ಶಿವಮೊಗ್ಗ | ಬೈಪಾಸ್‌ ರಸ್ತೆ ಅಕ್ರಮ ಒತ್ತುವರಿ ತೆರವು: ಪೊಲೀಸರ ಕಾರ್ಯಕ್ಕೆ ಜನರ ಮೆಚ್ಚುಗೆ

Date:

ಶಿವಮೊಗ್ಗ ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗಿದ್ದ ಅಂಗಡಿಗಳನ್ನು, ರಸ್ತೆ ಬದಿ ಅಕ್ರಮವಾಗಿ ಹಾಕಲಾಗಿದ್ದ ಅಂಗಡಿ ಸಾಲನ್ನು ತೆರವುಗೊಳಿಸಲು ಇಂದು ಟ್ರಾಫಿಕ್ ಪೊಲೀಸರು ಒತ್ಕಾತುವರಿ ಕಾರ್ಯಾಚರಣೆ ನಡೆಸಿದರು.

- Advertisement -

ಟ್ರಾಫಿಕ್ ಇನ್ಸ್‌ಪೆಕ್ಟರ್ ದೇವರಾಜ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ಬೈಪಾಸ್ ರಸ್ತೆಗೆ ತೆರಳಿ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಅಂಗಡಿಗಳನ್ನು ವಿಸ್ತರಿಸಿಕೊಂಡಿದ್ದ ಮತ್ತು ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿದವರ ವಿರುದ್ಧ ತೆರವು ಕಾರ್ಯಾಚರಣೆ ನಡೆಸಿತು. ನಗರದ ಪ್ರಮುಖ ಸಂಪರ್ಕ ರಸ್ತೆಗಳಲ್ಲೊಂದಾದ ಬೈಪಾಸ್ ರಸ್ತೆಯಲ್ಲಿ ವಾಹನಗಳ ಸಂಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಸ್ತೆ ಬದಿಯ ಒತ್ತುವರಿಯಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಈ ಕ್ರಮ ಸಾರ್ವಜನಿಕರ ಗಮನ ಸೆಳೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಒಕ್ಕಲಿಗ ರಾಜಕಾರಣದ ಅಸ್ಮಿತೆ: ಪಾರಂಪರಿಕ ಪ್ರಾಬಲ್ಯ ಮತ್ತು ಹೊಸ...

ರಾಜ್ಯದ ಒಕ್ಕಲಿಗ ರಾಜಕಾರಣವು ಇಂದು ಒಂದು ಮಹತ್ವದ ತಿರುವಿನಲ್ಲಿದೆ. ಒಂದು ಕಡೆ ದಶಕಗಳ ಅನುಭವ, ಭಾವನಾತ್ಮಕ ಬಾಂಧವ್ಯ ಮತ್ತು ಪಾರಂಪರಿಕ ಮತಬ್ಯಾಂಕ್ ಹೊಂದಿರುವ ದೇವೇಗೌಡರ ಕುಟುಂಬವಿದ್ದರೆ, ಇನ್ನೊಂದು ಕಡೆ ಆಕ್ರಮಣಕಾರಿ ರಾಜಕೀಯ ತಂತ್ರಗಾರಿಕೆ,...

ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬ: ಬುಡಮೇಲಾಗುತ್ತಿದೆಯೇ ಪಂಚಾಯತ್ ರಾಜ್...

ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯಬೇಕು ಎಂಬುದು ಸಂವಿಧಾನದ ಆಶಯ. ಆದರೆ ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ವಿಳಂಬ ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆಯೇ...

ಸರ್ಕಾರಿ ಶಾಲೆಗಳ ಕಣ್ಮರೆ ಎಂದರೆ ಬಹುತ್ವದ ನಾಶ; ಹರಳಿಮಠ...

ರಾಜ್ಯಾದ್ಯಂತ ಹರಡಿರುವ ಸರ್ಕಾರಿ ಶಾಲೆಗಳು ಬಹುತ್ವದ ಕೇಂದ್ರಗಳು. ಇವು ಕನ್ನಡದ ಗುರುತುಗಳು ಕೂಡ ಹೌದು. ನಮ್ಮ ಹಳ್ಳಿಗಳ ಸರ್ಕಾರಿ ಶಾಲೆಗಳು ಎಂದಿಗೂ ಮುಚ್ಚದೇ ಜೀವಂತವಾಗಿ ಮುಂದುವರೆಯಲೇ ಬೇಕಾಗಿದೆ. ಏಕೆಂದರೆ ಈ ಶಾಲೆಗಳು ಗುಪ್ತಗಾಮಿನಿಯಾಗಿ...

ದೇವರಾಜ್ ಅವರು ಟ್ರಾಫಿಕ್ ಇನ್ಸ್‌ಪೆಕ್ಟರ್ ಆಗಿ ಜವಾಬ್ದಾರಿ ವಹಿಸಿಕೊಂಡ ನಂತರ ಸಂಚಾರ ವ್ಯವಸ್ಥೆ ಸುಧಾರಣೆ, ರಸ್ತೆ ಶಿಸ್ತು ಕಾಪಾಡುವುದು ಹಾಗೂ ಸಾರ್ವಜನಿಕರಿಗೆ ಎದುರಾಗುವ ಸಂಚಾರ ಸಮಸ್ಯೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತಿದ್ದಾರೆ. ಇದೀಗ ಬೈಪಾಸ್ ರಸ್ತೆಯ ಒತ್ತುವರಿ ತೆರವಿಗೂ ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಂದಿನಿಂದ ರಾಜ್ಯದ 11 ಜಿಲ್ಲೆಗಳಲ್ಲಿ 7 ದಿನ ಭಾರೀ ಮಳೆ: ಹವಾಮಾನ ಇಲಾಖೆ

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ತೀವ್ರಗೊಂಡು ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ. ಈ...

ಕೊಡವ ಸಂಸ್ಕೃತಿ ಉಳಿವಿಗೆ ದುಡಿ, ತಾಳ, ಒಡಿಕತ್ತಿ ವಿತರಣೆ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಸಂಸ್ಕೃತಿ, ಸಂಪ್ರದಾಯ ಹಾಗೂ...

ಹಾವೇರಿ | ಮಕ್ಕಳ ಸೃಜನಶೀಲತೆ ಗುರುತಿಸಿ ಪ್ರೋತ್ಸಾಹಿಸುವುದು ಪಾಲಕರ ಜವಾಬ್ದಾರಿ: ದಂಡಾಧಿಕಾರಿ ವಿಠಲ್ ಚೌಗಲ್‌

"ಮಕ್ಕಳಲ್ಲಿ ಅಡಗಿರುವ ಪ್ರತಿಭೆ, ಸೃಜನಶೀಲತೆ ಮತ್ತು ಆತ್ಮವಿಶ್ವಾಸವನ್ನು ಗುರುತಿಸಿ ಪ್ರೋತ್ಸಾಹಿಸುವುದು ಪಾಲಕರ...