ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 18 ವರ್ಷಗಳ ಬಳಿಕ ಭರ್ಜರಿ ಜಯಗಳಿಸಿದ ಆರ್‌ಸಿಬಿ ತಂಡದ ವಿಜಯೋತ್ಸವವನ್ನು ನೇರವಾಗಿ ವೀಕ್ಷಣೆ ಮಾಡಲು ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿದ್ದ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟ ಕೃಷ್ಣರಾಜಪೇಟೆ ತಾಲ್ಲೂಕಿನ ರಾಯಸಮುದ್ರ ಗ್ರಾಮದ ಪೂರ್ಣಚಂದ್ರ ತಾಯಿ ಕಾಂತಮಣಿ ಅವರಿಗೆ ಸರ್ಕಾರಿದಂದ ಬಿಡುಗಡೆಯಾಗಿದ್ದ ₹25 ಲಕ್ಷ ರೂಪಾಯಿಗಳ ಚೆಕ್ ನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್. ಚೆಲುವರಾಯ ಸ್ವಾಮಿ ವಿತರಣೆ ಮಾಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಕೃಷಿ ಸಚಿವರಾದ ಎನ್. ಚೆಲುವರಾಯಸ್ವಾಮಿ ಮಾತನಾಡಿ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿ ರಾಯಸಮುದ್ರ ಗ್ರಾಮದ ಶಿಕ್ಷಕ ಆರ್. ಬಿ. ಚಂದ್ರು ಮತ್ತು ಕಾಂತಮಣಿ ದಂಪತಿಗಳ ಪುತ್ರ ಪೂರ್ಣಚಂದ್ರ ಸೇರಿದಂತೆ 11ಜನ ಕ್ರೀಡಾ ಪ್ರೇಮಿಗಳು ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಇಂತಹ ದುರಂತ ನಡೆಯಬಾರದಿತ್ತು.

ಕಾಲ್ತುಳಿತದಲ್ಲಿ ಮೃತಪಟ್ಟ ಎಲ್ಲಾ 11 ಮಂದಿ ಕುಟುಂಬಕ್ಕೂ ರಾಜ್ಯ ಸರ್ಕಾರವೂ ತಲಾ ₹25 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಿರುತ್ತದೆ. ಸರ್ಕಾರವು ಎಷ್ಟೇ ಪರಿಹಾರ ನೀಡಬಹುದು. ಕಳೆದು ಹೋದ ಜೀವವನ್ನು ವಾಪಸ್ ತರಲು ಸಾಧ್ಯವಾಗುವುದಿಲ್ಲ. ಪುತ್ರನನ್ನು ಕಳೆದುಕೊಂಡ ಪೋಷಕರು ಮತ್ತು ಕುಟುಂಬದವರ ಮನಸ್ಸಿಗೆ ಆಗಿರುವ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಬೈಕ್, ಟ್ಯಾಕ್ಸಿ ಚಾಲಕರ ಸಭೆ; ಪ್ರತಿಭಟನೆಗೆ ನಿರ್ಧಾರ
ಭೇಟಿಯಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ್, ಶಾಸಕ ಹೆಚ್. ಟಿ. ಮಂಜು, ತಹಶಿಲ್ದಾರ್ ಎಸ್. ಯು. ಅಶೋಕ್, ಮಾಜಿ ಶಾಸಕ ಕೆ. ಬಿ. ಚಂದ್ರಶೇಖರ್, ಜಿ.ಪಂ. ಮಾಜಿ ಉಪಾಧ್ಯಕ್ಷ ಎಸ್. ಅಂಬರೀಶ್, ನಿವೃತ್ತ ಪ್ರಾಂಶುಪಾಲ ಆರ್. ಟಿ. ಶಿವಕುಮಾರ್, ಗ್ಯಾಸ್ ರಾಜಶೇಖರ್, ಮಡುವಿನ ಕೋಡಿ ಕಾಂತರಾಜು, ರಾಜಯ್ಯ, ಹೆತ್ತಗೋನಹಳ್ಳಿ ನಾರಾಯಣ ಗೌಡ, ಗ್ರಾ.ಪಂ. ಉಪಾಧ್ಯಕ್ಷ ಯೋಗೇಶ್, ಸಚಿವರ ಆಪ್ತ ಸಹಾಯಕರಾದ ಚೇತನಾ ಮಹೇಶ್, ಅರಳಕುಪ್ಪೆ ಪ್ರತಾಪ್, ಸರ್ಕಲ್ ಇನ್ಸ್ಪೆಕ್ಟರ್ ಸುಮಾ ರಾಣಿ, ಎಸ್.ಐ ನವೀನ್ ಸೇರಿದಂತೆ ಇನ್ನಿತರರರು ಇದ್ದರು.