ಮೈಸೂರು | ಅನ್ನಭಾಗ್ಯಕ್ಕೆ 12 ವರ್ಷದ ಸಂಭ್ರಮ; ಜಾರಿ ಮಾಡುವ ಹಮಾಲಿ ಕಾರ್ಮಿಕರಿಗೆ ಅನ್ಯಾಯ

Date:

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರ ಒಕ್ಕೂಟ (ಕರ್ನಾಟಕ ಶ್ರಮಿಕ ಶಕ್ತಿ) ಪ್ರತಿಭಟನೆ ನಡೆಸಿ ಕರ್ನಾಟಕದಲ್ಲಿ ‘ ಪಡಿತರ ಅನ್ನಭಾಗ್ಯ ಯೋಜನೆ ಜಾರಿ ಮಾಡಿ ಇಂದಿಗೆ 12 ವರ್ಷ ಪೂರೈಸಿದ ಸಂಭ್ರಮದಲ್ಲಿದೆ. ಆದರೆ, ಅದನ್ನು ಜಾರಿ ಮಾಡುವ ಹಮಾಲಿ ಕಾರ್ಮಿಕರಿಗೆ ಸರ್ಕಾರ ನಿಗಧಿ ಮಾಡಿರುವ ಕೂಲಿ, ಇಎಸ್ಐ ಮತ್ತು ಪಿಎಫ್ ಹಾಗೂ ಕಾರ್ಮಿಕ ಕಾನೂನುಗಳು ಸಮರ್ಪಕವಾಗಿ ಜಾರಿ ಮಾಡದೆ ಅನ್ಯಾಯವೆಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

- Advertisement -

ರಾಜ್ಯಾದ್ಯಂತ ಪಡಿತರ ಅನ್ನಭಾಗ್ಯ ಯೋಜನೆಯಡಿ ಆಹಾರ ನಿಗಮದ ಕೆಎಫ್‌ಸಿಎಸ್‌ಸಿ ಹಾಗೂ ಟಿಎಪಿಸಿಎಂಸ್ ಗೋದಾಮುಗಲ್ಲಿ ಆಹಾರ ಧಾನ್ಯಗಳ ಎತುವಳಿ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕೆಲಸ ಮಾಡುವ ಹಮಾಲಿ ಕಾರ್ಮಿಕರಿಗೆ ರಾಜ್ಯಾದ್ಯಂತ ಸಮಗ್ರವಾಗಿ ಕಾರ್ಮಿಕ ಕಾನೂನುಗಳು ಇನ್ನೂ ಜಾರಿಯಾಗುತ್ತಿಲ್ಲ. ಆದರೇ, ಸಾಗಾಣಿಕೆ ಗುತ್ತಿಗೆದಾರರಿಂದ ಕಿರುಕುಳ ಮಾತ್ರ ತಪ್ಪಿಲ್ಲಾ. ಕಾರ್ಮಿಕ ಕಾನೂನು, ಕನಿಷ್ಟ ವೇತನ ಕಾಯಿದೆ ಪ್ರಕಾರ ಪ್ರತಿ ವರ್ಷ ಬೆಲೆ ಏರಿಕೆ, ತುಟ್ಟಿ ಭತ್ಯೆಗೆ ಅನುಗುಣವಾಗಿ ಕನಿಷ್ಟ ವೇತನ ನಿಗಧಿ ಮಾಡಿ ಏಪ್ರಿಲ್ 1 ರಿಂದ ಜಾರಿ ಮಾಡುವುದು ಕಾನೂನು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

ಆದರೇ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಯಾವುದೇ ಮಾನದಂಡವಿಲ್ಲದೇ ತನ್ನಿಚ್ಚೆ ಬಂದಾಗ ಕೂಲಿ ಹೆಚ್ಚಳ ಮಾಡುತ್ತಿದ್ದು ಕಾರ್ಮಿಕರಿಗೆ ಅನ್ಯಾಯವಾಗುತ್ತಿದ್ದು, ಕೂಲಿ ಹೆಚ್ಚಳಕ್ಕೆ ಹಾಗೂ ಕಾರ್ಮಿಕ ಕಾನೂನುಗಳ ಜಾರಿಗೆ ಸಮರ್ಪಕವಾದ ನಿಯಮಬೇಕಾಗಿದ್ದು, ಅದನ್ನು ಜಾರಿಗೆ ತರಲು ಹೋರಾಟ ಮಾಡುತ್ತಿರುವುದಾಗಿ ರಾಜ್ಯಾಧ್ಯಕ್ಷರಾದ ವರದರಾಜು ಹೇಳಿದರು.

ಗೋದಾಮುಗಳಿಂದ ಪಡಿತರ ನ್ಯಾಯಬೆಲೆ ಅಂಗಡಿಗೆ ಆಹಾರ ಧಾನ್ಯಗಳ ಎತುವಳಿ ಲೋಡಿಂಗ್ ಮತ್ತು ಅನ್ಲೋಡಿಂಗ್ ಕೆಲಸ ಚಿಲ್ಲರೇ ಸಾಗಾಣಿಕೆ ಕೂಲಿದರ ಹೆಚ್ಚಳ 2018 ನವೆಂಬರ್ ಕ್ವಿಂಟಾಲ್ ₹16 ರೂಪಾಯಿ, 2023 ಜೂನ್ ಕ್ವಿಂಟಾಲ್ ₹19 ರೂಪಾಯಿ, 2025 ಫೆಬ್ರವರಿ ಟೆಂಡರ್ ಆಗಿರುವ ತಾಲೂಕುಗಳಿಗೆ ಮಾತ್ರ ₹23.62 ರೂಪಾಯಿ ನಿಗಧಿ ಮಾಡಿದ್ದು. 120 ಕ್ಕೂ ಹೆಚ್ಚು ತಾಲೂಕುಗಳಲ್ಲಿ ತಾಂತ್ರಿಕ ಕಾರಣಗಳಿಂದ ಟೆಂಡರ್ ಆಗದೇ ಉಳಿದಿದ್ದು, ಅಲ್ಲಿ ಹಳೆಯ ದರವೇ ₹19 ರೂಪಾಯಿ ಇದ್ದು ಕಾರ್ಮಿಕರಿಗೆ ಕ್ವಿಂಟಾಲ್‌ಗೆ ₹4.62 ರೂಪಾಯಿ. ಹಾಗೇಯೇ, ಸಗಟು ಸಾಗಾಣಿಕೆ ಟೆಂಡರ್ ಆಗದೇ ಉಳಿದಿರುವ ತಾಲೂಕುಗಳಲ್ಲಿ ₹10 ರೂಪಾಯಿ ಇದ್ದು. ಟೆಂಡರ್ ಆಗಿರುವ ತಾಲೂಕುಗಳಿಗೆ ₹10.92 ರೂಪಾಯಿ ಇದೆ. ಇದರಿಂದ ಪ್ರತಿ ಕ್ವಿಂಟಾಲ್‌ಗೆ ಕಾರ್ಮಿಕರಿಗೆ ₹5.54 ರೂಪಾಯಿ ನಷ್ಟ ಉಂಟಾಗುತ್ತಿದ್ದು ಇದರಿಂದ ಕಾರ್ಮಿಕರಿಗೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ, ಕೃಷ್ಣರಾಜನಗರ, ಸರಗೂರು, ಹೆಚ್. ಡಿ ಕೋಟೆ, ಹುಣಸೂರು, ನಂಜನಗೂಡು ತಾಲೂಕುಗಳಿಗೆ ಟೆಂಡರ್ ಆಗದೇ ಉಳಿದಿದ್ದು, ಆ ತಾಲೂಕುಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಈ ಕೂಡಲೇ ಹೊಸ ದರ ಚಿಲ್ಲರೇ ಸಾಗಾಣಿಕೆ ಕ್ವಿಂಟಾಲ್ ಗೆ ₹23.62 ರೂಪಾಯಿ ಹಾಗೂ ಸಗಟು ಸಾಗಾಣಿಕೆ ಟೆಂಡರ್ ಕ್ವಿಂಟಾಲ್‌ಗೆ ₹10.92 ರೂಪಾಯಿ ನಿಗಧಿ ಮಾಡಿ ಆದೇಶ ಮಾಡಬೇಕು. ಫೆಬ್ರವರಿ 2025 ರಿಂದಲೇ ಜಾರಿಗೆ ಬರುವಂತೆ ಕೂಡಲೇ ಕೂಲಿ ಹೆಚ್ಚಳ ಮಾಡಿ ಆದೇಶ ಮಾಡಬೇಕು.

ಆಹಾರ ನಿಗಮದ ಕೆಎಫ್‌ಸಿಎಸ್‌ಸಿ ಹಾಗೂ ಟಿಎಪಿಸಿಎಂಸ್ ಗೋದಾಮುಗಲ್ಲಿ ಆಹಾರ ಧಾನ್ಯಗಳ ಎತ್ತುವಳಿ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೆಲಸ ಮಾಡುವ ಹಮಾಲಿ ಕಾರ್ಮಿಕರಿಗೆ ಸರ್ಕಾರ 2024-2026 ಟೆಂಡರ್ ನಿಯಮಾವಳಿಯಂತೆ ಇಎಸ್ಐ ಮತ್ತು ಪಿಎಫ್ ಪಾವತಿಸುವುದು ಕಡ್ಡಾಯ ಮಾಡಿದೆ. ಆಯುಕ್ತರ ಪತ್ರ ಸಂಖ್ಯೆ: ಸಿಎಫ್‌ಎಸ್/ಐಟಿ-4/ಟೆಂಡರ್/ಹಮಾಲಿ/117/2024-26 ದಿನಾಂಕ-08-04-2025 ರಂದು ಆದೇಶ ಮಾಡಿದ್ದು ಮೈಸೂರು ಜಿಲ್ಲೆಯಲ್ಲಿ ಇನ್ನೂ ಜಾರಿಯಾಗಿಲ್ಲಾ. ಆದ್ದರಿಂದ, ಇಎಸ್ಐ ಕಟ್ಟದೆ ಇರುವ ಕಾರಣದಿಂದ ಆನಾರೋಗ್ಯಕ್ಕೀಡಾದ ಕಾರ್ಮಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು ಕೈಯಿಂದ ಹಣ ಪಾವತಿಸಬೇಕಾದ ಸಂದರ್ಭ ಬಂದಿದ್ದು ಸ್ವತ: ಹಣ ಪಾವತಿಸಿ ಚಿಕಿತ್ಸೆ ಪಡೆದಿದ್ದು, ಇಎಸ್ಐ ಇದ್ದು ಉಪಯೋಗಕ್ಕೆ ಬಾರದಾಗಿದೆ.

2025 ರ ಫೆಬ್ರವರಿ ಮಾಹೆಯಿಂದಲೂ ಚಿಲ್ಲರೇ ಸಾಗಾಣಿಕೆ ಗುತ್ತಿಗೆದಾರರು ಕಾರ್ಮಿಕರಿಂದ ಇಎಸ್ಐ ಮತ್ತು ಪಿಎಫ್ ವಂತಿಗೆ ಕಡಿತ ಮಾಡಿದ್ದು ಇಲ್ಲಿಯವರೆವಿಗೂ ಪಾವತಿ ಮಾಡದೇ ಇರುವುದು ಕಾನೂನೂ ಬಾಹಿರ ಮತ್ತು ಕ್ರಿಮಿನಲ್ ಅಪರಾಧ. ಹಾಗಾಗಿ, ಇದರ ಬಗ್ಗೆ ತುರ್ತಾಗಿ ಗಮನವಹಿಸಿ ಕ್ರಮವಹಿಸಬೇಕು. ಚಿಲ್ಲರೇ ಸಾಗಾಣಿಕೆಯ ಯಾವುದೇ ಗುತ್ತಿಗೆದಾರರು ಗುತ್ತಿಗೆ ಕಾರ್ಮಿಕ ಕಾಯ್ದೆ ಪ್ರಕಾರ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲಾ. ಸರಿಯಾದ ಸಮಯಕ್ಕೆ ಸಂಬಳ (ಕೂಲಿ) ಪಾವತಿ ಮಾಡುತ್ತಿಲ್ಲ. ಹಾಗೂ, ಸಂಬಳ ಚೀಟಿ (WAGE SLIP ) ಇಎಸ್ಐ ಮತ್ತು ಪಿಎಫ್ ವಂತಿಕೆ ಪಾವತಿ ರಸೀದಿ ನೀಡುತ್ತಿಲ್ಲಾ. ಹಾಗಾಗಿ, ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಸರಿಯಾಗಿ ಸಂಬಳ ಪಾವತಿಸಲು ಹಾಗೂ ಆಯಾ ತಿಂಗಳು ಇಎಸ್ಐ ಮತ್ತು ಪಿಎಫ್ ವಂತಿಕೆ ಪಾವತಿಸಿ ರಸೀದಿ ನೀಡಲು ಕ್ರಮವಹಿಸಬೇಕು.

2023 ಆಗಸ್ಟ್ 30 ರಂದು ನಡೆದ ದ್ವಿಪಕ್ಷೀಯ ಕರಾರಿನಲ್ಲಿ ಮೂರು ತಿಂಗಳು ಕಾಲಾವಕಾಶ ಕೋರಿ, ನಂತರ ಅದರ ಉಲ್ಲಂಘನೆ ಮಾಡಿ 2023ರ ಜುಲೈನಿಂದ ಚಿಲ್ಲರೇ ಸಾಗಾಣಿಕೆ ಗುತ್ತಿಗೆದಾರರು ಆಹಾರ ಧಾನ್ಯಗಳ ಎತ್ತುವಳಿ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕೂಲಿ ದರ ₹1.90 ರೂಪಾಯಿ ಕಡಿಮೆ ಪಾವತಿ ಮಾಡಿದ್ದು. ಇದರ ಬಗ್ಗೆ 2024 ರ ಸೆಪ್ಟಂಬರ್ 20 ರಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಇಲ್ಲಿಯವರೆಗೂ ಪಾವತಿಗೆ ಯಾವುದೇ ಕ್ರಮವಹಿಸಿಲ್ಲ. ಹಾಗಾಗಿ, ಮೈಸೂರು ಜಿಲ್ಲೆಯ ಕೆಲವು ತಾಲೂಕುಗಳಿಗೆ ಸಾಗಾಣಿಕೆ ಗುತ್ತಿಗೆದಾರರು ಬದಲಾಗಿದ್ದು ಈ ಚಿಲ್ಲರೇ ಸಾಗಾಣಿಕೆ ಗುತ್ತಿಗೆದಾರರ ಇಎಂಡಿ ಹಣ ಮತ್ತು ಸಾಗಾಣಿಕೆ ಬಿಲ್ ಹಣ ಪಾವತಿ ಮಾಡದೆ ಕಡ್ಡಾಯವಾಗಿ ತಡೆ ಹಿಡಿಯಬೇಕು.

ಅನ್ನಭಾಗ್ಯ ಯೋಜನೆ ಜಾರಿ ಮಾಡುವ ಎಲ್ಲಾ ಕಾರ್ಮಿಕರು ಶೋಷಿತ, ಹಿಂದೂಳಿದ, ದಲಿತ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದು, ಸಾಗಾಣಿಕೆ ಗುತ್ತಿಗೆದಾರರು ನಿರಂತರವಾಗಿ ಕಾರ್ಮಿಕರನ್ನು ಕೆಲಸದಿಂದ ಕಿತ್ತಿಹಾಕುವ, ಸರಿಯಾಗಿ ಕೂಲಿ ಪಾವತಿ ಮಾಡದೇ ನಿರಂತರವಾಗಿ ಕಿರುಕುಳ ನೀಡುತಿರುತ್ತಾರೆ. ಶಾಶ್ವತ ಪರಿಹಾರ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಕಾರ್ಮಿಕರಿಗೆ ಪೌರ ಕಾರ್ಮಿಕರ ಮಾದರಿಯಲ್ಲಿ ಕೆಲಸ ಖಾಯಂ ಮಾಡಬೇಕು. ಅಲ್ಲಿಯವರೆವಿಗೂ ಇಲಾಖೆಯ ಮೂಲಕವೇ ಕೂಲಿ(ಸಂಬಳ) ನೇರ ಪಾವತಿಗೆ ಕ್ರಮವಹಿಸಿ ಶೋಷಣೆಯಿಂದ ಮುಕ್ತರಾಗಿಸಬೇಕೆಂದು ಪ್ರತಿಭಟನಾಕಾರರರು ಮನವಿ ಮಾಡಿದರು.

ಈ ವಿಶೇಷ ಸುದ್ದಿ ಓದಿದ್ದೀರಾ? ಆಶಾ ಕಾರ್ಯಕರ್ತೆಯರಿಗೆ ₹10 ಸಾವಿರ ನಿಶ್ಚಿತ ಗೌರವಧನದ ಆಶ್ವಾಸನೆ; ಕೊಟ್ಟ ಮಾತು ಮರೆತ ಆಡಳಿತ ಸರ್ಕಾರ

ಪ್ರತಿಭಟನೆಯಲ್ಲಿ ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆಯ ರವಿ ಮೋಹನ, ಜಿಲ್ಲಾ ಅಧ್ಯಕ್ಷ ಕರಿನಾಯಕ, ಜಿಲ್ಲಾ ಕಾರ್ಯದರ್ಶಿ ಜಿ. ಮಹಾದೇವ, ಜಿಲ್ಲಾ ಉಪಾಧ್ಯಕ್ಷ ನರಸಿಂಹಮೂರ್ತಿ, ವಿಕ್ರಮ ನಾಯಕ, ಕುಮಾರ್, ಕೃಷ್ಣಪ್ಪ ಸೇರಿದಂತೆ ಇನ್ನಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಂಡವಾರ ಬಳಿ ಭೂಕಂಪ; ಸ್ಥಳೀಯರು ಆತಂಕಪಡುವ ಅಗತ್ಯವಿಲ್ಲ: KSNDMC ಅಧಿಕಾರಿಗಳು

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನಲ್ಲಿ 3.5 ತೀವ್ರತೆಯ ಭೂಕಂಪ ಉಂಟಾಗಿರುವುದಾಗಿ ಕರ್ನಾಟಕ...

ಯಾದಗಿರಿ | ಬರದ ಹೊಡೆತಕ್ಕೆ ಬೆಳೆ ನಷ್ಟ, ಸಾಲದ ಹೊರೆ; ರೈತ ಆತ್ಮಹತ್ಯೆ

ಮಳೆ ಕೈಕೊಟ್ಟು ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದ ಹಿನ್ನೆಲೆಯಲ್ಲಿ ಸಾಲದ ಹೊರೆ...

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ದಾರಿದೀಪ ಅವ್ಯವಸ್ಥೆ: ಜಿಲ್ಲಾಧಿಕಾರಿಗೆ ಕಾಂಗ್ರೆಸ್ ಮನವಿ

ಉಡುಪಿ ನಗರಸಭೆ ವ್ಯಾಪ್ತಿಯ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಹದಗೆಟ್ಟಿರುವ ದಾರಿದೀಪ...

ಕಲಬುರಗಿ | ಹಸುಗೂಸನ್ನು ಕಸದ ರಾಶಿಗೆ ಎಸೆದು ಪರಾರಿ; ತಾಯಿ, ಅಜ್ಜಿ ಪೊಲೀಸರ ವಶಕ್ಕೆ

ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ಒಂದು ದಿನದ ಹಸುಗೂಸನ್ನು ಕಸದ...