“ಜೋಗಿ ಬುಡಕಟ್ಟು ಜನಾಂಗವು ನಿಸರ್ಗದ ಜೊತೆ ಅವಿನಾಭಾವ ಸಂಬಂಧದೊಂದಿಗೆ ಕಲಾವಿದರು ಜನಪದ ಕಲಾ ಪ್ರದರ್ಶನಗಳಲ್ಲಿ ಪ್ರಾವಿಣ್ಯತೆ ಹೊಂದಿದವರಾಗಿದ್ದಾರೆ” ಎಂದು ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಆನಂದಪ್ಪ ಬಿ. ಎಚ್. (ಜೋಗಿ) ಅಭಿಪ್ರಾಯಪಟ್ಟರು.
ಧಾರವಾಡ ಪಟ್ಟಣದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕಲಾ ಮತ್ತು ಜಾನಪದ ಮಂಟಪದ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾದರು.
“ಬುಡಕಟ್ಟು ಜೋಗಿ ಸಮುದಾಯದ ಅಸ್ಮಿತೆ’ ವಿಷಯ ಕುರಿತು ಮಾತನಾಡಿದ ಅವರು, “ಜೋಗಿಗಳಲ್ಲಿ 27 ಪ್ರಬೇದಗಳು, ಅವರು ನಾಥ ಸಂಪ್ರದಾಯಸ್ಥರು. ಕಸುಬಿಗೆ ಅನುಗುಣವಾಗಿ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದು, ಪಾರಂಪರಿಕ ಜ್ಞಾನ ಹೊಂದಿದವರಾಗಿದ್ದಾರೆ. ಅವರಲ್ಲಿ ಕಲೆ ಮತ್ತು ದೇಶಿ ಸಂಸ್ಕೃತಿ ಗಟ್ಟಿಯಾಗಿ ಉಳಿದಿದೆ. ಅದು ವ್ಯಕ್ತಿಗತವಾಗಿರದೆ ವಿಶಾಲತೆಯಿಂದ ಕೂಡಿದ್ದಾಗಿದೆ. ಅಂತಹ ಸಂಸ್ಕೃತಿ ಮತ್ತು ದೇಶಿ ಜ್ಞಾನದ ಮೆಲುಕು ಹಾಕುವುದರಿಂದ ನಮ್ಮ ಜೀವನ ಸಾರ್ಥಕ” ಎಂದರು.
“ಬುಡಕಟ್ಟು ಜೋಗಿ ಜನಾಂಗದವರು ಮೂಲ ಪರಂಪರೆಗಣುವಾಗಿ ನಾಡು, ನುಡಿ, ನೆಲ, ಜಲ, ಕಲೆ ವಿಷಯಾಧಾರಿತ ಹಾಡುಗಳನ್ನು ಕಟ್ಟಿ ಕೊಟ್ಟಿದ್ದಾರೆ. ಜನಪದ ಸಾಹಿತ್ಯ ನೀತಿಯನ್ನು ಕಲಿಸುತ್ತದೆ ಎಂದರು. ವೇಷ ಭೂಷಣದೊಂದಿಗೆ ನಾಡಿಗೆ, ಕುಟುಂಬಕ್ಕೆ ಸಂಬAಧಿಸಿದ ಹಾಡುಗಳನ್ನು ಹೃದಯ ಸ್ಪರ್ಶಿಯಾಗಿ ಪ್ರಸ್ತುತಪಡಿಸಿ, ಜನಪದ ಕಲಾವಿದರಿಗೆ ಮಾಶಾಸನ ಹೆಚ್ಚಳ ಸೇರಿದಂತೆ ಸಹಕಾರ, ಪೋಷಣೆ ಸರಕಾರ ಹಾಗೂ ಸಮಾಜದಿಂದ ಇನ್ನೂಹೆಚ್ಚು ಸಿಗಬೇಕಾಗಿದೆ” ಎಂದರು.
ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ ಅಧ್ಯಕ್ಷತೆ ವಹಿಸಿ ಮಾತನಾಡಿ, “ಜನಪದ ಸಾಹಿತ್ಯ ಅನುಭವ ಹಾಗೂ ಸತ್ಯದಿಂದ ಕೂಡಿದ್ದು, ಕಲಾವಿದರಲ್ಲಿ ಜಾತೀಯತೆ ಸಂಕುಚಿತತೆ ಇರುವುದಿಲ್ಲ. ಸಮಾಜ ಮುಖಿ ವ್ಯಕ್ತಿತ್ವವನ್ನು ಕಲೆ ಮೂಲಕ ಅವರಲ್ಲಿ ಕಾಣಬಹುದಾಗಿದೆ. ಜೋಗಿ ಜನಾಂಗ ಇಡೀ ಸಮಾಜಕ್ಕೆ ನೀಡಿದ ಜನಪದವಾಗಿದೆ” ಎಂದರು.
2025-26ನೇ ಸಾಲಿನ ಸಂಘದ ಕಲಾ ಮತ್ತು ಜಾನಪದ ಮಂಟಪದ ಸಲಹಾ ಸಮಿತಿ ಸದಸ್ಯರನ್ನು ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಗೌರವಿಸಿ ಪ್ರಮಾಣ ಪತ್ರ ವಿತರಿಸಿದರು.
ಶ್ರೀಮತಿ ಜಯಶ್ರೀ ಪಾಟೀಲ ಪ್ರಾರ್ಥಿಸಿದರು, ಭೀಮಪ್ಪ ಖಟಾವಿ ಸ್ವಾಗತಿಸಿದರು. ಸಂಚಾಲಕರಾದ ಡಾ. ಮಹೇಶ ಧ. ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಶ್ರೀನಿವಾಸ ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ ಆರ್. ಎಸ್. ಬಾಳನಗೌಡರ, ಮೋಹನ ಪಾಟೀಲ, ಗಣಪತಿ ಬಡಿಗೇರ, ಲಾಲಸಾಬ ಬೂದಿಹಾಳ, ಕಲ್ಲನಗೌಡ ಸಿದ್ಧಾಪೂರ, ಡಾ. ವೀಣಾ ಬಿರಾದಾರ, ಶ್ರೀಮತಿ ಶೋಭಾ ಸಜ್ಜನ, ಸದಾಶಿವ ಚೌಶೆಟ್ಟಿ, ಪ್ರಕಾಶ ಮಲ್ಲಿಗವಾಡ, ಬಿ. ಆಯ್. ಈಳಿಗೇರ, ಶಿವಣ್ಣ ಬೆಂಗೇರಿ, ಸಿದ್ಧರಾಮ ಹಿಪ್ಪರಗಿ, ಮಡಿವಾಳಪ್ಪ ಹೆಗ್ಗೇರಿ, ಎಂ. ಜಿ. ವಸ್ತçದ, ರಾಯ್ಕರ, ಗೌಳಿ ಸೇರಿದಂತೆ ಕಲಾವಿದರು ಮುಂತಾದವರು ಪಾಲ್ಗೊಂಡಿದ್ದರು.




