಕಾಲಿಕ. ಅಂದರೆ ಒಂದೆರಡು ಸಿನಿಮಾ ಮಾಡಿ ತಮ್ಮ ಕಚೇರಿಯನ್ನು ಮುಚ್ಚಿರುತ್ತಾರೆ. ಸಿನಿಮಾ ನಿರ್ಮಾಣಕ್ಕೆ ಸಂಬಂಧಿಸಿದ ಅನುಮತಿ ಪತ್ರಗಳನ್ನು ಬಹುತೇಕರು ವ್ಯವಸ್ಥಿತವಾಗಿ ತಮ್ಮ ಬಳಿ ಇರಿಸಿಕೊಂಡಿರುವುದಿಲ್ಲ. ಸಿನಿಮಾಗೆ ಕೆಲಸ ಮಾಡಿದ ನಿರ್ದೇಶಕರು ಹಾಗೂ ನಿರ್ಮಾಣ ವ್ಯವಸ್ಥಾಪರಾದಿಯಾಗಿ ಇಡೀ ತಂಡ ಸಿನಿಮಾ ಬಿಡುಗಡೆಯಾದ ನಂತರ ಬೇರೆಬೇರೆ ಚಿತ್ರಗಳ ನಿರ್ಮಾಣದಲ್ಲಿ ತೊಡಗಿಕೊಂಡಿರುತ್ತಾರೆ.
ಇತ್ತೀಚೆಗೆ ಗಿರೀಶ್ ಕಾಸರವಳ್ಳಿ ಅವರೊಂದಿಗೆ ಮಾತನಾಡುತ್ತಿರುವಾಗ ವ್ಯಾಸರಾಯ ಬಲ್ಲಾಳರ ʼಬಂಡಾಯʼ ಚಿತ್ರವನ್ನು ಯಾಕೆ ಮಾಡಲಾಗಲಿಲ್ಲ ಎಂದು ಕೇಳಿದಾಗ ಅವರು ನೀಡಿದ ಉತ್ತರ, ಭಾರತೀಯ ಚಿತ್ರರಂಗದ ಕಣ್ಣು ತೆರೆಸುವಂತಿತ್ತು. “ಅದು ಗಟ್ಟಿಯಾದ, ಆದರೆ ತುಂಬಾ ಕಷ್ಟವಾದ ವಸ್ತು. ಕಾರ್ಮಿಕರ ಸಂಘಟನೆಗಳ ಚಳವಳಿಯ ಅಂತರಾತ್ಮವನ್ನು ಹಿಡಿದಿಡುವ ವಸ್ತು. ಆದರೆ ಸಿನಿಮಾ ಮಾಡಲು ಹೆಚ್ಚು ಹಣ ಬೇಕು. ನಮ್ಮಂಥ ನಿರ್ದೇಶಕರ ಚಿತ್ರಗಳ ಮೇಲೆ, ಬಂಡವಾಳ ಹೂಡುವವರು ಇಲ್ಲವೇ ಇಲ್ಲದಿರುವುದು ನಮ್ಮ ಕಷ್ಟ. ಕೆಲವರು ಬಂದರೂ, ಮೂವತ್ತು ಲಕ್ಷದೊಳಗೆ ಚಿತ್ರಮಾಡಿಕೊಡಿ ಅಂತಾರೆ. ನನಗೆ ಐದಾರು ಪಾತ್ರಗಳನ್ನಿಟ್ಟುಕೊಂಡು, ನನ್ನ ವಸ್ತುವಿಗೆ ನ್ಯಾಯ ದೊರಕಿಸುವ ಮಾರ್ಗ. Microcosmic ಕಥನ ಶೈಲಿಯಲ್ಲಿ macrocosm ಲೋಕದೃಷ್ಟಿ ಒದಗಿಸುವಂಥ ಪ್ರಯತ್ನ. ಅಲ್ಲದೆ urban background ನ ಚಿತ್ರ ಮಾಡುವುದು ನನಗೆ ಕಷ್ಟ. ಶೂಟಿಂಗ್ ಗೆ ಸಮಸ್ಯೆ ಆಗುತ್ತೆ. ಧ್ಯಾನಸ್ಥ ಸ್ಥಿತಿಯಲ್ಲಿ ಚಿತ್ರ ಮಾಡುವಾಗ disturbance ನನಗೆ ಇಷ್ಟವಾಗುವುದಿಲ್ಲ. ಇದು ನಾವೇ ಹಾಕಿಕೊಳ್ಳುತ್ತಿರುವ ಬಂಧನವೇನೋ ನನಗಿನ್ನೂ ಅರ್ಥವಾಗಿಲ್ಲ. ಅನಂತಮೂರ್ತಿ ಅವರ ʼಆಕಾಶ ಮತ್ತು ಬೆಕ್ಕುʼ ಕಥೆಯನ್ನಾಧರಿಸಿದ ಚಿತ್ರದ ಚಿತ್ರೀಕರಣ ಮುಗಿದಿದೆ. ಆದರೆ ಅದನ್ನು ಸಿದ್ಧಪಡಿಸಲು ಇನ್ನೂ ಇಪ್ಪತ್ತು ಲಕ್ಷ ರೂಪಾಯಿಗಳಾದರೂ ಬೇಕು. ಹಣ ಇಲ್ಲ. ಹಾಗಾಗಿ ಚಿತ್ರ ಸದ್ಯಕ್ಕೆ ಯಥಾಸ್ಥಿತಿ ಕಾಪಾಡಿಕೊಂಡಿದೆ…” ಎಂದು ಮುಗುಳ್ನಕ್ಕರು. ಆ ನಗೆಯಲ್ಲಿ ವಿಷಾದ, ವಿಷಣ್ಣತೆ, ಎರಡೂ ತುಂಬಿತ್ತು.
ಇದು ಕೇವಲ ಗಿರೀಶ್ ಕಾಸರವಳ್ಳಿ ಅವರೊಬ್ಬರ ಸಮಸ್ಯೆಯಲ್ಲ. ಭಾರತದಾದ್ಯಂತ ಎಲ್ಲ ಹೊಸ ಅಲೆಯ, ಹೊಸ ಆಲೋಚನೆಗಳ, ಹೊಸ ಹೊಳಹುಗಳ ಚಿತ್ರಮಾಡಬೇಕೆಂದು ಬಯಸುವ ಎಲ್ಲ ಸೃಜನಶೀಲ ನಿರ್ದೇಶಕರ ಸಮಸ್ಯೆ. ಕನ್ನಡ ಚಿತ್ರರಂಗದಲ್ಲಿ ಪ್ರಶಸ್ತಿ ಮತ್ತು ಸಹಾಯ ಧನದ ಹೆಸರಿನಲ್ಲಿ ನಿರ್ಮಾಪಕರ, ನಿರ್ದೇಶಕರ ಶೋಷಣೆ ನಿಲ್ಲಲಿ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಮನ್ಸೋರೆ ಸರ್ಕಾರ, ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೊರೆ ಹೊಗಿದ್ದಾರೆ.
ಹತ್ತು ಅರ್ಜಿಗಳ ಪ್ರತಿ
“ಪ್ರಶಸ್ತಿಗೆ ಮತ್ತು ಸಬ್ಸಿಡಿಗೆ ಅರ್ಜಿ ಸಲ್ಲಿಸಲು ನಿರ್ಮಾಪಕರು, ನಿರ್ದೇಶಕರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ, ನಮ್ಮ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಿರ್ಮಾಣ ಸಂಸ್ಥೆಗಳಿರುವುದು ಕೇವಲ ಬೆರಳೆಣಿಕೆಯಷ್ಟು, ಉಳಿದಂತೆ ಬಹುತೇಕ ನಿರ್ಮಾಣ ಸಂಸ್ಥೆಗಳು ಸ್ವತಂತ್ರ ಹಾಗೂ ಅರೆಕಾಲಿಕ. ಅಂದರೆ ಒಂದೆರಡು ಸಿನಿಮಾ ಮಾಡಿ ತಮ್ಮ ಕಛೇರಿಯನ್ನು ಮುಚ್ಚಿರುತ್ತಾರೆ. ಸಿನಿಮಾ ನಿರ್ಮಾಣಕ್ಕೆ ಸಂಬಂಧಿಸಿದ ಅನುಮತಿ ಪತ್ರಗಳನ್ನು ಬಹುತೇಕರು ವ್ಯವಸ್ಥಿತವಾಗಿ ತಮ್ಮ ಬಳಿ ಇರಿಸಿಕೊಂಡಿರುವುದಿಲ್ಲ. ಸಿನಿಮಾಗೆ ಕೆಲಸ ಮಾಡಿದ ನಿರ್ದೇಶಕರು ಹಾಗೂ ನಿರ್ಮಾಣ ವ್ಯವಸ್ಥಾಪರಾದಿಯಾಗಿ ಇಡೀ ತಂಡ ಸಿನಿಮಾ ಬಿಡುಗಡೆಯಾದ ನಂತರ ಬೇರೆಬೇರೆ ಚಿತ್ರಗಳ ನಿರ್ಮಾಣದಲ್ಲಿ ತೊಡಗಿಕೊಂಡಿರುತ್ತಾರೆ. ಇತ್ತೀಚೆಗೆ ಸಿನಿಮಾ ಮಾಡುತ್ತಿರುವ ಬಹುತೇಕ ನಿರ್ಮಾಪಕರಿಗೆ ಇಂಥ ಪತ್ರ-ವ್ಯವಹಾರಗಳ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ನಿರ್ದೇಶಕರಿಗೆ, ನಿರ್ಮಾಪಕರಿಗೆ ಚಿತ್ರವನ್ನು ಪ್ರಶಸ್ತಿಗೆ ಕಳುಹಿಸುವುದು ಮತ್ತು ಸಬ್ಸಿಡಿಗೆ ಕಳುಹಿಸುವುದು ತೀರಾ ಕಷ್ಟವಾಗಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಒಂದು ರೀತಿ ಏಳು ಸುತ್ತಿನ ಕೋಟೆಯಂತಿದೆ. ಪ್ರಶಸ್ತಿಗೆ ಮತ್ತು ಸಬ್ಸಿಡಿಗೆ ಪ್ರತಿ ಅರ್ಜಿಯ ಹತ್ತು ಪ್ರತಿಗಳನ್ನು ಸಲ್ಲಿಸಬೇಕಿದೆ. ಈ ಹತ್ತು ಪ್ರತಿಗಳನ್ನು ಏಕೆ ಸಲ್ಲಿಸಬೇಕು ಎಂಬುದು ಅರ್ಥವಾಗುತ್ತಿಲ್ಲ.
ಇದನ್ನೂ ಓದಿ: ಸ್ಯಾಂಡಲ್ವುಡ್ | ಈ ವಾರ ಸಾಲು ಸಾಲು ಸಿನಿಮಾ ತೆರೆಗೆ; ಇಲ್ಲಿದೆ ವಿವರ
Blue Ray ಎಂಬ ಪಿಡುಗು
“ಇದಕ್ಕಿಂತ ಮುಖ್ಯವಾಗಿ ಕನ್ನಡ ಸಿನಿಮಾ ನಿರ್ಮಾಪಕರು ಬಸವಳಿಯುತ್ತಿರುವುದು Blue Ray Disk ಸಿದ್ಧಪಡಿಸುವುದರಲ್ಲಿ. ಹತ್ತು ವರ್ಷಗಳ ಹಿಂದೆ ತಂತ್ರಜ್ಞಾನ ಇವತ್ತಿನಷ್ಟು ಮುಂದುವರೆಯದ ಸಂದರ್ಭದಲ್ಲಿ ಸಿನಿಮಾದ full format 2K resolution ನಲ್ಲಿ ವೀಕ್ಷಣೆ ಮಾಡಲು ಇದ್ದ ಉತ್ತಮ ಮಾದರಿ Blue Ray ತಂತ್ರಜ್ಞಾನವಾಗಿತ್ತು. ಆದರೆ ಇಂದು DVD Blue Ray ತಂತ್ರಜ್ಞಾನ ಬಹುತೇಕ ಮಾರುಕಟ್ಟೆಯಿಂದ ಮರೆಯಾಗಿದೆ. ಮುಖ್ಯವಾಗಿ ಉತ್ತಮ ಗುಣಮಟ್ಟದ ಐದು Blue Ray ಖಾಲಿ Disk Online ನಲ್ಲಿ ನಾಲ್ಕು ಸಾವಿರದವರೆಗೆ ಇದೆ. ಅರ್ಜಿಯಲ್ಲಿ ಪ್ರಶಸ್ತಿಗೆ ಸಹಾಯ ಧನಕ್ಕೆ ಪ್ರತ್ಯೇಕವಾಗಿ ಎರಡೆರಡು Blue Ray Disk ಅನ್ನು ನೀಡಬೇಕಿದೆ. ಈಗ ಬೆಂಗಳೂರಿನಲ್ಲಿ Blue Ray Disk ನಲ್ಲಿ ಸಿನಿಮಾವನ್ನು ಸಿದ್ಧಪಡಿಸಲು ಕನಿಷ್ಠ ಎರಡು ಸಾವಿರದಿಂದ ನಾಲ್ಕು ಸಾವಿರದವರೆಗೆ ವೆಚ್ಚವಾಗುತ್ತದೆ. ಒಟ್ಟು ನಾಲ್ಕು ಡಿಸ್ಕ್ ಗಳಿಗೆ ಎಂಟರಿಂದ ಹದಿನಾರು ಸಾವಿರ ರೂಪಾಯಿ ವೆಚ್ಚ. ಇದರ ಬದಲಿಗೆ ಸರಳವಾಗಿ Pocket Hard Disk ನಲ್ಲಿ ಸಿನಿಮಾವನ್ನು ಸಲ್ಲಿಸಲು ಕೇವಲ ಐದು ಸಾವಿರ ರೂಪಾಯಿ ಸಾಕಾಗುತ್ತದೆ. ಇದರಿಂದ ಸಿನಿಮಾದ ಸುರಕ್ಷತೆ ಮತ್ತು ವೀಕ್ಷಣೆಯ ಗುಣಮಟ್ಟ ಕಾಪಾಡಿಕೊಳ್ಳಲು DCP (A Digital Cinema Package (DCP) is the standard file format used to deliver and project movies in digital theaters. Instead of a single video file like an MP4, it is a structured folder of media and instruction files designed for cinema servers and projector) ಇದೆ. ಜೊತೆಗೆ MoV (MOV (QuickTime File Format) is a multimedia container format developed by Apple that is widely used in film editing and post-production, though commercial cinemas typically play finished films from a Digital Cinema Package (DCP) rather than raw MOV files) ಕೂಡ 2K resolution ನಲ್ಲಿ ಕೊಡಬಹುದು. ಇಷ್ಟು ಸರಳವಾದ ಮಾರ್ಗ ಬಿಟ್ಟು ಹತ್ತು ವರ್ಷಗಳ ಹಿಂದಿನ Blue Ray ಏಕೆ ಬೇಕು ಅರ್ಥವಾಗುತ್ತಿಲ್ಲ. ಈ ಹಿಂದೆ ರಾಷ್ಟ್ರ ಪ್ರಶಸ್ತಿಗೆ ಪನೋರಮಾ ವಿಭಾಗಕ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ, ಪುಣೆಯ National Film Archives of India (NFAI) ಗೆ ಚಿತ್ರ ಸಲ್ಲಿಕೆಗೆ Blue Ray ಕೇಳುತ್ತಿದ್ದರು. ಈಗ ಅವೆಲ್ಲ ಸಂಸ್ಥೆಗಳೂ Pocket Hard Drive ಗೆ ಬದಲಾಗಿವೆ. ಆದರೆ ಕರ್ನಾಟಕ ರಾಜ್ಯ ಸರ್ಕಾರದ ವಾರ್ತಾ ಇಲಾಖೆ ಮಾತ್ರ ಇನ್ನೂ ಹತ್ತು ವರ್ಷ ಹಿಂದೆ ಉಳಿದಿದೆ”.
ಇಷ್ಟೆಲ್ಲ ಕಷ್ಟಪಟ್ಟು ಸಿನಿಮಾ ಸಿದ್ಧಪಡಿಸಿ ಕೊಟ್ಟರೂ, Blue Ray ವಾರ್ತಾ ಇಲಾಖೆಯ ಬಳಿ ಸುರಕ್ಷಿತವಾಗಿರುತ್ತದೆ ಎಂದು ಹೇಳುವಂತಿಲ್ಲ” ಎಂದು ಮನ್ಸೋರೆ ಈ-ದಿನದ ಬಳಿ ತಮ್ಮ ಅಳಲು ತೋಡಿಕೊಂಡರು. ಅವರ Ac̈t 1978 ಚಿತ್ರದ ಅರ್ಜಿ ಮತ್ತು Blue Ray ಯ ಚಿತ್ರ ಎರಡೂ ತೊಂದರೆಯಾಗಿದೆ ಎಂದು ಹೇಳಿ ಚಿತ್ರವನ್ನು ಇಲಾಖೆ ಪೆನ್ ಡ್ರೈವ್ ನಲ್ಲಿ ತರಿಸಿಕೊಂಡಿತು. “ಒಂದು ಪೆನ್ ಡ್ರೈವ್ ಅಥವ DCPಯಲ್ಲಿ ಮುಗಿಯುವ ಕೆಲಸಕ್ಕೆ Blue Ray ನೇ ಯಾಕೆ ಬೇಕು. Content ಸುರಕ್ಷತೆಯಿಂದ ನೋಡಿದರೂ DCP ಸಾಕಲ್ಲವೇ?”. ಪ್ರಶಸ್ತಿ ಮತ್ತು ಸಬ್ಸಿಡಿ ಎರಡಕ್ಕೂ ಅರ್ಜಿ ಸಲ್ಲಿಸಬೇಕೆಂದರೆ ಹೆಚ್ಚೂ ಕಡಿಮೆ 50 ರಿಂದ 60 ಸಾವಿರ ವೆಚ್ಚವಾಗುತ್ತದೆ. ಇದು ಸಿನಿಮಾ ನಿರ್ಮಾಪಕರ, ನಿರ್ದೇಶಕರ ಶೋಷಣೆಯಲ್ಲವೇ? ಎಂಬುದು ಅವರ ಪ್ರಶ್ನೆ. ಈ ಕುರಿತು ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿಯಾಗಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಸರ್ಕಾರ ಎಲ್ಲರ ಗಮನಕ್ಕೆ ತಂದರೂ, ಇದುವರೆಗೆ ಯಾವುದೇ ಉಪಯೋಗವಾಗಿಲ್ಲ. ಸರ್ಕಾರ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಹೊಸ ಅಧ್ಯಕ್ಷರ ನೇಮಕಾತಿಗಾಗಿ ತಲೆಕೆಡಿಸಿಕೊಂಡು ಕೂತಿದೆ. ಏಕೆಂದರೆ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆಸುವ ಕಾಲ ಹತ್ತಿರವಾಗುತ್ತಿದೆ. ಅಕಾಡೆಮಿಗೆ ಇದು ಸುಭಿಕ್ಷ ಕಾಲ.
ಈ ನಡುವೆ Central Board of Film Certification (CBFC) ಒಂದು ಸಿನಿಮಾಟೋಗ್ರಫಿ ಕಾಯ್ದೆ 1952ರ ಅಡಿಯಲ್ಲಿ ಮತ್ತು ಸಿನಿಮಾಟೊಗ್ರಾಫ್ (ಸರ್ಟಿಫಿಕೇಷನ್) ನಿಯಮಗಳು 2026 ಅಡಿಯಲ್ಲಿಸುತ್ತೋಲೆಯೊಂದನ್ನು ( No M/23/2026) ಹೊರಡಿಸಿದೆ. ಅದರ ಪ್ರಕಾರ, ನಿರ್ದೇಶಕರಿಗೆ ಸಿನಿಮಾ ಕಥೆಯ ಅಂತಿಮ ಪ್ರತಿ ಸಲ್ಲಿಸುವ ಬಗ್ಗೆ ಮತ್ತು ಸೆನ್ಸಾರ್ ಮಂಡಳಿಗೆ ಸಿನಿಮಾವನ್ನು ಸಲ್ಲಿಸುವ ಬಗ್ಗೆ ಇರುವ ನಿಯಮಗಳ ಬಗ್ಗೆ ʼಹೊಸʼ ತಿಳುವಳಿಕೆಯನ್ನು ನೀಡಿದೆ. ಸೆನ್ಸಾರ್ ಸಮಿತಿಗೆ ಸಿನಿಮಾ ಸಲ್ಲಿಸುವ ಮುನ್ನ ಚಿತ್ರ ವೀಕ್ಷಣೆಗೆ ಅಗತ್ಯವಾಗಿರುವ ಎಲ್ಲ ಪ್ರಕ್ರಿಯೆಗಳು ಮುಗಿದಿರಬೇಕು, ಅಂದರೆ, “films submitted for examination and certification must be in their total final and complete form in all respects including final graphics (titļe credits sub titles disclaimers censor certification slate etc) final background score/music sound mix and any accessibility features intended for the final theatrical/exhibition version (such as losed captions subtitles for the hearing impaird and audio description where applicable) Only the version of the film that has been duly certified by the CBFC may be exhibitited in theatres”̤ ಈ ನಿಯಮಗಳನ್ನು ಪಾಲಿಸದಿದ್ದರೆ, ಚಿತ್ರವನ್ನು ಸಂಪೂರ್ಣ ಚಿತ್ರವೆಂದು ಪರಿಗಣಿಸಲಾಗುವುದಿಲ್ಲ ಎಂದು ತನ್ನ ಸುತ್ತೋಲೆಯಲ್ಲಿ ಖಚಿಚಪಡಿಸಿದೆ.
ಶೀರ್ಷಿಕೆ ಕದನ
ಆದರೆ ಸಿನಿಮಾಕ್ಕೆ ನೀಡಿರುವ ಟೈಟಲ್ ಶೀರ್ಷಿಕೆ ಅಂತಿಮವಲ್ಲ. “The title of the film (including trailer teaser or promos) as indicated by the producer/director/applicant in the application shall not be construed as final or as having been approved merely on account of submission/registration thereof . The title remains liable to scrutiny review and modificationby the Examining/Revising Committee iin terms of the Guidelines issued under Section 5B(1) of the Cinematograph (Certification) Rules 2024 Produccers/Applicantsare advised not to publicise or commit to a title as final prior to Certification ಎಂದು ಸುತ್ತೋಲೆ ಹೇಳುತ್ತದೆ. ಅಂದರೆ ಟೈಟಲ್ ಯಾವುದು? ಹೇಗೆ ಇರಬೇಕು ಅನ್ನೊದನ್ನ ಇನ್ನು ಮುಂದೆ CBFC ನಿರ್ಧಾರ ಮಾಡುತ್ತದೆ. ಆದರೆ ಇದರ ಬಗ್ಗೆ ಭಾರತದ ಯಾವುದೇ ಫಿಲಂ ಚೇಂಬರ್ ಕೂಡ ಇದುವರೆಗೆ ಧ್ವನಿ ಎತ್ತಿಲ್ಲ. ದಿಲ್ಲಿಯಲ್ಲಿ ಕೂತಿರುವ ಸರ್ಕಾರ ಸಿನಿಮಾಕ್ಕೆ ಹಾಕುತ್ತಿರುವ ಮತ್ತೊಂದು ಮೂಗುದಾರ ಇದು. ಇಂದು ಕೇವಲ ಟೈಟಲ್ ಮಾತ್ರ ಎಂದು ಕೊಂಡು ಸುಮ್ಮನಿದ್ದರೆ, ಮುಂದೆ ಕಥೆ ಹೇಗಿರಬೇಕು, ಅದನ್ನು ಹೇಗೆ ಹೇಳಿದರೆ CBFC Certificate ಸಿಗುತ್ತೆ, ಯಾರು ನಾಯಕರಾಗಬೇಕು ಎಲ್ಲವನ್ನೂ ಒಕ್ಕೂಟ ಸರ್ಕಾರವೇ ತೀರ್ಮಾನಿಸುತ್ತದೆ ಎನ್ನಿಸುತ್ತಿದೆ.
CBFC ದಾಖಲೆಗೆ ಕನ್ನ; 500 ಚಿತ್ರಗಳ ಮಾಹಿತಿ ಸೋರಿಕೆ
Central Board of Film Certification (CBFC) ಒಂದು ಸಿನಿಮಾಟೋಗ್ರಫಿ ಕಾಯ್ದೆ 1952ರ ಅಡಿಯಲ್ಲಿ ಮತ್ತು ಸಿನಿಮಾಟೊಗ್ರಾಫ್ (ಸರ್ಟಿಫಿಕೇಷನ್) ನಿಯಮಗಳು 2026 ಅಡಿಯಲ್ಲಿ ಹೊರಡಿಸಿರುವ ಸುತ್ತೋಲೆಯ ಹಿಂದಿನ ಹುನ್ನಾರವನ್ನು ಪ್ರಶ್ನೆ ಮಾಡಬೇಕಾದಂಥ ಪರಿಸ್ಥಿತಿ ಎದುರಾಗಿದೆ.
ನಿಯಮಾವಳಿ ಪ್ರಕಾರ, ನಿರ್ದೇಶಕರಿಗೆ ಸಿನಿಮಾ ಕಥೆಯ ಅಂತಿಮ ಪ್ರತಿ ಸಲ್ಲಿಸುವಾಗ ಮತ್ತು ಸೆನ್ಸಾರ್ ಮಂಡಳಿಗೆ ಸಿನಿಮಾವನ್ನು ಸಲ್ಲಿಸುವಾಗ ಚಿತ್ರ ವೀಕ್ಷಣೆಗೆ ಅಗತ್ಯವಾಗಿರುವ ಎಲ್ಲ ಪ್ರಕ್ರಿಯೆಗಳು ಮುಗಿದಿರಬೇಕು ಎಂದಿರುವುದು ಸ್ವಲ್ಪ ಆಶ್ಚರ್ಯವನ್ನೇ ಹುಟ್ಟಿಸಿದೆ.
ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ, ಇಡೀ ಭಾರತೀಯ ಚಿತ್ರರಂಗವನ್ನು ಬೆಚ್ಚಿ ಬೀಳಿಸುವಂಥ ಸಂಗತಿಯೊಂದು ಬಯಲಾಗಿದೆ. ಇತ್ತೀಚೆಗೆ ವೆಬ್ಸೈಟ್ ಮತ್ತು ಇಂಟರ್ನೆಟ್ನ್ನು ಯಾರು ಬೇಕಾದರೂ, ಬೇಧಿಸಬಹುದೆಂಬುದು, ಅದರಿಂದ ದತ್ತಾಂಶಗಳನ್ನು ಮಾಹಿತಿಗಳನ್ನು ಕದ್ದು ಇತರರಿಗೆ ರವಾನಿಸಬಹುದು ಎಂಬುದು ಜಗಜ್ಜಾಹಿರಾಗಿರುವ ಸಂದರ್ಭದಲ್ಲಿ CBFCಯ ವೆಬ್ಸೈಟ್ ನಿಂದ ಸುಮಾರು 500 ಚಿತ್ರಗಳ ದತ್ತಾಂಶ ಸೋರಿಕೆಯಾಗಿದೆ. ಈ ದತ್ತಾಂಶಗಳಲ್ಲಿ CBFC ಗೆ ಸಲ್ಲಿಕೆಯಾಗಿರು ಚಿತ್ರ ಕಥೆಗಳು, ಪ್ರತಿ ಷಾಟ್ಗಳ ವಿವರಗಳು ಸೋರಿಕೆಯಾಗಿರುವುದು ಆತಂಕ ಹುಟ್ಟಿಸಿದೆ. ಈ ವಿವರಗಳನ್ನು ಆಯಾ ಚಿತ್ರಗಳ ನಿರ್ಮಾಪಕರು, ನಿರ್ದೇಶಕರು, ಸೆನ್ಸಾರ್ ಪ್ರಮಾಣ ಪತ್ರ ಪಡೆದುಕೊಳ್ಳಲು ಸಲ್ಲಿಸಿದ್ದಾಗಿವೆ. ಅಷ್ಟೇ ಅಲ್ಲ. ಈ ದತ್ತಾಂಶಗಳಲ್ಲಿ ಸೂಕ್ಷ್ಮಾತಿಸೂಕ್ಷ್ಮ ಸಿನಿಮಾ ವ್ಯವಹಾರದ ಮಾಹಿತಿಗಳೂ ಸೋರಿಕೆಯಾಗಿವೆ. ಈ ಕುರಿತು ಈಗಾಗಲೇ CBFC ತನಿಖೆ ಆರಂಭಿಸಿದ್ದು, ಜೊತೆಗೆ ಸೆಕ್ಯೂರಿಟಿ ಆಡಿಟಿಂಗ್ (ಭದ್ರತಾ ಮಾಹಿತಿ ಪರಿಶೀಲನೆ) ಕೂಡ ನಡೆಸುತ್ತಿದೆ. ಈ ಕುರಿತು ಈದಿನ CBFCಯ ಮುಖ್ಯಸ್ಥರಾದ ಶಶಿಶೇಖರ್ ವೆಂಪಾತಿ ಅವರನ್ನು ಸಂಪರ್ಕಿಸಿದಾಗ, ಈ ರೀತಿ ದಾಖಲೆ ಸೋರಿಕೆಯಾಗಿರುವುದು ಸತ್ಯ. ಇದರ ಬಗ್ಗೆ ತನಿಖೆ ಮತ್ತು ಭದ್ರತಾ ಮಾಹಿತಿ ಪರಿಶೀಲನೆ ನಡೆಯುತ್ತಿದೆ. ಇದಕ್ಕಿಂತ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂಬ ಉತ್ತರ ಬಂತು. ಇತ್ತೀಚೆಗೆ ಸೆನ್ಸಾರ್ ಮಂಡಳಿಯ ಅಧ್ಯಕ್ಷರಾಗಿರುವ ಸೂಕ್ಷ್ಮ ಮನಸ್ಸಿನ ನಟ ಪಂಕಜ್ ತ್ರಿಪಾಠಿಗೂ ಇದರಿಂದ ಆತಂಕವಾದಂತಿದೆ. “ನಾನು ಈಗಷ್ಟೇ, ಈ ವ್ಯವಸ್ಥೆಯ ಭಾಗವಾಗಿದ್ದೇನೆ. ಮೊದಲ ಸಭೆಯಲ್ಲಿ ನಾವು ಈ ಎಲ್ಲ ಸಂಗತಿಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ಚರ್ಚಿಸಿದೆವು. ನನಗೆ ಅರ್ಥವಾಗಿದೆ, ನಿಯಮಾವಳಿಗಳಿವೆ, ಮತ್ತು ಪ್ರಮಾಣ ಪತ್ರ ನೀಡಲು ಒಂದಷ್ಟು ನಿಯಮಗಳಿವೆ. ಆದರೆ, ಈ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿದವರು ಬುದ್ಧಿವಂತರಾಗಿರಬೇಕಾಗುತ್ತದೆ ಅಷ್ಟೆ…” ಎಂದರು. ಇದರಿಂದ ಎಲ್ಲವೂ ಅವರಿಗೆ ಅರ್ಥವಾಗಿದೆ ಎಂದು ಮನದಟ್ಟಾಗಿದೆ ಎನ್ನಿಸಿತು.
ದಶಕದ ಹಿಂದೆ CBFC ಯು e-Cinepramaan ಎಂಬ ಪೋರ್ಟೆಲ್ ಆರಂಭಿಸಿ ಅದರ ಮೂಲಕ ಪ್ರಮಾಣ ಪತ್ರ ನೀಡುವ ಇಡೀ ವ್ಯವಸ್ಥೆಯನ್ನು ಡಿಜಟಲೀಕರಣ ಮಾಡಿತು. ಚಿತ್ರ ನಿರ್ಮಾಪಕರು ತಮ್ಮ ಚಿತ್ರಗಳನ್ನು ಈ ಪೋರ್ಟೆಲ್ ಮೂಲಕವೇ ಸಲ್ಲಿಸಬೇಕಾಯಿತು. ಆದರೆ ಯಾರೋ ಅತಿ ಬುದ್ಧಿವಂತರು, ಈಗ ಈ e-Cinepramaan ಗೆ ಕನ್ನ ಹಾಕಿದ್ದಾರೆ. ಈ ಕಳ್ಳತನದಲ್ಲಿ ಕೇವಲ ಚಿತ್ರಗಳಷ್ಟೇ ಅಲ್ಲ, ಚಿತ್ರಕತೆಗಳು, ಚಿತ್ರದ ದೃಶ್ಯ ವಿಭಜನೆಯ ಸ್ಕ್ರಿಪ್ಟ್ ಕೂಡ ಕಳುವಾಗಿದೆ. CBFC ಯ ಅಧಿಕೃತ ಮೂಲಗಳ ಪ್ರಕಾರ ಬ್ರೆಜಿಲಿಯನ್ ಅಕಾಡೆಮಿ ಪ್ರಶಸ್ತಿಗೆ ನಾಮಾಂಕಿತಗೊಂಡ ʼ ದ ಸಿಕ್ರೇಟ್ ಏಜೆಂಟ್, ಹಾಲಿವುಡ್ ನ ಗುಡ್ ಲಕ್, ಹ್ಯಾವ್ ಫನ್, ಡೋಂಟ್ ಲೈ ಚಿತ್ರಗಳು ಲೈಸೆನ್ಸ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದವು ಎಂದು ಅರ್ಥವಾಗುತ್ತದೆ. ಕೇವಲ ಭಾರತ ʼವುಡ್ʼ ಗ ಚಿತ್ರವಲ್ಲ. ಹಾಲಿʼವುಡ್ʼ ನ ಸರಕು ಕೂಡ ಕಳುವಾಗಿದೆ. ಇನ್ನು ಈ CBFC ಅನ್ನು ನಂಬುವುದು ಹೇಗೆ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇಂಥ ಸಂದರ್ಭದಲ್ಲಿ CBFC ಈ ಸುತ್ತೋಲೆ ಹೊಡಿಸಿದೆ.
ಹೆಚ್ಚಿದ ಸೆನ್ಸಾರ್ ಪ್ರಮಾಣ ಪತ್ರ ಶುಲ್ಕ
ಮನ್ಸೋರೆಯವರ ಎಲ್ಲ ಮಾತುಗಳನ್ನು ಅನುಮೋದಿಸುವ ಮತ್ತೊಬ್ಬ ಹಿರಿಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಪಿ. ಶೇಷಾದ್ರಿ, “ಈ ಎಲ್ಲ ಸಮಸ್ಯೆಗಳನ್ನು ನಾನು ಕಳೆದ ಹತ್ತು ವರ್ಷಗಳಿಂದ ಅನುಭವಿಸುತ್ತಿದ್ದೇನೆ” ಎನ್ನುತ್ತಾರೆ. ಇದರ ಜೊತೆಯಲ್ಲಿ ಭಾರತದಲ್ಲಿ ಚಲನಚಿತ್ರಗಳ ಸೆನ್ಸಾರ್ ಪ್ರಮಾಣ ಪತ್ರ ಪಡೆಯಲು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ವಿಧಿಸುವ ಶುಲ್ಕದಲ್ಲಿ ಬದಲಾವಣೆ ಮಾಡಲಾಗಿದೆ. ಇದರ ಜೊತೆಗೆ ಸೆನ್ಸಾರ್ ಮಂಡಳಿಯ ನಿರ್ಧಾರವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ವ್ಯವಸ್ಥೆಯಲ್ಲಿಯೂ ಇತ್ತೀಚಿನ ದಿನಗಳಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಇಲ್ಲಿ ಮುಖ್ಯವಾಗಿ ಎರಡು ವಿಷಯವನ್ನು ಗಮನಿಸಬೇಕು – ಚಿತ್ರವನ್ನು ಮೊದಲ ಬಾರಿಗೆ ಸೆನ್ಸಾರ್ ಗೆ ಕಳುಹಿಸುವಾಗ ಪಾವತಿಸಬೇಕಾದ ಪ್ರಮಾಣೀಕರಣ ಶುಲ್ಕ, ಸೆನ್ಸಾರ್ ಮಂಡಳಿಯ ನಿರ್ಧಾರವನ್ನು ಪ್ರಶ್ನಿಸಿ, ಮರುಪರಿಶೀಲನೆಗೆ ಅಥವಾ ಮೇಲ್ಮನವಿಗೆ ಕೋರುವಾಗ ಉಂಟಾಗುವ ವೆಚ್ಚ.
2024ರ ಸಿನೆಮಾಟೋಗ್ರಾಫ್ (ಪ್ರಮಾಣೀಕರಣ) ನಿಯಮಾವಳಿಯಲ್ಲಿ ಚಿತ್ರದ ಅವಧಿಗೆ ಅನುಗುಣವಾಗಿ ಶುಲ್ಕದ ದರಗಳನ್ನು ನಿಗದಿಪಡಿಸಲಾಗಿದೆ. “ಸಾಮಾನ್ಯ ಚಿತ್ರಗಳು ಮತ್ತು ಶೈಕ್ಷಣಿಕ ಚಿತ್ರಗಳಿಗೆ ಪ್ರತ್ಯೇಕ ದರಗಳಿವೆ. ಇದರ ಜೊತೆಗೆ ಸ್ಕ್ರೀನಿಂಗ್ ಶುಲ್ಕವೂ ಅನ್ವಯಿಸುತ್ತದೆ. ಚಿತ್ರ 200 ನಿಮಿಷದ್ದಾದರೆ, ಎಲ್ಲ ವೆಚ್ಚಗಳೂ ಸೇರಿ ರೂ. 36, 300 ಪಾವತಿಸಬೇಕಾಗುತ್ತದೆ. ಇದು 2024ರಲ್ಲಿ ಪ್ರಕಟಿಸಲಾಗಿರುವ ದರ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಲು ನಿರಾಕರಿಸಿದರೆ, ಮರುಪರಿಶೀಲನೆಗೆ ಸುಮಾರು ರೂ 75000 ವೆಚ್ಚವಾಗುತ್ತದೆ. ಅದಕ್ಕೆ ಪ್ರತಿಯನ್ನು ಸಲ್ಲಿಸುವುದು ಇತ್ಯಾದಿ ಸೇರಿ ರೂ 1 ಲಕ್ಷಕ್ಕೆ ಬಂದು ನಿಲ್ಲುತ್ತದೆ. ಚಿತ್ರ ಮಾಡಿಯೇ ಆರ್ಥಿಕವಾಗಿ ದಣಿದಿರುವ ನಿರ್ದೇಶಕ ಇಷ್ಟೊಂದು ಹಣವನ್ನು ಹೊಂದಿಸಲು ಹೇಗೆ ಸಾಧ್ಯ?” ಎನ್ನುತ್ತಾರೆ ಶೇಷಾದ್ರಿ.
IFFI ಹೆಚ್ಚಿದ ಶುಲ್ಕ
ಇದರೊಂದಿಗೆ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI International Film Festival of India) ಕ್ಕೆ ಚಿತ್ರಗಳನ್ನು ಸಲ್ಲಿಸುವ ಶುಲ್ಕದ ಪರಿಶೀಲಿಸಿದಾಗ ಒಂದು ಮಹತ್ವದ ಸಂಗತಿ ತಿಳಿಯುತ್ತದೆ. 2026ರ 57ನೇ IFFI Indian Panorama ವಿಭಾಗಕ್ಕೆ ಚಿತ್ರ ಸಲ್ಲಿಸುವ ಶುಲ್ಕ ವಿಧಿಸಲಾಗಿದೆ ಆದರೆ, 2025ರಲ್ಲಿ ಇದೇ ವಿಭಾಗಕ್ಕೆ ಪ್ರವೇಶ ಶುಲ್ಕ ಇರಲಿಲ್ಲ. ಇದು ಸ್ವತಂತ್ರ ಚಿತ್ರ ನಿರ್ಮಾಣಕಾರರು ಗಮನಿಸಬೇಕಾದ ಮಹತ್ವದ ಬದಲಾವಣೆ. ಈ ವರ್ಷ ಪೂರ್ಣಾವಧಿ ಚಿತ್ರ (Feature Film) ಕ್ಕೆ ರೂ. 11800 (18ಶೇ ಜಿಎಸ್ ಟಿ ಶುಲ್ಕ ಸೇರಿ) ಪಾವತಿಸಬೇಕಾಯಿತು. ಕಿರುಚಿತ್ರ/ಸಾಕ್ಷ್ಯಾಚಿತ್ರಕ್ಕೆ ರೂ. 3540 ನಿಗದಿ ಪಡಿಸಲಾಯಿತು. ಅಧಿಕೃತ IFFI 2026 ನಿಯಮಾವಳಿಗಳ ಪ್ರಕಾರ ಇದು ಆನ್ ಲೈನ್ ಅರ್ಜಿ ಸಲ್ಲಿಸುವಾಗಲೇ ಪಾವತಿಸಬೇಕಾದ ಶುಲ್ಕ. ಇದು ಮರುಪಾವ್ತಿಯಾಗದ ಶುಲ್ಕ. ಹಿಂದಿನ ವರ್ಷಕ್ಕೆ ಹೋಲಿಸಿದರೆ IFFI Indian Panorama ವಿಭಾಕ್ಕೆ ಚಿತ್ರ ಸಲ್ಲಿಸಲು ಯಾವುದೇ ಶುಲ್ಕವಿರಲಿಲ್ಲ. ಹೀಗಾಗಿ ಉಚಿತ ಪ್ರವೇಶ ವ್ಯವಸ್ಥೆಯಿಂದ ಶುಲ್ಕ ಪಾವ್ತಿ ಪ್ರವೇಶಕ್ಕೆ ಚಿತ್ರೋತ್ಸವ ತೇರ್ಗಡೆಯಾಗಿರುವುದರಿಂದ ಚಿತ್ರ ಮಾಡುವಾಗಲೇ ಕಾಫಿಗೂ ಕಾಸಿಲ್ಲದಂತೆ ನರಳಿದ ಸ್ವತಂತ್ರ ನಿರ್ಮಾಪಕರು/ನಿರ್ದೇಶಕರು, ಚಿತ್ರ ಸಲ್ಲಿಸಲು ಶುಲ್ಕ ಪಾವ್ತಿ ಮಾಡುವಂತಾಗಿದೆ.
ಹೆಚ್ಚಿನ ವೆಚ್ಚ
ಇದರ ಜೊತೆಗೆ ಡಿಸಿಪಿ ತಯಾರಿಕೆ ಮತ್ತು ಸಾಗಣೆ ವೆಚ್ಚ, ಇಂಗ್ಲಿಷ್ ಉಪಶೀರ್ಷಿಕೆ ಸಿದ್ಧಪಡಿಸುವ ವೆಚ್ಚ, ಪೋಸ್ಟರ್, ಪ್ರಚಾರ ಸಾಮಾಗ್ರಿ ವೆಚ್ಚ, ಆಯ್ಕೆಯಾದರೆ ಅಗತ್ಯವಿರುವ ಹೆಚ್ಚುವರಿ ತಾಂತ್ರಿಕ ಸಾಮಾಗ್ರಿಗಳ ವೆಚ್ಚ ಇವೆಲ್ಲವನ್ನು ನಿರ್ದೇಶಕ/ನಿರ್ಮಾಪಕರೇ ಭರಿಸಬೇಕಾಗುತ್ತೆ. “ಇದರಿಂದ ಒಳ್ಳೆಯ ಚಿತ್ರಗಳನ್ನು ನಿರ್ಮಿಸಿದರೂ, ಸ್ವತಂತ್ರ ಕನ್ನಡ ಚಿತ್ರ ನಿರ್ಮಾಪಕರಿಗೆ IFFI ಶುಲ್ಕದ ಹೆಚ್ಚಳದಿಂದ ಚಿತ್ರೋತ್ಸವಕ್ಕೆ ಚಿತ್ರ ಸಲ್ಲಿಸುವುದು ನಿಜಕ್ಕೂ ಒಂದು ಹೊರೆ” ಎನ್ನುತ್ತಾರೆ ಶೇಷಾದ್ರಿ. ಹಾಗೆ ನೋಡಿದರೆ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (BIFFes) ಚಿತ್ರಗಳ ಪ್ರವೇಶ ಶುಲ್ಕ ಕಡಿಮೆ ಎಂದೆನಿಸಿದರೂ, ಚಿತ್ರಗಳ ಪ್ರವೇಶ ಶುಲ್ಕದಲ್ಲಿ ಹೆಚ್ಚಳ ವಾಗಿದೆ. ಬೆಂಗಳೂರಿನ ಚಿತ್ರೋತ್ಸವದಲ್ಲಿ 2025ರಿಂದ 2026ಕ್ಕೆ ಪ್ರವೇಶ ಶುಲ್ಕ ಹೆಚ್ಚಾಗಿಲ್ಲ.ಗೋವಾದ IFFI 2026ರಲ್ಲಿ ಹೊಸದಾಗಿ ವಿಧಿಸಿರುವ ಶುಲ್ಕಕ್ಕೆ ಹೋಲಿಸಿದರೆ BIFFes ಶುಲ್ಕದ ಸ್ವರೂಪ ಭಿನ್ನವಾಗಿದೆ.ಒಂದಕ್ಕಿಂತ ಹೆಚ್ಚು ಸ್ಪರ್ಧಾ ವಿಭಾಗಗಳಿಗೆ ಚಿತ್ರ ಸಲ್ಲಿಸುವಾಗ ಪ್ರತಿ ಅರ್ಜಿಗೆ ಶುಲ್ಕ ಅನ್ವಯಿಸುತ್ತದೆ ಎನ್ನುವುದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಮರ್ಥನೆ. ಆದರೆ ಬಹಳಷ್ಟು ಸ್ವತಂತ್ರ ಚಿತ್ರ ನಿರ್ಮಾಪಕರ ಪ್ರಶ್ನೆ ಎಂದರೆ: “ IFFI Goa International Film Festival of India ಗೆ ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಖಾತೆಯ ಬಜೆಟ್ ನಿಂದ ಹಣ ಹರಿದುಬರುತ್ತದೆ. ಹಾಗೆಯೇ BIFFes ಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಭಾರಿ ಪ್ರಮಾಣದ ಹಣ ಬಿಡುಗಡೆ ಆಗುತದೆ. ಹೀಗಿರುವಾಗ, ಎಲ್ಲ ಶುಲ್ಕಗಳನ್ನು ಕಟ್ಟಿ ಚಿತ್ರ ನಿರ್ಮಿಸಿದ ನಿರ್ಮಾತೃಗಳಿಂದ ಚಿತ್ರೋತ್ಸವಗಳ ಸಂಘಟಕರು ಚಿತ್ರ ಪ್ರದರ್ಶನಕ್ಕೆ ಶುಲ್ಕ ವನ್ನೇಕೆ ಕೇಳಬೇಕು? ಇದು ಅರ್ಥವಾಗದ ಸಂಗತಿ ಕಾರ್ಪೋರೇಟ್ ಚಿತ್ರ ನಿರ್ಮಾಪಕರಿಗೆ ಈ ಶುಲ್ಕ ಹೆಚ್ಚಳ ಯಾವುದೇ ರೀತಿಯಲ್ಲೂ ಬಾಧಿಸುವುದಿಲ್ಲ. ಆದರೆ, ಅತಿ ಕಡಿಮೆ ವೆಚ್ಚದಲ್ಲಿ ಪೈಸೆ ಪೈಸೆಗೂ ಲೆಕ್ಕ ಹಾಕಿ ಚಿತ್ರೀಕರಣ ಮಾಡಿದ ನಿರ್ದೇಶಕ ನಿರ್ಮಾಪಕರಿಗೆ ನಿಜಕ್ಕೂ ಇದೊಂದು ಹೊರೆ. ಸ್ವತಂತ್ರ ಚಿತ್ರ ನಿರ್ಮಾಪಕರಿಗೆ ಇಂದಿನ ಸಂದರ್ಭದಲ್ಲಿ ಚಿತ್ರಮಂದಿರದಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡುವುದು ಕಷ್ಟ. ಹಾಗಾಗಿ ಅವರಿಗೆ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಳಲ್ಲಿ ಈ ಚಿತ್ರಗಳನ್ನು ಬಿಡುಗಡೆ ಮಾಡಿದರೆ ಅಕಸ್ಮಿಕವಾಗಿ ಪ್ರಶಸ್ತಿಯೂ ಬಂದರೆ ಅದರಿಂದ ಸ್ವಲ್ಪ ಅರ್ಥಿಕ ಸಮಸ್ಯೆ ಕಡಿಮೆಯಾಗುತ್ತದೆ. ರಾಷ್ಟ್ರಪ್ರಶಸ್ತಿ ಬಂದರೆ, ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡರೆ, ಸಬ್ಸಿಡಿ ಸಿಗುವುದೂ ಸುಲಭವಾಗುತ್ತದೆ” ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಸ್ವತಂತ್ರ ನಿರ್ದೇಶಕರೊಬ್ಬರು ಹೇಳಿದರು. ಈ ಮಾತು ನಿಜಕ್ಕೂ ಸತ್ಯವೆನ್ನಿಸುತ್ತದೆ.

ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.


