ಬೀದರ್‌ | ಪೋಷಣ ಅಭಿಯಾನ ಯೋಜನೆಯಡಿ 2 ಹುದ್ದೆಗಳಿಗೆ ಅರ್ಜಿ ಆಹ್ವಾನ

Date:

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪೋಷಣ ಅಭಿಯಾನ ಯೋಜನೆಯಡಿ ಹುಮನಾಬಾದ್ ಹಾಗೂ ಔರಾದ್ ತಾಲ್ಲೂಕಿನ ಸಂತಪೂರ ಶಿಶು ಅಭಿವೃದ್ಧಿ ಯೋಜನಾ ಕಚೇರಿಗಳಲ್ಲಿ ಖಾಲಿ ಇರುವ ತಲಾ ಒಂದು ಸೇರಿದಂತೆ ಒಟ್ಟು ಎರಡು ತಾಲ್ಲೂಕು ಸಂಯೋಜಕರ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

- Advertisement -

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹20 ಸಾವಿರ ಗೌರವಧನ ನೀಡಲಾಗುವುದು. ಅಭ್ಯರ್ಥಿಗಳು ಪದವಿ ಉತ್ತೀರ್ಣರಾಗಿರಬೇಕು ಹಾಗೂ ಕನಿಷ್ಠ ಎರಡು ವರ್ಷಗಳ ಸೇವಾನುಭವ ಹೊಂದಿರಬೇಕು. ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಕಂಪ್ಯೂಟರ್ ಬಳಕೆಯಲ್ಲಿ ಕೌಶಲ್ಯ ಹೊಂದಿರಬೇಕು. ಅಭ್ಯರ್ಥಿಗಳು ಸ್ಥಳೀಯರಾಗಿದ್ದು, ತಾಲ್ಲೂಕಿನಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಕಾರ್ಯನಿರ್ವಹಿಸಲು ಆಸಕ್ತಿ ಹೊಂದಿರಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕೃಷಿಮೇಳ | ‘ಪ್ರಕೃತಿ ಕೊಡಾದೆಲ್ಲ ಒಳ್ಳೀದೆ ಇರ್ತೈತಿ, ಮನ್ಷಾನೇ...

"ಪ್ರಕೃತಿ ಮನುಷ್ಯನಿಗೆ ಕೊಡುವುದೆಲ್ಲವೂ ಒಳ್ಳೆಯದೇ ಇರುತ್ತದೆ, ಆದರೆ ಮನುಷ್ಯ ಪ್ರಕೃತಿಯನ್ನು ಮರೆತು ಏನೇನೋ ಹುಡುಕಿಕೊಂಡು ಹೊರಟಿದ್ದಾನೆ" ಇದು ತಲೆಮಾರುಗಳಿಂದ ಕಂಬಳಿ ನೇಯ್ದು ಬದುಕು ಕಟ್ಟಿಕೊಂಡಿರುವ ಕಂಬಳಿ ನೇಕಾರರ ಮನದಾಳ. ಅಜ್ಜ-ಮುತ್ತಜ್ಜರ ಕಾಲದಿಂದಲೂ ನಡೆದುಕೊಂಡು...

ಒಕ್ಕಲಿಗ ರಾಜಕಾರಣದ ಅಸ್ಮಿತೆ: ಪಾರಂಪರಿಕ ಪ್ರಾಬಲ್ಯ ಮತ್ತು ಹೊಸ...

ರಾಜ್ಯದ ಒಕ್ಕಲಿಗ ರಾಜಕಾರಣವು ಇಂದು ಒಂದು ಮಹತ್ವದ ತಿರುವಿನಲ್ಲಿದೆ. ಒಂದು ಕಡೆ ದಶಕಗಳ ಅನುಭವ, ಭಾವನಾತ್ಮಕ ಬಾಂಧವ್ಯ ಮತ್ತು ಪಾರಂಪರಿಕ ಮತಬ್ಯಾಂಕ್ ಹೊಂದಿರುವ ದೇವೇಗೌಡರ ಕುಟುಂಬವಿದ್ದರೆ, ಇನ್ನೊಂದು ಕಡೆ ಆಕ್ರಮಣಕಾರಿ ರಾಜಕೀಯ ತಂತ್ರಗಾರಿಕೆ,...

ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬ: ಬುಡಮೇಲಾಗುತ್ತಿದೆಯೇ ಪಂಚಾಯತ್ ರಾಜ್...

ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯಬೇಕು ಎಂಬುದು ಸಂವಿಧಾನದ ಆಶಯ. ಆದರೆ ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ವಿಳಂಬ ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆಯೇ...

ಕನ್ನಡ, ಇಂಗ್ಲಿಷ್ ಹಾಗೂ ಸ್ಥಳೀಯ ಭಾಷೆಗಳಲ್ಲಿ ಓದುವ, ಬರೆಯುವ ಮತ್ತು ಮಾತನಾಡುವ ಸಾಮರ್ಥ್ಯ ಹೊಂದಿರಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮುದಾಯದೊಂದಿಗೆ ಉತ್ತಮ ಸಂವಹನ ನಡೆಸುವ ಕೌಶಲ್ಯವೂ ಅಗತ್ಯವಾಗಿದೆ. ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಪರೀಕ್ಷೆ ಮತ್ತು ಸಂದರ್ಶನ ನಡೆಸಲಾಗುವುದು. ಪರೀಕ್ಷೆಗೆ ಸೂಚಿಸಲಾದ ಅಭ್ಯರ್ಥಿಗಳು ಕಡ್ಡಾಯವಾಗಿ ಹಾಜರಾಗಬೇಕು. ಈ ನೇಮಕಾತಿಯು ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ. ಹುದ್ದೆಗಳು ತಾತ್ಕಾಲಿಕವಾಗಿದ್ದು, ನಿಯಮಾನುಸಾರ ನೇಮಕಾತಿ ರದ್ದುಪಡಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇರುತ್ತದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2026ರ ಡಿಸೆಂಬರ್ 16ರೊಳಗೆ ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೀದರ್ ಕಚೇರಿಗೆ ಸಲ್ಲಿಸಬೇಕು. ನಿಗದಿತ ದಿನಾಂಕದ ನಂತರ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

WhatsApp Image 2026 11 13 at 8.18.17 PM 7

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಕಚೇರಿಯನ್ನು ಅಥವಾ 8088065095 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನವೀನ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ನ.25ರಿಂದ ಬೆಂಗಳೂರಿನಲ್ಲಿ ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಹೋರಾಟ

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾವೇರಿ ಅರ್ಜಿ ವಜಾ |’ವಕೀಲರಿಗೆ ವ್ಯರ್ಥ ಮಾಡಲು ಸಾಕಷ್ಟು ಹಣವಿದೆ’; ತಮಿಳುನಾಡಿಗೆ ಸುಪ್ರೀಂ ತರಾಟೆ! 

ದಶಕಗಳ ಹಳೆಯ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು...

ಗುಜರಾತ್ | ಖಾಸಗಿ ವಾಹನಗಳ ಮೇಲೆ ಜಾತಿ ಸೂಚಕ ಬರಹ, ಚಿಹ್ನೆಗಳಿಗೆ ನಿಷೇಧ!

ಸಾರ್ವಜನಿಕ ರಸ್ತೆಗಳಲ್ಲಿ ವಾಹನಗಳ ಮೂಲಕ ಜಾತಿ ಅಸ್ಮಿತೆಯನ್ನು ಪ್ರದರ್ಶಿಸುವ ಮತ್ತು ಸಾಮಾಜಿಕ...

ತಲೆಮರೆಸಿಕೊಂಡಿದ್ದ ಕುಖ್ಯಾತ ಗ್ಯಾಂಗ್‌ಸ್ಟರ್ ಎನ್‌ಕೌಂಟರ್: ದಾವೂದ್ ಗ್ಯಾಂಗ್ ನಂಟಿದ್ದ ನಸೀಮ್ ದುರಾನಿ ಹತ!

ಭೂಗತ ಪಾತಕಿ ದಾವೂದ್ ಇಬ್ರಾಹಿಂ ನೇತೃತ್ವದ 'ಡಿ-ಕಂಪನಿ'ಯೊಂದಿಗೆ ನಂಟು ಹೊಂದಿದ್ದ ಮತ್ತು...

ರಾಜಸ್ಥಾನ ಜಿಲ್ಲಾ ಪರಿಷತ್ ಚುನಾವಣೆ: ಮತ ಎಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ, ಬಿಜೆಪಿಗೆ ಹಿನ್ನಡೆ

ರಾಜಸ್ಥಾನ ಪಂಚಾಯತ್ ರಾಜ್ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಶುಕ್ರವಾರ ಬೆಳಿಗ್ಗೆ...