ಬೀದರ್ | ಸಾಹಿತ್ಯದಿಂದ ವಿವೇಕ ಮತ್ತು ಅಂತಃಕರಣ ಬೆಳೆಯುತ್ತದೆ: ಮಾರ್ಥಂಡ ಜೋಷಿ

Date:

ವ್ಯವಹಾರ, ಸಾಹಿತ್ಯ ಮತ್ತು ಮೌಲ್ಯಗಳು – ಈ ಮೂರು ಅಂಶಗಳು ಇರದಿದ್ದರೆ ಬದುಕು ಸಾಗಿಸುವುದು ಕಷ್ಟ. ವ್ಯವಹಾರಗಳು ಮನುಷ್ಯನ ಹೊರ ಜಗತ್ತು ಕಟ್ಟಿದರೆ, ಸಾಹಿತ್ಯ ಮತ್ತು ಮೌಲ್ಯಗಳು ಮನುಷ್ಯನಲ್ಲಿ ವಿವೇಕ ಹಾಗೂ ಅಂತಃಕರಣ ಬೆಳೆಸುತ್ತವೆ ಎಂದು ಬಸವಕಲ್ಯಾಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಾರ್ಥಂಡ ಜೋಷಿ ಹೇಳಿದರು.

ಬಸವಕಲ್ಯಾಣದ ಅಲ್ಲಮಪ್ರಭು ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವ್ಯವಹಾರ, ಸಾಹಿತ್ಯ ಮತ್ತು ಮೌಲ್ಯಗಳು ಕುರಿತ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. “ಸಾಹಿತ್ಯದ ಶಕ್ತಿ ಸಾಧ್ಯತೆಗಳು ಅರಿಯುವ ಗ್ರಹಿಕೆ ಬೆಳೆಸಿಕೊಳ್ಳಬೇಕು. ಸಕಾರಾತ್ಮಕ ಚಿಂತನೆಗಳಿಂದ ಬದುಕಿನಲ್ಲಿ ಎದುರಾಗುವ ಹಲವು ಸಮಸ್ಯೆ ಮತ್ತು ಸವಾಲು ಗಳಿಂದ ಪಾರಾಗಬಹುದು. ಸಾಹಿತ್ಯದ ಗಂಭೀರವಾದ ಓದು-ಅಧ್ಯಯನಗಳು ಬದುಕಿನ ವ್ಯವಹಾರ ಮತ್ತು ಮೌಲ್ಯಗಳ ಕುರಿತು ಚಿಂತನೆ ರೂಪಿಸುತ್ತವೆ” ಎಂದರು.

ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಗುರುರಾಜ ಐನಾಪೂರ ಮಾತನಾಡಿ, “ಪ್ರತಿಯೊಬ್ಬರಲ್ಲೂ ಉಳಿತಾಯ ಸಂಸ್ಕೃತಿಯ ಅರಿವು ಇರಲೇಬೇಕು. ಉಳಿಸಿದ ಹಣ ಜೀವನದಲ್ಲಿ ಮಹತ್ವದ ಕೆಲಸಕ್ಕೆ ಸದ್ವಿನಿಯೋಗವಾಗುತ್ತದೆ. ಭೌತಿಕ ಬ್ಯಾಂಕಿಂಗ್ ನಿಂದ ಡಿಜಿಟಲ್ ಬ್ಯಾಂಕಿಂಗ್ ಆಗಿ ಮಾರ್ಪಟ್ಟಿದ್ದು ಆಧುನಿಕ ತಂತ್ರಜ್ಞಾನದ ಕೊಡುಗೆಯಾಗಿದೆ . ಬ್ಯಾಂಕಿನ ರಾಷ್ಟ್ರೀಕರಣದ ಉದ್ದೇಶವೇ ಎಲ್ಲರಲ್ಲೂ ವ್ಯವಹಾರ ಮತ್ತು ಆರ್ಥಿಕ ಪ್ರಜ್ಞೆ ಬೆಳೆಸುವುದಾಗಿದೆ. ಆರ್ಥಿಕ ಅರಿವಿನಿಂದ ಬದುಕಿನ ಭದ್ರತೆ ಕಂಡುಕೊಳ್ಳಲು ಸಾಧ್ಯ” ಎಂದು ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, “ಸಂಪತ್ತಿನ, ಹಣದ ಸಂಪಾದನೆಯ ದಾರಿ ಮತ್ತು ಅದರ ಸಾಮಾಜಿಕ ಹಾಗೂ ವೈಯಕ್ತಿಕ ಬಳಕೆಯ ಪ್ರಜ್ಞೆಯು ಸಾಹಿತ್ಯದಿಂದ ಸಾಧ್ಯ. ಶರಣರ ಕಾಯಕ ಸಿದ್ಧಾಂತ, ಲೋಹಿಯಾರ ಸಾಮಾಜವಾದ, ಮಾರ್ಕ್ಸ್ ಚಿಂತನೆ, ಗಾಂಧೀಜಿಯವರ ಗ್ರಾಮ ಸ್ವರಾಜ್, ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂಶೋಧನೆ ಈ ಎಲ್ಲವುಗಳಲ್ಲಿ ಆರ್ಥಿಕ ಪ್ರಜ್ಞೆಯ ಒಳನೋಟಗಳು ಅಡಕವಾಗಿದೆ” ಎಂದು ತಿಳಿಸಿದರು.

“ಹಣ ಎಂದರೇನು, ಗಳಿಕೆಯ ದಾರಿ ಯಾವುದು, ಸಂಪತ್ತಿನ ಸಂಗ್ರಹಣೆ ಮತ್ತು ವಿತರಣೆ ಹೇಗೆ,ಆದಾಯದ ಮೂಲಗಳು ಎಲ್ಲಿಂದ ಇಂಥ ಹಲವು ಸಂಗತಿಗಳ ಕುರಿತು ಅನೇಕ ಪ್ರಶ್ನೆಗಳನ್ನು ಎತ್ತಿ ಹೆಚ್ಚು ತಾತ್ವಿಕವಾಗಿ ತಾರ್ಕಿಕವಾಗಿ ಚಿಂತನೆ ಮಾಡಿದ್ದು ಸಾಹಿತ್ಯ. ಬುದ್ದ, ಬಸವಾದಿ ಶರಣರಿಂದ ಕನ್ನಡದ ಹಲವು ಲೇಖಕರು ಮನುಷ್ಯನ ಅಂತರಂಗದಲ್ಲಿ ಮತ್ತು ಬಹಿರಂಗದಲ್ಲಿ ನಡೆಯುವ ಹಲವು ವ್ಯವಹಾರಗಳ ಬಗೆಗೆ ಸೈದ್ಧಾಂತಿಕವಾಗಿ, ತಾರ್ಕಿಕವಾಗಿ ಆಲೋಚಿಸಿದ್ದಾರೆ. ಅದು ಏಕ ಕಾಲದಲ್ಲಿ ಆರ್ಥಿಕ ಪ್ರಜ್ಞೆಯೂ, ಬದುಕಿನ ಪ್ರಜ್ಞೆಯೂ ಆಗಿದೆ” ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಚಾರ್ಯ ಚಂದ್ರಕಾಂತ ಅಕ್ಕಣ್ಣ ಅವರು, “ವಿದ್ಯಾರ್ಥಿಗಳು ಬ್ಯಾಂಕ್ ವ್ಯವಹಾರದ ತಿಳುವಳಿಕೆ ಪಡೆದಿರುವುದು ಈ ಕಾಲದ ಅನಿವಾರ್ಯವಿದೆ. ಹಣ, ವ್ಯವಹಾರ ಮತ್ತು ಮೌಲ್ಯಗಳು ಸಾಮಾಜಿಕ ಜೀವನದ ಭಾಗವಾಗಿವೆ. ಬದುಕಿನ ನೆಮ್ಮದಿಗಾಗಿ ಸಾಹಿತ್ಯ ಬೇಕು” ಎಂದರು.

ಈ ಸಂದರ್ಭದಲ್ಲಿ ಅನಿಲಕುಮಾರ, ಇರ್ಫಾನ್ ಪಟೇಲ್ ಡೆಲ್ವಿನ್ ರಾಜ್ ಮಾತನಾಡಿದರು. ಶ್ರೀನಿವಾಸ ಶಿಂದೆ ಸ್ವಾಗತಿಸಿದರು. ಆನಂದ ಚಾಕೂರೆ ನಿರೂಪಿಸಿದರು. ಈರಮ್ಮ ವಂದಿಸಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧುಗಿರಿ | ಕಾರುಗಳ ನಡುವೆ ಅಪಘಾತ : ಐವರು ಸಾವು

ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಐದು ಜನರು ಮೃತಪಟ್ಟಿರುವ ಘಟನೆ...

ಉಡುಪಿ ಜಿಲ್ಲೆಯಲ್ಲಿ ಸಂಭ್ರಮದ ಮೊಂತಿ ಫೆಸ್ಟ್ ಆಚರಣೆ

ಜಿಲ್ಲಾದ್ಯಂತ ಕನ್ಯಾಮರಿಯಮ್ಮನವರ ಜನ್ಮದಿನವಾದ ಮೊಂತಿ ಫೆಸ್ಟ್ ಅನ್ನು ಕ್ರೆಸ್ತರು ಭಾನುವಾರ ಸಂಭ್ರಮದಿಂದ...

ಕೊಪ್ಪ | ಮಹಿಳಾ ಪೊಲೀಸ್‌ ಸಿಬ್ಬಂದಿಗೆ ಲೈಂಗಿಕ ಕಿರುಕುಳ; ಪಿಎಸ್ಐ ಬಸವರಾಜ್ ವಿರುದ್ಧ ಆರೋಪ

ಕೊಪ್ಪ ಪಿಎಸ್ಐ ಬಸವರಾಜ್ ತಮ್ಮದೇ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿಗೆ ಲೈಂಗಿಕ...