ಬೆಂಗಳೂರು | ಗಾಂಧಿ ಪ್ರಣೀತ ಸಂಸ್ಥೆಗಳನ್ನು ಉಡುಗಿಸಲು ಸರ್ಕಾರಗಳ ಯತ್ನ; ಆಗಸ್ಟ್‌ 17ರಂದು ಪ್ರತಿಭಟನೆ

Date:

Advertisements

ದೇಶದಲ್ಲಿ ‘ಗಾಂಧಿ ಪ್ರಣೀತ’ ಸಾಮಾಜಿಕ ಸೇವಾ ಸಂಸ್ಥೆಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಪ್ರವೃತ್ತಿಗಳು ಗಾಂಧಿ ಬಳಗದಲ್ಲಿ ಆತಂಕ ಹುಟ್ಟಿಸುತ್ತಿವೆ. ಈ ದಮನಕಾರಿ ಕೃತ್ಯಗಳ ಮೂಲಕ ಗಾಂಧಿ ಪ್ರಣೀತ ಸಂಸ್ಥೆಗಳ ಅಂತಃಶಕ್ತಿಯನ್ನೇ ಉಡುಗಿಸುವ ಹುನ್ನಾರಗಳನ್ನು ಖಂಡಿಸಿ ಆಗಸ್ಟ್‌ 17ರಂದು ಬೆಂಗಳೂರಿನ ಗಾಂಧಿ ಭವನದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗಾಂಧಿ ಸ್ಮಾರಕ ನಿಧಿ ತಿಳಿಸಿದೆ.

ಗಾಂಧಿ ತತ್ವಗಳ ದಮನದ ವಿರುದ್ಧದ ಪ್ರತಿಭಟನೆ ಕುರಿತು ಗಾಂಧಿ ಸ್ಮಾಕರ ನಿಧಿ ಪತ್ರಿಕಾ ಪ್ರಕರಣೆ ಬಿಡುಗಡೆ ಮಾಡಿದೆ. “ಗುಜರಾತ್‌ನ ಅಹಮದಾಬಾದ್‌ನಲ್ಲಿ ಗಾಂಧಿ ಅವರು ಸ್ಥಾಪಿಸಿದ್ದ ಸಬರಮತಿ ಆಶ್ರಮವನ್ನು ಗುಜರಾತ್ ಸರ್ಕಾರವು ಅಭಿವೃದ್ಧಿಯ ಹೆಸರಿನಲ್ಲಿ ಒಂದು ವಾಣಿಜ್ಯ ಮತ್ತು ಪ್ರವಾಸಿ ಕೇಂದ್ರವನ್ನಾಗಿ ರೂಪಿಸಿ ಗಾಂಧೀಯವರ ಮೂಲ ಸಬರಮತಿ ಆಶ್ರಮದ ಆಶಯವನ್ನೇ ಹಾಳುಗೆಡವಿದೆ. ‘ಸಬರಮತಿ ಆಶ್ರಮ ಸಂರಕ್ಷಣಾ ಮತ್ತು ಸ್ಮಾರಕ ಟ್ರಸ್ಟ್‘ನ ಆಡಳಿತ ಮಂಡಳಿಯನ್ನು ತನ್ನ ಕೈವಶ ಮಾಡಿಕೊಂಡು ಅಲ್ಲಿಗೆ ತಮ್ಮ ರಾಜಕೀಯ ನಿಲುವು ಒಪ್ಪಿಕೊಂಡಿರುವವರನ್ನು ನಿರ್ದೇಶಕರನ್ನಾಗಿ ನೇಮಿಸಿದೆ. ಇದರ ಜೊತೆಗೆ ಸಬರಮತಿ ಆಶ್ರಮದ ಆರಂಭದಿಂದಲೂ ಅದಕ್ಕೆ ಆರ್ಥಿಕ ನೆರವು ನೀಡಿಕೊಂಡು ಬಂದಿದ್ದ ಗಾಂಧಿ ಸ್ಮಾರಕ ನಿಧಿ ಮತ್ತು ಹರಿಜನ ಸೇವಕ ಸಂಘ ಹಾಗೂ ಇತರೆ ಗಾಂಧೀ ಪ್ರಣೀತ ಟ್ರಸ್ಟ್ ಗಳನ್ನು ಮೂಲೆಗುಂಪು ಮಾಡಲಾಗಿದೆ” ಎಂದು ಕಿಡಿಕಾರಿದೆ.

“ಅಹಮದಾಬಾದ್ ನಗರದಲ್ಲಿ ಗಾಂಧೀಜಿಯವರೇ 1920ರಲ್ಲಿ ಆರಂಭಿಸಿದ ಗುಜರಾತ್ ವಿದ್ಯಾಪೀಠವೂ ಸಹ ಈಗ ರಾಜಕೀಯ ಮೇಲಾಟಕ್ಕೆ ಬಲಿಯಾಗಿದೆ. ದೇಸಿ ಮಾದರಿಯ ಈ ವಿಶ್ವವಿದ್ಯಾಲಯಕ್ಕೆ ಗಾಂಧೀಜಿ ಅನುಯಾಯಿಗಳು ಮತ್ತು ವಿಚಾರವಾದಿಗಳನ್ನು ಮಾತ್ರ ಉಪಕುಲಪತಿ ಹುದ್ದೆಗೆ ನೇಮಿಸುವ ಪರಂಪರೆ ಇತ್ತು. ಗುಜರಾತ್ ಸರ್ಕಾರವು ಈ ಪರಂಪರೆಗೆ ತಿಲಾಂಜಲಿ ನೀಡಿ ತಮ್ಮ ರಾಜಕೀಯ ನಿಲುವಿಗೆ ಬದ್ಧರಾಗಿರುವವರನ್ನು ಉಪಕುಲಪತಿಗಳನ್ನಾಗಿ ನೇಮಿಸಿದೆ” ಎಂದು ಆರೋಪಿಸಿದೆ.

Advertisements

ಈ ಸುದ್ದಿ ಓದಿದ್ದೀರಾ?: ಶಿಕ್ಷಣ ಕ್ಷೇತ್ರದ ಸುಧಾರಣೆಯೇ ಸಂವಿಧಾನದ ಗೆಲುವಿಗೆ ಸೋಪಾನ;‌ ಆದರೆ, ಆಗುತ್ತಿರುವುದೇನು?

“ಗಾಂಧೀಜಿಯವರಿಗೆ ಸಂಬಂದಿಸಿದ ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟಕ್ಕೆಂದೇ ಸ್ಥಾಪಿಸಿದ ನವಜೀವನ ಟ್ರಸ್ಟ್ ಕೂಡಾ ಈಗ ತನ್ನತನವನ್ನು ಕಳೆದುಕೊಂಡು ಒಂದು ಮಾಮೂಲಿ ವ್ಯಾಪಾರೀ ಸಂಸ್ಥೆಯಾಗಿ ಪರಿವರ್ತನೆಗೊಂಡಿದೆ. ಇಲ್ಲಿನ ಆಡಳಿತ ಮಂಡಳಿ ತನ್ನ ಮೂಲ ಕರ್ತವ್ಯವನ್ನು ಮರೆತು ಕೆಫೆಟೇರಿಯಾ ,ಕಲಾ ಗ್ಯಾಲರಿ ಇತ್ಯಾದಿಗಳನ್ನು ನಿರ್ಮಿಸಿಕೊಂಡು ಒಂದು ಸಾಮಾನ್ಯ ಪುಸ್ತಕಗಳ ಮಾರಾಟ ಮಳಿಗೆಯಾಗಿ ಬದಲಾವಣೆಗೊಂಡಿದೆ. ರಾಮ, ಕೃಷ್ಣ ಮತ್ತು ವಿವೇಕಾನಂದ ಇತ್ಯಾದಿ ಸಾಮಾನ್ಯ ಕೃತಿಗಳ ಪ್ರಕಟಣೆ ಮತ್ತು ಮಾರಾಟ ಕೇಂದ್ರವಾಗಿ ನವಜೀವನ ಟ್ರಸ್ಟ್ ನಿಧಾನಕ್ಕೆ ತನ್ನ ಚಹರೆಯನ್ನು ಬದಲಾಯಿಸಿಕೊಂಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದೆ.

“ಇತ್ತೀಚೆಗೆ ಉತ್ತರಪ್ರದೇಶದ ವಾರಣಾಸಿಯಲ್ಲಿದ್ದ ಗಾಂಧಿ ಪ್ರಣೀತ ಸಂಸ್ಥೆಯಾದ ‘ಸರ್ವ ಸೇವಾ ಸಂಘ’ದ ಅಸ್ತಿಯು ರೈಲ್ವೆ ಇಲಾಖೆಗೆ ಸೇರಿದ ಆಸ್ತಿ ಎಂದು ದಾಖಲೆ ಸೃಷ್ಟಿಸಿ ನ್ಯಾಯಾಲಯದ ಮೂಲಕ ಯೋಗಿ ಸರ್ಕಾರ ವಶಪಡಿಸಿಕೊಂಡಿದೆ. ಹಲವಾರು ವರ್ಷಗಳಿಂದ ಟ್ರಸ್ಟ್ ನ ಕಟ್ಟಡಗಳಲ್ಲಿ ನೆಲೆಸಿದ್ದವರನ್ನು ಹೊರದಬ್ಬಿ ಆ ಕಟ್ಟಡಗಳನ್ನು ನೆಲಸಮ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X