ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಹೋಬಳಿ ಬಿ. ಕಣಬೂರು ಗ್ರಾಮದ ಜಿಲ್ಲಾ ಪಂಚಾಯಿತಿ ಮೀಸಲಾತಿ ಕ್ಷೇತ್ರದ ಕಳೆದ ಚುನಾವಣೆಯಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಮೀಸಲಾತಿ ಕ್ಷೇತ್ರವಾಗಿ ಚುನಾವಣೆಯಲ್ಲಿ ಆಯ್ಕೆಗೊಂಡಿದ್ದು, 2026-27ನೇ ಸಾಲಿನ ಮೊದಲನೆ ಚುನಾವಣಾ ಪಟ್ಟಿಯಲ್ಲಿ ಜಿಲ್ಲಾ ಪಂಚಾಯಿತಿಗೆ ಮೀಸಲಾತಿ ಪಟ್ಟಿ ರಿಲೀಜ್ ಆಗಿದ್ದು, ಆದರೆ ಎರಡನೇ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾತಿಯನ್ನು ಕೈಬಿಟ್ಟು, ಸಾಮಾನ್ಯ ಪರಿಗಣಿಸಲಾಗಿರುತ್ತದೆ ಎಂದು ದಸಂಸ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂವಿಧಾನದ ಪ್ರಕಾರ ಪರಿಶಿಷ್ಟ ಜಾತಿ ಜನಾಂಗಕ್ಕೆ ತುಂಬಾ ಅನ್ಯಾಯವಾಗುತ್ತಿರುತ್ತದೆ. ಸದರಿ ಕ್ಷೇತ್ರ ಮೀಸಲಾತಿ ಕ್ಷೇತ್ರವಾಗಿರುವುದರಿಂದ (ಪರಿಶಿಷ್ಟ ಜಾತಿ / ಪಂಗಡ ಮತದಾರರು ಹೆಚ್ಚಾಗಿ ಇರುವುದರಿಂದ) ಜಿಲ್ಲಾ ಪಂಚಾಯಿತಿಯಿಂದ ನಮ್ಮ ಜನಾಂಗಕ್ಕೆ ಮೀಸಲಾತಿ ನೀಡಬೇಕು, ಎರಡನೇ ಪಟ್ಟಿಯಲ್ಲಿಯೂ ಕೂಡಾ ನಮ್ಮ ಜನಾಂಗಕ್ಕೆ ಮೀಸಲಾತಿ ನೀಡಿ, ಕೂಡಲೇ ಜನರಲ್ ರದ್ದುಗೊಳಿಸಿ, ಪರಿಶಿಷ್ಟ ಜಾತಿಗೆ ಮೀಸಲಾತ ನೀಡಬೇಕಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸುತ್ತದೆ. ಒಂದು ವೇಳೆ ಶೀಘ್ರದಲ್ಲಿ ಮಿಸಲಾತಿ ರದ್ದುಗೊಳಿಸದಿದ್ದಲ್ಲಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ದಸಂಸ ಅಗ್ರಹಿಸಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಸಂವಿಧಾನ ದಿನ: SIR ವಿರೋಧಿಸಿ ಜಾತ್ಯತೀತ ಪಕ್ಷ, ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ
ಈ ವೇಳೆ ಹೆಚ್. ಕೆ ಅಶೋಕ್,ಭಾಸ್ಕರ,ಸಣ್ಣಯ್ಯ, ಗೀತಾ, ಮಂಜುನಾಥ್ ಹೆಚ್ . ಎಸ್ ಪುಟ್ಟಸ್ವಾಮಿ ಹಾಗೂ ಇನ್ನಿತರರಿದ್ದರು.



