ಮೈಸೂರು ಕಾಗದ ಕಾರ್ಖಾನೆ ಆರಂಭಕ್ಕೆ ಸಕಾರಾತ್ಮಕ ಚಿಂತನೆ: ಸಚಿವ ಎಂ ಬಿ ಪಾಟೀಲ್

Date:

ಭದ್ರಾವತಿಯಲ್ಲಿರುವ ಮೈಸೂರು ಕಾಗದ ಕಾರ್ಖಾನೆಯ ಪುನರಾರಂಭಕ್ಕೆ ಸರ್ಕಾರವು ಸಕಾರಾತ್ಮಕವಾಗಿ ಚಿಂತನೆ ನಡೆಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃಧ್ದಿ ಸಚಿವ ಎಂ ಬಿ ಪಾಟೀಲ್ ಮಂಗಳವಾರ ವಿಧಾನ ಪರಿಷತ್‌ನಲ್ಲಿ ತಿಳಿಸಿದರು.

- Advertisement -

ಸದಸ್ಯ ಎಸ್ ರುದ್ರೇಗೌಡ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, “ಮೈಸೂರು ಕಾಗದ ಕಾರ್ಖಾನೆಯು ತೀವ್ರ ತರಹದ ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದ ಕಾರಣ ಎಲ್ಲಾ ಉತ್ಪಾದನಾ ಘಟಕಗಳನ್ನು 21-11-2015 ರಿಂದ ಸ್ಥಗಿತಗೊಳಿಸಿದ್ದು, ಜೂನ್ 2023 ಅಂತ್ಯಕ್ಕೆ ಒಟ್ಟು ಸಂಚಿತ ನಷ್ಟ 1,482 ಕೋಟಿ ರೂ. ಆಗಿದೆ” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

“ಸರ್ಕಾರವು ಕಾರ್ಖಾನೆಯ ಪುನರುಜ್ಜೀವನ ಸಾಧ್ಯವಿಲ್ಲವೆಂದು ತೀರ್ಮಾನಿಸಿ ಕಾರ್ಖಾನೆಯ ಕಾರ್ಯಚಟುವಟಿಕೆಗಳನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ನೀಡಬೇಕೆಂದು ತೀರ್ಮಾನ ಕೈಗೊಂಡು, ಈ ಪ್ರಕ್ರಿಯೆಗಳಿಗೆ ಮೆ॥ ಐಡೆಕ್‌ನ ಸೇವೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆರ್‌ಎಫ್ ಕ್ಯೂ ಅನ್ನು ಏಪ್ರಿಲ್ 2017,ಆಗಸ್ಟ್ 2018 ಹಾಗೂ ಮಾರ್ಚ್ 2019 ರಲ್ಲಿ ಪ್ರಕಟಿಸಲಾಗಿತ್ತು. ಆರ್‌ಎಫ್ ಕ್ಯೂಗೆ ಯಾವುದೇ ಅರ್ಜಿ ಸ್ವೀಕೃತವಾಗಿರುವುದಿಲ್ಲ” ಎಂದರು.

“ಆರ್‌ಎಫ್‌ಕ್ಯೂ ಅನ್ನು ಕಂಪನಿಯು ಮೊದಲೇ ಅಪ್‌ಲೋಡ್ ಮಾಡಲಾಗಿದ್ದು ಆರ್‌ಎಫ್‌ಕ್ಯೂಗಾಗಿ ಪ್ರಚಾರವನ್ನು ಮತ್ತು ಈಗಾಗಲೇ ವ್ಯಾಪಕ ನೀಡಲಾಗಿರುವುದರಿಂದ ಪ್ರಸ್ತಾವನೆಗಾಗಿ ವಿನಂತಿಯನ್ನು (ಆರ್‌ಎಫ್‌ಪಿ) ನೇರವಾಗಿ ದಿನಾಂಕ: 25.11.2020 ರಂದು ಅಪ್‌ಲೋಡ್ ಮಾಡಲಾಗಿದ್ದು, ಇ-ಟೆಂಡರ್ ತೆರೆದಾಗ ಯಾವುದೇ ಸ್ವೀಕೃತವಾಗಿರುವುದಿಲ್ಲ” ಎಂದು ವಿವರಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗೋಸುಂಬೆಯನ್ನೂ ನಾಚಿಸಿದ ಕುಮಾರಸ್ವಾಮಿ

“ನಿರೀಕ್ಷಿತ ಬಿಡ್ಡುದಾರರು ನೀಲಗಿರಿ ಬೆಳೆಯಲು ಎಂಪಿಎಂಗೆ ವಿನಾಯಿತಿ ಹಾಗೂ ಯಾವುದೇ ಹೊಣೆಗಾರಿಕೆಗಳಿಲ್ಲದ ಕಂಪೆನಿಯ ಕಾರ್ಯಾಚರಣೆಗಳನ್ನು ನಡೆಸಲು ಬಯಸಿರುತ್ತಾರೆ. ಅದರಂತೆ, ನೀಲಗಿರಿ ಬೆಳೆಯಲು ಎಂಪಿಎಂಗೆ ವಿನಾಯಿತಿ ಮತ್ತು ಬಾಕಿ ಉಳಿದಿರುವ 1,102 ಕೋಟಿಗಳ ಹೊಣೆಗಾರಿಕೆಗಳ ಕುರಿತು ಸರ್ಕಾರವು ತೀರ್ಮಾನ ತೆಗೆದು ಕೊಳ್ಳಬೇಕಾಗಿರುತ್ತದೆ” ಎಂದರು.

“ಕಾರ್ಖಾನೆಯ ಭೂ ಪ್ರದೇಶವನ್ನು ಮೈಸೂರು ಕಾಗದ ಕಾರ್ಖಾನೆಯು ಸಂರಕ್ಷಿಸಿದ್ದು, ನಿರೀಕ್ಷಿತ ಬಿಡ್ಡುದಾರರು ನೀಲಗಿರಿ ಬೆಳೆಯಲು ಎಂಪಿಎಂಗೆ ವಿನಾಯಿತಿ ಹಾಗೂ ಯಾವುದೇ ಹೊಣೆಗಾರಿಕೆಗಳಿಲ್ಲದ ಕಂಪನಿಯ ಕಾರ್ಯಾಚರಣೆಗಳನ್ನು ನಡೆಸಲು ಬಯಸುವುದರಿಂದ, ಅದರಂತೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದ್ದು, ತದನಂತರ ಕಾರ್ಖಾನೆಯನ್ನು ಪುನರ್ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಸಚಿವರು ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಮರ್ ಖಾಲಿದ್ ಕುರಿತ ‘ಕೈದಿ‌ ನಂ. 626710 ಈಸ್ ಪ್ರೆಸೆಂಟ್’ ಸಾಕ್ಷ್ಯಚಿತ್ರ ಪ್ರದರ್ಶನ ರದ್ದಾಗಿದ್ದು ಯಾಕೆ?

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (NLSIU) ಜವಾಹರಲಾಲ್...

ಕನಕಪುರ ವಿದ್ಯಾರ್ಥಿ ನಿಲಯಕ್ಕೆ ಸಿಎಂ ದಿಢೀರ್ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚೆ

ಕನಕಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯಕ್ಕೆ...

‘ದೇಶದಲ್ಲಿ ಎಲ್ಲವೂ ಸರಿಯಿದೆ ಎನ್ನುತ್ತಾರೆ ಪ್ರಧಾನಿ, ಆದರೆ ಎಲ್ಲವೂ ದುಬಾರಿಯಾಗಿದೆ’

ದೇಶದಲ್ಲಿ ದಿನಬಳಕೆಯ ವಸ್ತುಗಳ ಬೆಲೆಯಲ್ಲಿನ ಗಣನೀಯ ಏರಿಕೆ ಮತ್ತು ಕುಸಿಯುತ್ತಿರುವ ನೈಜ...

ಬಿಜೆಪಿ ಹೇಳಿದ ತಕ್ಷಣ ಇನ್ಸ್‌ಪೆಕ್ಟರ್ ಅಮಾನತು ಮಾಡೋಕಾಗಲ್ಲ: ಪ್ರಿಯಾಂಕ್ ಖರ್ಗೆ

ಗಣಪತಿ ಮೆರವಣಿಗೆ ವೇಳೆ ಮಸೀದಿ ಮುಂದೆ ದಾಂಧಲೆ-ರಂಪಾಟ ನಡೆಸದಂತೆ ಹಿಂದುತ್ವ ಗುಂಪುಗಳಿಗೆ...