ಕೃಷಿಮೇಳ | ‘ಪ್ರಕೃತಿ ಕೊಡಾದೆಲ್ಲ ಒಳ್ಳೀದೆ ಇರ್ತೈತಿ, ಮನ್ಷಾನೇ ಪ್ರಕೃತಿನ ಮರ್ತಾನ’; ಆಧುನಿಕ ತಲೆಮಾರಿನ ಕಂಬಳಿಯ ಕತೆ

Date:

"ಪ್ರಕೃತಿ ಮನುಷ್ಯನಿಗೆ ಕೊಡುವುದೆಲ್ಲವೂ ಒಳ್ಳೆಯದೇ ಇರುತ್ತದೆ, ಆದರೆ ಮನುಷ್ಯ ಪ್ರಕೃತಿಯನ್ನು ಮರೆತು ಏನೇನೋ ಹುಡುಕಿಕೊಂಡು ಹೊರಟಿದ್ದಾನೆ" ಇದು ತಲೆಮಾರುಗಳಿಂದ ಕಂಬಳಿ ನೇಯ್ದು ಬದುಕು ಕಟ್ಟಿಕೊಂಡಿರುವ ಕಂಬಳಿ ನೇಕಾರರ ಮನದಾಳ. ಅಜ್ಜ-ಮುತ್ತಜ್ಜರ ಕಾಲದಿಂದಲೂ ನಡೆದುಕೊಂಡು ಬಂದ ಈ ಕುಲಕಸುಬು, ಇಂದು ಆಧುನಿಕತೆಯ ಭರಾಟೆಯಲ್ಲಿ ನಲುಗುತ್ತಿದೆ. ಇಲ್ಲಿದೆ ಕಂಬಳಿಯ ಮಹತ್ವ ಮತ್ತು ನೇಕಾರರ ಬವಣೆಯ ಚಿತ್ರಣ...

ಈ ಬಾರಿಯ ಕೃಷಿ ಮೇಳದಲ್ಲಿ ಹಿಂದಿನ ವರ್ಷದ ಕಳೆ, ಗೋಜು-ಗದ್ದಲವಿಲ್ಲ. ಜಿಕೆವಿಕೆಯ ಖಾಲಿ ಕ್ಯಾಂಪಸ್‌ ರಸ್ತೆಗಳಂತೆಯೇ ಮಳಿಗೆಗಳೂ ಖಾಲಿ. ಆದರೆ… ಕಳೆದ ವರ್ಷಕ್ಕಿಂತಲೂ ಹೆಚ್ಚು ಕಂಬಳಿ ವ್ಯಾಪಾರಸ್ಥರ ಮಳಿಗೆಗಳಿದ್ದದ್ದು ವಿಶೇಷ. ನಮ್ಮದೇ ನೆಲದ ಕುರಿ ಉಣ್ಣೆಯಿಂದ ನೇಯ್ದ ಕಪ್ಪು, ಬಿಳುಪು ಬಣ್ಣದ ಕಂಬಳಿಗಳ ಜೊತೆಗೆ ನಯವಾದ ನೂಲಿನ ಕಾಶ್ಮೀರಿ ಉಣ್ಣೆಯ ಕಂಬಳಿಗಳು. ನಡು, ನಡುವೆ ಬಣ್ಣದ ನೂಲು ತೂರಿಸಿ ಹೊಲಿದ ಗೊಂಡೆಗಳು ಹಾಗೂ ಕಂಬಳಿಯಿಂದ ತಯಾರಿಸಿದ ಟೊಪ್ಪಿ, ದೃಷ್ಟಿ ದಾರ, ಶಾಲುಗಳನ್ನು ಟಾರ್ಪಾಲಿನ ಮೇಲೆ ಚಂದಾಗಿ ಜೋಡಿಸಿ ಮಾರಾಟಕ್ಕೆ ಕುಳಿತವರ ಮುಖದಲ್ಲಿ ನೀರಸ ಭಾವ.

- Advertisement -

“ಪ್ರಕೃತಿ ಮನುಷ್ಯನಿಗೆ ಕೊಡುವುದೆಲ್ಲವೂ ಒಳ್ಳೆಯದೇ ಇರುತ್ತದೆ, ಆದರೆ ಮನುಷ್ಯ ಪ್ರಕೃತಿಯನ್ನು ಮರೆತು ಏನೇನೋ ಹುಡುಕಿಕೊಂಡು ಹೊರಟಿದ್ದಾನೆ” ಇದು ತಲೆಮಾರುಗಳಿಂದ ಕಂಬಳಿ ನೇಯ್ದು ಬದುಕು ಕಟ್ಟಿಕೊಂಡಿರುವ ಕಂಬಳಿ ನೇಕಾರರ ಮನದಾಳ. ಅಜ್ಜ-ಮುತ್ತಜ್ಜರ ಕಾಲದಿಂದಲೂ ನಡೆದುಕೊಂಡು ಬಂದ ಈ ಕುಲಕಸುಬು, ಇಂದು ಆಧುನಿಕತೆಯ ಭರಾಟೆಯಲ್ಲಿ ನಲುಗುತ್ತಿದೆ. ಇಲ್ಲಿದೆ ಕಂಬಳಿಯ ಮಹತ್ವ ಮತ್ತು ನೇಕಾರರ ಬವಣೆಯ ಚಿತ್ರಣ…

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಒಕ್ಕಲಿಗ ರಾಜಕಾರಣದ ಅಸ್ಮಿತೆ: ಪಾರಂಪರಿಕ ಪ್ರಾಬಲ್ಯ ಮತ್ತು ಹೊಸ...

ರಾಜ್ಯದ ಒಕ್ಕಲಿಗ ರಾಜಕಾರಣವು ಇಂದು ಒಂದು ಮಹತ್ವದ ತಿರುವಿನಲ್ಲಿದೆ. ಒಂದು ಕಡೆ ದಶಕಗಳ ಅನುಭವ, ಭಾವನಾತ್ಮಕ ಬಾಂಧವ್ಯ ಮತ್ತು ಪಾರಂಪರಿಕ ಮತಬ್ಯಾಂಕ್ ಹೊಂದಿರುವ ದೇವೇಗೌಡರ ಕುಟುಂಬವಿದ್ದರೆ, ಇನ್ನೊಂದು ಕಡೆ ಆಕ್ರಮಣಕಾರಿ ರಾಜಕೀಯ ತಂತ್ರಗಾರಿಕೆ,...

ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬ: ಬುಡಮೇಲಾಗುತ್ತಿದೆಯೇ ಪಂಚಾಯತ್ ರಾಜ್...

ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯಬೇಕು ಎಂಬುದು ಸಂವಿಧಾನದ ಆಶಯ. ಆದರೆ ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ವಿಳಂಬ ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆಯೇ...

ಸರ್ಕಾರಿ ಶಾಲೆಗಳ ಕಣ್ಮರೆ ಎಂದರೆ ಬಹುತ್ವದ ನಾಶ; ಹರಳಿಮಠ...

ರಾಜ್ಯಾದ್ಯಂತ ಹರಡಿರುವ ಸರ್ಕಾರಿ ಶಾಲೆಗಳು ಬಹುತ್ವದ ಕೇಂದ್ರಗಳು. ಇವು ಕನ್ನಡದ ಗುರುತುಗಳು ಕೂಡ ಹೌದು. ನಮ್ಮ ಹಳ್ಳಿಗಳ ಸರ್ಕಾರಿ ಶಾಲೆಗಳು ಎಂದಿಗೂ ಮುಚ್ಚದೇ ಜೀವಂತವಾಗಿ ಮುಂದುವರೆಯಲೇ ಬೇಕಾಗಿದೆ. ಏಕೆಂದರೆ ಈ ಶಾಲೆಗಳು ಗುಪ್ತಗಾಮಿನಿಯಾಗಿ...

ಈ ದಿನ.ಕಾಮ್‌ ಜೊತೆಗೆ ಕಂಬಳಿ ವ್ಯಾಪಾರಸ್ಥ ಹಾವೇರಿಯ ಪ್ರಕಾಶ್‌ ಮಾತನಾಡುತ್ತಾ, “ಅಪ್ಪ, ಅಜ್ಜಾರ ಕಾಲದಿಂದನೂ ಮಾಡ್ಕಂಡ್‌ ಬಂದೀವಿ, ನಮ್ಮ ದಂದೇನೆ ಇದೇರಿ. ಕುರಿ ಉಣ್ಣಿ ನಾವ್‌ ಬೇರೆರಿಂದ ತಗೋತೀವ್ರಿ. ಉಣ್ಣಿ ತಂದು ಮಿಷನ್ನಿಗ್‌ ಹಾಕ್ತೀವ್ರಿ. ನಮ್ಮನಿ ಹೆಣ್ಣ ಮಕ್ಕಳು ರಾಟಿಗ್‌ ಹಾಕಿ ನೂಲ್‌ ಮಾಡ್ತಾರ್ರಿ ಆ ನೂಲಿಂದ ಕಂಬ್ಳಿ ತಯಾರ್‌ ಮಾಡ್ತೀವ್ರಿ. ಒಂದ್‌ ಕಂಬ್ಳಿ ನೇಯಕ್ಕ ಒಂದಿನ ಬೇಕು, ದೊಡ್ಡ್‌ ಕಂಬ್ಳಿ ಆದ್ರೆ ಎಲ್ಡ್‌ ದಿನ ಬೇಕ್ರಿ…” ಎಂದು ಕಂಬಳಿ ತಯಾರಿಕೆಯ ಹಂತವನ್ನು ವಿವರಿಸದರು.

“ಕಾಲ್ಮಾನ ಚೇಂಜ್‌ ಆಗೀತ್ರಿ… ಈಗೀನ್‌ ಜನ್ಗೂಳಿಗೆ ಕಂಬ್ಳಿ ಬ್ಯಾಡಗೈತಿ, ಹಿಂದೆಲ್ಲಾ ಹಾಸ್ಕಣಕ, ಹೊಚ್ಕಣಕ ಪೂಜೆ ಪುನುಸ್ಕಾರಕ್ಕ ಕಂಬ್ಳಿ ಇಲ್ದಿದ್ರೆ ನಡಿಂಗಿದ್ದಿಲ್ರಿ… ಈಗೇನೋ ರಗ್ಗು, ಪಗ್ಗು ಬಂದೂ ಯಾರು ನಮ್‌ ಕಂಬ್ಳಿ ಕೊಳ್ಳಂಗಿಲ್ರಿ. ಆದ್ರೂ ಹೊಟ್ಟಿಗೆ, ಬಟ್ಟಿಗೆ ಜೀವ್ನ ಮಾಡಾಕ್‌ ಏನೂ ಮೋಸ ಅಲ್ರಿ ಆದ್ರ ಲಾಭ ಕಮ್ಮೆ. ಕೃಷಿಮೇಳ, ಜಾತ್ರೆ ಅಂತಿಂತ ಫಂಕ್ಷನ್ನಿಗ್‌ ಹೋಗ್ತೀವ್ರಿ. ಬೀರಪ್ಪನ್‌ ಜಾತ್ರಿಯಾಗ ಕಂಬ್ಳಿ ಜಾಸ್ತಿ ಕರ್ಚಾಗ್ತದ. ಮೊನ್ನೆ ಮಾಳಿಂಗ್‌ರಾಯನ್‌ ಜಾತ್ರಿಗ ಮಹರಾಷ್ಟ್ರ ಹೋಗಿದ್ವಿ ಅಲ್ಲಿ ಕಂಬ್ಳಿ ವ್ಯಾಪಾರಾದ್ವು. ಅಕ್ಕ ಪಕ್ಕದ್‌ ರಾಜ್ಯುಗಳ್ಗೆ ಮಹರಾಷ್ಟ್ರ, ತೆಲಂಗಾಣ ಕಡೆಗೆ ಹೋಗ್ತಿರ್ತೀವ್ರಿ. ನಮ್‌ ರಾಜ್ಯದಲ್ಲಿ ಉತ್ರು ಕರ್ನಾಟಕ ಬಿಟ್ರೆ ಮಲ್ನಾಡ್‌ ಸೀಮಿಲಿ ಜಾಸ್ತಿ ಕರ್ಚಾಗ್ತದ. ಎಂದು ಬದಲಾಗುತ್ತಿರುವ ತಲೆಮಾರಿನಲ್ಲಿ ತಮ್ಮ ವ್ಯಾಪಾರದ ಅನುಭವವನ್ನು ಹಂಚಿಕೊಂಡರು.

7172e01d 93bf 46b0 ae9b 0c5356d153e0 e1795160890195

ಕಂಬಳಿಯ ಉಪಯೋಗವನ್ನು ಬಣ್ಣಿಸುತ್ತಾ, “ಕುರಿ ಉಣ್ಣಿಂದ ಮಾಡದಲ್ರಿ… ಹಂಗಾಗ ಮನ್ಷ ಕಂಬ್ಳಿ ಮ್ಯಾಲ ಮಲ್ಗಿ ಬೆಳಿಗ್ಗಿ ಎದ್ರ ಫ್ರೆಶಾಗಿರ್ತಾನ. ಕಂಬ್ಳಿ ಮೇಲೆ ಮಲ್ಗದ್ರಿಂದ ಮೈ ಬೆಚ್ಚಗಿರ್ತದ, ಮೈಕೈ ನೋವು ಬರಲ್ಲ. ಆರೋಗ್ಯಕ್ಕ ಒಳ್ಳೆದು. ಬಾಳ್ಕಿನೂ ಬರ್ತದ ಒಂದ್‌ ಕಂಬ್ಳಿ ಜೋಪಾನ ಮಾಡಿದ್ರೆ 20ರಿಂದ 25ವರ್ಷ ತನ ಬಾಳ್ಕಿ ಬರ್ತದ. ಇಲಿ-ಗಿಲಿ ಕಡೀದಾಂಗ, ನುಸಿ ಸೇರ್ದಾಂಗ ಸ್ವಚ್ಛ್‌ ಇಟ್ಕಬೇಕು. ಪ್ರಕೃತಿ ಮನುಷ್ಯಂಗ್‌ ಕೊಡಾದೆಲ್ಲಾನು ಒಳ್ಳೇದೆ ಇರ್ತೈತ್ರಿ. ಮನುಷ್ಯಾನ ಪ್ರಕೃತಿನ ಮರ್ತು ಏನೇನೋ ಹುಡ್ಕಂಡ್‌ ಹೊಂಟಾನ. ಕಂಬ್ಳಿ ಕೊಳ್ಳಾದ್ರಿಂದ ಅವ್ರ್‌ ಆರೋಗ್ಯಾನೂ ನಮ್ಮಂತ ಕುಲ್ಕಸ್ಬಿನಾರ್‌ ಬದ್ಕು ಚಂದಾಗ್ತದ” ಎಂದರು.

ಈದಿನ.ಕಾಮ್‌ ಜೊತೆಗೆ ಕಂಬಳಿ ವ್ಯಾಪಾರಿ ಬಸವರಾಜ್‌ ಮಾತನಾಡಿ, ಈಗೇನ್‌ ಮುಂಚಿನ್‌ ಥರ ವ್ಯಾಪಾರಿಲ್ಲ. ಕಂಬ್ಳಿ ಬಗ್ಗೆ ಜನ್ರಿಗ್‌ ಗೊತ್ತಿಲ್ಲ ಕಂಬ್ಳಿ ಹೊಚ್ಕಣದ್ರಿಂದ ಏನ್‌ ಉಪಯೋಗ ಅನ್ನದು ಈಗಿನ್‌ ಜನುಕ್ಕ್‌ ಗೊತ್ತಿಲ್ಲ. ನೂರುಪಾಯಿ ಇನ್ನೂರುಪಾಯಿಗ ಜಮ್ಕಾನ, ರಗ್ಗುಳು ಬರ್ತಾವ ತಗತಾರ. ಆರೋಗ್ಯಕ್ಕೂ ಒಳ್ಳೀದಲ್ಲ ಭೂಮಿಗೂ ಒಳ್ಳಿದಲ್ಲ. ಅವೆಲ್ಲಾ ತಯಾರಾಗೋದು ಕರುಗ್ದಿರೋ ನೂಲಿಂದ ಅವೇನ್‌ ಮಣ್ಣೊಳಗ್‌ ಕೊಳೀತಾವೇನ್ರಿ ಕಂಬ್ಳಿ ಹಾಂಗ. ಕಮ್ಮಿ ಬೆಲಿಗ್‌ ಸಿಕ್ತಾವಂತ ಬಾಳ್ಕಿ ಬರ್ತಾವೇನ್ರಿ… ಕಂಬ್ಳಿ ನಮ್ಮಪ್ಪಾರ್‌ ಕಾಲುದ್ದು ಈಗ್ಲೂ ಬಳಸ್ತೀವ್ರಿ ಅಷ್ಟ್‌ ಗಟ್ಟಿ ಇರ್ತದ. ಎಂದು ಕಂಬಳಿಯ ಹೆಗ್ಗಳಿಕೆಯ ಬಗ್ಗೆ ವಿವರಿಸಿದರು.

“ಈ ಬಾರಿ ಅಂತೂ ವ್ಯಾಪಾರಗಿಲ್ರಿ. ಮೂರ್‌ ದಿನದಿಂದ್ಲೂ ಖಾಲಿ ಹೊಡೀತೈತಿ ಸಂತಿ. ಆಗಿರೋ ಚಿಲ್ರಿ ವ್ಯಾಪಾರ್ದಿಂದ ನಾವೇನ್‌ ಊಟ ತಿಂಡಿ ತಿನ್ನಾಕ ಸರಿ ಆಗ್ತದ. ಉಳುಸ್ಕಂಡ್‌ ಹೋಗಾಕೇನಿಲ್ರಿ ಈಸತಿ. ಅನ್ನದ್‌ ಬೆಲಿ ಚಿನ್ನದ್‌ ಬೆಲಿ ಆಗ್ಯದ ಹಿಂಗಾದ್ರ ಬಾಳ್‌ ಮಾಡದ ಕಷ್ಟ ಐತಿ. ನಮ್ಮೂರಲ್ಲಿ ನಮ್‌ ಕಸ್ಬೇ ಕುರಿ ಸಾಕದು, ಕಂಬ್ಳಿ ಮಾಡದು ಇದ್‌ ಬಿಟ್ರೆ ನಮ್ಗೆ ಬೇರೇನು ಗೊತ್ತಿಲ್ರಿ. ಮುಂಚೆ ಉಣ್ಣೆ 10 ರುಪಾಯಿಗ ಕೆಜಿ ಸಿಗದು ಈಗ 70ರಿಂದ 80 ರುಪಾಯ ಕೆಜಿಗ ಆಗದ. ಅದ್‌ ತಂದು ಮಿಷನ್ನಿಗ ಹಾಕಿ ನೂಲ್‌ ನೇಯ್ದು ಹಾಸು ರೆಡಿ ಮಾಡ್ತೀವ್ರಿ. ಒಂದ್‌ ಕಂಬ್ಳಿ ತಯಾರ ಮಾಡಕ್ಕ 4 ಜನ ಬೇಕು. ಇಷ್ಟ್‌ ಪಾಡಿದ್ರೂ ಏನೂ ಗಿಟ್ಟಲ್ರಿ ನಮ್ಗ” ಎಂದು ಬೇಸರ ವ್ಯಕ್ತಪಡಿಸಿದರು.

55d0cefd 6e1f 40b0 9559 fc1c054f2682 e1795160798928 edited

ಕಂಬಳಿ ಕೇವಲ ಹೊದಿಕೆಯಲ್ಲ; ಅದು ನಮ್ಮ ನೆಲದ ಸಂಸ್ಕೃತಿ, ಪ್ರಕೃತಿ ಸ್ನೇಹಿ ಬದುಕು ಮತ್ತು ತಲೆಮಾರುಗಳಿಂದ ಬೆಳೆದು ಬಂದ ಕುಲಕಸುಬಿನ ಪ್ರತೀಕ. ಬದಲಾದ ಕಾಲಘಟ್ಟದಲ್ಲಿ ಅಗ್ಗದ, ಕೃತಕ ನೂಲಿನ ಉತ್ಪನ್ನಗಳತ್ತ ಜನರ ಚಿತ್ತ ವಾಲುತ್ತಿರುವುದರಿಂದ ಸಾಂಪ್ರದಾಯಿಕ ಕಂಬಳಿ ನೇಕಾರರು ಮತ್ತು ವ್ಯಾಪಾರಿಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಕಚ್ಚಾ ಉಣ್ಣೆಯ ಬೆಲೆ ಏರಿಕೆ, ಕಡಿಮೆ ಲಾಭ ಹಾಗೂ ಮಾರುಕಟ್ಟೆಯ ಕೊರತೆಯ ನಡುವೆಯೂ ತಮ್ಮ ಕಲೆಯನ್ನು ಉಳಿಸಿಕೊಳ್ಳಲು ಅವರು ಹೆಣಗಾಡುತ್ತಿದ್ದಾರೆ. ಪರಿಸರ ಸ್ನೇಹಿ, ದೀರ್ಘಕಾಲ ಬಾಳಿಕೆ ಬರುವ ಕಂಬಳಿ ಕಲೆಯ ಉಳಿಯುವಿಕೆ ನಮ್ಮ ಆರೋಗ್ಯದ ದೃಷ್ಟಿಯಿಂದಲ್ಲದೆ, ಈ ನೆಲದ ಕರಕುಶಲಕರ್ಮಿಗಳ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿಯೂ ಅತ್ಯಗತ್ಯ.

WhatsApp Image 2026 03 09 at 18.17.26
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಬೈಪಾಸ್‌ ರಸ್ತೆ ಅಕ್ರಮ ಒತ್ತುವರಿ ತೆರವು: ಪೊಲೀಸರ ಕಾರ್ಯಕ್ಕೆ ಜನರ ಮೆಚ್ಚುಗೆ

ಶಿವಮೊಗ್ಗ ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗಿದ್ದ ಅಂಗಡಿಗಳನ್ನು,...

ಶಿವಮೊಗ್ಗ | ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ : ಡಾ. ಬಸವ ಮರುಳಸಿದ್ಧ ಸ್ವಾಮಿಜಿ ಖಂಡನೆ

ಬಸವಣ್ಣನವರ ಮತ್ತು ಲಿಂಗಾಯತ ಸಮುದಾಯದ ಕುರಿತು ಅಮೆರಿಕದ ಪ್ರಜೆಯಾದ ರವಿ ಹಂಜ್...

ಅಖಿಲೇಶ್ ಅಯೋಧ್ಯೆಯಿಂದ ಸ್ಪರ್ಧಿಸಿದರೆ, ಅಲ್ಲಿಂದಲೇ ನಾಮಪತ್ರ ಸಲ್ಲಿಸುವೆ: ಯೋಗಿ ಆದಿತ್ಯನಾಥ್

ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಯೋಧ್ಯೆ ಕ್ಷೇತ್ರದಿಂದ ಸ್ಪರ್ಧಿಸುವಂತೆ...

ಒಕ್ಕಲಿಗ ರಾಜಕಾರಣದ ಅಸ್ಮಿತೆ: ಪಾರಂಪರಿಕ ಪ್ರಾಬಲ್ಯ ಮತ್ತು ಹೊಸ ನಾಯಕತ್ವದ ಡಿಕೆಶಿ vs ಕುಮಾರ ಸಂಘರ್ಷ

ರಾಜ್ಯದ ಒಕ್ಕಲಿಗ ರಾಜಕಾರಣವು ಇಂದು ಒಂದು ಮಹತ್ವದ ತಿರುವಿನಲ್ಲಿದೆ. ಒಂದು ಕಡೆ...