ಗದಗ | ಸಿಬ್ಬಂದಿ ಕೊರತೆ: ಮೃಗಾಲಯ ನಿರ್ವಹಣೆಗೆ ಸ್ವಯಂಸೇವಕರ ನೆರವಿಗೆ ಅಧಿಕಾರಿಗಳ ಮನವಿ

Date:

  • 20 ಮೃಗಾಲಯ ಪಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ
  • 30 ಸ್ವಯಂಸೇವಕರನ್ನು ಹುಡುಕುತ್ತಿರುವ ಅಧಿಕಾರಿಗಳು

ಗದಗ ಜಿಲ್ಲೆಯಲ್ಲಿರುವ ಬಿಂಕದಕಟ್ಟಿ ಮೃಗಾಲಯದಲ್ಲಿ ಸಿಬ್ಬಂದಿಗಳ ಕೊರತೆ ಉಂಟಾಗಿದೆ. ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲು ತಡವಾಗುತ್ತಿರುವ ಹಿನ್ನೆಲೆ, ಮೃಗಾಲಯದ ಕೆಲಸಗಳಲ್ಲಿ ಸ್ವಯಂಸೇವಕರು ತೊಡಗಿಸಿಕೊಳ್ಳಬಹುದು. ಶೀಘ್ರದಲ್ಲಿಯೇ ಸ್ವಯಂಸೇವಕರನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

“ಮೃಗಾಲಯಕ್ಕೆ 30 ಸ್ವಯಂಸೇವಕರನ್ನು ಹುಡುಕುತ್ತಿದ್ದೇವೆ. 18 ವರ್ಷ ಮೇಲ್ಪಟ್ಟ ಯುವಜನರು ಸ್ವಯಂಸೇವಕರಾಗಿ ಸೇರಿಕೊಳ್ಳಬಹುದು. ಆಯ್ಕೆಯಾದವರಿಗೆ ತರಬೇತಿ ನೀಡಲಾಗುತ್ತದೆ. ಪ್ರಾಣಿ ಪ್ರಿಯರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ಕೆ ಕೈಜೋಡಿಸಬೇಕು” ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

“ಸ್ವಯಂಸೇವಕರು ವಾರಾಂತ್ಯದಲ್ಲಿ ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಜೂ ಮತ್ತು ಪ್ರಾಣಿಗಳ ಬಗ್ಗೆ ಮಾರ್ಗದರ್ಶನ ನೀಡವ ಮತ್ತು ಇತರ ಚಟುವಟಿಕೆಗಳಲ್ಲಿ ಭಾವಹಿಸಬಹುದು. 100 ಗಂಟೆಗಳ ಸ್ವಯಂಸೇವಕ ಚಟುವಟಿಕೆಗಳನ್ನು ಪೂರ್ಣಗೊಳಿಸಿದ ನಂತರ ಅಭ್ಯರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈಗಾಗಲೇ 17 ಮಂದಿ ನೋಂದಣಿ ಮಾಡಿಕೊಂಡಿದ್ದು, ಮೊದಲ ತರಬೇತಿ ಕಾರ್ಯಕ್ರಮ ಆರಂಭಿಸಲು ಇನ್ನೂ 13 ಮಂದಿ ನೋಂದಣಿ ಮಾಡಿಕೊಳ್ಳುವ ಅಗತ್ಯವಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಸ್ತುತ 20 ಮೃಗಾಲಯ ಪಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೃಗಾಲಯದ ಮೂಲಗಳು ತಿಳಿಸಿವೆ. ಅಷ್ಟು ಮಂದಿಯಿಂದ ಮೃಗಾಲಯದ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಕೆಲಸದ ಹೊರೆಯಿಂದಾಗಿ ಪ್ರಾಣಿಗಳನ್ನು ಯಾವಾಗಲೂ ನೋಡಿಕೊಳ್ಳುವುದು ಕಷ್ಟಕರವಾಗಿದೆ. ಹೀಗಾಗಿ, ಅಧಿಕಾರಿಗಳು ಸ್ವಯಂಸೇವಕರನ್ನು ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ.

ಈ ಸುದ್ದಿ ಓದಿದ್ಧೀರಾ?: ಚುನಾವಣೆ 2023 | ಮೈಸೂರು-ಚಾಮರಾಜನಗರ: ಮೊದಲ ಬಾರಿಗೆ ಗೆದ್ದಿದ್ದ ಎಂಟು ಶಾಸಕರ ಕತೆ ಈಗೇನು?

“ನಾವು ಸಾಮಾಜಿಕ ಮಾಧ್ಯಮಗಳ ನಮ್ಮ ಖಾತೆಗಳಲ್ಲಿ ಕೆಲವು ದಿನಗಳ ಹಿಂದೆ ಸ್ವಯಂಸೇವಕರಾಗಿ ನಮ್ಮೊಂದಿಗೆ ತೊಡಗಿಸಿಕೊಳ್ಳುವಂತೆ ಪ್ರಾಣಿ ಪ್ರಿಯರಿಗೆ ಮನವಿ ಮಾಡಿದ್ದೇವೆ. ಪೋಸ್ಟ್‌ಗೆ ಪ್ರತಿಕ್ರಿಯಿಸಿ, 10ಕ್ಕೂ ಹೆಚ್ಚು ಜನರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಅವರಲ್ಲಿ ಕೆಲವರು ವಿದ್ಯಾರ್ಥಿಗಳು” ಎಂದು ಮೃಗಾಲಯದ ಅಧಿಕಾರಿ ಕರೋಲ್ ಅಮನ್ನಾ ತಿಳಿಸಿದ್ದಾರೆ.

“ನೋಂದಣಿ ನಂತರ, ನಾವು ಅರ್ಜಿ ಸಲ್ಲಿಸಿದವರ ಆಸಕ್ತಿಯನ್ನು ಪರಿಶೀಲಿಸುತ್ತೇವೆ. ಪ್ರಾಣಿಗಳ ಬಗ್ಗೆ ಮತ್ತು ಇತರ ಅಂಶಗಳ ಬಗ್ಗೆ ಅವರು ಏನು ತಿಳಿದಿದ್ದಾರೆ ಎಂಬುದನ್ನು ನಾವು ಪರಿಶೀಲಿಸುತ್ತೇವೆ. ನಂತರ ಸ್ವಯಂಸೇವಕರಿಗೆ ಪ್ರಾಣಿಗಳ ಸ್ವಭಾವ, ಭೇಟಿ ನೀಡುವ ಜನರೊಂದಿಗೆ ಹೇಗೆ ಸಂವಹನ ನಡೆಸಬೇಕು ಎಂಬು ಸೇರಿದಂತೆ ಮತ್ತು ಇತರ ಅಂಶಗಳ ಕುರಿತು ತರಬೇತಿ ನೀಡುತ್ತೇವೆ. ತರಬೇತಿ ಪೂರ್ಣಗೊಳಿಸಿದ ನಂತರ, ಅವರನ್ನು ಮೃಗಾಲಯದಲ್ಲಿ ಸ್ವಯಂಸೇವಕರಾಗಿ ಬಳಸಿಕೊಳ್ಳುತ್ತೇವೆ,” ಎಂದು ಅವರು ವಿವರಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ನ್ಯಾಯಾಂಗ ಬಡಾವಣೆಯಲ್ಲಿ ಬೀದಿ ಬದಿ ವ್ಯಾಪಾರಿಯ ಎಳನೀರು ಕಳ್ಳತನ

ಬಡ ವ್ಯಾಪಾರಿಯೊಬ್ಬರು ಮಾರಾಟ ಮಾಡಲು ತಂದಿರಿಸಿದ್ದ ಸುಮಾರು 800 ಎಳನೀರು ರಾತ್ರೋರಾತ್ರಿ...

ಈಗಲಾದರೂ ಚರ್ಚೆಗೆ ಬರುತ್ತದೆಯೇ ಪ್ರಾದೇಶಿಕ ಅಸಮಾನತೆ ಕೂಗು

ಕರ್ನಾಟಕ ಏಕೀಕರಣವಾಗಿ ಅರ್ಧ ಶತಮಾನ ಕಳೆದರೂ ಇಡೀ ಕರ್ನಾಟಕವನ್ನು ಸಮಗ್ರವಾಗಿ ಅಭಿವೃದ್ಧಿಯ...

ಉತ್ತರ ಕನ್ನಡ | ಬೇಸಿಗೆಗೂ ಮುನ್ನವೇ ನೀರಿನ ಬವಣೆ; ಸಂಕಷ್ಟದಲ್ಲಿ ಗ್ರಾಮಗಳು

ಶಿರಸಿ ಮಲೆನಾಡು ಆದರೆ, ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ....

ಚಾಮರಾಜನಗರ | ಸರ್ವರ್‌ ಸಮಸ್ಯೆಯಿಂದ ವಸತಿ ಯೋಜನೆ ದಾಖಲೆ ಸಲ್ಲಿಕೆ ವಿಳಂಬ; ಕಾಲಾವಧಿ ಮುಂದೂಡುವಂತೆ ಒತ್ತಾಯ

ವಸತಿ ಯೋಜನೆಗಳ ಅಡಿಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ದಾಖಲೆಗಳನ್ನು ಸಲ್ಲಿಸಲು ನವೆಂಬರ್‌ 30...