ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್​ ದರ ಹೆಚ್ಚಳ ಆದೇಶ ಹಿಂಪಡೆದ ಎನ್‌ಎಚ್‌ಎಐ

Date:

  • ಶೇ. 22ರಷ್ಟು ಟೋಲ್ ದರ ಹೆಚ್ಚಿಸಿ ಆದೇಶಿಸಿತ್ತು
  • ಮಧ್ಯರಾತ್ರಿಯಿಂದಲೇ ದೇವನಹಳ್ಳಿ ಟೋಲ್‌ ದರ ಹೆಚ್ಚಳ

ಏಪ್ರಿಲ್ 1ರಿಂದ ಜಾರಿಯಾಗುವಂತೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್​ ದರವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಶೇ. 22ರಷ್ಟು ಹೆಚ್ಚಿಸಿ ಆದೇಶಿಸಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನಲೆ, ಪ್ರಾಧಿಕಾರ ಶನಿವಾರ ಆದೇಶವನ್ನು ಹಿಂಪಡೆದಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಆರಂಭವಾದ 17 ದಿನಗಳಲ್ಲೇ ಪ್ರಾಧಿಕಾರ ಮತ್ತೆ ಶೇ. 22ರಷ್ಟು ಟೋಲ್ ದರವನ್ನು ಹೆಚ್ಚಳ ಮಾಡಿತ್ತು. ಇದಕ್ಕೆ ಕೋಪಗೊಂಡ ವಾಹನ ಸವಾರರು ಆಕ್ರೋಶ ಹೊರಹಾಕಿದ್ದರು.

ಮಧ್ಯರಾತ್ರಿಯಿಂದಲೇ ದೇವನಹಳ್ಳಿ ಟೋಲ್‌ ದರ ಹೆಚ್ಚಳ

ಬೆಂಗಳೂರಿನಿಂದ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದ ಟೋಲ್​ ದರ ಏರಿಕೆಯಾಗಿದೆ. ಏರ್​​ಪೋರ್ಟ್​​ ರಸ್ತೆಯ ನಿರ್ವಹಣೆ ಹೊತ್ತಿರುವ ಅಥಾಂಗ್ ಟೋಲ್ ವೇ ಪ್ರೈವೈಟ್ ಲಿಮಿಟೆಡ್‌ ಮಧ್ಯರಾತ್ರಿಯಿಂದಲೇ ಟೋಲ್ ದರವನ್ನು ಹೆಚ್ಚಿಸಿದೆ.

ಈ ಸುದ್ದಿ ಓದಿದ್ದೀರಾ? ಏ. 1ರವರೆಗೆ ಮೈಸೂರು ರಸ್ತೆ ಮೂಲಕ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ ಬಂದ್‌

ಕಾರು, ಜೀಪು, ವ್ಯಾನ್ ಲಘು ‌ಮೋಟಾರು ವಾಹನ

ಏಕಮುಖ ಸಂಚಾರಕ್ಕೆ ₹110 ಹಾಗೂ 24 ಗಂಟೆಯೊಳಗೆ ಹಿಂತಿರುಗುವ ಶುಲ್ಕ ₹170 ನಿಗದಿ ಮಾಡಲಾಗಿದೆ. ಮಾಸಿಕ ಪಾಸ್ ಶುಲ್ಕ ₹3,755ಕ್ಕೆ ಏರಿಕೆಯಾಗಿದೆ.

ಈ ಹಿಂದೆ ಏಕಮುಖ ಸಂಚಾರಕ್ಕೆ ₹105 ಹಾಗೂ ದ್ವಿಮುಖ ಸಂಚಾರ ₹165 ಇತ್ತು. ಮಾಸಿಕ ಪಾಸ್ ಶುಲ್ಕ ₹3,555 ಇತ್ತು.

ಲಘು ವಾಣಿಜ್ಯ ವಾಹನ ಲಘು ಸರಕು ವಾಹನ ಮಿನಿ ಬಸ್

ಏಕಮುಖ ಸಂಚಾರಕ್ಕೆ ₹165 ರಿಂದ ₹170 ಏರಿಕೆ ಕಂಡಿದೆ. ಹಿಂತಿರುಗುವ ಶುಲ್ಕ ₹245 ರಿಂದ ₹260 ಏರಿಕೆಯಾಗಿದೆ. ಮಾಸಿಕ ಪಾಸ್ ₹5,465 ಯಿಂದ ₹5,745 ಗೆ ಏರಿಸಲಾಗಿದೆ.

ಟ್ರಕ್ ಬಸ್ 2 ಆಕ್ಸೆಲ್ ವಾಹನ

ಏಕಮುಖ ಸಂಚಾರಕ್ಕೆ ₹330 ರಿಂದ ₹345 ಗೆ ಏರಿಕೆ. ದ್ವಿಮುಖ ಸಂಚಾರಕ್ಕೆ ₹495 ನಿಂದ ₹520 ಏರಿಕೆ ಮಾಡಲಾಗಿದೆ. ₹10,990 ಇದ್ದ ಮಾಸಿಕ ಪಾಸ್ ₹11,550 ಆಗಿದೆ.

ಭಾರೀ ವಾಹನಗಳು 03 ರಿಂದ 06 ಆಕ್ಸೆಲ್ ವಾಹನ

ಏಕಮುಖ ಸಂಚಾರಕ್ಕೆ ₹500 ರಿಂದ ₹525 ದ್ವಿಮುಖ ಸಂಚಾರ ₹750 ನಿಂದ ₹790 ಆಗಿದೆ. ₹16,680 ಇದ್ದ ಮಾಸಿಕ ಪಾಸ್ ₹17,525 ಹೆಚ್ಚಿಗೆಯಾಗಿದೆ.

ಭಾರೀ ಗಾತ್ರದ 7 ಆಕ್ಸೆಲ್ ಹಾಗೂ ಅದಕ್ಕಿಂತ ಹೆಚ್ಚು ಆಕ್ಸೆಲ್ ವಾಹನ

ಏಕಮುಖ ಸಂಚಾರಕ್ಕೆ ₹650 ರಿಂದ ₹685 ಗೆ ಏರಿಕೆ. ದ್ವಿಮುಖ ₹980 ನಿಂದ ₹1025 ಗೆ ಏರಿಕೆ. ₹21,730 ರೂ. ಇದ್ದ ಮಾಸಿಕ ಪಾಸ್ ₹22,830ಗೆ ಹೆಚ್ಚಿಸಲಾಗಿದೆ.

ಸ್ಥಳೀಯ ಮಾಸಿಕ ಪಾಸ್ ₹315 ರಿಂದ ₹330 ಏರಿಕೆಯಾಗಿದ್ದು ಇದು ಕಾರುಗಳಿಗೆ ಮಾತ್ರ ಅನ್ವಯವಾಗುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಕರ್ನಾಟಕ’ ನಾಮಕರಣಕ್ಕೆ 50ರ ಸಂಭ್ರಮ | ವರ್ಷವಿಡಿ ವಿಶೇಷ ಕಾರ್ಯಕ್ರಮ: ಸಚಿವ ಶಿವರಾಜ್ ತಂಗಡಗಿ

'ರಾಜ್ಯ 'ಕರ್ನಾಟಕ' ಎಂದು ನಾಮಕರಣಗೊಂಡು 50 ವರ್ಷ ಪೂರೈಸುತ್ತಿದೆ' ವರ್ಷವಿಡಿ ಕಾರ್ಯಕ್ರಮ ಆಯೋಜಿಸಲು...

ಚಿತ್ರದುರ್ಗ | ಮನೆ ಬಾಗಿಲಿಗೆ ಇ-ಸ್ವತ್ತು ‘ಜನಸ್ನೇಹಿ ಕಾರ್ಯಕ್ರಮ’ಕ್ಕೆ ಮತ್ತೆ ಚಾಲನೆ ನೀಡಿದ ಸಿಇಒ ದಿವಾಕರ್

ಗ್ರಾಮ ಪಂಚಾಯತಿ ವ್ಯಾಪ್ತಿಯ ದಾಖಲೆಗಳನ್ನು ಸರ್ಕಾರವು ಡಿಜಿಟಲೀಕರಣಗೊಳಿಸಿದ್ದು, ಮನೆಯ ಖಾಯಂ ಹಕ್ಕು...

ಶಾಸಕ ಪ್ರದೀಪ್ ಈಶ್ವರ್ ಸಹಾಯ ಅರಸಿ ಬಂದ ವೃದ್ಧೆ; ಬರಿಗೈನಲ್ಲೇ ವಾಪಸ್

ಸದ್ಯ ರಾಜ್ಯ ರಾಜಕಾರಣದಲ್ಲಿ ತೆಲುಗು-ಕನ್ನಡ ಮಿಶ್ರಿತ ಡೈಲಾಗ್‌ಗಳಿಂದ ಅಬ್ಬರಿಸಿ ಬೊಬ್ಬಿರಿಯುತ್ತಿರುವವರು ಶಾಸಕ...

ಭ್ರಷ್ಟ ಪಿಡಿಒಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಪಿಡಿಒಗಳ ಮೇಲಿನ ತನಿಖೆಯನ್ನು ಚುರುಕುಗೊಳಿಸಿ ಅಂತಹವರ ವಿರುದ್ಧ...