ಧಾರವಾಡ | ತಿಪ್ಪೆಗಳಾಗಿದ್ದ ಕೆರೆಗಳಿಗೆ ಜೀವ ಕಳೆ ತುಂಬಿದ ಸ್ಥಳೀಯರು

Date:

ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿಯಲ್ಲಿ 17 ಎಕರೆ ವಿಸ್ತಾರದಲ್ಲಿ ಎರಡು ಕೆರೆಗಳಿವೆ. ಅವುಗಳ ಒಟ್ಟು 10 ಎಕರೆ ಕೆರೆ ಅಂಗಳ ಪಾಳು ಬಿದ್ದಿತ್ತು. ಸದ್ಯ ಗ್ರಾಮದ ದೊಡ್ಡಕೆರೆ ಮತ್ತು ಸಣ್ಣಕೆರೆಗಳು ಮತ್ತೆ ಜೀವ ಕಳೆ ಪಡೆದುಕೊಳ್ಳುತ್ತಿದೆ.

ಗ್ರಾಮಸ್ಥರ ನೆರವಿನಿಂದ ಗ್ರಾಮ ಪಂಚಾಯತಿಯವರು 13.85 ಲಕ್ಷ ರೂ. ವೆಚ್ಚದಲ್ಲಿ ಬ್ಯಾಹಟ್ಟಿಯ ಕೆರೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಹೂಳು ತೆಗೆದಿದ್ದಾರೆ ಎಂದು ಬ್ಯಾಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾದೇವಿ ಮತ್ತು ಉಪಾಧ್ಯಕ್ಷೆ ಮಧು ಕಲ್ಲಪ್ಪ ಮಾದ್ಯಮದವರಿಗೆ ತಿಳಿಸಿದ್ದಾರೆ.

ಈ ಯೋಜನೆಯಡಿ ಕೆರೆ ಹೂಳೆತ್ತುವ ಕೆಲಸ ಆರಂಭವಾದ ಬಳಿಕ ಗ್ರಾಮದಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಿದ್ದು, ಗ್ರಾಮದಲ್ಲಿನ ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕೆರೆಯಲ್ಲಿನ ಫಲವತ್ತಾದ ಮಣ್ಣನ್ನು ಟ್ರ್ಯಾಕ್ಟರ್‌ಗಳ ಮೂಲಕ ರೈತರು ತಮ್ಮ ಜಮೀನುಗಳಿಗೆ ಹಾಕಿಕೊಳ್ಳುತ್ತಿದ್ದಾರೆ. ಒಂದೂವರೆ ತಿಂಗಳಲ್ಲಿ ಒಟ್ಟು 24 ಸಾವಿರ ಟ್ರ್ಯಾಕ್ಟರ್‌ ಮಣ್ಣು ಕೆರೆ ಅಂಗಳದಿಂದ ಎತ್ತಲಾಗಿದೆ. ಇದಕ್ಕಾಗಿ ರೈತರಿಂದ ಆಗಿರುವ ವೆಚ್ಚ 12 ಲಕ್ಷ ರೂ. ಎಂದು ಅವರು ತಿಳಿಸಿದರು.

ಸುಮಾರು 200ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ರಾತ್ರಿಯಿಂದಲೇ ಸರದಿ ನಿಂತುಕೊಂಡು ಮಣ್ಣು ತೆಗೆದುಕೊಂಡು ಹೋಗಿವೆ. 2023 ಡಿಸೆಂಬರ್‌ 5ರಿಂದ ಕೆರೆಗಳ ಹೂಳು ಎತ್ತುವ ಕೆಲಸ ಆರಂಭಿಸಲಾಗಿತ್ತು. 38 ದಿನಗಳಲ್ಲಿ ನಾಲ್ಕು ಅಡಿ ಹೂಳೆತ್ತಲಾಗಿದೆ. ದೊಡ್ಡ ಕೆರೆ ತುಂಬಿದ ಬಳಿಕ ಸಣ್ಣ ಕೆರೆಗೆ ಮಳೆನೀರು ಹಳ್ಳದ ಮೂಲಕ ಹರಿದು ಬರುವ ವ್ಯವಸ್ಥೆ ಮಾಡಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಕೆರೆಗಳನ್ನು ಅಭಿವೃದ್ಧಿ ಮಾಡುವ ಮೊದಲು ಬ್ಯಾಹಟ್ಟಯಲ್ಲಿ 18 ರೈತರು ಒಳಗೊಂಡ ಕೆರೆ ಅಭಿವೃದ್ಧಿ ಸಮಿತಿ ರಚಿಸಲಾಗಿತ್ತು. ನಂತರ ಗ್ರಾಮ ಪಂಚಾಯಿತಿಯಿಂದ ಅನುಮೋದನೆ, ಸಹಕಾರ ಪಡೆದು, ಕೆರೆ ಹೂಳೆತ್ತಲು ಮಾತ್ರ ಗ್ರಾಮಾಭಿವೃದ್ಧಿ ಯೋಜನೆಯಿಂದ ಧನ ಸಹಾಯ ಮಾಡುವ ಬಗ್ಗೆ ತಿಳಿಸಿ, ಮಣ್ಣಿನ ಸಾಗಣೆ ಸ್ವಂತ ಖರ್ಚಿನಲ್ಲಿ ನಡೆಯಬೇಕು ಎಂದು ಹೇಳಿ, ಎಲ್ಲರ ಒಪ್ಪಿಗೆಯ ನಂತರ ಕಾರ್ಯಾರಂಭಿಸಿದ್ದರು ಗ್ರಾಮಸ್ಥರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಅರೆಬೆಂದ ಊಟ ಸೇವಿಸಿ ವಸತಿ ನಿಲಯದ ವಿದ್ಯಾರ್ಥಿನಿಯರು ಅಸ್ವಸ್ಥ

ಅಂಬೇಡ್ಕರ್ ವಸತಿ ನಿಲಯವೊಂದರಲ್ಲಿ ಅರೆಬೆಂದ ಊಟ ಸೇವಿಸಿ 24 ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ...

ಲೋಕಸಭಾ ಚುನಾವಣೆ | ಮೊದಲ ಹಂತದ ಮತದಾನ ದಿನ 2,172 ಪ್ರಕರಣ ದಾಖಲು

ಲೋಕಸಭಾ ಚುನಾವಣೆ ಹಿನ್ನೆಲೆ, ಏ.26 ರಂದು ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ...

ಚಿಕ್ಕಮಗಳೂರು | ಹಿಂದು ಕಾರ್ಯಕರ್ತನ ಮೇಲೆ ಬಿಜೆಪಿಗರ ಹಲ್ಲೆ

ಹಿಂದುತ್ವವಾದಿ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿ, ಥಳಿಸಿರುವ ಘಟನೆ...

ಮಂಡ್ಯ | 8,000 ಕಿ.ಮೀ ದೂರದಿಂದ ಬಂದು ಮತದಾನ ಮಾಡಿದ ಯುವತಿ!

ಯುವತಿಯೊಬ್ಬರು ಬರೋಬರಿ 8,000 ಕಿ.ಮೀ ದೂರದ ಲಂಡನ್‌ನಿಂದ ಮಂಡ್ಯಕ್ಕೆ ಬಂದು ಮತದಾನ...