ಧಾರವಾಡ | ಮದ್ಯಪಾನ ಹಾಗೂ ದುಶ್ಚಟ ನಿವಾರಣೆಗಾಗಿ ವಿಶೇಷ ಜಾಗೃತಿ ಶಿಬಿರ

Date:

ಮದ್ಯಪಾನ ಹಾಗೂ ದುಶ್ಚಟ ನಿವಾರಣೆಗಾಗಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಡಾ. ಆರ್.ಬಿ ಪಾಟೀಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸ್ವಾಭಿಮಾನ ಫೌಂಡೇಶನ್ ಒಗ್ಗೂಡಿ ಜಾಗೃತಿ ಶಿಬಿರ ನಡೆಸಿವೆ.

ಶಿಬಿರದಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಹೆಸರಾಂತ ಮಾದಕವ್ಯಸನ ವಿಮುಕ್ತಿ ತಜ್ಞ ಡಾ. ಸುಧೀಂದ್ರ ಹುದ್ದಾರ ಮತ್ತು ತುರ್ತು ಔಷಧ ತಜ್ಞೆ ಡಾ.ಸೋನಾಲಿ ಪಾಟೀಲ ಯಾವಗಲ್ ಅವರು ವೈದ್ಯಕೀಯ ಚಿಕಿತ್ಸೆಯ ಮೂಲಕ ಮಾದಕ ವ್ಯಸನಗಳ ಬಗ್ಗೆ, ಅವುಗಳಿಂದ ಮುಕ್ತರಾಗುವ ವಿಧಾನಗಳ ಕುರಿತು ಮಾಹಿತಿ ನೀಡಿದರು.

ಎಮ್.ಎಮ್ ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ವೈದ್ಯರು ಉಚಿತ ಕಣ್ಣಿನ ತಪಾಸಣೆ ನಡೆಸಿದರು. ಡಾ. ಆರ್ ಬಿ ಪಾಟೀಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ರಕ್ತದೊತ್ತಡ, ಮಧುಮೇಹ, ಕೈಕಾಲು ನೋವು, ಮಂಡಿನೋವು, ಜ್ವರ, ನೆಗಡಿ, ಮಹಿಳೆಯರ ಆರೋಗ್ಯ ಮುಂತಾದವುಗಳ ಕುರಿತು ಆರೋಗ್ಯ ತಪಾಸಣೆ ನಡೆಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾರ್ಯಕ್ರಮದಲ್ಲಿ ಮಾತನಾಡಿದ ಆಸ್ಪತ್ರೆಯ ಡಾ. ಬಿ.ಆರ್ ಪಾಟೀಲ್, ಅಶೋಕನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುದರ್ಶನ, ಮಂಜುನಾಥ, ಹಿರಿಯ ಮುಖಂಡರಾದ ಸಿದ್ದಣ್ಣ ಮೊಗಲಿಶೆಟ್ಟರ್, ಲಕ್ಷ್ಮಣ ಬಕ್ಕಾಯ, ಡಾ.ಸಿ ತ್ಯಾಗರಾಜ್, ಡಾ.ಚವ್ಹಾಣ, ಗುರುಮೂರ್ತಿ ಬೆಂಗಳೂರು, ಗೋವಿಂದ ಬೆಲ್ಡೋಣಿ, ಸ್ವಾಭಿಮಾನ ಫೌಂಡೇಶನ್ ಅಧ್ಯಕ್ಷ ಮಂಜುನಾಥ ಕೊಂಡಪಲ್ಲಿ ಸೇರಿದಂತೆ ಹಲವರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

 ಧಾರವಾಡ | ಪ್ರಜಾಪ್ರಭುತ್ವದ ಪ್ರಥಮ ರೂವಾರಿ ಬಸವಣ್ಣ: ಬಸವರಾಜ ಹೊರಟ್ಟಿ

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಅನುಷ್ಠಾನಗೊಳಿಸಿ, ಜಗತ್ತಿಗೆ...

ವಾಕ್ ಸ್ವಾತಂತ್ರ್ಯ ದುರ್ಬಳಕೆಯಲ್ಲಿ ಬಿಜೆಪಿಯೇ ನಂ.1: ಸಚಿವ ಸಂತೋಷ ಲಾಡ್

ಸಂವಿಧಾನದ ಮೂಲಕ ಅಂಬೇಡ್ಕರ್ ವಾಕ್‌ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಆದರೆ, ವಾಕ್‌ ಸ್ವಾತಂತ್ರ್ಯವನ್ನು...

ಧಾರವಾಡ | ಸಂವಿಧಾನ ಶ್ರೇಷ್ಠತೆ ಎತ್ತಿಹಿಡಿದು, ಸಂವಿಧಾನದ ಆಶಯದಂತೆ ನಡೆಯುವುದು ನಮ್ಮ ಕರ್ತವ್ಯ; ಡಿಸಿ

ಭಾರತ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠವಾದದ್ದು. ಅದರ ಶ್ರೇಷ್ಠತೆಯನ್ನು ಎತ್ತಿಹಿಡಿದು ಸಂವಿಧಾನದ ಆಶಯದಂತೆ...

ಧಾರವಾಡ | ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮುಸ್ಲಿಮರೂ ಹೆಚ್ಚಾಗಿ ಪಾಲ್ಗೊಂಡಿದ್ದರು: ಸಚಿವ ಸಂತೋಷ್ ಲಾಡ್

ಭಾರತದಿಂದ ಬ್ರಿಟಿಷರನ್ನು ಓಡಿಸುವ ಹೋರಾಟದಲ್ಲಿ ಮುಸ್ಲಿಂ ಸಮುದಾಯದವರೂ ಹೆಚ್ಚಾಗಿ ಪಾಲ್ಗೊಂಡಿದ್ದಾರೆ. ಸ್ವಾತಂತ್ರ್ಯ...