ಬಾಗೇಪಲ್ಲಿ | ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಭೂಹಗರಣದಲ್ಲಿ ಶಾಮೀಲಾಗಿರುವ ಎಲ್ಲರನ್ನು ಜೈಲಿಗೆ ಕಳುಹಿಸುವೆ-ಸಂಸದ ಡಾ.ಕೆ.ಸುಧಾಕರ್ ಎಚ್ಚರಿಕೆ

Date:

ತಾಲೂಕಿನ ಪಾತಪಾಳ್ಯ ಸಮೀಪ ಗಂಟ್ಲಮಲ್ಲಮ್ಮ ಕಣವೆಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಡ್ಯಾಂ ನಿರ್ಮಾಣಕ್ಕೆ ಬಡ ರೈತರ ಜಮೀನನ್ನು ಕಡಿಮೆ ಬೆಲೆಗೆ ಭೂ ಸ್ವಾಧೀನ ಮಾಡಿಕೊಳ್ಳುತ್ತಿರುವುದು ಅಸಹ್ಯಕರ ಎಂದು ಸಂಸದ ಡಾ.ಕೆ.ಸುಧಾಕರ್ ಟೀಕಿಸಿದರು.

ಅವರು ಪಟ್ಟಣದಲ್ಲಿ ಎನ್‌ಡಿಎ ನೇತೃತ್ವದಲ್ಲಿ ಶಾಸಕರ ಭ್ರಷ್ಟಾಚಾರ ವಿರುದ್ದ ಏರ್ಪಡಿಸಿದ್ದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಬಡ ರೈತರು ನೂರಾರು ವರ್ಷಗಳಿಂದ ಉಳಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಬೇನಾಮಿ ಹೆಸರಿನಲ್ಲಿ ಖರೀಧಿ ಮಾಡಿ ಕೋಟ್ಯಾಂತರರೂಗಳನ್ನು ಕೊಳ್ಳೆ ಹೊಡೆಯಲು ಹುನ್ನಾರ ನಡೆಸಿರುವುದು ಖಂಡನೀಯ ಶಾಸಕರಿಗೆ ಮಾನಮರ‍್ಯಾದೆ ಇದಿದ್ದರೆ ಈ ರೀತಿಯ ಕುತಂತ್ರ ಮಾಡುತ್ತಿರಲಿಲ್ಲ ಭೂಹಗರಣಗಳು ಬಾಗೇಪಲ್ಲಿಯಲ್ಲಿ ಅಲ್ಲ ಜಂಗಮಕೋಟೆ,ಕೈವಾರಗಳಲ್ಲಿ ಸಾವಿರಾರು ಎಕರೆಗಳ ಭೂಹಗರಣಗಳು ನಡೆದಿವೆ 2028ರಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಹಗರಣಗಳಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಜೈಲಿಗೆ ಕಳುಹಿಸುತ್ತೇನೆ ಎಂದು ಗುಡುಗಿದ ಅವರು ಶಾಸಕರು ಮತ್ತು ಕಟುಂಬ ಜೀವನ ನಡೆಸುತ್ತಿರುವುದು ರಾಜ್ಯದ 7ಕೋಟಿ ಜನರು ಕಟ್ಟುತ್ತಿರುವ ತೆರಿಗೆ ಹಣದಿಂದ ಎಂದು ಮರೆಯಬಾರದು ಡಾ.ಸುಧಾಕರ್ ಚುನಾವಣೆಯಲ್ಲಿ ಚುನಾವಣೆಯಲ್ಲಿ ಸೋತಿರಬಹುದು ಆದರೆ ಸತ್ತಿಲ್ಲ ನನ್ನ ಕೊನೆಯ ಉಸಿರು ಇರುವವರಿಗೂ ರೈತರ ಅಭಿವೃದ್ದಿಗಾಗಿ ದುಡಿಯುತ್ತೇನೆ ಬಾಗೇಪಲ್ಲಿ ಶಾಸಕರು ಕೋಟ್ಯಾಂತರರೂಗಳ ಒಡೆಯನಾಗಿರಬಹುದು ಆದರೆ ರೈತರ ಜನರ ಹಣ ಹೊಡೆಯುವುದನ್ನು ಬಿಟ್ಟು ಜನರ ಕೆಲಸ ಮಾಡಬೇಕು ಎಂದು ಛೇಡಿಸಿದರು.

ಎನ್‌ಡಿಎ ಮುಖಂಡ ಹರಿನಾಥರೆಡ್ಡಿ ಮಾತನಾಡಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಅಧಿಕಾರವಧಿಯಲ್ಲಿ 13 ವರ್ಷಗಳಲ್ಲಿ ಅಭಿವೃದ್ದಿ ಕೆಲಸಗಳು ಶೂನ್ಯ ಆದರೆ ಬಾರ್‌ಗಳನ್ನು ಹೆಚ್ಚಾಗಿ ಸ್ಥಾಪನೆ ಮಾಡಿ ಕುಡುಕರ ಸಂಖ್ಯೆ ಹೆಚ್ಚು ಮಾಡಲಾಗುತ್ತಿದೆ.ಗಂಟ್ಲಮಲ್ಲಮ್ಮ ಕಣವೆಯಲ್ಲಿ ತಮ್ಮ ಸಹೋದರನ ಹೆಸರಿನಲ್ಲಿ ಸಾಯಿ ಸೇವಾ ಟ್ರಸ್ಟ್ ನೋಂದಾಯಿಸಿಕೊಂಡು ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರ ಬಡ ರೈತರ ಜಮೀನನ್ನು ಕಡಿಮೆ ಬೆಲೆ ಕಬಳಿಸುತ್ತಿದ್ದಾರೆ.ಶಾಸಕರು ಸರಕಾರಿ ಗೋಮಾಳ ಜಮೀನನ್ನು ತಮ್ಮ ಮಕ್ಕಳ,ಸಂಭಂದಿಕರ ಹೆಸರಿಗೆ ಮಾತ್ರ ನೋಂದಾಯಿಸಿಕೊಳ್ಳುತ್ತಿದ್ದಾರೆ.ತಹಸೀಲ್ದಾರ್‌ರ ಪಾತ್ರ ಜಮೀನು ಹಗರಣದಲ್ಲಿ ಕಂಡು ಬಂದಿದ್ದು ಅಧಿಕಾರಿಯಾಗಿ ಪ್ರಾಮಾಣಿಕ ದಕ್ಷತೆಯಿಂದ ಕೆಲಸ ಮಾಡಬೇಕಾಗಿದೆ.ಗುಡಿಬಂಡೆ ತಾಲೂಕಿನ ಸೋಮಕಲಪಲ್ಲಿ ಗ್ರಾಮದಲ್ಲಿ 150 ಎಕರೆ ಸರಕಾರಿ ಜಮೀನನ್ನು ಶಾಸಕರು ಕಬಳಿಸಿದ್ದು ಈ ವಿಷಯವನ್ನು ಬೆಳಕಿಗೆ ತಂದ ಸಂದೇಶ್ ಎಂಬ ದಲಿತ ಮುಖಂಡನನ್ನು ಶಾಸಕರು ಜಿಲ್ಲಾಧಿಕಾರಿಯನ್ನು ಬಳಸಿಕೊಂಡು ಜಿಲ್ಲೆಯಿಂದ ಗಡಿಪಾರು ಮಾಡಿಸಿರುವುದು ಖಂಡನೀಯ ಎಂದ ಅವರು ಶಾಸಕರ ಅವಧಿಯಲ್ಲಿ ಬಾಗೇಪಲ್ಲಿ,ಗುಡಿಬಂಡೆ ಮತ್ತು ಚೇಳೂರು ತಾಲೂಕುಗಳಲ್ಲಿ ಪ್ರತಿ ಹಳ್ಳಿಯಲ್ಲಿಯೂ ಬಾರ್‌ಗಳು ಪ್ರಾರಂಭವಾಗಿವೆ.ಬಾಗೇಪಲ್ಲಿ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಒಂದು ವರ್ಷ ಕಳೆಯುತ್ತಾ ಬಂದರೂ ಕಾಮಕಾರಿ ಪ್ರಾರಂಭಿಸಿಲ್ಲ ಏಕೆಂದರೆ ಕಮಿಷನ್ ಬಂದಿಲ್ಲ ಆದ್ದರಿಂದ ಕಾಮಗಾರಿಯನ್ನು ಮುಂದೂಡುತ್ತಾ ಬರುತ್ತಿದ್ದಾರೆ ಎಂದರು.

ಇದನ್ನು ಓದಿದ್ದೀರಾ..?ಕೋಲಾರ | ಕಾಂಗ್ರೆಸ್ಸಿಗರನ್ನು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುವ ಹೇಳಿಕೆ: ನಗರ ಪೊಲೀಸ್ ಠಾಣೆಯಲ್ಲಿ 3 ದೂರು ಸಲ್ಲಿಕೆ

ಜಿಲ್ಲಾ ನಿಕಟಪೂರ್ವ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ,ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ಕೋನಪ್ಪರೆಡ್ಡಿ,ಜೆಡಿಎಸ್ ಮುಖಂಡ ಲಕ್ಷ್ಮೀನಾರಾಯಣ್,ಮಾಜಿ ಪುರಸಭೆ ಸದಸ್ಯ ಆ.ನಾ.ಮೂರ್ತಿ,ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಅಧ್ಯಕ್ಷ ಜೆ.ಪಿ.ಚಂದ್ರಶೇಖರರೆಡಿ,ಮಿಮಟ್ಟೇಮರಿ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಬಿ.ಎಲ್.ನರಸಿಂಹಯ್ಯ,ಮಲ್ಲಿಕಾರ್ಜುನರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ವಿ.ವೆಂಕಟಶಿವಾರೆಡ್ಡಿ,ನಲ್ಲಪರೆಡ್ಡಿಪಲ್ಲಿ ಶ್ರೀನಿವಾಸರೆಡ್ಡಿ,ಗಡ್ಡಂ ರಮೇಶಬಾಬು ಮತ್ತಿತರರು ಇದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ |ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ 11 ಉಳಿಕೆ ಸೀಟುಗಳಿಗೆ ನ.14ರಂದು ನೇರ ಪ್ರವೇಶ

ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ...

ಉಡುಪಿ | ಮತಾಂತರ ನಿಷೇಧ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಕಥೊಲಿಕ್ ಸಭಾ ವತಿಯಿಂದ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಕೆ

ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಸಂರಕ್ಷಣಾ ಕಾಯ್ದೆ–2022 (ಮತಾಂತರ ನಿಷೇಧ ಕಾಯ್ದೆ)...