ಅಮೆರಿಕಾ | ಕುತ್ತಿಗೆ ಮೇಲೆ ಕಾಲಿಟ್ಟು ಪೊಲೀಸರ ದೌರ್ಜನ್ಯ; ಕಪ್ಪು ವರ್ಣೀಯ ಸಾವು

Date:

2020ರಲ್ಲಿ ಜಾರ್ಜ್ ಫ್ಲಾಯ್ಡ್ ಹತ್ಯೆಯ ಕಹಿ ಘಟನೆ ಮಾಸುವ ಮುನ್ನವೇ ಅಮೆರಿಕಾದಲ್ಲಿ ಮತ್ತೋರ್ವ ಕಪ್ಪು ವರ್ಣೀಯ ಪೊಲೀಸರ ದೌರ್ಜನ್ಯದಿಂದ ಮೃತಪಟ್ಟಿದ್ದಾರೆ. ಪೊಲೀಸರು ಆತನಿಗೆ ಕೈಕೊಳ ಹಾಕಿ, ಆತನ ಕುತ್ತಿಗೆ ಮೇಲೆ ಕಾಲಿಟ್ಟು ಹಿಂಸಿಸಿದ್ದಾರೆ. ಆತ ‘ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರೂ, ಪೊಲೀಸರು ಆತನ ಕುತ್ತಿಗೆಯಿಂದ ಕಾಲು ತೆಗೆದಿಲ್ಲ, ಪರಿಣಾಮ ನಿತ್ರಾಣನಾಗಿದ್ದ ವ್ಯಕ್ತಿ, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

- Advertisement -

ಮೃತ ವ್ಯಕ್ತಿಯನ್ನು 53 ವರ್ಷದ ಪ್ರಾಂಕ್ ಟೈಸನ್‌ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಅಮೆರಿಕಾದ ಕ್ಯಾಂಟನ್ ಪೋಲೀಸ್ ಇಲಾಖೆಯು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ, ಬಾರ್‌ವೊಂದರಲ್ಲಿ ಪೊಲೀಸರು ಟೈಸನ್ ಅವರನ್ನು ಎಳೆದಾಡಿ, ಆತನನ್ನು ನೆಲಕ್ಕುರುಳಿಸಿ, ಆತನ ಭುಜದ ಮೇಲೆ ಮಂಡಿಯೂರಿ ಕುಳಿತು, ಆತನ ಕೈಗೆ ಕೈಕೊಳ ಹಾಕಿದ್ದಾರೆ. ಟೈಸನ್ ತನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ ಎಂದರೂ, ಪೊಲೀಸರು ಆತನ ಮೇಲೆ ಕುಳಿತಿರುವುದು ಕಂಡುಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಘಟನೆಯು ಏಪ್ರಿಲ್ 18ರಂದು ನಡೆದಿದೆ ಎನ್ನಲಾಗಿದೆ. ಕಾರಿನಲ್ಲಿ ತೆರಳುತ್ತಿದ್ದ ವ್ಯಕ್ತಿ ರಸ್ತೆ ಬಲಿದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದರು ಎನ್ನಲಾಗಿದೆ. ಘಟನೆ 36 ನಿಮಿಷಗಳ ವಿಡಿಯೋದಲ್ಲಿ, ಅಪಘಾತ ಸ್ಥಳಕ್ಕೆ ಗಸ್ತು ಪೊಲೀಸರು ಬರುತ್ತಾರೆ. ಅಲ್ಲಿ, ಆ ವ್ಯಕ್ತಿ ಹತ್ತಿರ ಬಾರ್‌ವೊಂದಕ್ಕೆ ಓಡಿ ಹೋದರೆಂದು ಸ್ಥಳೀಯರು ಹೇಳುತ್ತಾರೆ. ಅಧಿಕಾರಿಗಳು ಬಾರ್‌ಗೆ ನುಗ್ಗಿ, ಅಲ್ಲಿ ಟೈಸನ್‌ನನ್ನು ಹಿಡಿಯಲು ಮುಂದಾಗಿತ್ತಾರೆ. ಅಧಿಕಾರಿಗಳು ಮತ್ತು ಟೈಸನ್‌ ನಡುವೆ ವಾಗ್ವಾದ ನಡೆಯುತ್ತದೆ.

ಅಧಿಕಾರಿಗಳು ಟೈಸನ್‌ನನ್ನು ನೆಲಕ್ಕೆ ಉರುಳಿಸಿ, ಆತನಿಗೆ ಕೈಕೋಳ ಹಾಕುತ್ತಾರೆ. ಓರ್ವ ಅಧಿಕಾರಿ ಟೈಸನ್ ಕುತ್ತಿಗೆಯ ಬಳಿ ಭುಜದ ಮೇಲೆ ಮುಂಡಿಯೂರಿ ಕುಳಿತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

 

ಸುಮಾರು 30 ಸೆಕೆಂಡ್‌ಗಳ ಕಾಲ ಅಧಿಕಾರಿ ಮೇಲೆ ಮಂಡಿಯೂರಿ ಕುಳಿತಿದ್ದರಿಂದ, ‘ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ’ ಎಂದು ಪದೇ ಪದೇ ಟೈಸನ್ ಕೂಗುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅಧಿಕಾರ ಮೇಲೆದ್ದ ಬಳಿಕ, ಟೈಸನ್ ಯಾವುದೇ ಚಲನೆ ಇಲ್ಲದೆ ಮಲಗಿರುವುದು ಕಾಣಿಸುತ್ತದೆ. ಸುಮಾರು ಆರು ನಿಮಿಷಗಳ ಬಳಿಕ, ಆತನನ್ನು ಅಧಿಕಾರಿಗಳು ಪರಿಶೀಲಿಸುತ್ತಾರೆ. ಬಳಿಕ, ಆ್ಯಂಬುಲೆನ್ಸ್‌ಗೆ ಕರೆ ಮಾಡುತ್ತಾರೆ. ಆತನನ್ನು ಆಸ್ಪತ್ರೆಗೆ ಕರೆದೊಯ್ಯುವುದು ವಿಡಿಯೋದಲ್ಲಿ ಕಂಡುಬಂದಿದೆ.

ಕ್ಲೀವ್‌ಲ್ಯಾಂಡ್‌ನಲ್ಲಿರುವ NBC ಅಂಗಸಂಸ್ಥೆಯಾದ WKYC ಪ್ರಕಾರ, ಟೈಸನ್ ಸ್ಥಳೀಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಟೈಸನ್ ಸಾವಿನ ಘಟನೆಯಲ್ಲಿ ಭಾಗಿಯಾಗಿರುವ ಕ್ಯಾಂಟನ್ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಬ್ಯೂ ಸ್ಕೋನೆಗ್ಗೆ ಮತ್ತು ಕ್ಯಾಮ್ಡೆನ್ ಬರ್ಚ್ ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಆಡಳಿತಾತ್ಮಕ ರಜೆಯಲ್ಲಿ ಇರಿಸಲಾಗಿದೆ. ಓಹಿಯೋ ಬ್ಯೂರೋ ಆಫ್ ಕ್ರಿಮಿನಲ್ ಇನ್ವೆಸ್ಟಿಗೇಶನ್ (ಒಸಿಐ) ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಈ ಘಟನೆಯು ನಾಲ್ಕು ವರ್ಷಗಳ ಹಿಂದೆ ಮಿನ್ನಿಯಾಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಜಾರ್ಜ್‌ ಫ್ಲಾಯ್ಡ್‌ನನ್ನು ಪೊಲೀಸರು ಹತ್ಯೆಗೈದಿದ್ದ ಘಟನೆಯನ್ನು ನೆನಪಿಸಿದೆ. ಆಗ, ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಎಂಬಾತ ಫ್ಲಾಯ್ಡ್‌ನ ಕುತ್ತಿಗೆ ಮೇಲೆ 9 ನಿಮಿಷಗಳ ಕಾಲ ಮೊಣಕಾಲು ಹೂರಿ ಕುಳಿತಿದ್ದರಿಂದ ಫ್ಲಾಯ್ಡ್‌ ಸಾವನ್ನಪ್ಪಿದ್ದರು. ಆ ಘಟನೆಯ ವಿಡಿಯೋ ಕೂಡ ವೈರಲ್ ಆಗಿತ್ತು. ಪೊಲೀಸ್ ದೌರ್ಜನ್ಯ ಮತ್ತು ವರ್ಣಭೇದ ನೀತಿಯ ವಿರುದ್ಧ ವಿಶ್ವಾದ್ಯಂತ ಪ್ರತಿಭಟನೆಗಳು ನಡೆದಿದ್ದವು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಜಾದಲ್ಲಿ ಮೃತರ ಸಂಖ್ಯೆ 74,000 ದಾಟಿದೆ: ಆರೋಗ್ಯ ಸಚಿವಾಲಯ

ಇಸ್ರೇಲ್ ನಡೆಸುತ್ತಿರುವ ದೀರ್ಘಕಾಲದ ಕ್ರೌರ್ಯದಿಂದಾಗಿ ಗಾಜಾ ಪಟ್ಟಿಯಲ್ಲಿ ಮೃತರ ಸಂಖ್ಯೆ 74,000...

ದಕ್ಷಿಣ ಆಫ್ರಿಕಾದ ಹಲವೆಡೆ ಸಾಮೂಹಿಕ ಗುಂಡಿನ ದಾಳಿ; 27 ಮಂದಿ ಭೀಕರ ಸಾವು

ದಕ್ಷಿಣ ಆಫ್ರಿಕಾದ ವಿವಿಧ ಪಟ್ಟಣಗಳಲ್ಲಿ ಭೀಕರ ಸಾಮೂಹಿಕ ಗುಂಡಿನ ದಾಳಿಗಳು ನಡೆದಿದ್ದು,...

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 11 ಮಂದಿ ಬಲಿ, 30 ಜನರಿಗೆ ಗಾಯ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ...

ಯುದ್ಧದಾಹಿ ಅಮೆರಿಕ: ಇರಾನ್‌ನ 7 ದಿನಗಳ ಕದನ ವಿರಾಮ ಪ್ರಸ್ತಾವಕ್ಕೆ ಟ್ರಂಪ್ ತಿರಸ್ಕಾರ

ಇರಾನ್‌ ಕದನ ವಿರಾಮಕ್ಕೆ ಮುಂದಿಟ್ಟಿರುವ 7 ದಿನಗಳ ಶಾಂತಿ ಪ್ರಸ್ತಾವವನ್ನು ಅಮೆರಿಕ...