ಸಂಸತ್ ವಿಶೇಷ ಅಧಿವೇಶನ | ಹಿಂದಿ ಕವನ ವಾಚಿಸಿ ಕೇಂದ್ರ ಸರ್ಕಾರಕ್ಕೆ ಟಾಂಗ್ ಕೊಟ್ಟ ಮಲ್ಲಿಕಾರ್ಜುನ ಖರ್ಗೆ

Date:

‘ಜಿ 20 ಶೃಂಗಸಭೆಯ’ ಗಣ್ಯರಿಗೆ ಆಯೋಜಿಸಲಾಗಿದ್ದ ಔತಣಕೂಟಕ್ಕೆ ರಾಷ್ಟ್ರಪತಿ ಭವನದಿಂದ ನೀಡಲಾದ ಆಹ್ವಾನ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್‌ ಆಫ್‌ ಇಂಡಿಯಾ’ ಬದಲಿಗೆ ‘ಪ್ರೆಸಿಡೆಂಟ್‌ ಆಫ್‌ ಭಾರತ್‌’ ಎಂದು ಉಲ್ಲೇಖಗೊಂಡ ಬಳಿಕ ಉದ್ಭವಗೊಂಡ ದೇಶದ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ, ಸಂಸತ್ ವಿಶೇಷ ಅಧಿವೇಶನದಲ್ಲಿ ಕೇಂದ್ರಕ್ಕೆ ಹಿಂದಿಯಲ್ಲಿ ಕವನ ವಾಚಿಸುವ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಟಾಂಗ್ ನೀಡಿದ್ದಾರೆ.

ಹಿಂದಿಯಲ್ಲಿ ಕವನ ವಾಚಿಸಿದ ಮಲ್ಲಿಕಾರ್ಜುನ ಖರ್ಗೆ, ಹೆಸರು ಬದಲಾವಣೆಯಲ್ಲದೆ ನಿರುದ್ಯೋಗ ಸಮಸ್ಯೆ, ದೇಶದಲ್ಲಿ ದ್ವೇಷ ಹೆಚ್ಚುತ್ತಿರುವ ಬಗ್ಗೆ, ಪ್ರಧಾನಿ ಮೋದಿಯವರ ಅಧಿಕಾರದ ಲಾಲಸೆ, ಬೆದರಿಕೆ ನೀಡುತ್ತಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಖರ್ಗೆಯವರ ಈ ಕವನಕ್ಕೆ ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷ ಜಗದೀಪ್‌ ಧನ್‌ಕರ್ ಕೂಡ ಗಮನವಿಟ್ಟು ಕೇಳಿದ್ದು ವಿಶೇಷವಾದರೆ, ವಿಪಕ್ಷಗಳ ಸದಸ್ಯರು, ‘ವಾಹ್, ವಾಹ್’ ಎಂದು ಮೇಜು ಕುಟ್ಟಿ ಮೆಚ್ಚುಗೆ ಸೂಚಿಸಿದರು.

ಸಂಸತ್ತಿನ ವಿಶೇಷ ಅಧಿವೇಶನವು ಹಳೆಯ ಸಂಸತ್ ಕಟ್ಟಡದಲ್ಲಿ ಸೋಮವಾರ ಆರಂಭಗೊಂಡಿದೆ. ನಾಳೆಯಿಂದ(ಸೆ.19) ಹೊಸ ಸಂಸತ್ ಭವನದಲ್ಲಿ ಅಧಿವೇಶನ ಮುಂದುವರಿಯಲಿದೆ. ಸೆ.22ರವರೆಗೆ ವಿಶೇಷ ಅಧಿವೇಶನವು ನಡೆಯಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಲ್ಲಿಕಾರ್ಜುನ ಖರ್ಗೆ ವಾಚಿಸಿದ ಹಿಂದಿ ಕವನದ ಕನ್ನಡಾನುವಾದ ಹೀಗಿದೆ

ಬದಲಾಯಿಸುವುದಾದರೆ ಈಗಿನ ಪರಿಸ್ಥಿತಿಯನ್ನು ಬದಲಾಯಿಸಿ,
ಹೀಗೆ ಹೆಸರು ಬದಲಾಯಿಸುವುದರಿಂದ ಏನು ಪ್ರಯೋಜನ?

ಕೊಡುವುದಾದರೆ ಯುವಕರಿಗೆ ಉದ್ಯೋಗ ಕೊಡಿ
ಎಲ್ಲರನ್ನೂ ನಿರುದ್ಯೋಗಿಗಳನ್ನಾಗಿ ಮಾಡುವುದರಿಂದ ಏನು ಪ್ರಯೋಜನ?

ಹೃದಯವನ್ನು ಸ್ವಲ್ಪ ವಿಶಾಲವಾಗಿಸಿ ನೋಡಿ,
ಜನರನ್ನು ಕೊಲ್ಲುವುದರಿಂದ ಏನು ಪ್ರಯೋಜನ?

ಏನೂ ಮಾಡಲು ಸಾಧ್ಯವಾಗದಿದ್ದರೆ, ಕುರ್ಚಿಯನ್ನು ಬಿಟ್ಟು ಬಿಡಿ,
ಮಾತು- ಮಾತಿಗೆ ಹೆದರುವುದರಿಂದ ಏನು ಪ್ರಯೋಜನ?

ನಿಮ್ಮ ಆಡಳಿತದ ಬಗ್ಗೆ ನಿಮಗೆ ಮಾತ್ರ ಹೆಮ್ಮೆ ಇದೆ,
ಜನರನ್ನು ಹೆದರಿಸಿ- ಬೆದರಿಸುವುದರಿಂದ ಏನು ಪ್ರಯೋಜನ?

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ | ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸುತ್ತೇವೆ: ಸಿದ್ದರಾಮಯ್ಯ

ಬೆಂಗಳೂರಿನ ದಿ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿರುವ ಸ್ಫೋಟದ ಬಗ್ಗೆ ತನಿಖೆ ನಡೆಯುತ್ತಿದೆ....

‘ಹಕ್ಕಿ ಗೂಡು ಕಟ್ಟಿದ್ದಂತೆ ಮನೆ ನಿರ್ಮಿಸಿದ್ದೆವು’; ಸಿಲ್ಕ್ಯಾರಾ ‘ಹೀರೋ’ ಹಸನ್‌ ಪತ್ನಿಯ ಅಳಲು

ಸಿಲ್ಕ್ಯಾರಾ ಕಾರ್ಮಿಕರ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರ್‍ಯಾಟ್ ಹೋಲ್ ಮೈನರ್ಸ್...

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ | ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಕೇಂದ್ರದ ತಡೆ

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಬೇಕಿದ್ದ ದೆಹಲಿ ರೈತ ಹೋರಾಟದ ಕುರಿತ ‘ಕಿಸಾನ್...

ಚೀನಾದ ಒಪ್ಪಂದ ರದ್ದು; ಭಾರತದೊಂದಿಗೆ ಶ್ರೀಲಂಕಾ ಇಂಧನ ಒಪ್ಪಂದ

ಚೀನಾದ ಸಂಸ್ಥೆಯೊಂದು ಪಡೆದ ಟೆಂಡರ್‌ಅನ್ನು ರದ್ದುಗೊಳಿಸಿರುವ ಶ್ರೀಲಂಕಾ, ಮೂರು ಸೌರ ಮತ್ತು...