ಕಲಬುರಗಿ | ಬಾಕಿ ವೇತನ ಪಾವತಿಗೆ ಆಗ್ರಹಿಸಿ ಹೊರಗುತ್ತಿಗೆ ನೌಕರರ ಧರಣಿ

Date:

ಕಲಬುರಗಿ ಜಿಲ್ಲೆ ಜೇವರ್ಗಿ ಪುರಸಭೆಯ ಹೊರಗುತ್ತಿಗೆ ನೌಕರರಿಗೆ ಅನೇಕ ವರ್ಷಗಳಿಂದ ವೇತನ, ಇಪಿಎಫ್‌, ಇಎಸ್‌ಐ ಹಾಗೂ ಇತರೆ ಮೂಲ ಸೌಕರ್ಯಗಳಲ್ಲಿ ತಾರತಮ್ಯವಾಗುತ್ತಿದ್ದು, ಸರ್ಕಾರದ ಆದೇಶದಂತೆ ಸೌಲಭ್ಯಗಳನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿ ನೌಕರರು ಪುರಸಭೆ ಕಚೇರಿ ಎದುರು ಧರಣಿ ನಡೆಸಿದರು.

ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿರುವ ನೌಕರರಿಗೆ ಹಲವು ವರ್ಷಗಳಿಂದ ಇಪಿಎಫ್‌, ಇಎಸ್‌ಐ ನಮ್ಮ ಹೆಸರಿಗೆ ಜಮೆ ಆಗಿಲ್ಲ. ಹಿಂದಿನ ಮತ್ತು ಈಗಿನ ಮುಖ್ಯಾಧಿಕಾರಿಗಳ ಗಮನಕ್ಕೆ ಹಲವು ಬಾರಿ ತರಲಾಗಿದೆ. ಅಧಿಕಾರಿಗಳು ಭರವಸೆ ನೀಡುತ್ತಾ ಬಂದಿದ್ದಾರೆ. ಆದರೆ, ಇಲ್ಲಿಯವರೆಗೆ ಜಮೆ ಆಗಿಲ್ಲ. ಇದರಿಂದ ನೌಕರರಲ್ಲಿ ಆತಂಕ ಉಂಟಾಗಿದೆ. ಮುಂದಿನ ಭವಿಷ್ಯಕ್ಕಾಗಿ ಸರ್ಕಾರದಿಂದ ನ್ಯಾಯಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ನೀಡಬೇಕು ಎಂದು ಅಗ್ರಹಿಸಿದರು.

ಹಕ್ಕೊತ್ತಾಯಗಳು

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
  • ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಹೊರಗುತ್ತಿಗೆ ನೌಕರರಿಗೆ ಬಾಕಿ ಉಳಿದಿರುವ 10 ತಿಂಗಳ ವೇತನ ಶಿಕ್ಷಣ ನೀಡಬೇಕು.
  • ಪುರಸಭೆ ಹೊರಗುತ್ತಿಗೆ ನೌಕರರಿಗೆ ಸರ್ಕಾರದ ಆದೇಶದಂತೆ (ಪಿ.ಎಸ್.ಆರ್) ಪ್ರತಿ ತಿಂಗಳ 5ನೇ ತಾರಿಕಿನ ಒಳಗೆ ವೇತನ ಪಾವತಿಸಬೇಕು.
  • ಇಪಿಎಫ್‌, ಇಎಸ್‌ಐ ಪ್ರತಿ ತಿಂಗಳು ನೌಕರರ ಹೆಸರಿಗೆ ಜಮೆ ಮಾಡಬೇಕು.
  • ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲೋಡರ್‌ಗಳನ್ನು ಖಾಯಂಗೊಳಿಸಬೇಕು.
  • ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಆರೋಗ್ಯ ಹಿತದೃಷ್ಟಿಯಿಂದ ಕುಂಟುಬಸ್ಥರೆಲ್ಲರ ಹೆಸರಿಗೆ ಇಎಸ್‌ಐ ಕಾರ್ಡ್‌ ನೀಡಬೇಕು.
  • ಹೊರಗುತ್ತಿಗೆ ನೌಕರರ ಸಮವಸ್ತ್ರ ಕಡ್ಡಾಯವಾಗಿ ಕೊಡಬೇಕು.
  • ಇಲಾಖೆಯಲ್ಲಿ ಕಾರ್ಮಿಕರು ಕಡಿಮೆ ಸಂಖ್ಯೆಯಲ್ಲಿ ಇದ್ದುದ್ದರಿಂದ ಕೆಲಸದ ಒತ್ತಡ ಹೆಚ್ಚಾಗಿದ್ದು, ಕೂಡಲೇ ಹೆಚ್ಚಿನ ಕಾರ್ಮಿಕರನ್ನು ನಿಯೋಜನೆ ಮಾಡಿಕೊಳ್ಳಬೇಕು.
  • ಹೊರಗುತ್ತಿಗೆ ನೌಕರರಿಗೆ ಈಗಾಗಲೇ ನೀಡುತ್ತಿರುವ ವೇತನದಲ್ಲಿ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲದ್ದರಿಂದ ವೇತನ ಹೆಚ್ಚಿಸಬೇಕು ಎಂದು ಆಗ್ರಹಸಿದರು.

ಈ ಸುದ್ದಿ ಓದಿದ್ದೀರಾ? ಬಿಜೆಪಿ-ಆರ್‌ಎಸ್‌ಎಸ್‌ ಹುಟ್ಟಿನಿಂದಲೇ ಮೀಸಲಾತಿ, ಸಾಮಾಜಿಕ ನ್ಯಾಯದ ವಿರೋಧಿಗಳು: ಸಿದ್ದರಾಮಯ್ಯ

ಧರಣಿಯಲ್ಲಿ ಸಿದ್ರಾಮ್ ಕಟ್ಟಿ, ಭೀಮರಾಯ ನಗನೂರ್, ಮಲ್ಲಣ್ಣ ಕೊಡಚಿ, ಮಹೇಶ್ ಕೋಕಿಲೆ, ಮಲ್ಲಿಕಾರ್ಜುನ ಕೆಲ್ಲೂರ, ಅಶೋಕ ಹರವಾಳ, ಶಿವಶರಣಪಾ ಆಂದೋಲಾ, ಪರಮಾನಂದ ಯಲಗೋಡ, ದೌಲಪ್ಪಾ ಮದನ್, ದಾವಲಮಲೀಕ ಪ್ರಭುಲಿಂಗಯ್ಯ ಗಣಚಾರಿ, ಮನ್ಸೂರ ಪಟೇಲ, ಶಿವಕುಮಾರ ಸ್ವಾಮಿ, ಕಾಮಣ್ಣ ಪೂಜಾರಿ, ಸಾಯಬಣ್ಣ ಖಾದ್ಯಾಪೂರ, ಅಭಿಷೇಕ ನಂದಿ ಸುಪರ್‌ವೈಜರ್‌, ಭಗವಾನ ದೊಡ್ಡನಿ ಲೋಡರ್, ಬಸವರಾಜ ಧನ್ನಾಕರ್ ಲೋಡರ್, ಷಣ್ಮುಖಪ್ಪ ಕೋಳಕೂರ, ಮಲ್ಲಿನಾಥ ಹೆಗಡೆ ಸುಪರ್ ವೈಜರ್, ಧರ್ಮರಾಜ ಕುರಡೆಕರ್, ಸಾಯಿಕುಮಾರ ಡುಗನಕರ್, ಮಲ್ಲಿಕಾರ್ಜುನ, ಗಂಗಾರಾಮ ಯಮನಪ್ಪ, ಮಾನಪ್ಪ ಶಿಲ್ಪಿ, ಜಕುಮಾರ ನಂದಿ, ಮಲ್ಲಪ್ಪ ಜವಳಗಿ ಹಾಗೂ ಇತರರು ಭಾಗವಹಿಸಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಐಸಿಯುನಲ್ಲಿದ್ದ ರೋಗಿಗೆ ರಕ್ತ ಬರುವ ಹಾಗೆ ಥಳಿಸಿದ ಕೆ.ಸಿ.ಜನರಲ್ ಆಸ್ಪತ್ರೆ ಸಿಬ್ಬಂದಿ

ರಾಜ್ಯ ರಾಜಧಾನಿ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯ ಐಸಿಯುನಲ್ಲಿದ್ದ ರೋಗಿಯೊಬ್ಬರಿಗೆ ಆಸ್ಪತ್ರೆ ಸಿಬ್ಬಂದಿ...

ಉಡುಪಿ | ಎರಡು ತಂಡಗಳ ನಡುವೆ ಗ್ಯಾಂಗ್ ವಾರ್; ತಡವಾಗಿ ಬೆಳಕಿಗೆ ಬಂದ ಪ್ರಕರಣ

ಉಡುಪಿ ನಗರದಲ್ಲಿ ಎರಡು ತಂಡಗಳ ನಡುವೆ ಗ್ಯಾಂಗ್‌ ವಾ‌ರ್ ನಡೆದ ಪ್ರಕರಣ...

ಸರ್ಕಾರೇತರ ವಾಹನಗಳ ಮೇಲೆ ಸರ್ಕಾರಿ ಲಾಂಛನ, ಚಿಹ್ನೆ; 7 ವಿಶೇಷ ತಂಡ ರಚನೆ, ಕಾರ್ಯಾಚರಣೆಗಿಳಿದ ಇಲಾಖೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಾಹನಗಳನ್ನು ಹೊರತುಪಡಿಸಿ,...

ಪೊಲೀಸ್ ಸಿಬ್ಬಂದಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ವಾಸ್ಥ್ಯಕ್ಕಾಗಿ ಕ್ರಮ; ಪೊಲೀಸ್ ಆಯುಕ್ತ ಬಿ.ದಯಾನಂದ್

ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶೇ.87 ರಷ್ಟು ಪೊಲೀಸರು ಸ್ಥೂಲಕಾಯ, ಬೊಜ್ಜು ಅಥವಾ ಕಡಿಮೆ...