ಧಾರವಾಡ | ಮಹಾನಗರ ಪಾಲಿಕೆ ಇಂಜಿನಿಯರ್‌ ಸಾವು; ಶವವಿಟ್ಟು ಧರಣಿ

Date:

  • ಎಲ್ ಆ್ಯಂಡ್ ಟಿ ಕಂಪನಿ ಒತ್ತಡ ಸಹಿಸಲಾಗದೆ ಸಾವನ್ನಪ್ಪಿದ ಆರೋಪ
  • ಜನಜಾಗೃತಿ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟನೆ

ಕಳೆದ ಕೆಲವು ವರ್ಷಗಳಿಂದ ಎಲ್ ಆ್ಯಂಡ್ ಟಿ ಕಂಪನಿ ನೀರು ಸರಬರಾಜು ನೋಡಿಕೊಳ್ಳುತ್ತಿದ್ದ ಇಂಜಿನಿಯರ್‌ರೊಬ್ಬರು ಕಂಪನಿಯ ಕೆಲಸದ ಒತ್ತಡದಿಂದ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಕಂಪನಿಯೇ ಹೊಣೆ ಎಂದು ಆರೋಪಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಎದುರು ಇಂಜಿನಿಯರ್‌ ಮೃತದೇಹವಿಟ್ಟು ಪ್ರತಿಭಟನೆ ನಡೆಸಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ.

ಪಾಲಿಕೆಯು ನಗರದ ಹಲವು ಭಾಗಗಳಿಗೆ ನೀರು ಸರಬರಾಜು ಮಾಡಲು ಎಲ್ ಆ್ಯಂಡ್ ಟಿ ಕಂಪನಿಗೆ ಗುತ್ತಿಗೆ ನೀಡಿದೆ. ಕಂಪನಿಯಲ್ಲಿ ಕಳೆದ 2 ವರ್ಷಗಳಿಂದ ಅರುಣ ಯಂಡಿಗೇರಿ ಎಂಬುವವರ ಇಂಜಿನಿಯರ್‌ ಆಗಿ ಸೇವೆ ಸಲ್ಲಿಸುತ್ತಿದ್ದರು. ಗುರುವಾರ ಕೆಲಸಕ್ಕೆ ತೆರಳಿದ್ದಾಗ ಅವರಿಗೆ ಹೃದಯಾಘಾತವಾಗಿತ್ತು.

ಕೂಡಲೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಸುದ್ದಿ ತಿಳಿದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ನಾಗರಾಜ ಕಿರಣಗಿ ಸ್ಥಳಕ್ಕೆ ತೆರಳಿದ್ದಾರೆ. ಅವರ ಸಾವಿಗೆ ಕಂಪನಿಯೇ ಕಾರಣವೆಂದು ಆರೋಪಿಸಿ ಪಾಲಿಕೆ ಮುಂಭಾಗ ಇಂಜಿನಿಯರ್‌ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಇಂಜಿನಿಯರ್ ಸಾವಿನ ಹೊಣೆಯನ್ನು ಎಲ್ ಆಂಡ್ ಟಿ ಕಂಪನಿ, ಮಹಾನಗರ ಪಾಲಿಕೆ ಹಾಗೂ ಕೆ.ಯು.ಐ.ಡಿ.ಎಫ್.ಸಿ ಹೊರಬೇಕು ಎಂದು ಘೋಷಣೆ ಕೂಗಿದ್ದಾರೆ.

ಪ್ರತಿಭಟನೆ ನೇತೃತ್ವ ವಹಿಸಿದ್ದ ಬಸವರಾಜ ಕೊರವರ ಮಾತನಾಡಿ, “ಎಲ್ ಆಂಡ್ ಟಿ‌ ಕಂಪನಿಯ ಕೆಲಸದ ಒತ್ತಡಕ್ಕೆ ಈಗಾಗಲೇ 3 ಜನ ಬಲಿಯಾಗಿದ್ದಾರೆ. ಆದರೆ, ಯಾವ ಉದ್ಯೋಗಿಗಳಿಗೂ ಈವರೆಗೂ ನೇಮಕಾತಿ ಪತ್ರ, ಪಿಎಫ್ ಹಾಗೂ ಇ.ಎಸ್.ಐ ಸೌಲಭ್ಯ ನೀಡಿಲ್ಲ. ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಇಂಜಿನಿಯರ್ ಅರುಣ್ ಹೃದಯಾಘಾತದಿಂದ ಸಾವನ್ನಪ್ಪಿದರೂ ಯಾರೊಬ್ಬರೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಆತನ ಸಾವಿಗೆ ನಾವುಗಳ್ಯಾರು ಹೊಣೆಗಾರರಲ್ಲ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ” ಎಂದು ಕಿಡಿ ಕಾರಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಮೇಯರ್ ಹಾಗೂ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ಬಸವರಾಜ್, “ನಾಳೆ ನಮಗೆ ಇದು ಸಂಬಂಧಿಸಿಲ್ಲ ಎಂದು ಕೈ ಎತ್ತಬೇಡಿ. ಈಗಾಗಲೇ 82 ನೌಕರರ ‌ಮರುನೇಮಕ ವಿಚಾರದಲ್ಲಿ ಅನ್ಯಾಯ ಎಸಗಲಾಗಿದೆ” ಎಂದು ತರಾಟೆಗೆ ತೆಗೆದುಕೊಂಡರು.

ಉಪಾಧ್ಯಕ್ಷ ನಾಗರಾಜ ಕಿರಣಗಿ ಮಾತನಾಡಿ, “ಬಾಳಿ ಬದುಕಬೇಕಾಗಿದ್ದ ಯುವ ಇಂಜಿನಿಯರ್ ಅರುಣ ಅವರ ಕುಟುಂಬಕ್ಕೆ ಕನಿಷ್ಟ 10 ಲಕ್ಷ ಪರಿಹಾರ ನೀಡಬೇಕು, ಆತನ ಸಾವಿಗೆ ಎಲ್ ಆಂಡ್ ಟಿ, ಮಹಾನಗರ ಪಾಲಿಕೆ ಹಾಗೂ ಕೆ.ಯು.ಐ.ಡಿ.ಎಫ್.ಸಿ ಸಮಾನ ಹೊಣೆ” ಎಂದು ದೂರಿದರು.

ಪ್ರತಿಭಟನಕಾರರ ಮನವೋಲಿಸಿದ ಮೇಯರ್ ಈರೇಶ ಅಂಚಟಗೇರಿ ಮತ್ತು ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಅವರು ಕಂಪನಿ ವತಿಯಿಂದ ಮೃತನ ಕುಟುಂಬಕ್ಕೆ 2.5 ಲಕ್ಷ ರೂ. ಪರಿಹಾರ ಹಾಗೂ ಪತ್ನಿಗೆ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆದು ಮೃತನ ಶವವನ್ನು ಮುಂದಿನ ಕ್ರಿಯೆಗೆ ಕೊಂಡೊಯ್ದರು.

ಪ್ರತಿಭಟನೆ ವೇಳೆ ಕರ್ನಾಟಕ ಥಿಂಕರ್ಸ್ ಪೋರಮ್ ಅಧ್ಯಕ್ಷ ಪಿ.ಎಚ್. ನೀರಲಕೇರಿ, ಮಹಾನಗರ ಪಾಲಿಕೆ ಸದಸ್ಯ ದೀಪಾ ಸಂತೋಷ ನೀರಲಕಟ್ಟಿ, ಶಂಭು ಸಾಲಮನಿ, ಇಮ್ರಾನ್ ಯಲಿಗಾರ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ನೀರು ಸರಬರಾಜು ನೌಕರರು ಪಾಲ್ಗೊಂಡು ಹೋರಾಟಕ್ಕೆ ತಮ್ಮ ಬೆಂಬಲ ನೀಡಿ ಆಕ್ರೋಶ ವ್ಯಕ್ತಪಡಿಸಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಲಮೇಲ | ಸಾಮಾನ್ಯರಿಗೆ ಅರ್ಥವಾಗುವ ಭಾಷೆಯ ಸಾಹಿತ್ಯ ಕನಕದಾಸರದ್ದು: ಹಾವಣ್ಣ

'ತಮ್ಮದೇ ಆದಂತ ಸಾಹಿತ್ಯದ ವಚನಗಳ ಮೂಲಕ ಜಾತಿ, ಮತ, ಕುಲಗಳ ಭೇದಭಾವವನ್ನು...

ದಾವಣಗೆರೆ | ಸಾಮಾಜಿಕ ಕಾರ್ಯಕರ್ತರ ಹೆಸರಲ್ಲಿ ಬೆದರಿಕೆ ಹಾಕಿದವರ ಬಂಧಿಸುವಂತೆ ಒತ್ತಾಯ

ಕನ್ನಡ ಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರೆಂದು ಹೇಳಿಕೊಂಡು ನಮ್ಮ ಶಾಲೆಯ ವಿರುದ್ಧ...

ಚಿತ್ರದುರ್ಗ | ಜಿಲ್ಲಾಸ್ಪತ್ರೆಯಲ್ಲಿ ಮಂಗಗಳ ಕಾಟ, ರೋಗಿಗಳು ಹೈರಾಣು

ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ, ಔಷಧಗಳ ಕೊರತೆ...

ಗದಗ | ಕಲಬುರಗಿಯಲ್ಲಿ ರಾಜ್ಯ ಮಟ್ಟದ ವಿದ್ಯಾರ್ಥಿನಿಯರ ಸಮಾವೇಶ

ಶಿಕ್ಷಣದ ಹಕ್ಕಿಗಾಗಿ, ಖಾಸಗೀಕರಣ ವಿರೋಧಿಸಿ ವಿದ್ಯಾರ್ಥಿನಿಯರಿಗೆ ಸಮಾನ ಗುಣಮಟ್ಟದ ಶಿಕ್ಷಣ ಹಾಗೂ...