ಕೆಪಿಎಸ್‌ಸಿ ಉದ್ಯೋಗ ಸೌಧ ಕಚೇರಿಯಿಂದ ಜೆಇ ಆಯ್ಕೆ ಪಟ್ಟಿ ಕಡತ ನಾಪತ್ತೆ!

Date:

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಉದ್ಯೋಗ ಕಚೇರಿಯಿಂದ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ (ಕೆಎಸ್‌ಡಿಬಿ) ಜೂನಿಯರ್ ಇಂಜಿನಿಯರಿಂಗ್‌ಗಳ ಆಯ್ಕೆ ಪಟ್ಟಿಯ ಕಡತವು ನಾಪತ್ತೆಯಾಗಿದ್ದು ಈ ಬಗ್ಗೆ ಎಫ್‌ಐಆರ್‌ ದಾಖಲಾಗಿದೆ.

ಜನವರಿ 22ರಂದು ಬೆಂಗಳೂರಿನ ಉದ್ಯೋಗ ಸೌಧದಲ್ಲಿರುವ ಆಯೋಗದ ಕಾರ್ಯದರ್ಶಿ ಕಚೇರಿ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಜೂನಿಯರ್ ಇಂಜಿನಿಯರ್‌ ನೇಮಕಾತಿಯ ಆಯ್ಕೆ ಪಟ್ಟಿಯನ್ನು ಪಡೆಯಲಾಗಿತ್ತು. ಆದರೆ ಆ ಪಟ್ಟಿ ಈಗ ನಾಪತ್ತೆಯಾಗಿದ್ದು ಈ ವಿಚಾರದಲ್ಲಿ ಕೆಪಿಎಸ್‌ಸಿ ಕಾರ್ಯದರ್ಶಿ ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು 2016ರ ಸೆಪ್ಟೆಂಬರ್ 24ರಂದು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಜೂನಿಯರ್ ಇಂಜಿನಿಯರ್‌ ನೇಮಕಾತಿಗೆ ಸಂಬಂಧಿಸಿ ಪರೀಕ್ಷೆ ನಡೆದಿತ್ತು.

ಇದನ್ನು ಓದಿದ್ದೀರಾ?   ಈ ದಿನ ಸಂಪಾದಕೀಯ | ಯುವಜನರ ವಿಶ್ವಾಸ ಉಳಿಸಿಕೊಳ್ಳುವುದೇ ಕೆಪಿಎಸ್‌ಸಿ?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಎಚ್‌.ಡಿ. ವಿವೇಕಾನಂದ ಎಂಬವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಅಂಗೀಕರಿಸಿದ ಹೈಕೋರ್ಟ್, ಕಿರಿಯ ಎಂಜಿನಿಯರ್ ಹುದ್ದೆಗೆ ಅರ್ಜಿದಾರರ ಪ್ರಕರಣವನ್ನು ಪರಿಗಣಿಸುವಂತೆ ಕೆಪಿಎಸ್‌ಸಿಗೆ ಸೂಚಿಸಿತ್ತು. ಅದಾದ ಬಳಿಕ ಹೈಕೋರ್ಟ್ ನಿರ್ದೇಶನ ಪ್ರಕಾರ ಕಡತವನ್ನು ಸಿದ್ಧಪಡಿಸಲಾಗಿತ್ತು.

ಕೆಪಿಎಸ್‌ಸಿ ಕಚೇರಿಯ ಗೌಪ್ಯ ವಿಭಾಗ – 3 ರಲ್ಲಿ ಕಡತವನ್ನು ಸಿದ್ಧಪಡಿಸಿ ಜನವರಿ 22 ರಂದು ಕಾರ್ಯದರ್ಶಿಯವರ ಕಚೇರಿಗೆ ಸಲ್ಲಿಸಲಾಗಿತ್ತು. ಕಡತ ಕೈಸೇರಿದೆಯೇ ಎಂದು ಪರಿಶೀಲಿಸುವಂತೆ ಕೆಪಿಎಸ್‌ಸಿ ಫೆಬ್ರವರಿ 20ರಂದು ತನ್ನ ಎಲ್ಲ ವಿಭಾಗಗಳಿಗೆ ಮೆಮೊ ನೀಡಿತ್ತು. ಹಾಗೆಯೇ ಕಡತ ದೊರೆತ ಬಳಿಕ ಅದನ್ನು ಕೆಪಿಎಸ್‌ಸಿಯ ನೇಮಕಾತಿ ವಿಭಾಗ-2ಕ್ಕೆ ಹಿಂತಿರುಗಿಸಲು ಮೆಮೊದಲ್ಲಿ ಸೂಚಿಸಲಾಗಿತ್ತು.

ಆದರೆ ಕಡತ ನಾಪತ್ತೆಯಾಗಿರುವುದು ತಿಳಿದು ಬಂದಾಗ ಕೆಪಿಎಸ್‌ಸಿ ಫೆ.26ರಂದು ಮೆಮೊ ಹೊರಡಿಸಿ, ಅಧಿಕಾರಿಗಳು/ಸಿಬ್ಬಂದಿಗಳ ತಂಡವನ್ನು ರಚಿಸಿತ್ತು. ಪ್ರತಿ ವಿಭಾಗಕ್ಕೂ ಭೇಟಿ ನೀಡಿ ಕಡತ ಹುಡುಕಿ ವರದಿ ಸಲ್ಲಿಸಲು ಈ ತಂಡಕ್ಕೆ ಸೂಚಿಸಿತ್ತು. ಆದರೆ ಕಡತ ಪತ್ತೆಯಾಗದ ಕಾರಣ ಈ ತಂಡ ಕೆಪಿಎಸ್‌ಸಿಗೆ ಮಾಹಿತಿ ನೀಡಿದ್ದು ಬಳಿಕ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಹಾಗೆಯೇ ವಿಧಾನ ಸೌಧ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.

ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಕೇಂದ್ರ ವಿಭಾಗದ ಡಿಸಿಪಿ ಎಚ್.ಟಿ.ಶೇಖ‌ರ್, “ಈ ದೂರಿನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಲಾಗಿಲ್ಲ. ಆಯೋಗದಿಂದ ಮಾಹಿತಿಯನ್ನು ಪಡೆಯಲಾಗಿದೆ. ಆದರೆ ಕಡತ ಇನ್ನೂ ಕೂಡಾ ಲಭಿಸಿಲ್ಲ. ತನಿಖೆಯನ್ನು ನಾವು ಮುಂದುವರಿಸುತ್ತೇವೆ” ಎಂದು ತಿಳಿಸಿದ್ದಾರೆ. ಇನ್ನು “ಕರ್ನಾಟಕ ಲೋಕಸೇವಾ ಆಯೋಗದ ಕಚೇರಿಗೆ ಭೇಟಿ ನೀಡಿ ಸಿಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ” ಎಂಬ ಮಾಹಿತಿಯಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಲ್ಲಾ ಗೌಡ್ರೇ, ಇದು ನ್ಯಾಯ ಅಲ್ಲ, ಇನ್ನು ನಿಲ್ಲಿಸ್ಬಿಡಿ ಸಾಕು: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮನವಿ

ಪ್ರಜ್ವಲ್‌ ರೇವಣ್ಣನ ವಿಡಿಯೋಗಳನ್ನ ನೋಡಿ ಹಾಸನದ ಜನ ಬೆಚ್ಚಿ ಬಿದ್ದಿದ್ದಾರೆ. ಮೊದಮೊದಲು...

ಚಿಕ್ಕಮಗಳೂರು | ಬಿಜೆಪಿ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯ; ಜೆ.ಪಿ ಹೆಗ್ಡೆಗೆ ಜನ ಬೆಂಬಲ

ಚಿಕ್ಕಮಗಳೂರು ಹಾಗೂ ಉಡುಪಿ ಲೋಕಾಸಭಾ ಕ್ಷೇತ್ರವಾಗಿದೆ. ಎಂಟು ವಿಧಾನಸಭಾ ಕ್ಷೇತ್ರ ಒಳಗೊಂಡ...

ನೇಹಾ ಕೊಲೆ ಪ್ರಕರಣ | ಸಿಐಡಿ ತನಿಖೆ ಆರಂಭ; ಆರೋಪಿ ಫಯಾಜ್‌ನನ್ನು ವಶಕ್ಕೆ ಪಡೆದ ಅಧಿಕಾರಿಗಳು

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್‌ ಸದಸ್ಯ ನಿರಂಜನ ಹಿರೇಮಠ ಪುತ್ರಿ ನೇಹಾ...

ಅನ್ಯ ರಾಜ್ಯಗಳ 9 ನಾಯಕರನ್ನು ಲೋಕಸಭೆಗೆ ಚುನಾಯಿಸಿದ ಕರ್ನಾಟಕದ ಮತದಾರರು

ರಾಜ್ಯಸಭೆಗೆ ಯಾವುದೇ ರಾಜ್ಯದ ನಾಯಕರು, ಉದ್ಯಮಿಗಳು ಸ್ಥಳೀಯ ರಾಜಕೀಯ ಪಕ್ಷದ ಬೆಂಬಲದಿಂದ...