ಉಡುಪಿ | ಮನೋರೋಗಿ ಸಹಜ ಸ್ಥಿತಿಯತ್ತ, ಹನ್ನೆರಡು ವರ್ಷಗಳ ಬಳಿಕ ಕುಟುಂಬದ ಜೊತೆ ಸೇರಿದ ಯುವಕ

Date:

ಕಳೆದ ಕೆಲವು ದಿನಗಳ ಹಿಂದೆ ಉಡುಪಿಯ ಮಿತ್ರ ಆಸ್ಪತ್ರೆ ಬಳಿ ಸಾರ್ವಜನಿಕರ ಮನೆಗಳಿಗೆ ಬೆಳಗಿನ ಜಾವ ಆಗಮಿಸಿ ಭಯದ ವಾತಾವರಣ ಸೃಷ್ಟಿಸಿದ್ದ ಅಪರಿಚಿತ ಮಾನಸಿಕ ಯುವಕನನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ, ಬಾಳಿಗ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಯುವಕನ ಕುಟುಂಬ ಪತ್ತೆಯಾದ ಹಿನ್ನಲೆಯಲ್ಲಿ ಕುಟುಂಬದ ಸದಸ್ಯರ ಜೊತೆ ಕಳುಹಿಸಿಕೊಟ್ಟಿರುವ ಘಟನೆ ಉಡುಪಿಯಲ್ಲಿ ನಡೆಸಿದೆ. ಸುಮಾರು 12 ವರ್ಷದ ಹಿಂದೆಯೇ ಮನೆ ಬಿಟ್ಟು ಹೋದ ನವಲಗುಂದ ಮೂಲದ ಸುಧಾಕರ ಪವಾರ್ (33) ರಕ್ಷಿಸಲ್ಪಟ್ಟ ಮಾನಸಿಕ ಯುವಕ. ಇದೀಗ ಕುಟುಂಬಕ್ಕೆ ಮಾಹಿತಿ ಲಭಿಸಿದ್ದು ಸಹೋದರ ಶ್ರೀನಿವಾಸ್ ಉಡುಪಿಗೆ ಬಂದಿದ್ದಾರೆ. ಬಾಳಿಗಾ ಆಸ್ಪತ್ರೆಯಲ್ಲಿ ವೈದ್ಯರು ರೋಗಿಯ ಬಗ್ಗೆ ಮಾಹಿತಿ ಹಾಗೂ ಮುಂದಿನ ಚಿಕಿತ್ಸೆಯ ಬಗ್ಗೆ ಸಹೋದರನಿಗೆ ತಿಳಿಸಿದ್ದಾರೆ. ಚಿಕಿತ್ಸೆಗೆ ಯುವಕ ಸ್ಪಂದಿಸಿದ್ದು ಸಹಜ ಸ್ಥಿತಿಗೆ ಬಂದಿದ್ದಾನೆ ಎಂದು ಸಮಾಜ ಸೇವಕ ವಿಶು ಶೆಟ್ಟಿಯವರು ತಿಳಿಸಿದ್ದಾರೆ.

- Advertisement -

ಸುಧಾಕರ್ ಪವಾರ್ ನನ್ನು ಸಹೋದರನ ವಶಕ್ಕೆ ನೀಡುವಾಗ 12 ವರ್ಷಗಳೇ ಕಳೆದು ಹೋಗಿದೆ . ಸಹಕರಿಸಿದ ವಿಶು ಶೆಟ್ಟಿ ಹಾಗೂ ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯಾಧಿಕಾರಿಗೆ ಕುಟುಂಬದ ಸದಸ್ಯರು ಧನ್ಯವಾದ ತಿಳಿಸಿದ್ದಾರೆ. ತೀರಾ ಬಡತನದ ಕುಟುಂಬದವರಾದ ಇವರು ಆಸ್ಪತ್ರೆಯ ಚಿಕಿತ್ಸಾ ವೆಚ್ಚ ರೂ.15,500/- ಭರಿಸಲು ಅಸಹಾಯಕತೆ ತೋರಿಸಿದಾಗ ಚಿಕಿತ್ಸಾ ವೆಚ್ಚವನ್ನು ಸಹ ವಿಶು ಶೆಟ್ಟಿಯವರು ಭರಿಸಿ ಸಹಕರಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಪತ್ರಿಕಾ ರಂಗ ಜನರ ಧ್ವನಿಯಾಗಿ ಕೆಲಸ ಮಾಡಬೇಕು: ಎ.ವಸಂತ್ ಕುಮಾರ

ಪತ್ರಿಕಾ ರಂಗ ಸ್ವತಂತ್ರವಾಗಿ, ಸ್ವಾವಲಂಬಿಯಾಗಿ ಕಾರ್ಯನಿರ್ವಹಿಸುವ ಮೂಲಕ ಸತ್ಯವನ್ನು ವರದಿ ಮಾಡಬೇಕು....

ಮುದ್ದೇಬಿಹಾಳ | ಸೆ.21ರಂದು ಕ್ರಾಂತಿ ಜ್ಯೋತಿ ಪ್ರವಾದಿ ಮುಹಮ್ಮದ್ ಸೀರತ್ ಸಮಾರಂಭ

ಜಮಾಅತೆ ಇಸ್ಲಾಮಿ ಹಿಂದ್ ಮುದ್ದೇಬಿಹಾಳ ಘಟಕದ ವತಿಯಿಂದ ‘ಕ್ರಾಂತಿಯ ಜ್ಯೋತಿ ಪ್ರವಾದಿ...

ಬಸವನ ಬಾಗೇವಾಡಿ | ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ ಪತ್ರ ಚಳವಳಿ

ಶಾಸನಬದ್ಧವಾಗಿ ನಿಗದಿಪಡಿಸಿರುವ ಪರಿಷ್ಕೃತ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ...

ವಿಜಯಪುರ | ಯೋಗದಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ: ಸುನೀಲಗೌಡ ಪಾಟೀಲ

ಯೋಗಾಭ್ಯಾಸದಿಂದ ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಒತ್ತಡವನ್ನು...