‘INSTAGRAM’ನಲ್ಲಿ ಸ್ಕೆಚ್, ‘WHATSAPP’ನಲ್ಲಿ ಲೈವ್ ಮರ್ಡರ್: ಐಫೋನ್, ಬೈಕ್‌ಗಾಗಿ ತಾತನನ್ನೇ ಕೊಂದ 13 ವರ್ಷದ ಮೊಮ್ಮಗಳು

Date:

ಐಫೋನ್ ಮತ್ತು ಬೈಕ್ ಖರೀದಿಸುವ ಆಸೆಗೆ ಬಿದ್ದ 13 ವರ್ಷದ ಬಾಲಕಿಯೊಬ್ಬಳು ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಸ್ವಂತ ತಾತನನ್ನೇ (67 ವರ್ಷ) ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಕೇರಳದ ಕೊಟ್ಟಾಯಂನ ಕರುವಾಟ್ಟಾದಲ್ಲಿ ನಡೆದಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಬಾಲನ್ಯಾಯ ಮಂಡಳಿಗೆ (JJB) ಪೊಲೀಸರು ಸಲ್ಲಿಸಿರುವ 740 ಪುಟಗಳ ಆರೋಪಪಟ್ಟಿಯಲ್ಲಿ (ಚಾರ್ಜ್‌ಶೀಟ್) ಬೆಚ್ಚಿಬೀಳಿಸುವ ಅಂಶಗಳು ಬಹಿರಂಗವಾಗಿವೆ.

- Advertisement -

​ಆರೋಪಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ, 13 ವರ್ಷದ ಬಾಲಕಿಗೆ ಐಫೋನ್ ಮತ್ತು ಆಕೆಯ ಸ್ನೇಹಿತನಿಗೆ ಬೈಕ್ ಖರೀದಿಸಲು ಹಣದ ಅಗತ್ಯವಿತ್ತು. ಇದಕ್ಕಾಗಿ ಹಣ ಹೊಂದಿಸಲು ಬಾಲಕಿ ತನ್ನ ಸ್ನೇಹಿತರ ಮೂಲಕ ತಾತನ ಕೊಲೆಗೆ ಸಂಚು ರೂಪಿಸಿದ್ದಳು. ಪ್ರಕರಣದ ನಾಲ್ವರು ಆರೋಪಿಗಳು (13 ವರ್ಷದ ಬಾಲಕಿ, 16 ವರ್ಷದ ಓರ್ವ ಹಾಗೂ 17 ವರ್ಷದ ಇಬ್ಬರು) ಅಪ್ರಾಪ್ತರಾಗಿರುವುದು ಇದೊಂದು ಅಪರೂಪದ ಪ್ರಕರಣ ಎಂದು ಪೊಲೀಸರು ಬಣ್ಣಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸೋನಿಯಾ ಗಾಂಧಿ ಎಂಬ ಸೋಜಿಗ! ರಾಜಕೀಯ ನಾಯಕತ್ವದ ಹಿಂದಿನ...

ದಿನೇಶ್ ಅಮೀನ್ ಮಟ್ಟು ಅವರು ಪ್ರಸ್ತಾಪಿಸಿದ ನಾಲ್ಕು ಆಯಾಮಗಳು ನನ್ನನ್ನು ವೈಯಕ್ತಿಕವಾಗಿ ಬಹಳವಾಗಿ ಪ್ರಭಾವಿಸಿದವು. ಸೋನಿಯಾ ಗಾಂಧಿ ಒಬ್ಬ ಮಹಿಳೆಯಾಗಿ, ಒಬ್ಬ ವಿಧವೆಯಾಗಿ, ಅಲ್ಪಸಂಖ್ಯಾತ ಕ್ರಿಶ್ಚಿಯನ್ ಧಾರ್ಮಿಕ ಹಿನ್ನೆಲೆಯ ಮಹಿಳೆಯಾಗಿ ಮತ್ತು ವಿದೇಶಿ...

ಬಿತ್ತನೆ ಗುರಿ ಅರ್ಧದಷ್ಟೂ ಮುಟ್ಟದ ಕೃಷಿ ಚಟುವಟಿಕೆ; ಜೋಳದ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟದಿಂದ ಕಂಗೆಟ್ಟ ಅನ್ನದಾತರಿಗೆ ಹಿಂಗಾರು ಹಂಗಾಮಿನಲ್ಲಾದರೂ ಮಳೆ ಆಸರೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ರೈತರ ಆ ನಿರೀಕ್ಷೆಯೂ ಹುಸಿಯಾಗಿದೆ. ಮುಂಗಾರಿನ ಬೆನ್ನಲ್ಲೇ ಹಿಂಗಾರು ಹಂಗಾಮಿನಲ್ಲೂ ಮಳೆ ಕೈಕೊಟ್ಟಿರುವುದರಿಂದ...

ಧಾರವಾಡದ ‘ಲಲಿತಕಲಾ ಅಕಾಡೆಮಿ’ಗೆ ದುಸ್ಥಿತಿ: ಕಲಾವಿದರಿಂದಲೇ ದೂರವಾದ ಪ್ರಾದೇಶಿಕ...

ಕಲಾವಿದರ ಬಹುದಿನಗಳ ಬೇಡಿಕೆಯಂತೆ ಸ್ಥಾಪನೆಯಾದ ಕೇಂದ್ರಕ್ಕೆ ಮೂರೇ ವರ್ಷಗಳಲ್ಲಿ ದುಸ್ಥಿತಿ; ಸಂಚಾಲಕರ ಏಕಪಕ್ಷೀಯ ಧೋರಣೆ, ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಕಲಾ ಚಟುವಟಿಕೆಗಳ ಕೊರತೆಯ ವಿರುದ್ಧ ಹಿರಿಯ ಕಲಾವಿದರ ಆಕ್ರೋಶ. ಸಲಹಾ ಸಮಿತಿ...

​ಕೊಲೆ ನಡೆದದ್ದು ಹೇಗೆ?

ಆಗಸ್ಟ್ 15 ರ ರಾತ್ರಿ, ಮೂವರು ಅಪ್ರಾಪ್ತ ಬಾಲಕರು ವೃದ್ಧನ ಮನೆಯ ಸ್ನಾನಗೃಹದ ಮೇಲ್ಛಾವಣಿಯ ಹೆಂಚುಗಳನ್ನು ತೆಗೆದು, ವೆಂಟಿಲೇಶನ್ ಮೂಲಕ ಒಳನುಗ್ಗಿದ್ದಾರೆ. ವೃದ್ಧನ ಬಾಯಿಗೆ ಬಟ್ಟೆ ತುರುಕಿ, ಮುಖದ ಮೇಲೆ ಬೆಡ್‌ಶೀಟ್ ಒತ್ತಿ ಹಿಡಿದು ಪ್ರಜ್ಞೆ ತಪ್ಪಿಸಿದ್ದಾರೆ. ಬಳಿಕ ಆತನ ಕೈಗಳನ್ನು ಪಂಚೆಯಿಂದ ತೊಡೆಗೆ ಕಟ್ಟಿ, ಕಾಲುಗಳನ್ನು ಟವೆಲ್‌ನಿಂದ ಬಿಗಿದಿದ್ದಾರೆ. ನಂತರ ಆತನ ಮೇಲೆ ತುಳಿದು, ಕುತ್ತಿಗೆ ಮತ್ತು ತಲೆಗೆ ಮನಬಂದಂತೆ ಥಳಿಸಿ ಕೊಂದಿದ್ದಾರೆ. ಕೊಲೆಗೆ ಯಾವುದೇ ಶಸ್ತ್ರಾಸ್ತ್ರಗಳನ್ನು ಬಳಸಲಾಗಿಲ್ಲ ಎಂದು ಆರೋಪಪಟ್ಟಿ ತಿಳಿಸಿದೆ.

​ಕೊಲೆಯ ಬಳಿಕ ಆರೋಪಿಗಳು ಮನೆಯಲ್ಲಿದ್ದ ನಾಲ್ಕೂವರೆ ಪವನ್ (sovereigns) ಚಿನ್ನವನ್ನು ದೋಚಿದ್ದಾರೆ.

ಆಗಸ್ಟ್ 17 ರಂದು ಈ ಭೀಕರ ಕೊಲೆ ಬೆಳಕಿಗೆ ಬಂದಿದ್ದು, ಅದೇ ದಿನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ವೇಳೆ ಪೊಲೀಸರಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಕೊಲೆ ಮಾಡುವಾಗ ಬಾಲಕರು ವಾಟ್ಸಾಪ್ (WhatsApp) ವಿಡಿಯೋ ಕರೆ ಮೂಲಕ ಬಾಲಕಿಗೆ ಕೊಲೆಯ ದೃಶ್ಯವನ್ನು ತೋರಿಸಿದ್ದಾರೆ. ಈ ಕೃತ್ಯದ ಬಗ್ಗೆ ಕಳೆದ ಎರಡು ತಿಂಗಳಿನಿಂದ ಆರೋಪಿಗಳು ಇನ್‌ಸ್ಟಾಗ್ರಾಮ್ (Instagram) ಮೂಲಕ ನಿರಂತರ ಸಂಪರ್ಕದಲ್ಲಿದ್ದು, ಸಂಪೂರ್ಣ ಸಂಚು ರೂಪಿಸಿದ್ದರು.

​ಆರೋಪಿಗಳ ಮೊಬೈಲ್ ಫೋನ್‌ಗಳಲ್ಲಿದ್ದ ಎಲ್ಲಾ ಚಾಟ್‌ಗಳನ್ನು (ಮಾತುಕತೆ) ಸೈಬರ್ ತಜ್ಞರ ನೆರವಿನಿಂದ ಮರುಪಡೆಯಲಾಗಿದ್ದು, ಇದರ ಪರಿಶೀಲನೆಗಾಗಿ ಮೆಟಾ (Meta) ಸಂಸ್ಥೆಯಿಂದ ಮಾಹಿತಿಯನ್ನು ಕೋರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವರದಿಯನ್ನು ಶೀಘ್ರದಲ್ಲೇ ಜೆಜೆಬಿಗೆ (JJB) ಸಲ್ಲಿಸಲಾಗುವುದು.

ಆರೋಪಿಗಳ ಫೋನ್‌ಗಳಿಂದ ಆರು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಒಂದು ಸಿಮ್ ಕಾರ್ಡ್ ಕೊಲೆಯಾದ ದಿನ ಮಾತ್ರ ಸಕ್ರಿಯವಾಗಿತ್ತು. ಇದು ಕೊಲೆಯ ನಿಖರವಾದ ಯೋಜನೆಗೆ ಸಾಕ್ಷಿಯಾಗಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

​ಈ ಪ್ರಕರಣಕ್ಕೆ ಸಂಬಂಧಿಸಿದಂತೆ 87 ಸಾಕ್ಷಿಗಳು, 98 ದಾಖಲೆಗಳು ಮತ್ತು 12 ಭೌತಿಕ ವಸ್ತುಗಳನ್ನು ಪಟ್ಟಿ ಮಾಡಲಾಗಿದೆ. ಆರೋಪಿಗಳು ಹರಿಪಾಡ್ ರೈಲು ನಿಲ್ದಾಣದಲ್ಲಿ ಇಳಿಯುವುದು, ಕೊಲೆಯಾದ ಮನೆಗೆ ತಲುಪುವುದು ಹಾಗೂ ಕೃತ್ಯದ ಬಳಿಕ ಅಲ್ಲಿಂದ ತೆರಳುವುದನ್ನು ತೋರಿಸುವ ಆರು ಸಿಸಿಟಿವಿ (CCTV) ತುಣುಕುಗಳನ್ನು ಪ್ರಮುಖ ಸಾಕ್ಷ್ಯವಾಗಿ ಉಲ್ಲೇಖಿಸಲಾಗಿದೆ.

ಅಪರಾಧದ ಗಂಭೀರತೆ, ಆರೋಪಿಗಳ ಸಾಮಾಜಿಕ ಹಿನ್ನೆಲೆ ಮತ್ತು ಅವರ ಮಾನಸಿಕ ಸ್ಥಿತಿಯನ್ನು ಪರಿಗಣಿಸಿ, ಕೃತ್ಯವೆಸಗಿದ ಮೂವರು ಬಾಲಕರನ್ನು ‘ವಯಸ್ಕರು’ (Adults) ಎಂದು ಪರಿಗಣಿಸಿ ವಿಚಾರಣೆ ನಡೆಸಬೇಕು ಎಂದು ಪ್ರಾಸಿಕ್ಯೂಷನ್ ಮನವಿ ಮಾಡಿದೆ. ಎರಡೂ ಕಡೆಯ ವಾದ ಆಲಿಸಿದ ನಂತರ ಬಾಲನ್ಯಾಯ ಮಂಡಳಿ (JJB) ಈ ಕುರಿತು ನಿರ್ಧಾರ ಕೈಗೊಳ್ಳಲಿದೆ. ಇನ್ನು, 13 ವರ್ಷದ ಬಾಲಕಿಯ ವಿಚಾರಣೆಯನ್ನು ಜೆಜೆಬಿ (JJB) ನಡೆಸಲಿದೆ. 

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕದ ವಿಮಾನಯಾನದಲ್ಲಿ ಕಂಡರಿಯದ ಅಲ್ಲೋಲ-ಕಲ್ಲೋಲ: 11,000 ವಿಮಾನಗಳು ದಿಢೀರ್ ಸ್ಥಗಿತ

ಅಮೆರಿಕದ ವಾಯು ಸಂಚಾರ ನಿಯಂತ್ರಣ (ATC) ಸಂಪರ್ಕ ವ್ಯವಸ್ಥೆಯಲ್ಲಿ ಉಂಟಾದ ಭಾರಿ...

ಬಳ್ಳಾರಿ | ಡಿ.30ರವರೆಗೆ ಕಾಲುವೆಗಳಿಗೆ ನೀರು ಹರಿಸಲು ಆಗ್ರಹಿಸಿ ರೈತರ ಪ್ರತಿಭಟನೆ

ಎಚ್‌ಎಲ್‌ಸಿ ಮತ್ತು ಎಲ್‌ಎಲ್‌ಸಿ ಕಾಲುವೆಗಳಿಗೆ ಡಿಸೆಂಬರ್ 30ರವರೆಗೆ ನೀರು ಹರಿಸಬೇಕು ಎಂದು...

ಬೀದರ್‌ | ಅನುಭವ ಮಂಟಪ ಉತ್ಸವ : ನ.16ರಿಂದ 26ರವರೆಗೆ ‘ಜನಪದದಲ್ಲಿ ಬಸವ ದರ್ಶನ’ ಪ್ರವಚನ

ಬಸವಕಲ್ಯಾಣ: ನವೆಂಬರ್ 28 ಮತ್ತು 29ರಂದು ನಡೆಯಲಿರುವ 47ನೇ ಶರಣ ಕಮ್ಮಟ...

ಬೀದರ್‌ | ಕೆಕೆಆರ್‌ಟಿಸಿ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಚಂದ್ರಕಾಂತ ಹಿಪ್ಪಳಗಾಂವ

ಕಾಂಗ್ರೆಸ್ ಪಕ್ಷಕ್ಕಾಗಿ ಸುಮಾರು ನಾಲ್ಕು ದಶಕಗಳಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡು ವಿವಿಧ ಜವಾಬ್ದಾರಿಗಳನ್ನು...