ರಾಜಸ್ಥಾನದಲ್ಲಿ ಒಂದೇ ವರ್ಷದಲ್ಲಿ 3 ಬಾರಿ ಮತದಾರರ ಎಣಿಕೆ; ಪ್ರತಿ ಬಾರಿಯೂ ಮತದಾರರ ಸಂಖ್ಯೆಯಲ್ಲಿ ಭಾರೀ ವ್ಯತ್ಯಾಸ!

Date:

ರಾಜಸ್ಥಾನದಲ್ಲಿ 2026ರ ಒಂದೇ ವರ್ಷದ ಅವಧಿಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಎಣಿಕೆಯನ್ನು ಬರೋಬ್ಬರಿ ಮೂರು ಬಾರಿ ನಡೆಸಲಾಗಿದೆ. ಪ್ರತಿ ಬಾರಿಯೂ ಮತದಾರರ ಒಟ್ಟು ಸಂಖ್ಯೆಯಲ್ಲಿ ಭಾರೀ ಪ್ರಮಾಣದ ವ್ಯತ್ಯಾಸ ಕಂಡುಬಂದಿವೆ. ಇದು ತೀವ್ರ ಅನುಮಾನಗಳಿಗೆ ಕಾರಣವಾಗಿದೆ.

- Advertisement -

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ‘ವಿಶೇಷ ಸಂಕ್ಷಿಪ್ತ ಪರಿಷ್ಕರಣೆ’ (SSR) ಕರಡು ಪಟ್ಟಿಯ ಪ್ರಕಾರ ಒಟ್ಟು 5.26 ಕೋಟಿ ಮತದಾರರಿದ್ದರೆ, ಇದಕ್ಕೂ ಮುನ್ನ ನಡೆದಿದ್ದ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಲ್ಲಿ ಮತದಾರರ ಸಂಖ್ಯೆಯನ್ನು 5.15 ಕೋಟಿ ಎಂದು ದಾಖಲಿಸಲಾಗಿತ್ತು. ಆದರೆ, ರಾಜ್ಯ ಚುನಾವಣಾ ಆಯೋಗವು (SEC) ಅಕ್ಟೋಬರ್ ಆರಂಭದಲ್ಲಿ ಬಿಡುಗಡೆ ಮಾಡಿದ ಸ್ಥಳೀಯ ಸಂಸ್ಥೆಗಳ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು ಮತದಾರರ ಸಂಖ್ಯೆ 5.45 ಕೋಟಿ ಎಂದು ನಮೂದಾಗಿತ್ತು. ಒಂದೇ ರಾಜ್ಯದ, ಒಂದೇ ವರ್ಷದ ಮತದಾರರ ಅಂಕಿಅಂಶಗಳಲ್ಲಿ ಲಕ್ಷಾಂತರ ಸಂಖ್ಯೆಯ ವ್ಯತ್ಯಾಸ ಕಂಡುಬಂದಿದ್ದು, ಗೊಂದಲ ಸೃಷ್ಟಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸೋನಿಯಾ ಗಾಂಧಿ ಎಂಬ ಸೋಜಿಗ! ರಾಜಕೀಯ ನಾಯಕತ್ವದ ಹಿಂದಿನ...

ದಿನೇಶ್ ಅಮೀನ್ ಮಟ್ಟು ಅವರು ಪ್ರಸ್ತಾಪಿಸಿದ ನಾಲ್ಕು ಆಯಾಮಗಳು ನನ್ನನ್ನು ವೈಯಕ್ತಿಕವಾಗಿ ಬಹಳವಾಗಿ ಪ್ರಭಾವಿಸಿದವು. ಸೋನಿಯಾ ಗಾಂಧಿ ಒಬ್ಬ ಮಹಿಳೆಯಾಗಿ, ಒಬ್ಬ ವಿಧವೆಯಾಗಿ, ಅಲ್ಪಸಂಖ್ಯಾತ ಕ್ರಿಶ್ಚಿಯನ್ ಧಾರ್ಮಿಕ ಹಿನ್ನೆಲೆಯ ಮಹಿಳೆಯಾಗಿ ಮತ್ತು ವಿದೇಶಿ...

ಬಿತ್ತನೆ ಗುರಿ ಅರ್ಧದಷ್ಟೂ ಮುಟ್ಟದ ಕೃಷಿ ಚಟುವಟಿಕೆ; ಜೋಳದ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟದಿಂದ ಕಂಗೆಟ್ಟ ಅನ್ನದಾತರಿಗೆ ಹಿಂಗಾರು ಹಂಗಾಮಿನಲ್ಲಾದರೂ ಮಳೆ ಆಸರೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ರೈತರ ಆ ನಿರೀಕ್ಷೆಯೂ ಹುಸಿಯಾಗಿದೆ. ಮುಂಗಾರಿನ ಬೆನ್ನಲ್ಲೇ ಹಿಂಗಾರು ಹಂಗಾಮಿನಲ್ಲೂ ಮಳೆ ಕೈಕೊಟ್ಟಿರುವುದರಿಂದ...

ಧಾರವಾಡದ ‘ಲಲಿತಕಲಾ ಅಕಾಡೆಮಿ’ಗೆ ದುಸ್ಥಿತಿ: ಕಲಾವಿದರಿಂದಲೇ ದೂರವಾದ ಪ್ರಾದೇಶಿಕ...

ಕಲಾವಿದರ ಬಹುದಿನಗಳ ಬೇಡಿಕೆಯಂತೆ ಸ್ಥಾಪನೆಯಾದ ಕೇಂದ್ರಕ್ಕೆ ಮೂರೇ ವರ್ಷಗಳಲ್ಲಿ ದುಸ್ಥಿತಿ; ಸಂಚಾಲಕರ ಏಕಪಕ್ಷೀಯ ಧೋರಣೆ, ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಕಲಾ ಚಟುವಟಿಕೆಗಳ ಕೊರತೆಯ ವಿರುದ್ಧ ಹಿರಿಯ ಕಲಾವಿದರ ಆಕ್ರೋಶ. ಸಲಹಾ ಸಮಿತಿ...

ಈ ಮೂರು ಪಟ್ಟಿಗಳ ನಡುವಿನ ಅಂಕಿಅಂಶಗಳನ್ನು ಹೋಲಿಸಿ ನೋಡಿದಾಗ, ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ. ಪ್ರಸ್ತುತ ಬಿಡುಗಡೆಯಾಗಿರುವ ಎಸ್‌ಎಸ್‌ಆರ್ ಕರಡು ಪಟ್ಟಿಯು ಈ ಹಿಂದಿನ ಎಸ್‌ಐಆರ್ ಅಂತಿಮ ಪಟ್ಟಿಗಿಂತ ಸುಮಾರು 11 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿದೆ; ಅಂತೆಯೇ, ರಾಜ್ಯ ಚುನಾವಣಾ ಆಯೋಗದ ಪಟ್ಟಿಗಿಂತ ಸುಮಾರು 18 ಲಕ್ಷದಷ್ಟು ಕಡಿಮೆ ಮತದಾರರನ್ನು ತೋರಿಸುತ್ತಿದೆ. ಇನ್ನೂ ಗಂಭೀರವಾದ ವಿಚಾರವೆಂದರೆ, ಎಸ್‌ಐಆರ್ ಪಟ್ಟಿಗಿಂತ ರಾಜ್ಯ ಚುನಾವಣಾ ಆಯೋಗದ ಪಟ್ಟಿಯಲ್ಲಿ ಬರೋಬ್ಬರಿ 30 ಲಕ್ಷ ಹೆಚ್ಚು ಮತದಾರರು ಕಂಡುಬಂದಿದ್ದಾರೆ. ಇಷ್ಟೇ ಅಲ್ಲದೆ, ಈಗ ಎಸ್‌ಎಸ್‌ಆರ್ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದ್ದು, 2027ರ ಜನವರಿಯ ವೇಳೆಗೆ ಈ ಸಂಖ್ಯೆ ಮತ್ತೊಮ್ಮೆ ಬದಲಾಗಿ ನಾಲ್ಕನೇ ಹೊಸ ಅಂಕಿಅಂಶಗಳು ಹೊರಬೀಳುವ ಸಾಧ್ಯತೆಯಿದೆ.

Advertisements

ಸಂವಿಧಾನದ 324ನೇ ವಿಧಿ ಮತ್ತು ಪ್ರಜಾಪ್ರತಿನಿಧಿ ಕಾಯ್ದೆ 1950ರ ಅಡಿಯಲ್ಲಿ ಚುನಾವಣಾ ಆಯೋಗವು ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಿಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಈ ವರ್ಷ, ಚುನಾವಣಾ ಆಯೋಗವು ಎಸ್‌ಐಆರ್‌ಅನ್ನು ಜಾರಿಗೊಳಿಸಿ, ಈ ಹಿಂದೆ ಜಾಲ್ತಿಯಲ್ಲಿದ್ದ ಎಸ್‌ಎಸ್‌ಆರ್‌ ಪ್ರಕ್ರಿಯೆಯನ್ನು ತಡೆಹಿಡಿದಿತ್ತು. ಆದರೆ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಸಾಮೂಹಿಕವಾಗಿ ಕೈಬಿಡಲಾಗಿದೆ ಎಂಬ ತೀವ್ರ ಆಕ್ರೋಶ ಮತ್ತು ಪ್ರತಿಭಟನೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಆಯೋಗವು ಮತ್ತೆ ಎಸ್‌ಎಸ್‌ಆರ್ ಪ್ರಕ್ರಿಯೆಯನ್ನು ಆರಂಭಿಸಿದೆ. ಇದರಿಂದಾಗಿ ಹೆಸರುಗಳು ಮತ್ತು ಅಂಕಿಅಂಶಗಳಲ್ಲಿ ಪರಸ್ಪರ ಹೊಂದಾಣಿಕೆಯಾಗದ ಹೆಚ್ಚುವರಿ ಪಟ್ಟಿಯೊಂದು ಸೃಷ್ಟಿಯಾಗಲಿದೆ.

ಮತ್ತೊಂದೆಡೆ, ಸಂವಿಧಾನದ 243K ಮತ್ತು 243ZA ವಿಧಿಗಳ ಅಡಿಯಲ್ಲಿ ಪಂಚಾಯತ್ ಮತ್ತು ಪುರಸಭೆ ಚುನಾವಣೆಗಳಿಗೆ ಮತದಾರರ ಪಟ್ಟಿ ಸಿದ್ಧಪಡಿಸುವ ಜವಾಬ್ದಾರಿ ರಾಜ್ಯ ಚುನಾವಣಾ ಆಯೋಗದ (SEC) ಮೇಲಿದೆ.

ಈ ಲೇಖನ ಓದಿದ್ದೀರಾ?: ಅಡ್ವಾಣಿ – ಅಧಿಕಾರದ ಆಟದಲ್ಲಿ ಸಿದ್ಧಾಂತವೂ ಒಂದು ಮೆಟ್ಟಿಲಷ್ಟೇ!

ಈ ಭಾರೀ ವ್ಯತ್ಯಾಸದ ಕುರಿತು ಸ್ಪಷ್ಟನೆ ನೀಡಿರುವ ರಾಜಸ್ಥಾನ ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ರಾಜೇಶ್ ವರ್ಮಾ, “ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಸ್ಥಳೀಯ ಸಂಸ್ಥೆಗಳ ಚುನಾವಣಾ ಸಿದ್ಧತೆಗಳು ಆರಂಭವಾಗಿದ್ದವು. ಅದಕ್ಕಾಗಿ, 2025ರ ಜನವರಿ 1ರಂದು ನವೀಕರಿಸಲಾಗಿದ್ದ ಎಸ್‌ಐಆರ್-ಪೂರ್ವ ಮತದಾರರ ಪಟ್ಟಿಯನ್ನೇ ಆಧಾರವಾಗಿಟ್ಟುಕೊಂಡು ನಮ್ಮ ಪಟ್ಟಿಯನ್ನು ಸಿದ್ಧಪಡಿಸಿದ್ದೇವೆ” ಎಂದು ತಿಳಿಸಿದ್ದಾರೆ.

ಆದರೆ, ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯ (MKSS) ಸಂಸ್ಥಾಪಕ ನಿಖಿಲ್ ಡೇ ಅವರು ನಡೆಸಿದ ವಿಶ್ಲೇಷಣೆಯು ಗಂಭೀರ ಲೋಪವೊಂದನ್ನು ಬಯಲಿಗೆಳೆದಿದೆ. ಎಸ್‌ಐಆರ್ ಪರಿಷ್ಕರಣೆಯ ಸಮಯದಲ್ಲಿ ಪಟ್ಟಿಯಿಂದ ಕೈಬಿಡಲಾಗಿದ್ದ ಸುಮಾರು 26.63 ಲಕ್ಷ ಮತದಾರರ ಹೆಸರುಗಳು ರಾಜ್ಯ ಚುನಾವಣಾ ಆಯೋಗದ ಸ್ಥಳೀಯ ಸಂಸ್ಥೆಗಳ ಪಟ್ಟಿಯಲ್ಲಿ ಈಗಲೂ ಜೀವಂತವಾಗಿವೆ ಎಂದು ಅವರು ಪತ್ತೆಹಚ್ಚಿದ್ದಾರೆ.

ಅದಕ್ಕಿಂತಲೂ ಮುಖ್ಯವಾಗಿ, ಎಸ್‌ಐಆರ್ ಪಟ್ಟಿಯಲ್ಲಿ ‘ಮೃತಪಟ್ಟಿದ್ದಾರೆ’ ಎಂದು ಗುರುತಿಸಿ ಕೈಬಿಡಲಾದ ಲಕ್ಷಾಂತರ ಜನರ ಹೆಸರುಗಳು ರಾಜ್ಯ ಚುನಾವಣಾ ಆಯೋಗದ ಪಟ್ಟಿಯಲ್ಲಿ ಉಳಿದಿವೆ. ಇದು, ಬದುಕಿರುವವರನ್ನೂ ಎಸ್‌ಐಆರ್‌ನಲ್ಲಿ ಮೃತರೆಂದು ಅಳಿಸಿ ಹಾಕಲಾಗಿದೆ ಎಂಬ ಗಂಭೀರ ಆರೋಪಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.  

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅವಳ ಕಣ್ಣೋಟ | ‘ನೇರು’- ಸತ್ಯ ಹೇಳುವುದು ಸುಲಭವೇ?

‘ನೇರು’ ದೌರ್ಜನ್ಯದ ಘಟನೆಯನ್ನು ಅತಿಯಾಗಿ ದೃಶ್ಯೀಕರಿಸುವುದಕ್ಕಿಂತ ಅದರ ನಂತರದ ಮಾನಸಿಕ ನೋವು...

ಅಮೆರಿಕದ ವಿಮಾನಯಾನದಲ್ಲಿ ಕಂಡರಿಯದ ಅಲ್ಲೋಲ-ಕಲ್ಲೋಲ: 11,000 ವಿಮಾನಗಳು ದಿಢೀರ್ ಸ್ಥಗಿತ

ಅಮೆರಿಕದ ವಾಯು ಸಂಚಾರ ನಿಯಂತ್ರಣ (ATC) ಸಂಪರ್ಕ ವ್ಯವಸ್ಥೆಯಲ್ಲಿ ಉಂಟಾದ ಭಾರಿ...

ಬಳ್ಳಾರಿ | ಡಿ.30ರವರೆಗೆ ಕಾಲುವೆಗಳಿಗೆ ನೀರು ಹರಿಸಲು ಆಗ್ರಹಿಸಿ ರೈತರ ಪ್ರತಿಭಟನೆ

ಎಚ್‌ಎಲ್‌ಸಿ ಮತ್ತು ಎಲ್‌ಎಲ್‌ಸಿ ಕಾಲುವೆಗಳಿಗೆ ಡಿಸೆಂಬರ್ 30ರವರೆಗೆ ನೀರು ಹರಿಸಬೇಕು ಎಂದು...

ಬೀದರ್‌ | ಅನುಭವ ಮಂಟಪ ಉತ್ಸವ : ನ.16ರಿಂದ 26ರವರೆಗೆ ‘ಜನಪದದಲ್ಲಿ ಬಸವ ದರ್ಶನ’ ಪ್ರವಚನ

ಬಸವಕಲ್ಯಾಣ: ನವೆಂಬರ್ 28 ಮತ್ತು 29ರಂದು ನಡೆಯಲಿರುವ 47ನೇ ಶರಣ ಕಮ್ಮಟ...