ಒಂದು ಸಂಶೋಧನಾ ಪ್ರಬಂಧಕ್ಕೆ ಹೆದರಿತೇ ಮೋದಿ ಸರ್ಕಾರ…!

Date:

ಯಾವ ಲೇಖನದ ಮೇಲೆ ಇಷ್ಟೊಂದು ವಿವಾದವಾಗಿದೆಯೋ, ಅದು ಈಗ ರಹಸ್ಯವಾಗಿ ಉಳಿದಿಲ್ಲ. ಈ ಲೇಖನವನ್ನು ಕೇವಲ ಒಂದೆರಡು ಕಾನ್ಫರೆನ್ಸ್‌ಗಳಲ್ಲಿ ಪ್ರಸ್ತುತಪಡಿಸಲಾಗಿದೆ ಹಾಗೂ ಪ್ರಕಟವಾಗುವುದಕ್ಕೂ ಮುನ್ನದ ಚರ್ಚೆಗೆ ಲಭ್ಯವಿದೆ. ಈ ಲೇಖನದಲ್ಲಿ ಸರ್ಕಾರದ ಯಾವ ಟೀಕೆಯೂ ಇಲ್ಲ. ಬಿಜೆಪಿಯನ್ನು ನಿಂದಿಸಿಲ್ಲ. ಯಾವುದೇ ಆರೋಪ ಪ್ರತ್ಯಾರೋಪಗಳಿಲ್ಲ, ಯಾವುದೇ ರಾಜಕೀಯ ವಾಗ್ದಾಳಿಯೂ ಇಲ್ಲ. 

ಆಗಸ್ಟ್‌ 15ಕ್ಕೆ ಒಂದು ದಿನ ಮುನ್ನ ಬಂದ ಈ ಸುದ್ದಿ ಸ್ವಾತಂತ್ರ್ಯದ ಪರವಿರುವ ಪ್ರತಿ ಭಾರತೀಯರನ್ನು ಚಿಂತೆಗೆ ದೂಡುತ್ತಿದೆ. ಸುದ್ದಿ ಏನೆಂದರೆ, ಅಶೋಕ ಯುನಿವರ್ಸಿಟಿಯ ಅರ್ಥಶಾಸ್ತ್ರದ ಯುವ ಪ್ರೊಫೆಸರ್‌ ಸಬ್ಯಸಾಚಿ ದಾಸ್‌ ರಾಜೀನಾಮೆ ನೀಡಬೇಕಾಗಿ ಬಂತು. ಅವರು ಮಾಡಿದ ಅಪರಾಧವೇನೆಂದರೆ, ಅವರು 2019ರ ಚುನಾವಣೆಗಳ ಅಂಕಿಅಂಶಗಳ ವಿಶ್ಲೇಷಣೆ ಮಾಡಿ ಒಂದು ಅಕಾಡೆಮಿಕ್‌ ಪ್ರಬಂಧ ಬರೆದಿದ್ದರು. ಈ ಸುದ್ದಿ ದೇಶದ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಉಳಿದುಕೊಂಡಿರುವ ಅಕಾಡೆಮಿಕ್‌ ಸ್ವಾತಂತ್ರ್ಯದ ಮೇಲೆ ಘೋರ ಆಘಾತವಾಗಿದೆ.

ಅಂದಹಾಗೆ ಈ ಲೇಖಕರಿಗೆ ಹೆದರುವ ಯಾವ ಅಗತ್ಯವೂ ಸರ್ಕಾರಕ್ಕಿಲ್ಲ. ಸಬ್ಯಸಾಚಿ ದಾಸ್‌ ಒಬ್ಬ ಪ್ರಸಿದ್ಧವಾದ ಅರ್ಥಶಾಸ್ತ್ರಜ್ಞರಲ್ಲ. ಅವರ ಹೆಚ್ಚಿನ ಲೇಖನಗಳು ಕಲ್ಯಾಣ ಯೋಜನೆಗಳ ಮೌಲ್ಯಮಾಪನದಂತಹ ಪ್ರಶ್ನೆಗಳ ಮೇಲಿವೆ. ಯಾವುದೇ ರಾಜಕೀಯ ಸಂಘಟನೆ ಅಥವಾ ಸಿದ್ಧಾಂತದೊಂದಿಗೆ ಯಾವುದೇ ಸಂಬಂಧಗಳು ಕಂಡುಬಂದಿಲ್ಲ. ಹಾಗೂ ಸರ್ಕಾರ ತನ್ನ ದಂಡ ಚಲಾಯಿಸಲು ಅಶೋಕ ಯುನಿವರ್ಸಿಟಿ ಯಾವುದೇ ಸರ್ಕಾರಿ ಅನುದಾನದ ಮೇಲೆ ನಡೆಯುವ ಸಂಸ್ಥೆಯಂತೂ ಅಲ್ಲ.

ಯಾವ ಲೇಖನದ ಮೇಲೆ ಇಷ್ಟೊಂದು ವಿವಾದವಾಗಿದೆಯೋ, ಅದು ಈಗ ರಹಸ್ಯವಾಗಿ ಉಳಿದಿಲ್ಲ. ಈ ಲೇಖನವನ್ನು ಕೇವಲ ಒಂದೆರಡು ಕಾನ್ಫರೆನ್ಸ್‌ಗಳಲ್ಲಿ ಪ್ರಸ್ತುತಪಡಿಸಲಾಗಿದೆ ಹಾಗೂ ಪ್ರಕಟವಾಗುವುದಕ್ಕೂ ಮುನ್ನ ಚರ್ಚೆಗೆ ಲಭ್ಯವಿದೆ. ಈ ಲೇಖನದಲ್ಲಿ ಸರಕಾರದ ಯಾವ ಟೀಕೆಯೂ ಇಲ್ಲ. ಬಿಜೆಪಿಯನ್ನು ನಿಂದಿಸಿಲ್ಲ. ಯಾವುದೇ ಆರೋಪ ಪ್ರತ್ಯಾರೋಪಗಳಿಲ್ಲ ಹಾಗೂ ಯಾವುದೇ ರಾಜಕೀಯ ವಾಗ್ದಾಳಿಯೂ ಇಲ್ಲ. ಡೆಮಾಕ್ರಟಿಕ್‌ ಬ್ಯಾಕ್‌ಸ್ಲೈಡಿಂಗ್‌ ಇನ್‌ ವರ್ಲ್ಡ್‌ಸ್ ಲಾರ್ಜೆಸ್ಟ್‌ ಡೆಮಾಕ್ರಸಿ” (ವಿಶ್ವದ ಅತಿ ದೊಡ್ಡ ಪ್ರಜಾಪ್ರುಭತ್ವದಲ್ಲಿ ಪ್ರಜಾಪ್ರಭುತ್ವದ ಹಿನ್ನಡೆ) ತಲೆಬರಹದ ಈ ಲೇಖನದಲ್ಲಿ 2018ರ ಲೋಕಸಭಾ ಚುನಾವಣೆಗಳ ಅಧಿಕೃತ ಪರಿಣಾಮಗಳನ್ನು ಸಂಖ್ಯಾಶಾಸ್ತ್ರದ ವಿಧಾನದ ಮೂಲಕ ವಿಶ್ಲೇಷಣೆ ಮಾಡಿದ್ದಾರೆ. ಒಂದು ಕಾಲದಲ್ಲಿ ನಾನೂ ಈ ವಿಷಯದ ಪರಿಣಿತನಾಗಿದ್ದರಿಂದ ವಿಶ್ವಾಸದಿಂದ ಇಷ್ಟು ಹೇಳಬಲ್ಲೆ; ಸಬ್ಯಸಾಚಿ ದಾಸ್‌ ಅವರ ಈ ಲೇಖನ ಭಾರತದ ಚುನಾವಣಾ ಅಂಕಿಅಂಶಗಳ ಮೇಲೆ ಬರೆಯಲಾಗಿರುವ ಅತ್ಯಂತ ಗಂಭೀರ ಹಾಗೂ ಗಹನವಾದ ಲೇಖನಗಳಲ್ಲಿ ಒಂದು ಎಂದು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ

ಈ ಅಂಕಿಅಂಶಗಳು ಅಥವಾ ವಿಧಾನದಿಂದ ಯಾವುದೇ ವಿವಾದವಿಲ್ಲ, ವಿವಾದವಿರುವುದು ಈ ಲೇಖನದ ನಿಷ್ಕರ್ಷದಲ್ಲಿ. 2019ರ ಚುನಾವಣೆಗಳ ಮತಗಟ್ಟೆಯಿಂದ ಹಿಡಿದು ಸೀಟುಗಳ ತನಕ ಅಂಕಿಅಂಶಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ನಂತರ ಏನೋ ಸಮಸ್ಯೆ ಇದೆ ಎಂಬ ನಿಷ್ಕರ್ಷಕ್ಕೆ ಬರುತ್ತಾರೆ. ಯಾವ 59 ಕ್ಷೇತ್ರಗಳಲ್ಲಿ ಸೋಲುಗೆಲುವಿನ ತೀರ್ಮಾನ ಶೇಕಡಾ 5ಕ್ಕಿಂತ ಕಡಿಮೆ ಆಗಿದೆಯೋ, ಅವುಗಳಲ್ಲಿ 41 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಗಣಿತದ ಸಾಮಾನ್ಯ ನಿಯಮಗಳ ಅನುಗುಣವಾಗಿ ಹಾಗೂ ದೇಶ ಮತ್ತು ಜಗತ್ತಿನ ಚುನಾವಣೆಗಳ ಹಳೆಯ ದಾಖಲೆಗಳನ್ನು ನೋಡಿದರೆ, ಇದು ಅತ್ಯಂತ ಅಸಾಮಾನ್ಯವಾದ ಪ್ರವೃತ್ತಿಯಾಗಿ ಕಂಡುಬರುತ್ತದೆ. ಈ ಇಡೀ ಲೇಖನ ಅಸಾಮಾನ್ಯ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ನೋಡುತ್ತದೆ. ಬಿಜೆಪಿಯು ಮಾಡಿರಬಹುದಾದ ಉತ್ತಮವಾದ ಮುನ್ಸೂಚನೆ ಮತ್ತು ಉತ್ತಮವಾದ ಚುನಾವಣಾ ಪ್ರಚಾರದ ಕಾರಣದಿಂದ ಹೀಗೆ ಆಗಿರಬಹುದು ಎಂಬ ಸಾಧ್ಯತೆಯನ್ನು ಈ ಲೇಖನವು ಪರಿಶೀಲಿಸಿ ತಳ್ಳಿಹಾಕುತ್ತದೆ.

ನಂತರ ಒಂದೊಂದು ವಿಷಯಕ್ಕೆ ಸಾಕ್ಷ್ಯ ಒದಗಿಸುತ್ತ ಈ ಲೇಖನವು ಕೆಲವು ಕ್ಷೇತ್ರಗಳಲ್ಲಿ ಅಕ್ರಮ ಆಗಿದೆ ಎಂಬುದನ್ನು ಸೂಚಿಸುತ್ತದೆ. ಲೇಖಕರ ಪ್ರಕಾರ, ಹೀಗೆ ಒಂದೋ ಕೆಲವು ಆಯ್ದ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ಮುಸ್ಲಿಂ ಮತದಾರರ ಹೆಸರುಗಳನ್ನು ತೆಗೆದುಹಾಕುವುದು ಅಥವಾ ಮತದಾನದ ಅಥವಾ ಮತಎಣಿಕೆಯಲ್ಲಿ ಅಕ್ರಮ ಮಾಡುವ ಮೂಲಕ ಆಗಿದೆ. ಈ ಲೇಖನ ಸಂಖ್ಯಾಶಾಸ್ತ್ರೀಯ ಪದ್ಧತಿಯ ಮೇಲೆ ಆಧಾರಿತವಾಗಿರುವುದರಿಂದ ಮೋಸದಾಟದ ಸಾಧ್ಯತೆಯನ್ನು ಸೂಚಿಸಬಲ್ಲದು. ಆದರೆ ಅದಕ್ಕೆ ಸಾಕ್ಷ್ಯ ಒದಗಿಸಲಾರದು. ಯಾವುದೇ ಸೆನ್ಸೇಷನಲ್ ಆರೋಪ ಹೊರಿಸುವ ಕೆಲಸ ಮಾಡದೇ ಲೇಖಕರು ಸ್ಪಷ್ಟಪಡಿಸುವುದೇನೆಂದರೆ, ಹೀಗೆ ಮಾಡಿದ್ದರೂ ಕೂಡ ಇದರಿಂದ ಬಿಜೆಪಿಗೆ ಗರಿಷ್ಠ 9ರಿಂದ 18 ಸೀಟುಗಳ ಲಾಭವಾಗುತ್ತಿತ್ತು. ಅದರಿಂದ ಬಿಜೆಪಿಯ ಬಹುಮತದ ಮೇಲೆ ಯಾವ ಪರಿಣಾಮವೂ ಬೀರುತ್ತಿರಲಿಲ್ಲ. ಹಾಗಾಗಿ ಲೇಖಕರು ಸ್ಪಷ್ಟಪಡಿಸುವುದೇನೆಂದರೆ, 2019ರಲ್ಲಿ ಬಿಜೆಪಿಯು ಮೋಸದಿಂದ ಚುನಾವಣೆ ಗೆದ್ದಿತ್ತು ಎಂಬ ನಿಷ್ಕರ್ಷವು ಖಂಡಿತವಾಗಿಯೂ ತಪ್ಪಾಗುತ್ತದೆ.

ಇಷ್ಟು ಸೀಮಿತವಾದ ಮಾತು ಹೇಳಿದ್ದಕ್ಕೆ ಇಷ್ಟೊಂದು ವಿವಾದ ಸೃಷ್ಟಿಯಾಗಿದೆ. ಬಿಜೆಪಿಯ ಸಮರ್ಥಕರು ಲೇಖಕರ ಮೇಲೆ ಎಲ್ಲಾ ರೀತಿಯ ಅಕ್ಯಾಡೆಮಿಕ್ ಮತ್ತು ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ. ಇಂತಹ ಲೇಖನ ಬರೆಯುವುದಕ್ಕೆ ನೀವು ಅನುಮತಿ ಹೇಗೆ ನೀಡಿದಿರಿ ಎಂದು ಬಿಜೆಪಿ ಎಂಪಿ ನಿಶಿಕಾಂತ್ ದುಬೆ (ಇವರ ಡಿಗ್ರಿ ಬಗ್ಗೆ ವಿವಾದವಿದೆ) ಅವರು ಅಶೋಕ ಯುನಿವರ್ಸಿಟಿಗೆ ಕೇಳಿದರು. ತಮ್ಮ ಅಧ್ಯಾಪಕರ ಪರವಾಗಿ ನಿಲ್ಲುವುದರ ಬದಲಾಗಿ ಅಶೋಕ ಯುನಿವರ್ಸಿಟಿಯು ಒಂದು ಹೇಳಿಕೆ ನೀಡಿ ಲೇಖನ ಮತ್ತು ಲೇಖಕರಿಂದ ಕೈಕೊಡವಿಕೊಂಡಿತು. ಈಗ ಗೊತ್ತಾಗಿದ್ದೇನೆಂದರೆ, ಪ್ರೊ ದಾಸ್ ಅವರು ವಿಶ್ವವಿದ್ಯಾಲಯಕ್ಕೆ ರಾಜೀನಾಮೆ ನೀಡಿದ್ದಾರೆ (ಅವರನ್ನು ವಿಶ್ವವಿದ್ಯಾಲಯವು ಕೆಲಸದಿಂದ ತೆಗೆದುಹಾಕಿಲ್ಲ) ಆದರೆ ಇಂತಹ ಪರಿಸ್ಥಿತಿಯಲ್ಲಿ ನೀಡಿದ ರಾಜೀನಾಮೆಯನ್ನು ಐಚ್ಛಿಕ ಸೇವಾನಿವೃತ್ತಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ನಿಸ್ಸಂಶಯವಾಗಿ ಲೇಖಕರ ಮೇಲೆ ಒತ್ತಡ ಹಾಕಲಾಗಿ, ಆ ಕಾರಣದಿಂದ ರಾಜೀನಾಮೆ ನೀಡಬೇಕಾಗಿ ಬಂದಿರುವುದು ಸ್ವಾಭಾವಿಕ.

ಅಶೋಕ ವಿಶ್ವವಿದ್ಯಾಲಯದಲ್ಲಿ ಈ ಘಟನೆ ಆಗಿರುವುದು ತನ್ನಲ್ಲೇ ದೇಶಕ್ಕೆ ಒಂದು ಅಶುಭ ಸಂಕೇತ ನೀಡಿದೆ. ಗಮನಿಸಬೇಕಾದ ಅಂಶವೇನೆಂದರೆ, ಈ ಮುನ್ನ ಪ್ರೊ ಪ್ರತಾಪ್ ಭಾನು ಮೆಹ್ತಾ ಮತ್ತು ರಾಜೇಂದ್ರನ್‌ ನಾರಾಯಣಗೂ ಸರಕಾರಿ ಒತ್ತಡದ ಅನುಮಾನದ ಕಾರಣದಿಂದ ಇದೇ ಅಶೋಕ ವಿಶ್ವವಿದ್ಯಾಲಯ ತೊರೆಯಬೇಕಾಗಿ ಬಂದಿತ್ತು. ಈ ವಿಶ್ವವಿದ್ಯಾಲಯವು  ಸಮಾಜ ವಿಜ್ಞಾನ ಮತ್ತು ಮಾನವಿಕ ವಿಷಯಗಳಲ್ಲಿ ದೇಶದ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಯಾಗಿ ತನ್ನ ಗುರುತು ದಾಖಲಿಸಿಕೊಂಡಿದೆ. ಇದು ಹಣಕಾಸಿನ ವಿಷಯದಲ್ಲೂ ಸರಕಾರಿ ನಿಯಂತ್ರಣದಿಂದ ಸ್ವತಂತ್ರವಾಗಿದೆ. ತಾನು ಅಕಾಡೆಮಿಕ್‌ ಸ್ವಾತಂತ್ರ್ಯಕ್ಕೆ ಬದ್ಧವಾಗಿದೆ ಎಂದು ವಿಶ್ವವಿದ್ಯಾಲಯ ಹೇಳಿಕೊಳ್ಳುತ್ತದೆ. ಒಂದು ವೇಳೆ ಇಂತಹ ವಿಶ್ವವಿದ್ಯಾಲಯದ ಯಾವುದೇ ಅಧ್ಯಾಪರಿಗೆ ತನ್ನ ಸಂಶೋಧನೆಗೆ ಇಂತಹ ಪರಿಣಾಮ ಎದುರಿಸಬೇಕಾಗುತ್ತದೆ ಎಂದರೆ ದೇಶದ ಎಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಅಕಾಡೆಮಿಕ್‌ ಸಂಸ್ಥೆಗಳ ಪರಿಸ್ಥಿತಿ ಹೇಗಿದ್ದಿರಬಹುದು ಎಂಬುದು ಸ್ಪಷ್ಟವಾಗುತ್ತದೆ.

ಇದನ್ನು ಓದಿ ನೆಹರು ವಸ್ತು ಸಂಗ್ರಹಾಲಯ ಹೆಸರು ಬದಲಾವಣೆ: ಪ್ರಧಾನಿಯ ಸೇಡಿನ ರಾಜಕಾರಣ ಎಂದ ಕಾಂಗ್ರೆಸ್

ಅಭಿವ್ಯಕ್ತಿ ಸ್ವಾತಂತ್ರದ ವಕಾಲತ್ತು ಮಾಡುತ್ತ ಜಾನ್‌ ಸ್ಟುವಾರ್ಟ್‌ ಮಿಲ್‌ ಹೇಳಿದ್ದೇನೆಂದರೆ, ಅಭಿವ್ಯಕ್ತಿ ಸ್ವಾತಂತ್ರ ಎಂಬುದು ಕೇವಲ ಸತ್ಯ ಮತ್ತು ಪ್ರಾಮಾಣಿಕ ಮಾತುಗಳನ್ನು ಹೇಳುವ ಸ್ವಾತಂತ್ರ್ಯವಲ್ಲ. ಕೆಲವು ಅಪವಾದಗಳನ್ನು ಹೊರತುಪಡಿಸಿ. ಯಾವುದನ್ನು ನಾವು ಅಸತ್ಯ ಎಂದುಕೊಳ್ಳುತ್ತೇವೋ, ಅದನ್ನು ಸಾರ್ವಜನಿಕವಾಗಿ ಹೇಳುವ ಸ್ವಾತಂತ್ರ ಇರಬೇಕು. ಆಗ ಅದರ ಸಾರ್ವಜನಿಕ ಖಂಡನೆ, ನಿರಾಕರಣೆ ಆಗಿ, ನಾವೆಲ್ಲ ಸತ್ಯದ ದಿಕ್ಕಿನಲ್ಲಿ ಮುಂದೆಹೋಗಬಹುದು. ಹಾಗಾಗಿ, ಸಬ್ಯಸಾಚಿ ದಾಸ್‌ರ ಲೇಖನ ದೋಷಪೂರ್ಣವಾಗಿದೆ ಹಾಗೂ ಅವರ ನಿಷ್ಕರ್ಷ ಪೊಳ್ಳಾಗಿದೆ ಎಂದು ಒಂದು ಕ್ಷಣಕ್ಕಾಗಿ ಒಪ್ಪಿಕೊಂಡರೂ ಸಹ ಆಗಲೂ ಅವರ ಧ್ವನಿ ಹತ್ತಿಕ್ಕುವುದು ಪ್ರಜಾಪ್ರಭುತ್ವಕ್ಕೆ ಹಾನಿಕಾರಕವಾಗಿದೆ.

ಪ್ರತಿಯೊಬ್ಬ ವ್ಯಕ್ತಿಗೂ ಅವರ ಅಂಕಿಅಂಶಗಳು, ವಿಧಾನ ಮತ್ತು ನಿಷ್ಕರ್ಷದ ನಿರಾಕರಣೆ ಮಾಡಲು, ಖಂಡಿಸಲು ಅಧಿಕಾರವಿದೆ. ಆ ಪ್ರಯತ್ನವನ್ನು ಬಿಜೆಪಿ ಸಮರ್ಥಕರು ಕಳೆದ ಎರಡು ವಾರಗಳಿಂದ ಮಾಡಿದ್ದಾರೆ. ಆದರೆ ಅಧಿಕಾರದ ಬಲದಿಂದ ಇಂತಹ ಧ್ವನಿಯನ್ನು ಮುಚ್ಚಿಹಾಕುವುದು ನಮ್ಮ ಪ್ರಜಾಪ್ರಭುತ್ವದ ದೌರ್ಬಲ್ಯದ ಸೂಚನೆ ನೀಡುತ್ತದೆ. ಇದರಿಂದ ಸಬ್ಯಸಾಚಿ ದಾಸ್‌ ಅವರು ಆಡಳಿತ ಪಕ್ಷ ದುರ್ಬಲವಾದ ಭಾಗದ ಮೇಲೆಯೇ ಕೈಹಾಕಿದ್ದಾರೆ ಎಂಬುದು ಹಾಗೂ ಏನೋ ಅಕ್ರಮ ನಡೆದಿದೆ ಎಂಬ ಅನುಮಾನಕ್ಕೆ ಬಲತುಂಬಿದಂತಾಗಿದೆ.

ಯೋಗೇಂದ್ರ ಯಾದವ್‌
ಯೋಗೇಂದ್ರ ಯಾದವ್
+ posts

ಸ್ವರಾಜ್‌ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ

ಪೋಸ್ಟ್ ಹಂಚಿಕೊಳ್ಳಿ:

ಯೋಗೇಂದ್ರ ಯಾದವ್
ಯೋಗೇಂದ್ರ ಯಾದವ್
ಸ್ವರಾಜ್‌ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಿಥುನ್ ಚಕ್ರವರ್ತಿಗೆ ಫಾಲ್ಕೆ | ಕ್ರಾಂತಿಕಾರಿ ದಿನಗಳಿಂದ ಬಾಲಿವುಡ್ ಸ್ಟಾರ್ ಪಟ್ಟದವರೆಗೆ…

ವ್ಯವಸ್ಥೆ ವಿರುದ್ಧ ಬಂಡೆದ್ದು ನಕ್ಸಲ್‌ ಚಳವಳಿಗಳಿಂದ ಗುರುತಿಸಿಕೊಂಡು ಭೂಗತನಾಗಿದ್ದ ಸಾಮಾನ್ಯ ವ್ಯಕ್ತಿಯೊಬ್ಬ...

‘ಗಾಂಧೀಜಿಯ ಹಂತಕ’ | ಗೋಡ್ಸೆ ಎಂಬ ಸರಳ ಮನಸ್ಸಿನ ಹಂತಕ

'ಗಾಂಧೀಜಿಯ ಹಂತಕ' ಪುಸ್ತಕವು ವರ್ತಮಾನದಲ್ಲಿ ಭಾರತದ ಸಮಾಜ ಅನುಭವಿಸುತ್ತಿರುವ ಹಲವಾರು ಆತಂಕಕಾರಿ...

ಗಾಂಧೀ ಪರಿಕಲ್ಪನೆಗಳು

ಮಹಾತ್ಮಾ ಗಾಂಧೀಜಿಯವರ ಪಾರದರ್ಶಕ ವ್ಯಕ್ತಿತ್ವ ಮತ್ತು ಚಿಂತನೆಯ ಅಪೂರ್ವ ಹೊಳಹುಗಳನ್ನು ಕಾಣಿಸುವ...