ಬಾಗಲಕೋಟೆ | ಬಸವಣ್ಣನ ಕುರಿತು ಅವಹೇಳನ: ರವಿ ಹಂಜ ಬಂಧನಕ್ಕೆ ಆಗ್ರಹ

Date:

12ನೇ ಶತಮಾನದಲ್ಲಿ ವರ್ಣ ವ್ಯವಸ್ಥೆಯನ್ನು ವಿರೋಧಿಸಿ, ಸಮಾನತೆ, ಕಾಯಕ ಮತ್ತು ದಾಸೋಹದ ತತ್ವಗಳ ಮೂಲಕ ಸರ್ವಜನರ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದ ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ, ಅಮೆರಿಕಾದಲ್ಲಿರುವ ರವಿ ಹಂಜ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಾಗಲಕೋಟೆ ಜಿಲ್ಲೆಯ ಬುದ್ಧ ಬಸವ ಅಂಬೇಡ್ಕರ್ ಜಾಗೃತ ವೇದಿಕೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

- Advertisement -

“ಬಸವಣ್ಣನವರು ಮೂಢನಂಬಿಕೆ, ಮೇಲು-ಕೀಳು ಎಂಬ ಭೇದಭಾವ ಹಾಗೂ ಸಾಮಾಜಿಕ ಅಸಮಾನತೆಗಳನ್ನು ವಿರೋಧಿಸಿ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ದಾರ್ಶನಿಕರು. ಅನುಭವ ಮಂಟಪದ ಮೂಲಕ ಎಲ್ಲಾ ವರ್ಗದ ಜನರಿಗೆ ಮುಕ್ತವಾಗಿ ತಮ್ಮ ವಿಚಾರಗಳನ್ನು ಅಭಿವ್ಯಕ್ತಪಡಿಸುವ ಅವಕಾಶ ಕಲ್ಪಿಸಿ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಭದ್ರ ಬುನಾದಿ ಹಾಕಿದವರು. ಕನ್ನಡದಲ್ಲಿ ವಚನಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ ಮಹನೀಯರು” ಎಂದು ಬಸವಣ್ಣನವರ ಕೊಡುಗೆಯನ್ನು ಸ್ಮರಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕೃಷಿಮೇಳ | ‘ಪ್ರಕೃತಿ ಕೊಡಾದೆಲ್ಲ ಒಳ್ಳೀದೆ ಇರ್ತೈತಿ, ಮನ್ಷಾನೇ...

"ಪ್ರಕೃತಿ ಮನುಷ್ಯನಿಗೆ ಕೊಡುವುದೆಲ್ಲವೂ ಒಳ್ಳೆಯದೇ ಇರುತ್ತದೆ, ಆದರೆ ಮನುಷ್ಯ ಪ್ರಕೃತಿಯನ್ನು ಮರೆತು ಏನೇನೋ ಹುಡುಕಿಕೊಂಡು ಹೊರಟಿದ್ದಾನೆ" ಇದು ತಲೆಮಾರುಗಳಿಂದ ಕಂಬಳಿ ನೇಯ್ದು ಬದುಕು ಕಟ್ಟಿಕೊಂಡಿರುವ ಕಂಬಳಿ ನೇಕಾರರ ಮನದಾಳ. ಅಜ್ಜ-ಮುತ್ತಜ್ಜರ ಕಾಲದಿಂದಲೂ ನಡೆದುಕೊಂಡು...

ಒಕ್ಕಲಿಗ ರಾಜಕಾರಣದ ಅಸ್ಮಿತೆ: ಪಾರಂಪರಿಕ ಪ್ರಾಬಲ್ಯ ಮತ್ತು ಹೊಸ...

ರಾಜ್ಯದ ಒಕ್ಕಲಿಗ ರಾಜಕಾರಣವು ಇಂದು ಒಂದು ಮಹತ್ವದ ತಿರುವಿನಲ್ಲಿದೆ. ಒಂದು ಕಡೆ ದಶಕಗಳ ಅನುಭವ, ಭಾವನಾತ್ಮಕ ಬಾಂಧವ್ಯ ಮತ್ತು ಪಾರಂಪರಿಕ ಮತಬ್ಯಾಂಕ್ ಹೊಂದಿರುವ ದೇವೇಗೌಡರ ಕುಟುಂಬವಿದ್ದರೆ, ಇನ್ನೊಂದು ಕಡೆ ಆಕ್ರಮಣಕಾರಿ ರಾಜಕೀಯ ತಂತ್ರಗಾರಿಕೆ,...

ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬ: ಬುಡಮೇಲಾಗುತ್ತಿದೆಯೇ ಪಂಚಾಯತ್ ರಾಜ್...

ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯಬೇಕು ಎಂಬುದು ಸಂವಿಧಾನದ ಆಶಯ. ಆದರೆ ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ವಿಳಂಬ ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆಯೇ...

“ಆದರೆ, ವಿಶ್ವವಾಣಿ ಟಿವಿ ಮಾಧ್ಯಮದ ಸಂದರ್ಶನವೊಂದರಲ್ಲಿ ರವಿ ಹಂಜ ಅವರು ಬಸವಣ್ಣನವರ ಕುರಿತು ಅವಹೇಳನಕಾರಿ ಪದಗಳನ್ನು ಬಳಸಿ, ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಆರೋಪಗಳನ್ನು ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತವಾಗಿದೆ.

“ಬಸವಣ್ಣನವರು ತಮ್ಮ ವಚನಗಳ ಮೂಲಕ ಕಾಯಕನಿಷ್ಠೆ, ಪ್ರಾಮಾಣಿಕತೆ ಮತ್ತು ನೈತಿಕ ಬದುಕಿನ ಮಹತ್ವವನ್ನು ಸಾರಿದ್ದಾರೆ. ಬಿಜ್ಜಳನ ಭಂಡಾರದ ಕುರಿತು ಇರುವ ವಚನವನ್ನು ತಪ್ಪಾಗಿ ಅರ್ಥೈಸಿ ಬಸವಣ್ಣನವರ ಮೇಲೆ ಆರೋಪ ಮಾಡುವುದು ಅವರ ತತ್ವ ಮತ್ತು ಚಿಂತನೆಗಳನ್ನು ಅರ್ಥಮಾಡಿಕೊಳ್ಳದಿರುವುದಕ್ಕೆ ಸಾಕ್ಷಿ” ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

“ರವಿ ಹಂಜ ಅವರು ತಮ್ಮ ಲೇಖನಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಬಸವಣ್ಣನವರು, ಬಸವಾದಿ ಶರಣರ ವಚನ ಸಾಹಿತ್ಯದ ಕುರಿತು ನಿರಂತರವಾಗಿ ಅವಹೇಳನಕಾರಿ ಬರಹಗಳನ್ನು ಪ್ರಕಟಿಸುತ್ತಿದ್ದಾರೆ. ಲಿಂಗಾಯತ ಸಮುದಾಯವನ್ನು ವ್ಯಂಗ್ಯವಾಗಿ ಸಂಬೋಧಿಸುವ ಮೂಲಕ ಸಮಸ್ತ ಲಿಂಗಾಯತರ ಭಾವನೆಗಳಿಗೆ ನೋವುಂಟು ಮಾಡುತ್ತಿದ್ದಾರೆ” ಎಂಬ ಆರೋಪವೂ ಕೇಳಿಬಂದಿದೆ.

“ಬಸವಣ್ಣನವರ ಸಮಾನತೆ, ಮಾನವೀಯತೆ, ಕಾಯಕ ಮತ್ತು ದಾಸೋಹದಂತಹ ಉದಾತ್ತ ಮೌಲ್ಯಗಳನ್ನು ಸಮಾಜದಲ್ಲಿ ಬೆಳೆಸಬೇಕಾದ ಸಂದರ್ಭದಲ್ಲಿ, ಇಂತಹ ಹೇಳಿಕೆಗಳು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಸಾಧ್ಯತೆಯಿದೆ” ಎಂದು ಆತಂಕ ವ್ಯಕ್ತಪಡಿಸಲಾಗಿದೆ.

“ಕರ್ನಾಟಕ ಸರ್ಕಾರವು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ವಿಶ್ವಗುರು ಬಸವಣ್ಣನವರ ಘನತೆಗೆ ಧಕ್ಕೆ ತರುವ ಹೇಳಿಕೆಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ರವಿ ಹಂಜ ಅವರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ವಿವಾದಿತ ಪುಸ್ತಕಗಳನ್ನು ಕಾನೂನುಬದ್ಧವಾಗಿ ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಸಂಬಂಧಪಟ್ಟ ಸಾಮಾಜಿಕ ಜಾಲತಾಣಗಳಲ್ಲಿನ ಆಕ್ಷೇಪಾರ್ಹ ವಿಷಯಗಳ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಲಾಗಿದೆ.

“ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುವಂತಹ ಆರೋಪಿತ ಹೇಳಿಕೆಗಳನ್ನು ಪ್ರಸಾರ ಮಾಡಿದ ವಿಶ್ವವಾಣಿ ಪತ್ರಿಕೆ ಹಾಗೂ ಅದರ ಸಂಪಾದಕ ವಿಶ್ವೇಶ್ವರ ಭಟ್ ಅವರ ಜವಾಬ್ದಾರಿಯ ಬಗ್ಗೆಯೂ ತನಿಖೆ ನಡೆಸಿ, ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಬಸವರಾಜ್ ಧರ್ಮಂತಿ, ಅರವಿಂದ ಮುಚಗಂಡಿ, ಅರವಿಂದ
ನಾವಲಗಿ, ಗುರುಬಸವ ಸಿಂಧೂರ, ಜ್ಯೋತಿ ಕುಮಟಗಿ, ರಶ್ಮಿ ರಗುನಾಥ, ಶಂಕರ ತಪಶೆಟ್ಟಿ, ವೀರಭದ್ರಪ್ಪ ಅಂಗಡಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜಸ್ಥಾನ ಜಿಲ್ಲಾ ಪರಿಷತ್ ಚುನಾವಣೆ: ಮತ ಎಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ, ಬಿಜೆಪಿಗೆ ಹಿನ್ನಡೆ

ರಾಜಸ್ಥಾನ ಪಂಚಾಯತ್ ರಾಜ್ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಶುಕ್ರವಾರ ಬೆಳಿಗ್ಗೆ...

ಯೂಪಿ ಚುನಾವಣೆ- ಕಾಂಗ್ರೆಸ್- ಸ.ಪಾ. ನಡುವೆ ಸೀಟು ಹೊಂದಾಣಿಕೆಯ ಹಗ್ಗಜಗ್ಗಾಟ

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು...

ಟ್ರಂಪ್-ಕ್ಸಿ-ಪುಟಿನ್ ತ್ರಿಪಕ್ಷೀಯ ಸಭೆ: ಪ್ರಧಾನಿ ಮೋದಿ ವಿದೇಶಾಂಗ ನೀತಿಯನ್ನು ಪ್ರಶ್ನಿಸಿದ ರಾಹುಲ್ ಗಾಂಧಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು...

ಶಿವಮೊಗ್ಗ | ಬೈಪಾಸ್‌ ರಸ್ತೆ ಅಕ್ರಮ ಒತ್ತುವರಿ ತೆರವು: ಪೊಲೀಸರ ಕಾರ್ಯಕ್ಕೆ ಜನರ ಮೆಚ್ಚುಗೆ

ಶಿವಮೊಗ್ಗ ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗಿದ್ದ ಅಂಗಡಿಗಳನ್ನು,...