ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಬೀದರ್ ಜಿಲ್ಲಾ ಸಂಚಾಲಕರಾಗಿ ಸಾಮಾಜಿಕ ಕಾರ್ಯಕರ್ತರಾದ ಮಹೇಶ ಗೋರನಾಳಕರ್ ಅವರನ್ನು ಆಯ್ಕೆ ಮಾಡಲಾಯಿತು.
ಬೀದರ್ ನಗರದ ಪ್ರವಾಸಿ ಮಂದಿರದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ನೇತ್ರತ್ವದಲ್ಲಿ ಈಚೆಗೆ ನಡೆದ ಸಂಘದ ಸದಸ್ಯರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಪ್ರಕಟಣೆ ತಿಳಿಸಿದೆ.
ಶಂಕರ ಹಲಗತ್ತಿ ಅವರು ಮಾತನಾಡಿ, ʼಸಂಘದ ಧ್ಯೇಯ, ಉದ್ದೇಶಗಳು ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಚಟುವಟಿಕೆಗಳನ್ನು ವಿಸ್ತರಿಸುವ ಯೋಜನೆಗಳ ಬಗ್ಗೆ ವಿವರಿಸಿದರು. ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಬಲಪಡಿಸುವ ಉದ್ದೇಶದಿಂದ ಸದಸ್ಯರ ಒಮ್ಮತದ ಮೇರೆಗೆ ಮಹೇಶ ಗೋರನಾಳಕರ್ ಅವರನ್ನು ಸಂಚಾಲಕರಾಗಿ ಆಯ್ಕೆ ಮಾಡಲಾಗಿದೆʼ ಎಂದು ತಿಳಿಸಿದರು.
ನೂತನ ಸಂಚಾಲಕರಾಗಿ ಆಯ್ಕೆಯಾದ ಮಹೇಶ ಗೋರನಾಳಕರ್ ಮಾತನಾಡಿ, ʼಜಿಲ್ಲೆಯಲ್ಲಿನ ಚಿಂತಕರು, ಸಾಹಿತಿಗಳು ಮತ್ತು ಪ್ರಗತಿಪರರ ಮಾರ್ಗದರ್ಶನದಲ್ಲಿ ಸಾಹಿತ್ಯ, ಸಾಂಸ್ಕೃತಿಕ, ವೈಚಾರಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಸಂಘಟಿಸಲಾಗುವುದು. ಯುವಕರು, ಮಹಿಳೆಯರು ಮತ್ತು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ ಅವರನ್ನು ಮುಖ್ಯವಾಹಿನಿಗೆ ತರಲು ವೇದಿಕೆ ಕಲ್ಪಿಸಲಾಗುವುದುʼ ಎಂದರು.
ಇದನ್ನೂ ಓದಿ : ಬೀದರ್ | ನಾಗರಿಕ ವಿಮಾನಯಾನ ಸೇವೆ ಮುಂದುವರಿಸಲು ಸಚಿವ ಈಶ್ವರ ಖಂಡ್ರೆ ಮನವಿ
ಸಭೆಯಲ್ಲಿ ಪ್ರಮುಖರಾದ ಶಂಭುಲಿಂಗ ವಾಲ್ದೋಡ್ಡಿ, ಡಾ.ಸ್ವಯಂಪ್ರಕಾಶ ಪ್ರಭಾ, ಶಾಮರಾವ ನೆಲವಾಡೆ, ಬಿ.ಎಂ. ಅಮರವಾಡಿ, ರಮೇಶ್ ಹಡಪದ, ನಾಗಶೆಟ್ಟಿ ಪಾಟೀಲ ಗಾದಗಿ, ಆತ್ಮಾನಂದ ಬಂಬುಳಗೆ, ಜಗದೀಶ್ವರ ಬಿರಾದರ್, ವಿನಯಕುಮಾರ ಮಾಳಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.




