ಮದ್ಯಪಾನ ಹಾಗೂ ದುಶ್ಚಟ ನಿವಾರಣೆಗಾಗಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಡಾ. ಆರ್.ಬಿ ಪಾಟೀಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸ್ವಾಭಿಮಾನ ಫೌಂಡೇಶನ್ ಒಗ್ಗೂಡಿ ಜಾಗೃತಿ ಶಿಬಿರ ನಡೆಸಿವೆ.
ಶಿಬಿರದಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಹೆಸರಾಂತ ಮಾದಕವ್ಯಸನ ವಿಮುಕ್ತಿ ತಜ್ಞ ಡಾ. ಸುಧೀಂದ್ರ ಹುದ್ದಾರ ಮತ್ತು ತುರ್ತು ಔಷಧ ತಜ್ಞೆ ಡಾ.ಸೋನಾಲಿ ಪಾಟೀಲ ಯಾವಗಲ್ ಅವರು ವೈದ್ಯಕೀಯ ಚಿಕಿತ್ಸೆಯ ಮೂಲಕ ಮಾದಕ ವ್ಯಸನಗಳ ಬಗ್ಗೆ, ಅವುಗಳಿಂದ ಮುಕ್ತರಾಗುವ ವಿಧಾನಗಳ ಕುರಿತು ಮಾಹಿತಿ ನೀಡಿದರು.
ಎಮ್.ಎಮ್ ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ವೈದ್ಯರು ಉಚಿತ ಕಣ್ಣಿನ ತಪಾಸಣೆ ನಡೆಸಿದರು. ಡಾ. ಆರ್ ಬಿ ಪಾಟೀಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ರಕ್ತದೊತ್ತಡ, ಮಧುಮೇಹ, ಕೈಕಾಲು ನೋವು, ಮಂಡಿನೋವು, ಜ್ವರ, ನೆಗಡಿ, ಮಹಿಳೆಯರ ಆರೋಗ್ಯ ಮುಂತಾದವುಗಳ ಕುರಿತು ಆರೋಗ್ಯ ತಪಾಸಣೆ ನಡೆಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಆಸ್ಪತ್ರೆಯ ಡಾ. ಬಿ.ಆರ್ ಪಾಟೀಲ್, ಅಶೋಕನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುದರ್ಶನ, ಮಂಜುನಾಥ, ಹಿರಿಯ ಮುಖಂಡರಾದ ಸಿದ್ದಣ್ಣ ಮೊಗಲಿಶೆಟ್ಟರ್, ಲಕ್ಷ್ಮಣ ಬಕ್ಕಾಯ, ಡಾ.ಸಿ ತ್ಯಾಗರಾಜ್, ಡಾ.ಚವ್ಹಾಣ, ಗುರುಮೂರ್ತಿ ಬೆಂಗಳೂರು, ಗೋವಿಂದ ಬೆಲ್ಡೋಣಿ, ಸ್ವಾಭಿಮಾನ ಫೌಂಡೇಶನ್ ಅಧ್ಯಕ್ಷ ಮಂಜುನಾಥ ಕೊಂಡಪಲ್ಲಿ ಸೇರಿದಂತೆ ಹಲವರು ಇದ್ದರು.