ಬೆಳಗಾವಿ | ಆಜೂರ ಪ್ರತಿಷ್ಠಾನದಿಂದ ಸಾಹಿತ್ಯ ಕೃತಿಗಳ ಆಹ್ವಾನ

Date:

ಸ್ಥಳೀಯ ಆಜೂರ ಪ್ರತಿಷ್ಠಾನವು ಪ್ರತಿವರ್ಷದಂತೆ ಈ ವರ್ಷವೂ ಬೆಳಗಾವಿ ಜಿಲ್ಲೆಯ ಆಜೂರ ಪ್ರತಿಷ್ಠಾನ ಪ್ರಶಸ್ತಿಗೆ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಅತ್ಯುತ್ತಮ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಿದೆ.

- Advertisement -

“ಕಥೆ, ಕವನ, ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಪ್ರವಾಸ ಕಥನ, ಜೀವನ ಚರಿತ್ರೆ, ಆತ್ಮಚರಿತ್ರೆ ಸೇರಿದಂತೆ ವಿವಿಧ ಪ್ರಕಾರಗಳ ಸಾಹಿತ್ಯ ಕೃತಿಗಳಿಗೆ ಪ್ರಶಸ್ತಿ ನೀಡಲು ಪ್ರತಿಷ್ಠಾನ ನಿರ್ಧರಿಸಿದೆ. ಆಸಕ್ತ ಲೇಖಕರು ತಮ್ಮ ಸಾಹಿತ್ಯ ಕೃತಿಗಳನ್ನು 2027ರ ಜನವರಿ 20ರೊಳಗಾಗಿ ಬಿ.ಆರ್. ಆಜೂರ, ಅಧ್ಯಕ್ಷರು, ಅಜೂರ ಪ್ರತಿಷ್ಠಾನ, ಶಾಂತ ವಲಯ, ಕೆ.ವಿ.ಬಿ. ಹಿಂಭಾಗ, ಗೋರಕ್ಷ ರಸ್ತೆ, ಹಾರೂಗೇರಿ–591220, ತಾಲೂಕು ರಾಯಬಾಗ, ಜಿಲ್ಲೆ ಬೆಳಗಾವಿ ಈ ವಿಳಾಸಕ್ಕೆ ಕಳುಹಿಸಿಕೊಡಬೇಕು” ಎಂದು ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಹಂದಿಗುಂದದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮೀಜಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಸವಣ್ಣನವರಿಂದ ಗಾಂಧಿಯವರೆಗೆ: ಆಯ್ದ ಕಥನಗಳ ಮೂಲಕ ಇತಿಹಾಸವನ್ನು ತಿರುಚುವ...

ಇತಿಹಾಸವನ್ನು ವಿಮರ್ಶಿಸುವ ಹಕ್ಕು ಎಲ್ಲರಿಗೂ ಇದೆ; ಆದರೆ ಇತಿಹಾಸವನ್ನು ತಿರುಚುವ ಹಕ್ಕು ಯಾರಿಗೂ ಇಲ್ಲ. ಬಸವಣ್ಣನವರನ್ನು ವೈದಿಕ ಚೌಕಟ್ಟಿಗೆ ಸೀಮಿತಗೊಳಿಸುವುದಾಗಲಿ, ಗಾಂಧಿಯವರ ಹತ್ಯೆಯನ್ನು ಗೋಡ್ಸೆಯ ಸಮರ್ಥನೆಯ ಮೂಲಕ ನ್ಯಾಯೀಕರಿಸುವುದಾಗಲಿ ಇತಿಹಾಸದ ಸಮಗ್ರ ಅಧ್ಯಯನಕ್ಕೆ...

ಕೋಲಾರ ಕ್ಲಾಕ್ ಟವರ್ ವಿವಾದ: ಜಿಲ್ಲಾಡಳಿತದ ನಿರ್ಧಾರದತ್ತ ಜನರ...

ಕೋಲಾರ ನಗರದ ಇತಿಹಾಸ ಪ್ರಸಿದ್ಧ ಕ್ಲಾಕ್‌ ಟವರ್‌ನಲ್ಲಿ ಸಂಸದರ ಅನುದಾನದಲ್ಲಿ ಅಳವಡಿಸಲಾಗುತ್ತಿರುವ ಎಚ್‌ಎಂಟಿ ಗಡಿಯಾರದಲ್ಲಿ ಸಂಸದ ಮಲ್ಲೇಶ್‌ ಬಾಬು ಹೆಸರಿರಬೇಕೋ, ಬೇಡವೋ ಎಂದು ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ಚರ್ಚೆ ಈಗ ವಿವಾದದ...

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

ಸಾಹಿತ್ಯ ಕೃತಿಗಳು 2026ರ ಡಿಸೆಂಬರ್ 31ರೊಳಗೆ ಪ್ರಕಟಗೊಂಡಿರಬೇಕು. ಆಯ್ಕೆಯಾದ ಅತ್ಯುತ್ತಮ ಕೃತಿಗಳಿಗೆ ನಗದು ಬಹುಮಾನ ಹಾಗೂ ಫಲಕ ನೀಡಿ ಗೌರವಿಸಲಾಗುವುದು. ಆಯ್ಕೆಯಾದ ಕೃತಿಗಳ ಲೇಖಕರಿಗೆ 2027-28ನೇ ಸಾಲಿನ ಫೆಬ್ರುವರಿ ಮೊದಲ ವಾರದಲ್ಲಿ ಹಾರೂಗೇರಿಯಲ್ಲಿ ನಡೆಯಲಿರುವ ಲಿಂ. ಗಂಗಮ್ಮ ಹಾಗೂ ಲಿಂ. ರಾಮಪ್ಪ ಅಜೂರ ದಂಪತಿಗಳ 37ನೇ ಗಂಗಾರಾಮೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

“ಜಿಲ್ಲೆಯ ಲೇಖಕರಿಗೆ ಮೀಸಲಾದ ಜಿಲ್ಲಾಮಟ್ಟದ ಅತ್ಯುತ್ತಮ ಪುಸ್ತಕ ಪ್ರಶಸ್ತಿಗೆ ಬೆಳಗಾವಿ ಜಿಲ್ಲೆಯ ಲೇಖಕರು ಮಾತ್ರ ತಮ್ಮ ಕೃತಿಗಳನ್ನು ಕಳುಹಿಸಬೇಕು. ಬಹುಮಾನಗಳನ್ನು ನಾಲ್ಕು ಪ್ರಶಸ್ತಿಗಳಿಗೆ ಹಂಚಲಾಗುತ್ತದೆ. ಬೆಳಗಾವಿ ಜಿಲ್ಲೆಯ ಲೇಖಕರು ರಾಜ್ಯಮಟ್ಟದ ಪ್ರಶಸ್ತಿಗಾಗಿ ಪ್ರತ್ಯೇಕ ಕೃತಿಗಳನ್ನು ಕಳುಹಿಸುವ ಅಗತ್ಯವಿಲ್ಲ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

“ಲೇಖಕರು ತಮ್ಮ ಕೃತಿಗಳ ಮೇಲೆ ರಾಜ್ಯಮಟ್ಟದ ಅಥವಾ ಜಿಲ್ಲಾಮಟ್ಟದ ಪ್ರಶಸ್ತಿಗಾಗಿ ಎಂಬುದನ್ನು ಸ್ಪಷ್ಟವಾಗಿ ದಾಖಲಿಸಬೇಕು. ಕಳುಹಿಸಿದ ಕೃತಿಗಳನ್ನು ಯಾವುದೇ ಕಾರಣಕ್ಕೂ ಮರಳಿಸಲಾಗುವುದಿಲ್ಲ” ಎಂದು ಪ್ರತಿಷ್ಠಾನ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಬಸವರಾಜ ಆಜೂರ (ಮೊ. 9481448808), ಪ್ರತಿಷ್ಠಾನದ ಮಾರ್ಗದರ್ಶಕರಾದ ಶ್ರೀ ಎಸ್.ಆರ್. ಹಿರೇಮಠ, ಬೆಳಗಾವಿ (ಮೊ. 9845566569) ಹಾಗೂ ಡಾ. ರುದ್ರಪ್ಪ ಸಿ.ಪಿ., ಬಾಗಲಕೋಟೆ (ಮೊ. 9342726398) ಅವರನ್ನು ಸಂಪರ್ಕಿಸಲು ಕೋರಲಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಶಾಸಕರಿಂದ ವರ್ದಿ ಗ್ರಾಮದ ಸರ್ಕಾರಿ ಶಾಲೆಗೆ ₹2.8 ಲಕ್ಷದ ಸಾಮಗ್ರಿ ವಿತರಣೆ

ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರು ಶ್ರೀನಿವಾಸ ಮಾನೆ ಅವರ...

ಮಂಗಳೂರು l ಮನೆ ಮನೆ ಬ್ಯಾರಿ ಕವಿಗೋಷ್ಠಿ

ರಾಷ್ಟ್ರ ಮತ್ತು ರಾಜ್ಯದ ಹಲವು ಭಾಷೆಗಳಿಗೆ ಬ್ಯಾರಿ ಸಾಹಿತ್ಯ ಕೃತಿಗಳು ಭಾಷಾಂತರವಾಗುವ...

108 ವರ್ಷಗಳ ಸರ್ಕಾರಿ ಶಾಲೆಯ ಜಾಗದಲ್ಲಿ ಅಪಾರ್ಟ್‌ಮೆಂಟ್: ಕಾಮಗಾರಿ ಸ್ಥಗಿತಕ್ಕೆ ಆಗ್ರಹಿಸಿ ಪ್ರತಿಭಟನೆ

ಮೈಸೂರು ಗ್ರಾಹಕರ ಪರಿಷತ್, ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ)...

ಕೋಲಾರ ಕ್ಲಾಕ್ ಟವರ್ ವಿವಾದ: ಜಿಲ್ಲಾಡಳಿತದ ನಿರ್ಧಾರದತ್ತ ಜನರ ಚಿತ್ತ

ಕೋಲಾರ ನಗರದ ಇತಿಹಾಸ ಪ್ರಸಿದ್ಧ ಕ್ಲಾಕ್‌ ಟವರ್‌ನಲ್ಲಿ ಸಂಸದರ ಅನುದಾನದಲ್ಲಿ ಅಳವಡಿಸಲಾಗುತ್ತಿರುವ...