ಮೈಸೂರಿನಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ಮತದಾನ

Date:

ಮೈಸೂರು ಜಿಲ್ಲೆಯಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಕಳೆದ ವರ್ಷಕ್ಕಿಂತ ಉತ್ತಮವಾಗಿದೆ. ಮೈಸೂರು ನಗರದ ಕೃಷ್ಣರಾಜ ಕ್ಷೇತ್ರದಲ್ಲಿ ಶೇ.60, ಚಾಮರಾಜ ಕ್ಷೇತ್ರದಲ್ಲಿ ಶೇ.61.1, ನರಸಿಂಹರಾಜ ಕ್ಷೇತ್ರದಲ್ಲಿ ಶೇ.63.4ರಷ್ಟು ಮತದಾನವಾಗಿದೆ.

2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ, ಗ್ರಾಮೀಣ ಕ್ಷೇತ್ರಗಳಿಗೆ ಹೋಲಿಸಿದರೆ ಮೈಸೂರು ನಗರ ವ್ಯಾಪ್ತಿಯ ಮೂರು ಕ್ಷೇತ್ರಗಳಲ್ಲಿ ಕಡಿಮೆ ಮತದಾನ ದಾಖಲಾಗಿತ್ತು. ಕೃಷ್ಣರಾಜ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ ಶೇ.58.9, ಚಾಮರಾಜ ಕ್ಷೇತ್ರದಲ್ಲಿ ಶೇ.59.2, ನರಸಿಂಹರಾಜ ಕ್ಷೇತ್ರದಲ್ಲಿ ಶೇ.61.4ರಷ್ಟು ಮತದಾನವಾಗಿತ್ತು.

2013ರ ಚುನಾವಣೆಯಲ್ಲಂತೂ ಇನ್ನೂ ಕಡಿಮೆ ಮತದಾನವಾಗಿತ್ತು. ಯಾವ ಕ್ಷೇತ್ರದಲ್ಲಿಯೂ ಶೇ.60 ದಾಟಿರಲಿಲ್ಲ. ಆಗ ಚುನಾವಣೆಯಲ್ಲಿ ಕೃಷ್ಣರಾಜದಲ್ಲಿ ಶೇ.59.08, ಚಾಮರಾಜದಲ್ಲಿ ಶೇ.55.39, ನರಸಿಂಹರಾಜದಲ್ಲಿ ಶೇ.54.70ರಷ್ಟು ಮತದಾನವಾಗಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಬಾರಿಯ 2023ರ ಚುನಾವಣೆಯಲ್ಲಿ ಮತದಾನದ ಪ್ರಮಾಣ ಏರಿಕೆಯಾಗಿದೆ. ಹೆಚ್ಚಿನ ಸಂಖ್ಯೆಯ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮೈಸೂರು ನಗರದಲ್ಲಿ ಶೇ.75 ರಷ್ಟು ಮತದಾನ ದಾಖಲಾಗಬಹುದೆಂದು ಜಿಲ್ಲಾಡಳಿತ ನಿರೀಕ್ಷಿಸಿತ್ತು ಆದರೂ, ಮತದಾನ ಪ್ರಕ್ರಿಯೆ ಶೇ.70ಕ್ಕೆ ಬಂದು ನಿಂತಿದೆ.

ಮೇ 10ರ ಬೆಳಿಗ್ಗೆಯಿಂದ ನಗರದ ಮೂರು ಕ್ಷೇತ್ರಗಳಲ್ಲಿಯೂ ಮತದಾನ ಚುರುಕಾಗಿತ್ತು. ಸಂಜೆ 5 ಗಂಟೆ ವೇಳೆಗೆ ಕೃಷ್ಣರಾಜ ಕ್ಷೇತ್ರದಲ್ಲಿ ಶೇ.56.5, ಚಾಮರಾಜ ಕ್ಷೇತ್ರದಲ್ಲಿ ಶೇ.55.7, ನರಸಿಂಹರಾಜ ಕ್ಷೇತ್ರದಲ್ಲಿ ಶೇ.58.7ರಷ್ಟು ಮತದಾನವಾಗಿದೆ.

ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಮತದಾನಕ್ಕೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ; ಸ್ಥಳದಲ್ಲೇ ಸಾವು

ನಗರದ ಬೂತ್‌ಗಳಲ್ಲಿ ಹಿರಿಯ ನಾಗರಿಕರು ಮತದಾನ ಆರಂಭವಾಗುತ್ತಿದ್ದಂತೆಯೇ ಮತದಾನ ಮಾಡಿದ್ದಾರೆ. ಅವರಲ್ಲಿ ಅನೇಕರು ಬೆಳಿಗ್ಗೆ ವಾಕಿಂಗ್ ನಂತರ ನೇರವಾಗಿ ಬೂತ್‌ಗಳಿಗೆ ತೆರೆಳಿಸಿದ್ದರು.

“ಕಳೆದ ಕೆಲವು ದಶಕಗಳಿಂದ, ನಾನು ಬೆಳಿಗ್ಗೆ ಬೇಗನೆ ಮತ ಚಲಾಯಿಸುತ್ತಿದ್ದೇನೆ. ಇದು ನನ್ನ ಜವಾಬ್ದಾರಿಯಾಗಿದೆ. ನನಗೆ ಯಾವುದೇ ಅಭ್ಯರ್ಥಿ ಇಷ್ಟವಾಗದಿದ್ದರೆ ನೋಟಾ ಆಯ್ಕೆಯನ್ನು ಚಲಾಯಿಸಬಹುದು” ಎಂದು ಕುವೆಂಪು ನಗರದ ನಿವೃತ್ತ ಶಿಕ್ಷಕ ಬಸವರಾಜಪ್ಪ ಎಂ.ಎಸ್ ತಿಳಿಸಿದ್ದಾರೆ.

“ಮತ ಚಲಾಯಿಸುವುದು ನಮಗೆ ಕೆಲವು ರೋಮಾಂಚಕ ಕ್ಷಣಗಳನ್ನು ನೀಡಬೇಕು. ಅದಕ್ಕಾಗಿಯೇ ನಾನು ಮನೆ ಮತದಾನವನ್ನು ತಿರಸ್ಕರಿಸಿದೆ” ಎಂದು ಅಗ್ರಹಾರದ ಹಿರಿಯ ನಾಗರಿಕ ಪ್ರಹ್ಲಾದ್ ಎಚ್.ಎಸ್ (83) ಹೇಳಿಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ; ಮತದಾನ ಮಾಡಲು ಬಂದ ವೈದ್ಯನಿಂದ ಜೀವ ರಕ್ಷಣೆ

ಬೆಂಗಳೂರಿನ ಜೆ ಪಿ ನಗರದಲ್ಲಿರುವ ಜಂಬೂ ಸವಾರಿ ದಿನ್ನೆ ಮತಗಟ್ಟೆಯಲ್ಲಿ ಮತದಾನ...

ಚಿತ್ರದುರ್ಗ | ಲೋಕಸಭಾ ಚುನಾವಣೆ; ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಸಾವು

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮಹಿಳಾ...

ಶಿವಮೊಗ್ಗ | ಬಂಗಾರಪ್ಪನವರು ನಮ್ಮ ಮನೆಯ ನಂದಾದೀಪ; ತಿಮ್ಲಾಪುರದ ಮಹಿಳೆಯರು ಸಂತಸ

"ಬಂಗಾರಪ್ಪನವರು ನಮ್ಮ ಮನೆಯ ನಂದಾದೀಪ" ಯಾವ ಸರ್ಕಾರ ಏನೇ ಮಾಡಿದರೂ 32...

ಕೋಲಾರ | ಮೂಲಭೂತ ಸೌಕರ್ಯ ಕೊರತೆ : ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

ದೇಶದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದರೇ, ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ...