ಬೀದರ್ | ಶರಣರು ಕಟ್ಟ ಬಯಸಿದ್ದ ಸಮ ಸಮಾಜ ಕನಸಾಗಿಯೇ ಉಳಿದಿದೆ : ಡಾ. ಸಿದ್ದನಗೌಡ ಪಾಟೀಲ

Date:

Advertisements
  • ಹೊಸ ಪರಿಕಲ್ಪನೆ ನೀಡಿದ ವಚನ ಚಳವಳಿ ಹೆಚ್ಚು ಪ್ರಸ್ತುತ
  • ವಚನ ಚಳವಳಿಯ ಪ್ರಸ್ತುತತೆ 72ನೇ ಉಪನ್ಯಾಸ ಸಮಾರಂಭ

ಜಾಗತಿಕರಣ ಮತ್ತು ಕಾರ್ಪೋರೆಟ್ ಕಂಪನಿಗಳು ಆಳುವ ಇಂದಿನ ಕಾಲದಲ್ಲಿ ಅರ್ಥಶಾಸ್ತ್ರಕ್ಕೆ, ಸಮಾಜಕ್ಕೆ, ಸಾಮಾನ್ಯರ ಬದುಕಿಗೆ ಹೊಸ ಪರಿಕಲ್ಪನೆ ನೀಡಿದ ವಚನ ಚಳವಳಿ ಹೆಚ್ಚು ಪ್ರಸ್ತುತವಾಗುತ್ತದೆ ಎಂದು ಹಿರಿಯ ಚಿಂತಕ ಡಾ. ಸಿದ್ದನಗೌಡ ಪಾಟೀಲ ಹೇಳಿದರು.

ಬಸವ ಜಯಂತಿಯ ಪ್ರಯುಕ್ತ ಡಾ. ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನವು ಬಸವಕಲ್ಯಾಣದ ನೀಲಾಂಬಿಕಾ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ “ವಚನ ಚಳುವಳಿಯ ಪ್ರಸ್ತುತತೆ” 72ನೇ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

“ಆಧುನಿಕ ಅರ್ಥಶಾಸ್ತ್ರ ಎಲ್ಲವನ್ನೂ ತನಗೇ ಬೇಕೆಂದು ಹೇಳುವಾಗ ಶರಣರ ದಾಸೋಹ ಸಿದ್ದಾಂತ ಸಮಾಜವಾದದ ಮಹಾ ಪರಿಕಲ್ಪನೆಯಾಗಿದೆ. ವಚನಕಾರರನ್ನು ನಿರಂತರವಾಗಿ ಅಧ್ಯಯನ ಮತ್ತು ಅನುಸಂಧಾನ ಮಾಡುವುದರ ಮೂಲಕವೇ ಪ್ರಸ್ತುತಗೊಳಿಸಿಕೊಳ್ಳಬೇಕಾಗುತ್ತದೆ. ವಚನಗಳ ಅಂತರ್‌ಶಿಸ್ತೀಯ ಅಧ್ಯಯನದಿಂದಲೇ ಹೊಸ ದೃಷ್ಟಿಕೋನ ಮತ್ತು ಒಳನೋಟ ದಕ್ಕಿಸಿಕೊಳ್ಳಲು ಸಾಧ್ಯ” ಎಂದರು.

Advertisements

“ಕಾರ್ಪೋರೆಟ್‌ ಜಗತ್ತಿಗೆ ವಿತ್ತೀಯ ಮದ, ಪ್ರಭುತ್ವಕ್ಕೆ ಅಹಂಕಾರಮದ, ಮತ ಧರ್ಮಕ್ಕೆ ಕುಲಮದ ಸೇರಿದ್ದರಿಂದ ಶರಣರು ಕಟ್ಟ ಬಯಸಿದ್ದ ಸಮ ಸಮಾಜ ಈಗಲೂ ಕನಸಾಗಿಯೇ ಉಳಿದಿದೆ. ಆಂತರಿಕ ಆದಾಯ ವಿತರಣೆಯನ್ನು ದಾಸೋಹ ಎಂದು ಶರಣರು ಕರೆದರು. ಸೋಹಂ ಆಂತರಿಕವಾದದ್ದು. ದಾಸೋಹಂ ಭೌತಿಕವಾದದ್ದು. ಶ್ರಮದಿಂದ ಮತ್ತು ಶ್ರಮಿಕರಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂದ ಶರಣರು ಕಾಯಕದ ಕಲ್ಪನೆ ನೀಡಿದರು” ಎಂದು ಹೇಳಿದರು.

“ಪ್ರಾಣ ಬಲಿ ವಿರೋಧಿಸಿದ ಶರಣರು ಹಿಂಸೆಯನ್ನು ಎಂದಿಗೂ ಒಪ್ಪಿದವರಲ್ಲ. ತಮ್ಮ ತತ್ವ ಸಿದ್ದಾಂತದಲ್ಲಿ ಎಲ್ಲ ಬಗೆಯ ದಾರಿಗಳು ಮುಕ್ತವಾಗಿಟ್ಟಿದ್ದರು. ಬಸವಣ್ಣ ಮತ್ತು ವಚನಕಾರರನ್ನು ಧಾರ್ಮಿಕ ಪರಿಪ್ರೆಕ್ಷೆಯಿಂದ ಅಧ್ಯಯನದ ಪರಿಪ್ರೆಕ್ಷೆಗೆ ತರುವ ಅಗತ್ಯವಿದೆ. ಬಹುಶಿಸ್ತೀಯ ಮತ್ತು ಅಂತರ್‌ಶಿಸ್ತೀಯ ಅನುಸಂಧಾನದಿಂದ ವಚನಕಾರರನ್ನು ಹೆಚ್ಚು ಆಳದಿಂದ ಅರಿಯಲು ಸಾಧ್ಯ. ಹೊರತು ಬರಿ ಆರಾಧನೆಯಿಂದಲ್ಲ” ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಗುಮಗೇರಿ ಗ್ರಾಮದಲ್ಲಿ ಮತದಾನ ಜಾಗೃತಿ

ಪತ್ರಕರ್ತ ಸಿದ್ದಪ್ಪ ಮೂಲಗೆ ಮಾತನಾಡಿ, “ವಚನ ಚಳವಳಿಯ ಕುರಿತು ನಡೆಸುವ ಈ ಉಪನ್ಯಾಸ ಮತ್ತು ಸಂವಾದ ಅತ್ಯಂತ ಸರಳವಾಗಿ ಏರ್ಪಡಿಸಿದ್ದು, ವಚನಕಾರರಿಗೆ ನೀಡುವ ಗೌರವವಾಗಿದೆ. ಅದ್ಧೂರಿತನದಲ್ಲಿ ನಿಜವಾದ ತತ್ವಗಳ ಸಂಕಥನವೇ ಮರೆತು ಹೋಗುತ್ತದೆ” ಎಂದರು.

ಡಾ. ಭೀಮಾಶಂಕರ ಬಿರಾದರಾರ ಮಾತನಾಡಿ, “ಚಳವಳಿಗಳ ಗೈರುಹಾಜರಾದ ಈ ಕಾಲದಲ್ಲಿ ವಚನ ಚಳವಳಿಯನ್ನು ನೆನಪಿಸುವುದು ಎಂದರೆ, ನಮ್ಮ ನೆಲದ ಸಾಂಸ್ಕೃತಿಕ ಸ್ಮೃತಿಯನ್ನು ವಚನಕಾರರ ತತ್ವ ಸಿದ್ದಾಂತವನ್ನು ಮರು ವಿಶ್ಲೇಷಣೆಗೆ ಒಳಗಾಗಿಸುವುದೆಂದೆ ಅರ್ಥ” ಎಂದು ಹೇಳಿದರು.

ಬೆಂಗಳೂರಿನ ನವಕರ್ನಾಟಕ  ಪ್ರಕಟಿಸಿರುವ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕನ್ನಡ ಲೇಖಕರು ಮಾಲಿಕೆಯಲ್ಲಿ ಡಾ. ಸಿದ್ದನಗೌಡ ಪಾಟೀಲ ಬರೆದ ‘ಎಂ ಎಂ ಕಲಬುರ್ಗಿ’ ಕೃತಿ ಈ ಸಂದರ್ಭದಲ್ಲಿ ಬಿಡುಗಡೆ ಮಾಡಿ ಸಮಾರಂಭ ಉದ್ಘಾಟಿಸಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ಎಸ್ ಜಿ ಹುಡೆದ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಸಿ ಬಿ ಪರತಾಪೂರೆ, ಗುರುಲಿಂಗಪ್ಪಾ ಧಬಾಲೆ, ರವೀಂದ್ರನಾಥ ನಾರಾಯಣಪೂರ, ರೇವಣಸಿದ್ದಪ್ಪ ದೊರೆ, ವಿಠೋಬಾ ಡೊಣ್ಣೆಗೌಡ, ಸಂಜು ನಡುಕರ, ರಮೇಶ ಉಮಾಪೂರೆ, ಶಾಲಿವಾನ ಕಾಕನಾಳೆ, ಗುಂಡಪ್ಪ ಮಡಕೆ, ಭೀಮಾಶಂಕರ ಮಾಶಾಳಕರ, ರಾಜಕುಮಾರ ಬಿರಾದರ, ಶಾಲಿವಾನ ಕಾಕನಾಳೆ, ವೀರಶೆಟ್ಟಿ ಪಾಟೀಲ, ಶಿವರಾಜ ನೀಲಕಂಠೆ ಮೊದಲಾದವರಿದ್ದರು.

ದೇವೆಂದ್ರ ಬರಗಾಲೆ ನಿರುಪಿಸಿದರು. ಶಿವಾಜಿ ಮೇತ್ರೆ ಸ್ವಾಗತಿಸಿದರು. ಚಂದ್ರಕಾಂತ ಅಕ್ಕಣ್ಣ ವಂದಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X