ಚಿಕ್ಕಬಳ್ಳಾಪುರ | ಮುದ್ದೇನಹಳ್ಳಿ ಬಳಿಯ ಹೋಂ ಸ್ಟೇ ಒಂದರಲ್ಲಿಅನುಮಾನಾಸ್ಪದವಾಗಿ ಯುವತಿಯೊಬ್ಬಳು ಸಾವು

Date:

ತಾಲೂಕಿನ ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದೇನಹಳ್ಳಿ ಬಳಿಯ ಹೋಂ ಸ್ಟೇ ಒಂದರಲ್ಲಿ ಬೆಂಗಳೂರು ಮೂಲದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಮೃತ ಯುವತಿಯನ್ನು ಸಾಯಿ ಸುರಭಿ ಎಂದು ಗುರುತಿಸಲಾಗಿದ್ದು, ಈಕೆಯ ಪ್ರಿಯಕರ ಎನ್ನಲಾದ ಕೇರಳ ಮೂಲದ ಸಂಜೀತ್ ಅಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗಳ ಸಾವಿನ ಬೆನ್ನಲ್ಲೇ ತಾಯಿ ಗೀತಾ ಅವರು ಮಾಧ್ಯಮಗಳ ಎದುರು ಕಣ್ಣೀರು ಹಾಕಿದ್ದು, ಇದೊಂದು ಲವ್ ಜಿಹಾದ್ ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನು ಓದಿದ್ದೀರಾ..? ಚಿಂತಾಮಣಿ |ಬೈಕ್ ಗೆ ಟ್ರಕ್ ಲಾರಿ ಡಿಕ್ಕಿ ಸ್ಥಳದಲ್ಲೇ ಬಟ್ಟೆ ವ್ಯಾಪಾರಿ ಮಹಿಳೆ ಸಾವು

ಬೆಂಗಳೂರು ಮೂಲದ ಸಾಯಿ ಸುರಭಿ ಹಾಗೂ ಕೇರಳದ ಕೋಝಿಕ್ಕೋಡ್ ನಿವಾಸಿ, ಕ್ಯಾಬ್ ಡ್ರೈವರ್ ಸಂಜೀತ್ ಅಲಿ ಕಳೆದ ಶನಿವಾರ ಮುದ್ದೇನಹಳ್ಳಿ ಬಳಿಯ ಹೋಂ ಸ್ಟೇಗೆ ಬಂದು ತಂಗಿದ್ದರು. ಇಂದು (ಸೋಮವಾರ) ಚೆಕ್-ಔಟ್ ಸಮಯ ಮುಗಿದರೂ ರೂಮ್ ತೆರೆಯದಿದ್ದಾಗ ಹೋಂ ಸ್ಟೇ ಕೇರ್‌ಟೇಕರ್ ಬಂದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್‌ಪಿ ಕುಶಲ್ ಚೌಕ್ಸಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ತೆರಿಗೆ ವಸೂಲಾತಿಯಲ್ಲಿ ಲೋಪ: ಇಬ್ಬರು ಪಿಡಿಓ ಅಮಾನತು, ಮೂವರು ಕರವಸೂಲಿಗಾರರ ವಜಾಕ್ಕೆ ವಿಚಾರಣೆ

ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ...

ಹಾವೇರಿ | ಪುಸ್ತಕ ಓದಿನ ಪರಂಪರೆಯನ್ನು ಮರು ಕಟ್ಟಬೇಕಾಗಿದೆ: ಶೋಭಾ ಜಾಗಟಗೇರಿ

"ಮುಷ್ಠಿಯಲ್ಲಿ ಇರುವ ಮೊಬೈಲ್ ಜೀವನ ಪಾಠವನ್ನ್ನು ಕಲಿಸುವುದಕ್ಕಿಂತ ದಾರಿ ತಪ್ಪಿಸುವ ಕೆಲಸ...

ಉತ್ತರ ಕನ್ನಡ | 3.24 ಲಕ್ಷ ಪಡಿತರ ಚೀಟಿ ಸದಸ್ಯರ ಇ-ಕೆವೈಸಿ ಬಾಕಿ; ಅಕ್ಟೋಬರ್ 20ರೊಳಗೆ ಪೂರ್ಣಗೊಳಿಸಲು ಮನವಿ

ಉತ್ತರ ಕನ್ನಡ ಜಿಲ್ಲೆಯ ಪಡಿತರ ಚೀಟಿಗಳಲ್ಲಿರುವ 5,69,044 ಸದಸ್ಯರು ಐದು ವರ್ಷಗಳ...

ಉಡುಪಿ | ಇಂದ್ರಾಳಿ ಮಂಚಿ ನೂರಾನಿ ಮಸೀದಿಗೆ ನೂತನ ಆಡಳಿತ ಸಮಿತಿ ರಚನೆ

ಉಡುಪಿ ತಾಲೂಕಿನ ಇಂದ್ರಾಳಿ ಮಂಚಿ ನೂರಾನಿ ಮಸೀದಿಯ ಆಡಳಿತ ಸಮಿತಿಗೆ ನೂತನ...