ಬೆಂಗಳೂರು | ಚುರುಕುಗೊಂಡ ಕೆ.ಆರ್ ಪುರಂ-ಕೆಐಎ ಮೆಟ್ರೋ ಮಾರ್ಗ ಕಾಮಗಾರಿ

Date:

ಬೆಂಗಳೂರಿನ ಕೆ.ಆರ್‌ ಪುರಂ ಮತ್ತು ಕೆಐಎ (ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ) ನಡುವಿನ ಮೆಟ್ರೋ ಮಾರ್ಗ ಕಾಮಗಾರಿ ಭರದಿಂದ ಸಾಗುತ್ತಿದೆ. ಚಿಕ್ಕಜಾಲ ಬಳಿ ಎರಡು ಜೊತೆ ಯು-ಗ್ರಿಡರ್‌ಗಳನ್ನು (ಮೆಟ್ರೋ ಕಂಬಿಗಳನ್ನು ಅಳವಡಿಸುವ ಕಾಂಕ್ರೀಟ್ ಬೆಡ್‌ಗಳು) ಅಳವಡಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಹೇಳಿದೆ.

“ಸಿಲ್ಕ್‌ ಬೋರ್ಡ್‌ ಮತ್ತು ಕೆಐಎ ನಡುವೆ ಎರಡು ಹಂತಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಮೊದಲ ಹಂತದಲ್ಲಿ ಸಿಲ್ಕ್‌ ಬೋರ್ಡ್‌ನಿಂದ ಕೆ.ಆರ್‌ ಪುರಂವರೆಗೆ ಹಾಗೂ ಎರಡನೇ ಹಂತದಲ್ಲಿ ಕೆ.ಆರ್‌ ಪುರಂನಿಂದ ಕೆಐಎ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಪ್ಯಾಕೇಜ್‌-3ರಲ್ಲಿ ಎರಡನೇ ಹಂತದ 15.01 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ. ಪ್ಯಾಕೇಜ್-3ರಲ್ಲಿ ಒಟ್ಟು 784 ಯು-ಗ್ರಿಡರ್‌ಗಳನ್ನು ಅಳವಡಿಸಲಾಗುತ್ತಿದೆ” ಎಂದು ಬಿಎಂಆರ್‌ಸಿಎಲ್ ಮುಖ್ಯ ಎಂಜಿನಿಯರ್ ಡಿ.ಸಿ.ನಟರಾಜ್ ತಿಳಿಸಿದ್ದಾರೆ.

“ಪ್ರತಿ ಮೆಟ್ರೋ ಗ್ರಿಡರ್‌ಗಳು 28 ಮೀಟರ್ ಉದ್ದ ಇವೆ. ಏಪ್ರಿಲ್ 14ರಂದು ಬೆಳಿಗ್ಗೆ 5ಗಂಟೆಗೆ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಮೊದಲ ಹಂತದ ಕಾಮಗಾರಿಯ ಅನುಭದಿಂದ ಎರಡನೇ ಹಂತದ ಕಾಮಗಾರಿಯನ್ನು ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ತಂಬಾಕು ಮಾರಾಟಕ್ಕೆ ಪ್ರತ್ಯೇಕ ಪರವಾನಗಿ ಕಡ್ಡಾಯ : ಬಿಬಿಎಂಪಿ

ಮೆಟ್ರೋ ಪಿಲ್ಲರ್‌ ಕಾಮಗಾರಿಗೆ ಅಗತ್ಯವಿರುವ 2,172 ಪಿಲ್ಲರ್‌ಗಳ ಪೈಕಿ 1,619 ಪಿಲ್ಲರ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. 489 ಪಿಲ್ಲರ್‌ಗಳಲ್ಲಿ 244 ಪಿಲ್ಲರ್‌ಗಳ ಕ್ಯಾಪ್ ಮಾಡಲಾಗಿದೆ, 195 ಪಿಲ್ಲರ್‌ಗಳು ಸಿದ್ಧವಾಗಿವೆ. ಕೆ.ಆರ್‌ ಪುರಂ – ಕೆಐಎ ಮೆಟ್ರೋ ಮಾರ್ಗವನ್ನು ಜೂನ್‌ 2026ರ ವೇಳೆಗೆ ಮುಗಿಸಲು ಗಡುವು ನಿಗದಿಯಾಗಿದೆ ಎಂದು ಅವರು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜಪ್ಪ ದಳವಾಯಿಯವರು ಸಾಂಸ್ಕೃತಿಕ ಶ್ರಮಜೀವಿ: ಬರಗೂರು ರಾಮಚಂದ್ರಪ್ಪ

ಅಧ್ಯಾಪಕ ಡಾ.ರಾಜಪ್ಪ ದಳವಾಯಿ ಅವರು ಅಂದು-ಇಂದುಗಳ ಬಂಧು, ಸಾಂಸ್ಕೃತಿಕ ಶ್ರಮಜೀವಿ ಎಂದು...

ಕೆಪಿಎಸ್‌ಸಿ ಉದ್ಯೋಗ ಸೌಧ ಕಚೇರಿಯಿಂದ ಜೆಇ ಆಯ್ಕೆ ಪಟ್ಟಿ ಕಡತ ನಾಪತ್ತೆ!

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಉದ್ಯೋಗ ಕಚೇರಿಯಿಂದ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ...

ಬೆಂಗಳೂರು| ಮಹಿಳೆಯ ಮೇಲೆ ಹಲ್ಲೆ ಎಸಗಿದ ಪ್ರಕರಣ; ಬಿಎಂಟಿಸಿ ಕಂಡಕ್ಟರ್ ಅಮಾನತು

ಮಹಿಳಾ ಪ್ರಯಾಣಿಕರೋರ್ವರ ಮೇಲೆ ಬಿಎಂಟಿಸಿ ಕಂಡಕ್ಟರ್‌ ಓರ್ವ ಹಿಗ್ಗಾಮುಗ್ಗಾ ಹಲ್ಲೆ ಎಸಗಿದ...

ಬೆಂಗಳೂರು | ಮಹಿಳೆಯ ಮೇಲೆ ಹಿಗ್ಗಾಮುಗ್ಗಾ ಹಲ್ಲೆಗೈದ ಬಿಎಂಟಿಸಿ ಕಂಡಕ್ಟರ್; ವಿಡಿಯೋ ವೈರಲ್

ಮಹಿಳಾ ಪ್ರಯಾಣಿಕರೋರ್ವರ ಮೇಲೆ ಬಿಎಂಟಿಸಿ ಕಂಡಕ್ಟರ್‌ ಓರ್ವ ಹಿಗ್ಗಾಮುಗ್ಗಾ ಹಲ್ಲೆಗೈದ ಘಟನೆ...